Thursday, April 11, 2019

ಸುವರ್ಣ ಮಹೋತ್ಸವಕ್ಕೆ ಚಾಲನೆ ನೀಡಿದ 7ನೇ ತರಗತಿ ಮಕ್ಕಳು

ಸಿದ್ಧಗಂಗಾ ಸಂಸ್ಥೆ
ಸುವರ್ಣ ಮಹೋತ್ಸವಕ್ಕೆ ಚಾಲನೆ ನೀಡಿದ 7ನೇ ತರಗತಿ ಮಕ್ಕಳು

TO GIVE FEEDBACK ABOUT QUIZ PLEASE CLICK HERE
ನಿಮ್ಮ ಅಭಿಪ್ರಾಯವನ್ನು ನೀಡಲು ಇಲ್ಲಿ ಕ್ಲಿಕ್ ಮಾಡಿ

ದಾವಣಗೆರೆ, ಏ, 11

ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ಏಪ್ರಿಲ್ 11 ರಂದು ನಡೆದ ಗೋಲ್ಡನ್ ಜ್ಯೂಬಿಲಿ ಕ್ವಿಜ್ – 2019 ಕ್ಕೆ 7ನೇ ತರಗತಿ  ಮಕ್ಕಳು ನಾಂದಿ ಹಾಡಿದರು.

ತ್ರಿವರ್ಣ ಧ್ವಜದ ನೊರೆಯ ಬುಗ್ಗೆಯುಕ್ಕಿಸಿ ಕ್ವಿಜ್‍ಗೆ ಚಾಲನೆ ನೀಡಿದ ಸಂಸ್ಥೆಯ ನಿರ್ದೇಶಕ ಡಾ|| ಜಯಂತ್ ಪ್ರಾಸ್ಥಾವಿಕವಾಗಿ ಮಾತನಾಡಿದರು. ಜಿಲ್ಲೆಯ ಮತ್ತು ನಗರದ ವಿವಿಧ ಹಿರಿಯ ಪ್ರಾಥಮಿಕ ಶಾಲೆಗಳಿಂದ ಎಂಟುನೂರಕ್ಕೂ ಹೆಚ್ಚು ಮಕ್ಕಳು ಕ್ವಿಜ್‍ನಲ್ಲಿ ಭಾಗವಹಿಸಿದರು. ಪ್ರಪ್ರಥಮವಾಗಿ OMR ಶೀಟ್ ನೋಡಿದ್ದ ಮಕ್ಕಳು ನಿರಾತಂಕವಾಗಿ ಉತ್ತರಗಳಿಗೆ ಶೇಡ್ ಮಾಡಿದ್ದು ವಿಶೇಷವಾಗಿತ್ತು. ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಮಕ್ಕಳು ಆತ್ಮವಿಶ್ವಾಸದಿಂದ 60 ಪ್ರಶ್ನೆಗಳಿಗೆ ಉತ್ತರಿಸಿದರು. ವಿಜ್ಞಾನ ಮತ್ತು ಗಣಿತದ ತಲಾ ಮೂವತ್ತು ಪ್ರಶ್ನೆಗಳಿಗೆ ನಾಲ್ಕು ಉತ್ತರಗಳಿದ್ದು ಸರಿ ಉತ್ತರ ಆಯ್ಕೆಯನ್ನು 60 ನಿಮಿಷಗಳಲ್ಲಿ ಭರ್ತಿ ಮಾಡುವ ಸವಾಲನ್ನು ಮಕ್ಕಳು ನಿರ್ಭಯವಾಗಿ ಸ್ವೀಕರಿಸಿದರು. ಕಂಪ್ಯೂಟರೀಕೃತ ನೊಂದಣಿ ಕ್ರಮ, ಅಸನ ವ್ಯವಸ್ಥೆ, ಪ್ರಶ್ನೆಪತ್ರಿಕೆಯ ಗುಣಮಟ್ಟ ನಂತರದ ಲಘು ಉಪಹಾರ ಹೀಗೆ ಪ್ರತಿ ಹಂತ ಪಾಲಕರ ಮೆಚ್ಚುಗೆಗೆ ಪಾತ್ರವಾಯಿತು. ಎಳೆಯ ವಯಸ್ಸಿನಲ್ಲಿ ಮಕ್ಕಳು ಸ್ಪರ್ಧಾತ್ಮಕ ರೀತಿಯ ಪರೀಕ್ಷೆಗೆ ಒಳಪಟ್ಟಿದ್ದು ಮಕ್ಕಳಲ್ಲಿ ಅತ್ಯುತ್ಸಾಹ ಮೂಡಿಸಿತು. ಬಹುಮಾನದ ಮೊತ್ತ 15 ಸಾವಿರ ಪ್ರಥಮ, 10 ಸಾವಿರ ದ್ವಿತೀಯ, 5 ಸಾವಿರ ತೃತೀಯ ಹಾಗೂ ತಲಾ ಒಂದು ಸಾವಿರದ ಹತ್ತು ಸಮಾಧಾನಕರ ಬಹುಮಾನಗಳಿಗೆ ರಾಜ್ಯ ಪಠ್ಯಕ್ರಮದ ಆಂಗ್ಲ ಮತ್ತು ಕನ್ನಡ ಮಾಧ್ಯಮದ ಮಕ್ಕಳು ಮತ್ತು ಕೇಂದ್ರ ಪಠ್ಯಕ್ರಮದ ಮಕ್ಕಳು ಭಾಗವಹಿಸಿದ್ದರು. ಪ್ರಶ್ನೆಪತ್ರಿಕೆಗಳು ಆಯಾ ಪಠ್ಯಕ್ರಮ ಮತ್ತು ಮಾಧ್ಯಮಕ್ಕೆ ಪ್ರತ್ಯೇಕವಾಗಿ ಸರಬರಾಜು ಮಾಡಲಾಗಿತ್ತು. ಸುವರ್ಣ ಮಹೋತ್ಸವದ ಕಾರ್ಯಕ್ರಮಗಳಿಗೆ ಕ್ವಿಜ್ ಮೂಲಕ ಚಾಲನೆ ನೀಡಿದ ಮಕ್ಕಳಿಗೆ ಅಭಿನಂದನೆ ಸಲ್ಲಿಸಲಾಯಿತು. ಏಪ್ರಿಲ್ 18 ರೊಳಗೆ ಸಂಸ್ಥೆಯ ವೆಬ್‍ಸೈಟ್ www.siddaganga.com ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.


TO GIVE FEEDBACK ABOUT QUIZ PLEASE CLICK HERE

ನಿಮ್ಮ ಅಭಿಪ್ರಾಯವನ್ನು ನೀಡಲು ಇಲ್ಲಿ ಕ್ಲಿಕ್ ಮಾಡಿ

















TO GIVE FEEDBACK ABOUT QUIZ PLEASE CLICK HERE

ನಿಮ್ಮ ಅಭಿಪ್ರಾಯವನ್ನು ನೀಡಲು ಇಲ್ಲಿ ಕ್ಲಿಕ್ ಮಾಡಿ


1 comment:

  1. Great Information sharing.I am very happy to read this article .. thanks for giving us go through info.Fantastic nice. I appreciate this post Take a look at Ross Black Friday 2020 Deals

    ReplyDelete