Wednesday, May 30, 2018

CBSE X Result - 2018

ಸಿದ್ಧಗಂಗಾ ಸಿ.ಬಿ.ಎಸ್.ಇ. - 100% ಫಲಿತಾಂಶ

ದಾವಣಗೆರೆ, ಮೇ 29,
ಕಳೆದ ಮಾರ್ಚ್‍ನಲ್ಲಿ ನಡೆದ 10ನೇ ತರಗತಿ ಸಿ.ಬಿ.ಎಸ್.ಇ. ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ನಗರದ ಸಿದ್ಧಗಂಗಾ ಸಿ.ಬಿ.ಎಸ್.ಇ. ಪಠ್ಯಕ್ರಮದ ಶಾಲೆಗೆ ನೂರಕ್ಕೆ ನೂರು ಫಲಿತಾಂಶ ದೊರಕಿದೆ. ಪರೀಕ್ಷೆಗೆ ಹಾಜರಾದ 35 ಮಕ್ಕಳಲ್ಲಿ 9 ಮಕ್ಕಳು ಡಿಸ್ಟಿಂಕ್ಷನ್‍ನಲ್ಲಿ, 24 ಮಕ್ಕಳು ಪ್ರಥಮ ದರ್ಜೆಯಲ್ಲಿ ಮತ್ತು ಇಬ್ಬರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಕನ್ನಡ 93, ಇಂಗ್ಲೀಷ್ 95, ಗಣಿತ 91, ವಿಜ್ಞಾನ 89, ಸಮಾಜ 96 ಒಟ್ಟು 500ಕ್ಕೆ 464 ಅಂಕಗಳನ್ನು ಗಳಿಸಿದ ಉಲ್ಲಾಸ್ ವಿಶ್ವಕರ್ಮ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಉಲ್ಲಾಸ್ 92.8%, ಕಾವ್ಯ ಹೆಚ್.ವೈ. 91.8%, ನಿಸರ್ಗ ಎಸ್. ಕೌಟಿ 90.4%, ಅಂಕಿತ ಕೆ.ಬಿ. ವಿರಾಂಚಿ ಎಲ್.ಎಸ್. 88.8%, 89.6%, ಅತಿಯಾ ಫಿರ್ದೊಸ್ 87.8%, ಕೀರ್ತಿ ಎಂ.ಆರ್. 86.2%, ತನುಶ್ರೀ ಬಿ.ಎಸ್. 86%, ಶುಭ ಕೆ.ಎಂ. 85.8% ಪಡೆದು ಡಿಸ್ಟಿಕ್ಷಂನ್‍ನಲ್ಲಿ ಉತ್ತೀರ್ಣರಾಗಿದ್ದಾರೆ.
ಮೊದಲ ಬ್ಯಾಚಿನ ಉತ್ತಮ ಫಲಿತಾಂಶಕ್ಕೆ ಕಾರಣರಾದ ಮಕ್ಕಳಿಗೆ ಮತ್ತು ಬೋಧಕ ವರ್ಗದವರಿಗೆ ಆಡಳಿತ ಮಂಡಳಿಯ ಹೇಮಂತ್ ಡಿ.ಎಸ್., ಪ್ರಾಚಾರ್ಯರಾದ ಶ್ರೀಮತಿ ಗಾಯತ್ರಿ ಹಾಗೂ ಉಪಪ್ರಾಚಾರ್ಯರಾದ ಶ್ರೀಮತಿ ಶಾಂತಿ ಅಭಿನಂದನೆ ಸಲ್ಲಿಸಿದ್ದಾರೆ.


Tuesday, May 8, 2018

SSLC Result - 2018


ಸಿದ್ಧಗಂಗಾ ಕಾಂಪೋಜಿಟ್ ಹೈಸ್ಕೂಲ್
SSLC  ಫಲಿತಾಂಶ 99%
ದಾವಣಗೆರೆ, ಮೇ 7
ನಗರದ ಶ್ರೀ ಸಿದ್ಧಗಂಗಾ ಕಾಂಪೋಜಿಟ್ ಹೈಸ್ಕೂಲಿಗೆ ಪ್ರತಿ ವರ್ಷದಂತೆ ಈ ಬಾರಿಯೂ ಉತ್ತಮ ಫಲಿತಾಂಶ ಬಂದಿದೆ.
ಗೌತಮಿ ಆರ್. ಎಂಬ ಬಾಲಕಿ 625 ಕ್ಕೆ 611 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಕನ್ನಡ 124 , ಇಂಗ್ಲೀಷ್ 99, ಹಿಂದಿ 97, ಗಣಿತ 92, ವಿಜ್ಞಾನ 99 ಮತ್ತು ಸಮಾಜದಲ್ಲಿ 100 ಅಂಕಗಳನ್ನು ಗಳಿಸಿದ್ದಾಳೆ.
ಕನ್ನಡ ವಿಷಯದಲ್ಲಿ ನಾಲ್ಕು ಮಕ್ಕಳು 125 ಕ್ಕೆ 125,  ಹಿಂದಿಯಲ್ಲಿ 5 ಮಕ್ಕಳು 100 ಕ್ಕೆ 100 ಮತ್ತು ಸಮಾಜ ವಿಜ್ಞಾನದಲ್ಲಿ 3 ಮಕ್ಕಳು 100 ಕ್ಕೆ 100 ಅಂಕಗಳನ್ನು ಗಳಿಸಿ ಉತ್ತಮ ಫಲಿತಾಂಶ ನೀಡಿದ್ದಾರೆ. ಡಿಸ್ಟಿಂಕ್ಷನ್ ಪಡೆದ ಮಕ್ಕಳ ಸಂಖ್ಯೆ 71.
600 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವ  ಗೌತಮಿ ಆರ್. , ನಯನ ವೈ. ಎಂ. , ಧನ್ಯತಾ ಟಿ.,  ಸ್ಫೂರ್ತಿ ಡಿ. , ಪರಶುರಾಮ ಎಸ್. ಪಿ. , ಚಿರಂತನ ಎನ್. ಕೆ. , ತರುಣ್ ಪಿ. ಮತ್ತು ಸ್ವಾತಿ ಎಸ್. ಇವರು MSS ಸ್ಕಾಲರ್‍ಶಿಪ್‍ಗೆ ಅರ್ಹತೆ ಪಡೆದಿದ್ದಾರೆ. ಸಿದ್ಧಗಂಗಾ ಕಾಂಪೋಜಿಟ್ ಹೈಸ್ಕೂಲಿಗೆ 99% ಫಲಿತಾಂಶ ದೊರಕಿಸಿಕೊಟ್ಟ ಎಲ್ಲಾ ಮಕ್ಕಳನ್ನು ಹಾಗೂ ಉತ್ತಮ ಫಲಿತಾಂಶ ಪಡೆಯಲು ಕಾರಣಕರ್ತರಾದ ಬೋಧಕ ವರ್ಗದವರಿಗೆ ಶಾಲೆಯ ಸಂಸ್ಥಾಪಕರಾದ ಎಂ. ಎಸ್. ಶಿವಣ್ಣ ಆಡಳಿತ ಮಂಡಳಿಯ ಹೇಮಂತ್ ಮತ್ತು ಡಾ|| ಜಯಂತ್‍ರವರು ಮುಖ್ಯ ಶಿಕ್ಷಕಿ ಜಸ್ಟಿನ್ ಡಿಸೌಜ ಅಭಿನಂದನೆಗಳನ್ನು ತಿಳಿಸಿದ್ದಾರೆ.




Wednesday, May 2, 2018

JEE (Main) Result - 2018

JEE (Main) ನಲ್ಲಿ ಟಾಪರ್
ಸಿದ್ಧಗಂಗಾ ಪಿ.ಯು ಕಾಲೇಜಿನ ಸುನಿಧಿ ಘಟಿಕರ್

ದಾವಣಗೆರೆ, ಮೇ 1
ಕಳೆದ ಏಪ್ರಿಲ್‍ನಲ್ಲಿ ನಡೆದ JEE (Main) ನಲ್ಲಿ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಟಾಪರ್ ಸುನಿಧಿ ಎಂ ಘಟಿಕರ್ 167 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಸುನಂದ ಮತ್ತು ಮುರಳಿ ದಂಪತಿಗಳ ಪುತ್ರಿ ಸುನಿಧಿ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ 583 ಅಂಕಗಳಿಸಿ ಸಿದ್ಧಗಂಗಾ ಕಾಲೇಜಿನ ಟಾಪರ್ ಆಗಿ ಹೊರ ಹೊಮ್ಮಿದ್ದಾಳೆ. ಸಂಗೀತ, ನೃತ್ಯದ
ಜೊತೆಗೆ ಶೈಕ್ಷಣಿಕ ಸಾಧನೆಯನ್ನೂ ಮಾಡಿರುವ ಸುನಿಧಿ, ತನ್ನ ಸಾಧನೆಗೆ ಸಿದ್ಧಗಂಗಾ ಕಾಲೇಜಿನ ಉಪನ್ಯಾಸಕರ ಗುಣಮಟ್ಟ, ಅವರು ನೀಡುತ್ತಿರುವ ಅತ್ಯುತ್ತಮ ತರಬೇತಿ ಹಾಗೂ ಕಾಲೇಜಿನ ಆಡಳಿತ ಮಂಡಳಿ ಸಹಕಾರ ಕಾರಣ ಎನ್ನುತ್ತಾಳೆ. ಸಿದ್ಧಗಂಗಾ ಕಾಲೇಜಿನ ಈ ಪ್ರತಿಭಾವಂತ ವಿದ್ಯಾರ್ಥಿನಿಯನ್ನು ಕಾಲೇಜಿನ ಪ್ರಾಚಾರ್ಯರಾದ ಪ್ರಸಾದ್ ಬಂಗೇರ, ವ್ಯವಸ್ಥಾಪಕ ನಿರ್ದೇಶಕರಾದ ಡಾ|| ಜಯಂತ್ ಅವರು ಅಭಿನಂದಿಸಿದ್ದಾರೆ.


JEE(Main) RESULT......
Congrats!!! SUNIDHI M GHATIKAR "Davanagere District Topper" from SIDDAGANGA Scored 167 Marks in JEE(Main) & Congrats!!!  SIDDAGANGA Team Produced Highest number 96 Students Eligible for appear JEE(advance) exam.

-Prasad Bangera S,
Principal
Siddaganga PU College

JEE (Main) ನಲ್ಲಿ ಜಿಲ್ಲೆಯ ಟಾಪರ್ ಸುನಿಧಿ ತಂದೆಯ ಮನದ ಮಾತು
ಬಾಲ್ಯದಿಂದಲೂ ನನ್ನ ಮಗಳನ್ನು ಉತ್ತಮ ಸಂಸ್ಕಾರದಲ್ಲಿ ಬೆಳೆಸಿದ್ದೇನೆ. SSLC ನಂತರ ಮಗಳನ್ನು ಯಾವ ಕಾಲೇಜಿಗೆ ಸೇರಿಸಬೇಕೆಂಬ ಗೊಂದಲವೇ ಇರಲಿಲ್ಲ. ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕೃತಿ ಆದರ್ಶಗಳನ್ನು ಬೆಳೆಸುತ್ತಿರುವ ದಾವಣಗೆರೆಯ ಸಿದ್ಧಗಂಗಾ ಕಾಲೇಜು ನನ್ನ ಆಯ್ಕೆಯಾಗಿತ್ತು. ಪ್ರಥಮ ದಿನದಿಂದಲೇ ಕಾಲೇಜಿನ ಕಾರ್ಯವೈಖರಿ ನನ್ನ ಮೆಚ್ಚುಗೆಗೆ ಪಾತ್ರವಾಗಿತ್ತು. ಸುಸಂಸ್ಕೃತ ಪ್ರಾಚಾರ್ಯರು, ತಮ್ಮ ತಮ್ಮ ವಿಷಯಗಳಲ್ಲಿ ಪರಿಪೂರ್ಣ ಪಾಂಡಿತ್ಯ ಹೊಂದಿರುವ ಬೋಧಕ ವರ್ಗ, ಸಹೃದಯ ಆಡಳಿತ ಮಂಡಳಿ, ಸೌಜನ್ಯಭರಿತ ಬೋಧಕೇತರ ಸಿಬ್ಬಂದಿ ನನ್ನ ಗಮನ ಸೆಳೆದತ್ತು. ಪ್ರತಿಯೊಂದು ಕಾರ್ಯವೂ ವ್ಯವಸ್ಥಿತವಾಗಿ, ಮಕ್ಕಳ ಬೌದ್ಧಿಕ ವಿಕಸನಕ್ಕೆ ಪೂರಕವಾಗಿರುತ್ತಿತ್ತು. ಪಿ.ಯು.ಸಿ. ಪಠ್ಯದ ಜೊತೆಗೆ NEET, JEE, KCET, JIPMER ಇವುಗಳಿಗೆ ನಿರಂತರ ತರಬೇತಿ ದೊರೆಯುತ್ತಿದ್ದುದರಿಂದ ನಾನು ನಿಶ್ಚಿಂತನಾಗಿದ್ದೆ. OMR ಶೀಟ್‍ಗಳಲ್ಲಿ ಎಕ್ಸಾಂ ನಡೆಸಿದ ತಕ್ಷಣ ಫಲಿತಾಂಶ ನೀಡಿ ಪಾಲಕರಿಗೆ SMS ಮೂಲಕ ಮಾಹಿತಿ ಕಳುಹಿಸುತ್ತಿದ್ದರು. ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಗೆಂದು ಆಡಳಿತ ಮಂಡಳಿ ಪ್ರತಿ ವಿದ್ಯಾರ್ಥಿಗೆ Tab ಸೌಕರ್ಯ ಕಲ್ಪಿಸಿದೆ. ಇಲ್ಲಿ ದೊರೆಯುತ್ತಿರುವ ಗುಣಾತ್ಮಕ ಶಿಕ್ಷಣಕ್ಕೆ ನಾನು ಕೊಡುತ್ತಿರುವ ಫೀ ಅತ್ಯಂತ ಕಡಿಮೆ ಎಂದೆನಿಸುತ್ತಿತ್ತು. ಜೊತೆಗೆ ನನ್ನ ಮಗಳ ಸಂಗೀತ, ನೃತ್ಯ ಸಾಧನೆಗೂ ಕಾಲೇಜಿನಿಂದ ಪ್ರೋತ್ಸಾಹ ದೊರಕಿದ್ದು ನನ್ನ ಸಂಭ್ರಮ ಹೆಚ್ಚಿಸಿತು. ಕಾಲೇಜಿನ ಸಾಹಿತ್ಯ, ಸಂಗೀತ, ನೃತ್ಯದ ಪಠ್ಯೇತರ ಚಟುವಟಿಕೆಗಳು ನನ್ನ ಮಗಳ ಏಕಾಗ್ರತೆ ಮತ್ತು ಬೌದ್ಧಿಕ ವಿಕಸನಕ್ಕೆ ಪೂರಕವಾಯಿತು. ಸಿದ್ಧಗಂಗಾ ಕಾಲೇಜಿನ ಪ್ರೌಢಿಮೆಯಿಂದ ದೊರೆತ ಅತ್ಯುತ್ತಮ ಶಿಕ್ಷಣದಿಂದ ನನ್ನ ಮಗಳು JEE (Main) ನಲ್ಲಿ ಟಾಪರ್ ಆಗಲು ಸಾಧ್ಯವಾಯಿತು ಎಂಬುದನ್ನು ಹೆಮ್ಮೆಯಿಂದ ತಿಳಿಸುತ್ತಿದ್ದೇನೆ. ಹೆಣ್ಣು ಮಕ್ಕಳಿಗೆ ಅತ್ಯಂತ ಸುರಕ್ಷಿತ ಕಾಲೇಜು ಸಿದ್ಧಗಂಗಾ ಎಂಬುದು ನನಗೆ ಮನವರಿಕೆಯಾಗಿದೆ. ಎರಡು ವರ್ಷಗಳ ಕಾಲ ನನ್ನ ಮಗಳು ಸುನಿಧಿಯನ್ನು ಉನ್ನತ ಮಟ್ಟಕ್ಕೆ ಬೆಳೆಸಿದ ಸಿದ್ಧಗಂಗಾ ಕಾಲೇಜಿನ ಪ್ರತಿಯೊಬ್ಬರಿಗೂ ನನ್ನ ವಂದನೆಗಳು.
-ಮುರಳಿ ಎಂ. ಘಟಿಕರ್


Tuesday, May 1, 2018

II PUC Result - 2018

2018-19ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು  ಅಪ್ರತಿಮ ಸಾಧನೆ ಮೆರೆದಿದ್ದು, ಜಿಲ್ಲೆಗೆ ಅತ್ಯುತ್ತಮ ಫಲಿತಾಂಶ  ನೀಡುವುದರ ಮೂಲಕ ಸಿದ್ಧಗಂಗೆಯ ಗುಣಾತ್ಮಕ ಫಲಿತಾಂಶವನ್ನು  ಸಾಕ್ಷೀಕರಿಸಿದ್ದಾರೆ.
ಪರೀಕ್ಷೆಗೆ ಹಾಜರಾದ 578 ವಿದ್ಯಾರ್ಥಿಗಳ ಪೈಕಿ 568 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು  98.26% ಫಲಿತಾಂಶ ಬಂದಿರುತ್ತದೆ. ಇವರಲ್ಲಿ 276 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‍ನಲ್ಲಿ, 282 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲ್ಲಿ ಹಾಗೂ 10 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 34 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳಾದ ಸುನಿಧಿ ಎಂ ಘಟಿಕರ್, ಶ್ರೀನಿಧಿ ಎಸ್ ಮತ್ತು ಸೌಭಾಗ್ಯ ಎಸ್ ಬೀಳಗಿಮಠ್ ಈ ಮೂರು ವಿದ್ಯಾರ್ಥಿಗಳು 600ಕ್ಕೆ 583 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮರಾಗಿದ್ದಾರೆ.

NAME KAN ENG PHY CHE MATHS BIO TOTAL
SUNIDHI M GHATIKAR 97 91 99 100 100 96 583
SRINIDHI S 97 93 100 100 99 94 583
SOUBHAGYA S BEELAGIMATH 97 94 95 100 98 99 583

ವಿಷಯವಾರು 100ಕ್ಕೆ 100 ಅಂಕಗಳನ್ನು  ಪಡೆದ ವಿದ್ಯಾರ್ಥಿಗಳ ವಿವರ

NAME SUBJECT SCORE
SHWETA HAVERI KANNADA 100
MEGHA N KANNADA 100
ASHWINI C K KANNADA 100
SRINIDHI S PHYSICS 100
DARSHAN KM PHYSICS 100
SRINIDHI S PHYSICS 100
SOUBHAGYA S BEELAGIMATH CHEMISTRY 100
SRINIDHI S CHEMISTRY 100
SUNIDHI M GHATIKAR CHEMISTRY 100
BASAVARAJ CHEMISTRY 100
MOHAMMED ZAID HR CHEMISTRY 100
POORVI P RAMAGHAT CHEMISTRY 100
SHWETA HAVERI CHEMISTRY 100
NISARGA KC CHEMISTRY 100
MEGHARAJ BK CHEMISTRY 100
PRUTHVIRAJ HALEMANE M CHEMISTRY 100
VIKAS R KARJIGI CHEMISTRY 100
KOUSHIK DN CHEMISTRY 100
RAKESH SR CHEMISTRY 100
PRAJWAL BN CHEMISTRY 100
SUNIDHI M GHATIKAR MATHEMATICS  100
INDHU P MATHEMATICS  100
NANDITHA S V MATHEMATICS  100
SHWETA HAVERI MATHEMATICS  100
RAGHAVENDRA KC MATHEMATICS  100
DRUVA MANJARI G A MATHEMATICS  100
VISHWANATHA B MATHEMATICS  100
VIKAS R KARJIGI MATHEMATICS  100
B M VISMAYA MATHEMATICS  100
SUDEEP MARUTHI DODDAMANI MATHEMATICS  100
BHARATH CR MATHEMATICS  100
ROSHAN CD MATHEMATICS  100
RAGHAVENDRA KC BIOLOGY  100
SANJAY AS COMPUTER SCIENCE  100
CHANDRASHEKAR M COMPUTER SCIENCE  100
   ಉತ್ತಮ ಫಲಿತಾಂಶವನ್ನು ನೀಡಿದ ವಿದ್ಯಾರ್ಥಿಗಳನ್ನು ಮತ್ತು ಅವರನ್ನು ಪ್ರೋತ್ಸಾಹಿಸಿದ  ಉಪನ್ಯಾಸಕರನ್ನು ಹಾಗೂ ಕಾಲೇಜಿನ ಸಿಬ್ಬಂದಿಯನ್ನು ಪ್ರಾಚಾರ್ಯರಾದ ಶ್ರೀ ಪ್ರಸಾದ್ ಬಂಗೇರ ಎಸ್, ಸಂಸ್ಥಾಪಕರಾದ ಶ್ರೀ ಎಂ ಎಸ್ ಶಿವಣ್ಣ ಮುಖ್ಯಸ್ಥರಾದ  ಶ್ರೀಮತಿ ಜಸ್ಟಿನ್ ಡಿಸೋಜ, ನಿರ್ದೇಶಕರಾದ       ಡಾ|| ಜಯಂತ್ ಡಿ ಎಸ್ ಹಾಗೂ ವ್ಯವಸ್ಥಾಪಕ ಕಾರ್ಯದರ್ಶಿಗಳಾದ ಶ್ರೀ ಹೇಮಂತ್ ಡಿ ಎಸ್ ಇವರು ಅಭಿನಂದಿಸಿದ್ದಾರೆ.

ಪ್ರಾಚಾರ್ಯರು
ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜು
ದಾವಣಗೆರೆ