Friday, June 7, 2019

NEET ನಲ್ಲಿ ಅತ್ಯುತ್ತಮ ಸಾಧನೆ

NEET ನಲ್ಲಿ ಅತ್ಯುತ್ತಮ ಸಾಧನೆ ಮೆರೆದ ಸಿದ್ಧಗಂಗಾ ಕಾಲೇಜಿನ ವಿದ್ಯಾರ್ಥಿಗಳು

ಜೂನ್5ರಂದು ಪ್ರಕಟಗೊಂಡಿರುವ NEET ಫಲಿತಾಂಶದಲ್ಲಿ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿ ದಾವಣಗೆರೆ ಜಿಲ್ಲೆಯ ಯಶೋಯಾನಕ್ಕೆ ಕಾರಣೀಭೂತರಾಗಿರುತ್ತಾರೆ.

     ಶೈಕ್ಷಣಿಕ ವರ್ಷದಲ್ಲಿ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ 393 ವಿದ್ಯಾರ್ಥಿಗಳು NEET ಪರೀಕ್ಷೆ ಬರೆದಿದ್ದರು.  343 ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ದಂತ ವೈದ್ಯಕೀಯ ದಾಖಲಾತಿಗೆ ಅರ್ಹತೆ ಪಡೆದಿರುತ್ತಾರೆ. 23 ವಿದ್ಯಾರ್ಥಿಗಳು 400ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ. ಕ್ರಮವಾಗಿ ಮಹಮ್ಮದ್ ನೌಮಾನ್.ಎಸ್ 552, ಇಂದು.ಪಿ 534, ಪ್ರಣವ್ ಜಿ. ಬಾಳಿಗ 521, ಶರಣ್ಯ ಹೆಚ್.ಸಿ 484, ಸಾನಿಯ ಖಾನಂ 483, ಗಂಗಾ ಕೆ.ಜಿ 481, ಶಿಫಾ ನಾಜ್.ಎಸ್ 480, ಪ್ರಜ್ವಲ್.ಎಂ 460, ಚಿತ್ರ್ರಾ.ಬಿ.ಎಂ 457, ರಾಮನಗೌಡ ಸಕ್ರಗೌಡರ್ 457, ಸೈಯದ್ ನುಸ್ರತ್ 452 ಅಂಕಗಳನ್ನು ಗಳಿಸಿರುತ್ತಾರೆ. 80 ಪರ್ಸೆಂಟೈಲ್ ಗಿಂತ ಹೆಚ್ಚು ಅಂಕಗಳನ್ನು  90 ವಿದ್ಯಾರ್ಥಿಗಳು ಹೊಂದಿರುವುದು ಶ್ಲಾಘನೀಯ.

ಅತ್ಯುತ್ತಮ ಫಲಿತಾಂಶದಿಂದ ತಮ್ಮ ಪ್ರತಿಭೆ ಮೆರೆದ ಮನೋಜ್.ಬಿ.ಆರ್ ಆಲ್ ಇಂಡಿಯಾ Rank 1282 ಪಡೆದರೆ, ಕ್ರಮವಾಗಿ ಮಾನಸ ಎಂ.ಆರ್ 1411, ಗವಿಶ್ ಯು.ಬಿ.   3212 ಹಾಗೂ ನಾಗರಾಜ.ಬಿ.ಎಸ್ 4985, ಗೌಡ್ರು ಕವಿತ 6122, ವಿಷ್ಣು ಹುನಗುಂದ.ಆರ್ 8741 ಮತ್ತು ಮನೋಜ್.ಆರ್ 10301 ಪಡೆದಿರುತ್ತಾರೆ.

ದಾಖಲೆಯ ಫಲಿತಾಂಶ ನೀಡಿ ಪ್ರಬುದ್ಧ ಸಾಧನೆ ಮೆರೆದ ವಿದ್ಯಾರ್ಥಿಗಳಿಗೆ ಮತ್ತು ಬೋಧಕ ವರ್ಗದವರಿಗೆ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ಹಾಗೂ ಉಪನ್ಯಾಸಕ ವರ್ಗ ಮತ್ತು ಆಡಳಿತ ಮಂಡಳಿ ಹೃದಯಪೂರ್ವಕವಾಗಿ ಅಭಿನಂದನೆಗಳನ್ನು ತಿಳಿಸಿದ್ದಾರೆ.