Saturday, August 22, 2020

K-CET 2020 Result

 ಸಿದ್ಧಗಂಗಾ ಕಾಲೇಜಿಗೆ K-CET ಯಲ್ಲಿ ಉತ್ತಮ ಫಲಿತಾಂಶ

ದಾವಣಗೆರೆ ಆ. 21

ಜುಲೈ ತಿಂಗಳ 30, 31 ರಂದು ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ನಗರದ ಸಿದ್ಧಗಂಗಾ ಪದವಿಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ ದೊರೆತಿದೆ.

ವಿನಾಯಕ ಹಾವೇರಿ ಬಿ. ಎಸ್ಸಿ., (ಅಗ್ರಿ) 263 ನೇ Rank, ನ್ಯಾಚುರೋಪತಿ ಮತ್ತು ಯೋಗ 346, ವೆಟರ್ನರಿ 446, ಬಿ ಮತ್ತು ಡಿ. ಫಾರ್ಮದಲ್ಲಿ 721 ನೇ Rank ಗಳಿಸಿದ್ದಾನೆ.

ನಿಸರ್ಗ ಎಸ್ ಕೌಟಿ ಬಿ. ಎಸ್ಸಿ(ಅಗ್ರಿ) 267, ಯೋಗ ನ್ಯಾಚುರೋಪತಿ 339, ವೆಟರ್ನರಿ 411, ಬಿ ಮತ್ತು ಡಿ ಫಾರ್ಮ 717ನೇ Rank ಪಡೆದಿದ್ದಾಳೆ.

ವಿರಂಚಿ ಎಲ್. ಎಸ್. ಬಿ. ಎಸ್ಸಿ(ಅಗ್ರಿ) 585 ಇಂಜಿನಿಯರಿಂಗ್ 955 ನೇ Rank ಪಡೆದಿದ್ದಾನೆ.

Nisarga
Vinayak

Viranchi


10000ದೊಳಗೆ Rank ಪಡೆದ ವಿದ್ಯಾರ್ಥಿಗಳು ಇಂಜಿನಿಯರಿಂಗ್‍ನಲ್ಲಿ 48, ಬಿ. ಎಸ್ಸಿ(ಅಗ್ರಿ) 66, ನ್ಯಾಚುರೋಪತಿ ಮತ್ತು ಯೋಗದಲ್ಲಿ 58, ವೆಟರ್ನರಿ ಸೈನ್ಸ್‍ನಲ್ಲಿ 45 ಬಿ ಫಾರ್ಮ ಮತ್ತು ಡಿ ಫಾರ್ಮದಲ್ಲಿ 38 ಒಟ್ಟು 293 ಇದ್ದಾರೆ.

ಉತ್ತಮ ಫಲಿತಾಂಶ ಪಡೆದಿರುವ ಮಕ್ಕಳನ್ನು ಸಂಸ್ಥೆಯ ನಿರ್ದೇಶಕರಾದ ಡಾ|| ಜಯಂತ್ ಪ್ರಾಚಾರ್ಯರಾದ ಗಾಯತ್ರಿ ಚಿಮ್ಮಡ್ ಮತ್ತು ಬೋಧಕ ವರ್ಗದವರು ಅಭಿನಂದಿಸಿದ್ದಾರೆ. 


Tuesday, August 11, 2020

SSLC Result - 2020

 ಸಿದ್ಧಗಂಗಾ ಜಿಲ್ಲೆಗೆ ನಂಬರ್ – 1 

ಸಿದ್ಧಗಂಗಾ ಕಾಂಪೋಜಿಟ್ ಹೈಸ್ಕೂಲ್

SSLC ಯಲ್ಲಿ ದಾಖಲೆಯ ಫಲಿತಾಂಶ 

ಜಿಲ್ಲಾ ಟಾಪರ್ ಆಕಾಶ್ ಆರ್

ದಾವಣಗೆರೆ. ಆ.10 

SSLC ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ದಾವಣಗೆರೆ ಜಿಲ್ಲೆಯ ಟಾಪರ್ ಆಗಿ ಸಿದ್ಧಗಂಗಾ ವಿದ್ಯಾ ಸಂಸ್ಥೆಯ ಆಕಾಶ್ ಆರ್ 625 ಕ್ಕೆ 623 ಅಂಕಗಳನ್ನು ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾನೆ. 

ಕನ್ನಡ 125 ಕ್ಕೆ 124, ಇಂಗ್ಲೀಷ್ 99, ಗಣಿತ 100, ವಿಜ್ಞಾನ 100, ಸಮಾಜ 100 ಅಂಕಗಳನ್ನು ಪಡೆದು ಶಾಲೆಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ರಾಜ್ಯದಲ್ಲಿ 623 ಅಂಕಗಳನ್ನು ಪಡೆದ 43 ವಿದ್ಯಾರ್ಥಿಗಳಲ್ಲಿ ಆಕಾಶ್ ಒಬ್ಬನಾಗಿದ್ದಾನೆ. ಸೆಕ್ಯುರಿಟಿ ಗಾರ್ಡ್ ಆಗಿರುವ ಆರ್.ರೇವಣಸಿದ್ದಪ್ಪ ಮತ್ತು ಗೃಹಿಣಿ ಮಾಲಾ ದಂಪತಿಗಳ ಏಕೈಕ ಪುತ್ರ ಆಕಾಶ್ ಸಿದ್ಧಗಂಗಾ ಸಂಸ್ಥೆಯ ಸರ್ವಕಾಲಿಕ ದಾಖಲೆ ಮುರಿದ ಪ್ರತಿಭಾವಂತ. ಸೌಮ್ಯ ಸ್ವಭಾವದ ಆಕಾಶ್ ಎಲ್ಲ ಶಿಕ್ಷಕರ ಮೆಚ್ಚಿನ ವಿದ್ಯಾರ್ಥಿ. 

ಸಿದ್ಧಗಂಗಾ ಶಾಲೆಗೆ ಈ ಬಾರಿಯ SSLC ಯಲ್ಲಿ 600 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದವರು 15 ಮಕ್ಕಳಿದ್ದಾರೆ. ವಿವಿಧ ವಿಷಯಗಳಲ್ಲಿ 90 ಮಕ್ಕಳು 100 ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ. ಕನ್ನಡದಲ್ಲಿ 8 ಮಕ್ಕಳು 125 ಕ್ಕೆ 125, ಹಿಂದಿಯಲ್ಲಿ 70 ಮಕ್ಕಳು, ಗಣಿತದಲ್ಲಿ 3, ವಿಜ್ಞಾನದಲ್ಲಿ 2, ಸಮಾಜದಲ್ಲಿ 7 ಮಕ್ಕಳು 100 ಕ್ಕೆ 100 ಅಂಕಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ. ಪರೀಕ್ಷೆಗೆ ಹಾಜರಾದ 324 ಮಕ್ಕಳಲ್ಲಿ 321 ಮಕ್ಕಳು ಉತ್ತೀರ್ಣರಾಗಿದ್ದಾರೆ. ಶೇ.99.07 ಫಲಿತಾಂಶ ಬಂದಿದೆ.

120 ಮಕ್ಕಳು ಡಿಸ್ಟಿಂಕ್ಷನ್‍ನಲಿ,್ಲ 203 ಮಕ್ಕಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 

ಉತ್ತಮ ಫಲಿತಾಂಶ ದೊರೆಯಲು ಶಿಕ್ಷಕರ ನಿರಂತರ ಪರಿಶ್ರಮ ಮತ್ತು ದಾವಣಗೆರೆ ಉಪನಿರ್ದೇಶಕರು ನಡೆಸಿದ ಸರಣಿ ಪರೀಕ್ಷೆಗಳು ಕಾರಣವೆಂದು ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ’ಸೌಜ ತಿಳಿಸಿದ್ದಾರೆ. 

ಸಾಧನೆಗೈದ ಎಲ್ಲ ಮಕ್ಕಳನ್ನು ಸಂಸ್ಥೆಯ ಕಾರ್ಯದರ್ಶಿ ಹೇಮಂತ್ ನಿರ್ದೇಶಕರಾದ ಡಾ||ಜಯಂತ್ ಮತ್ತು ಎಲ್ಲ ಅಧ್ಯಾಪಕ ವರ್ಗದವರು ಅಭಿನಂದಿಸಿದ್ದಾರೆ.