Wednesday, November 2, 2022

ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ವೈಶಿಷ್ಠ್ಯ ಪೂರ್ಣ ಆಚರಣೆ



ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ
ವೈಶಿಷ್ಠ್ಯ  ಪೂರ್ಣ ಆಚರಣೆ
ನ.೧
೬೭ನೇ ಕನ್ನಡ ರಾಜ್ಯೋತ್ಸವವನ್ನು ನಗರದ ಸಿದ್ಧಗಂಗಾ ಶಾಲಾ-ಕಾಲೇಜಿನ ಮಕ್ಕಳು ವೈಶಿಷ್ಠö್ಯಪೂರ್ಣವಾಗಿ ಆಚರಿಸಿದರು. ಬೆಳಿಗ್ಗೆ ೦೮:೩೦ಕ್ಕೆ ಸಂಸ್ಥೆಯ ಹಿರಿಯ ಶಿಕ್ಷಕಿ ರಮಾದೇವಿ ಅವರಿಂದ ಧ್ವಜಾರೋಹಣೆ ನೆರವೇರಿತು. ನಾಡಗೀತೆ ನಂತರ ಉದಯವಾಗಲಿ ಕನ್ನಡನಾಡು, ಬಾರಿಸು ಕನ್ನಡ ಡಿಂಡಿಮ, ಹಚ್ಚೇವು ಕನ್ನಡದ ದೀಪ, ವಿಶ್ವವಿನೂತನ ಗೀತೆಗಳನ್ನು ಒಟ್ಟಾಗಿ ಹಾಡಿ ಮಕ್ಕಳು ನಾಡಪ್ರೇಮ, ಭಾಷಾ ಪ್ರೇಮವನ್ನು ಸಂಗೀತದ ಮೂಲಕ ಪ್ರಸ್ತುತ ಪಡಿಸಿದರು. ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಸಂತೋಷ್‌ರವರು ಮೈಸೂರು ರಾಜ್ಯ ಹೇಗೆ ಕರ್ನಾಟಕ ಎಂಬ ಹೆಸರು ಪಡೆಯಿತು ಹಾಗೂ ಕರ್ನಾಟಕ ಏಕೀಕರಣಕ್ಕಾಗಿ ದುಡಿದ ಮಹನೀಯರ ಬಗ್ಗೆ ಸವಿಸ್ತಾರವಾಗಿ ತಿಳಿಸುತ್ತಾ ಕನ್ನಡ ಭಾಷೆಗೆ ವಿದೇಶಿಯರ ಕೊಡುಗೆಯನ್ನು ಸ್ಮರಿಸಿದರು. ೧೦ನೇ ತರಗತಿ ವಿದ್ಯಾರ್ಥಿನಿ ವರ್ಷಿಣಿ ಕನ್ನಡ ಭಾಷೆಯ ಮಹತ್ವವನ್ನು ತಿಳಿಸಿದಳು. ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ’ಸೌಜ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಜಿ. ಸಿ. ನಿರಂಜನ್‌ರವರು ವಂದನಾರ್ಪಣೆ ಸಲ್ಲಿಸಿದರು. ಶಾಲಾ-ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದು ಕಾರ್ಯಕ್ರಮ ವೀಕ್ಷಿಸಿದರು. ಕನ್ನಡ ಬಾವುಟಗಳಿಂದ ಸಿಂಗಾರಗೊAಡ ಶಾಲಾ ಆವರಣ, ಕನ್ನಡಾಂಬೆಯ ಪೂಜಾ ಕಾರ್ಯಕ್ರಮದಿಂದಾಗಿ ಕಾರ್ಯಕ್ರಮ ಹೆಚ್ಚು ಮೆರಗು ಪಡೆಯಿತು.