Wednesday, June 8, 2022

World Environment Day 2022





















ಸಿದ್ಧಗಂಗಾ  ಸಂಸ್ಥೆಯಲ್ಲಿ   ಪರಿಸರ  ದಿನಾಚರಣೆ  
50  ಸಾವಿರ  ಬೀಜದುಂಡೆ  ತಯಾರಿಸಿದ  ಮಕ್ಕಳು 

ಸಿದ್ಧಗಂಗಾ ಶಾಲೆಯಲ್ಲಿ ಮಕ್ಕಳ ಕಲರವ . ಭಾರತ್ ಸ್ಕೌಟ್ ಮತ್ತು ಗೈಡ್ಸ್ ನ ಸ್ಥಳೀಯ ಸಂಸ್ಥೆವತಿಯಿಂದ ಪರಿಸರ  ದಿನಾಚರಣೆ ವಿಶೇಷವಾಗಿ  ಹಮ್ಮಿಕೊಳ್ಳಲಾಗಿತ್ತು . 

ಮೂಟೆ ಮೂಟೆ ಕೆಂಪು  ಮಣ್ಣನ್ನು  ಬಯಲಲ್ಲಿ  ಸುರಿದರು . ವಿವಿಧ  ಜಾತಿಯ  ಕಾಡು ಮರಗಳ  ಬೀಜಗಳನ್ನು ರಾಶಿ  ಹಾಕಿದರು .  ಕ್ಷಣಾರ್ಧದಲ್ಲಿ  ಮಕ್ಕಳು  ತಮ್ಮ ತಮ್ಮ  ಗುಂಪು  ಮಾಡಿಕೊಂಡು ಮಣ್ಣನ್ನು ಹಂಚಿಕೊಂಡರು .  ಬೀಜಗಳನ್ನು  ಬೊಗಸೆಗಳಲ್ಲಿ  ತುಂಬಿಕೊಂಡರು .  ವಾಟರ್ ಬಾಟಲಿಗಳಿಂದ  ನೀರನ್ನು  ಸುರುವಿಕೊಂಡು  ಮಣ್ಣನ್ನು  ಉಂಡೆ ಕಟ್ಟುವ  ಹದಕ್ಕೆ  ಮೃದು  ಮಾಡಿಕೊಂಡರು .  ಪುಟ್ಟ  ಪುಟ್ಟ  ಕೈಗಳಲ್ಲಿ  ಉಂಡೆಗಳು  ರೂಪುಗೊಂಡಂತೆ  ಅದರ ಮಧ್ಯದೊಳಗೆ  ಬೀಜ  ಇಟ್ಟು  ದುಂಡಾದ ಆಕಾರ ಮಾಡಿ ಸಾಲಾಗಿ ಜೋಡಿಸಿದರು .  ವಿವಿಧ  ಗಾತ್ರದ ಬೀಜದುಂಡೆಗಳು  ತಯಾರಾದವು . ಒಣಗಲು  ಹರಡಿದರು .  ಸಾವಿರಾರು ಬೀಜದುಂಡೆಗಳನ್ನು  ಅರಣ್ಯ  ಇಲಾಖೆಯವರು ನಿಗದಿತ ಕಾಡು ಪ್ರದೇಶದಲ್ಲಿ ಬಿಸಾಡುವರು . ಮಳೆಗಾಲದಲ್ಲಿ  ಬೀಜಗಳು ಮೊಳಕೆಯೊಡೆದು ಸಸಿಯಾಗಿ ವೃಕ್ಷಗಳಾಗುತ್ತವೆ  ಎಂದು ತಿಳಿಸಿದಾಗ ಮಕ್ಕಳಲ್ಲಿ ಉತ್ಸಾಹ ತುಂಬಿತು . ಪರಿಸರ ದಿನಾಚರಣೆಯನ್ನು ಸಾರ್ಥಕವಾಗಿ  ಆಚರಿಸಿದ  ಭಾವನೆ  ಉಂಟಾಯಿತು .  ಜಿಲ್ಲಾ ಸ್ಕೌಟ್  ಗೈಡ್  ಸಂಸ್ಥೆಯಿಂದ ಆಗಮಿಸಿದ  ಕಾರ್ಯದರ್ಶಿ ರತ್ನ , ಎ ಡಿ ಸಿ ಹಾಲಪ್ಪ  ಮತ್ತು  ಎಸ್ ಜಿವಿ  ಅಶ್ವಿನಿಯವರು ಹಾಗೂ ಬೇರೆ ಬೇರೆ ಕಾಲೇಜುಗಳಿಂದ  ಬಂದಿದ್ದ  ರೋವರ್, ರೇಂಜರ್ ಗಳು ಮಕ್ಕಳ ಈ ಚಟುವಟಿಕೆಯನ್ನು ಶ್ಲಾಘಿಸಿದರು. ಸಂಸ್ಥೆಯ ಸ್ಕೌಟ್ ಮಾಸ್ಟರ್ ಮತ್ತು ಗೈಡ್ಸ್ ಕ್ಯಾಪ್ಟನ್ ,ಕಬ್ಸ್   ಬುಲ್ ಬುಲ್ ಫ್ಲಾಕ್ ಲೀಡರ್ಸ್ , ಬನ್ನೀಸ್  ಶಿಕ್ಷಕ - ಶಿಕ್ಷಕಿಯರು ಮತ್ತು ಹಲವಾರು ಪಾಲಕರು  ಮಕ್ಕಳ  ಉತ್ಸಾಹವನ್ನು  ಕುತೂಹಲದಿಂದ ವೀಕ್ಷಿಸಿದರು . ಬೀಜದುಂಡೆಗಳನ್ನು  ಕಟ್ಟುವಾಗ  ಹಿನ್ನಲೆಯಲ್ಲಿ  ಸುಶ್ರಾವ್ಯವಾಗಿ  ಮಕ್ಕಳು  ಪರಿಸರ  ಗೀತೆಗಳನ್ನು  ಹಾಡಿದರು . ಸಿದ್ಧಗಂಗಾ  ಸ್ಥಳೀಯ  ಸಂಸ್ಥೆಯ  ಕಾರ್ಯದರ್ಶಿ ಶಶಿಕಲಾರವರು  ಮಾರ್ಗದರ್ಶನ  ನೀಡಿದರು . 

No comments:

Post a Comment