Wednesday, April 11, 2018

MSS QUIZ 2018 - Grand Success

MSS Quiz 2018 conducted on 8th April 2018 at Siddaganga School was a Grand Success. Over 3000 people gathered to take part in prestigious MSS Quiz. Result will be announced on Sunday 15th April 2018 at 11.30 AM

To see Result Click Here

We would like you hear your feedback. Please spare few minutes to fill Feedback Form

ಸಿದ್ಧಗಂಗಾ ಸಂಸ್ಥೆಯ MSS ಕ್ವಿಜ್

ದಾವಣಗೆರೆ, ಏ. 8
     ದಾವಣಗೆರೆ ಜಿಲ್ಲೆಯ ಪ್ರತಿಷ್ಠಿತ MSS ಕ್ವಿಜ್‍ನಲ್ಲಿ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು. ಸಿದ್ಧಗಂಗೆಯ ಅಂಗಳ ವಿದ್ಯಾರ್ಥಿಗಳ ಕಲರವದಿಂದ ಕಂಗೊಳಿಸಿತು.  ವಿದ್ಯಾರ್ಥಿಗಳು ಸಾಗರದಂತೆ ಹರಿದು ಬಂದರು. ಇಂದು ಬೆಳಿಗ್ಗೆ 8 ಗಂಟೆಯಿಂದಲೇ ತಂಡ ತಂಡವಾಗಿ ಆಗಮಿಸಿದ ವಿದ್ಯಾರ್ಥಿಗಳು ಮತ್ತು ಅವರ ಪಾಲಕರು ಕುತೂಹಲದಿಂದ ಸಂಸ್ಥೆಯ ಚಟುವಟಿಕೆಗಳನ್ನು ವೀಕ್ಷಿಸಿದರು.
     ಕಂಪ್ಯೂಟರೀಕೃತ ಪ್ರವೇಶ ಪತ್ರ, ನೋಂದಣಿಯಿಂದಾಗಿ ಶಿಸ್ತು ಬದ್ಧವಾಗಿ ನಡೆದ ಕಾರ್ಯಕ್ರಮ ಪಾಲಕರನ್ನು ಅಚ್ಚರಿಗೊಳಿಸಿತು. 88 ಕೊಠಡಿಗಳಲ್ಲಿ ಆಸನ ವ್ಯವಸ್ಥೆ ಮಾಡಲಾಗಿತ್ತು. ಪ್ರಶ್ನೆಗಳಿಗೆ ಮಕ್ಕಳು  OMR ಶೀಟ್‍ನಲ್ಲಿ ಉತ್ತರಿಸಿದರು.
     ಕ್ವಿಜ್ ಬಗ್ಗೆ ಪ್ರಾಸ್ಥಾವಿಕವಾಗಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ MSS ಕ್ವಿಜ್ ಸಂಸ್ಥೆಯ ಸಂಸ್ಥಾಪಕರಾದ ಎಂ. ಎಸ್. ಶಿವಣ್ಣನವರ ಅರ್ಧ ಶತಮಾನದ ಶಿಕ್ಷಣ ಕ್ಷೇತ್ರದ ಕೊಡುಗೆಗೆ ಅರ್ಪಣೆ ಎಂದರು. ಕ್ವಿಜ್‍ನ ರೂಪು ರೇಷೆಗಳನ್ನು ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ|| ಜಯಂತ್‍ರವರು ವಿವರಿಸಿ ಶುಭಕೋರಿದರು. SSLC ಪರೀಕ್ಷೆಯಲ್ಲಿ 600 ಕ್ಕಿಂತ ಹೆಚ್ಚು ಅಂಕ ಪಡೆದ ಮಕ್ಕಳಿಗೆ MSS ಸ್ಕಾಲರ್ ಶಿಪ್ ನೀಡಲಾಗುವುದೆಂದರು. ಕ್ವಿಜ್‍ನ ಮೇಲ್ವಿಚಾರಣೆಯನ್ನು ಡಿ. ಎಸ್. ಪ್ರಶಾಂತ್‍ರವರು ಹಿರಿಯ ವಿದ್ಯಾರ್ಥಿಗಳ ನೆರವಿನಿಂದ ಸಮರ್ಪಕವಾಗಿ ನಿರ್ವಹಿಸಿದರು. ಶಾಲೆಯ ಮೊಮೆಂಟೋಗಳನ್ನು ಹಿಡಿದ ಪಿ. ಯು. ಸಿ. ಮಕ್ಕಳು ಆಕರ್ಷಕ ಪಥ ಸಂಚಲನ ನಡೆಸಿದರು. ಬಂದ ಪಾಲಕರಿಗೆ ಮತ್ತು ಮಕ್ಕಳಿಗೆ ಉಪಹಾರದ ವ್ಯವಸ್ಥೆಯನ್ನು ಸಂಸ್ಥೆಯ ಕಾರ್ಯದರ್ಶಿ ಡಿ. ಎಸ್. ಹೇಮಂತ್‍ರವರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಸಾವಿರಾರು ವಿದ್ಯಾರ್ಥಿಗಳನ್ನು ಏಕಕಾಲದಲ್ಲಿ ಲಿಖಿತ ಕ್ವಿಜ್ ಪರೀಕ್ಷೆಯ ಮೂಲಕ ತಮ್ಮ ಪ್ರತಿಭೆ ಹಾಗೂ ಅದೃಷ್ಠವನ್ನು ಪರೀಕ್ಷೆಗೆ ಒಡ್ಡಿದ ಜಿಲ್ಲೆಯ ಮತ್ತು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ಮಕ್ಕಳು ಮತ್ತು ಪಾಲಕರು ಸಿದ್ಧಗಂಗೆಯ ಮಕ್ಕಳ ಮತ್ತು ಬೋಧಕ ಬೋಧಕೇತರ ವರ್ಗದವರ ಸೌಹಾರ್ದತೆ ಮತ್ತು ಸೌಜನ್ಯಕ್ಕೆ ಮಾರು ಹೋದರು. ಸಿದ್ಧಗಂಗಾ ಕಾಲೇಜಿನ ಮಕ್ಕಳ ನಾಯಕತ್ವ ಗುಣಕ್ಕೆ ಇದೊಂದು ನಿದರ್ಶನವಾಗಿತ್ತು.
     ಪ್ರಾರಂಭದಲ್ಲಿ ವಿದ್ಯಾರ್ಥಿ ಗಾಯಕ ವಿಶ್ವಂಭರ ಶಾಸ್ತ್ರೀಯ ಸಂಗೀತದ ಸುಧೆ ಹರಿಸಿದರೆ, ಸಂಗೀತ ಶಿಕ್ಷಕರಾದ ಮಂಜುನಾಥ್‍ರವರು ತಬಲ ಸಾಥ್ ನೀಡಿದರು. ನಡೆದಾಡುವ ದೇವರಾದ ಸಿದ್ಧಗಂಗೆಯ ಶಿವಕುಮಾರ ಮಹಾ ಸ್ವಾಮಿಗಳವರ ಮತ್ತು ಎಂ. ಎಸ್. ಶಿವಣ್ಣನವರ ಚಿತ್ರಗಳನ್ನು ಮಕ್ಕಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಚಿತ್ರಿಸಿ ಸಭಿಕರ ಗಮನ ಸೆಳೆದರು. ಸುಶ್ರಾವ್ಯ ಗಾಯನ , ಆಹ್ಲಾದಕರ ವಾತಾವರಣದಲ್ಲಿ ಪಾಲಕರು ಭಾನುವಾರದ ಸವಿ ಸವಿದರು. ಕ್ವಿಜ್‍ನ ಫಲಿತಾಂಶ 15/04/2018 ರಂದು ಸಂಸ್ಥೆಯ ವೆಬ್ ಸೈಟ್ www.siddaganga.com ನಲ್ಲಿ ಪ್ರಕಟವಾಗಲಿದೆ.

Photos




More Photos


News Paper Aritcles

Nagaravaani



Janathavani






No comments:

Post a Comment