Steps to see your result
1. Enter the website.
2. Select exam as 'MSS QUIZ 2025'.
3. Enter your Reg no as given in your MSS QUIZ HALL TICKET.
4. Put your Date of Birth and click search.
Steps to see your result
1. Enter the website.
2. Select exam as 'MSS QUIZ 2025'.
3. Enter your Reg no as given in your MSS QUIZ HALL TICKET.
4. Put your Date of Birth and click search.
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ದಾವಣಗೆರೆ ನಗರದ ಸಿದ್ಧಗಂಗಾ ಪಿಯು ಕಾಲೇಜು ರಾಜ್ಯ ಕ್ಕೆ ಐದನೇ ಸ್ಥಾನ ಪಡೆದು ಮತ್ತೊಮ್ಮೆ ತನ್ನ ಶೈಕ್ಷಣಿಕ ಸಾಧನೆಯ ಇತಿಹಾಸ ರಚಿಸಿದೆ. 600 ಕ್ಕೆ 595 ಅಂಕಗಳಿಸಿದ ರವಿಕಿರಣ ಎನ್, ಕನ್ನಡ 100, ಇಂಗ್ಲೀಷ್, 97, ಭೌತಶಾಸ್ತ್ರ 100, ರಸಾಯನ ಶಾಸ್ತ್ರ 99, ಜೀವಶಾಸ್ತ್ರ 100, ಗಣಿತ 99 ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ, ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾನೆ, ಇವನು ನಾಗರಾಜ್ ಎಸ್ ಮತ್ತು ಸಿದ್ದಮ್ಮ ದಂಪತಿಗಳ ಪುತ್ರ ಚಿತ್ರದುರ್ಗ ಜಿಲ್ಲೆ ಉಪ್ಪನಾಯಕನಹಳ್ಳಿ ಊರಿನವನು. ಈ ಬಾಲಕ ಎಂ.ಎಸ್.ಎಸ್. ಸ್ಕಾಲರ್ಶಿಪ್ನಲ್ಲಿ ಎರಡು ವರ್ಷ ಉಚಿತ ವಿದ್ಯಾಭ್ಯಾಸ ಪಡೆದಿದ್ದಾನೆಂಬುದು ಉಲ್ಲೇಖನೀಯ ಉಳಿದಂತೆ ಹೆಚ್ಚು ಅಂಕಗಳಿಸಿರುವ, ಮನೋಜ್ ಎಲ್, ವಿನಯ್ ಕುಮಾರ್ ಆರ್, ಕೃತಿಕ ಕದಂ, ಚೇತನ ಆರ್, ಜೀವಿತ ಜೆ ಇಟಗಿ, ಸ್ನೇಹಲ್ ಕೆ ಕುಡ್ತೇಕರ್ , ಸುಹಾಸ್ ಹೆಚ್ , ಅಜಯ್ ಕುಮಾರ್ ಆರ್, ವಿವೇಕ ಅಂಗಡಿ ಎನ್ ಎಂ, ಲಕ್ಷ್ಮಿ ಎಂ, ಸಂಜನಾ ಎಂ ಎಂ, ಚಂದನಾ ಜಿ ವಿ, ಕರಿಬಸಮ್ಮ ಪಾನಿಯಪ್ಲ, ಶಿವಯೋಗಿ ಹೆಚ್ ಆರ್, ಈ ಎಲ್ಲಾ ವಿದ್ಯಾರ್ಥಿಗಳು ಕೂಡ ಎಂ.ಎಸ್.ಎಸ್. ಸ್ಕಾಲರ್ಶಿಪ್ನಲ್ಲಿ ಓದಿರುತ್ತಾರೆ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಶ್ರೀಸಿದ್ಧಗಂಗಾ ಸ್ಥಳೀಯ ಸಂಸ್ಥೆ ದಾವಣಗೆರೆ ದಿನಾಂಕ 14-02-2025 ರಂದು ದಾವಣಗೆರೆ ಜಿಲ್ಲಾಸಂಸ್ಥೆ ಹಾಗು ಶ್ರೀ ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ ಸಹಯೋಗದೊಂದಿಗೆ ಪುಲ್ವಾಮ ದಿನಾಚರಣೆಯನ್ನು ಆಚರಿಸಲಾಯಿತು ಜಸ್ಟಿನ್ ಡಿಸೋಜ ಮೇಡಂ ಸ್ಕೌಟ್ ಗೈಡ್ ಮಕ್ಕಳಿಗೆ ಪುಲ್ವಾಮದಲ್ಲಿ ನಡೆದ ಹೃದಯವಿದ್ರಾವಕ ಘಟನೆಯ ಬಗೆಗೆ ವಿವರಿಸಿ ದೇಶಕ್ಕಾಗಿ ಪ್ರಾಣತೆತ್ತ ವೀರಯೋಧರನ್ನು ನೆನೆದರು ನಂತರ ದಾವಣಗೆರೆಯ ಅಮರ್ ಜವಾನ್ ಉದ್ಯಾನವನಕ್ಕೆ ತೆರಳಿ ಸ್ಕೌಟ್ ಗೈಡ್ ವಿದ್ಯಾರ್ಥಿಗಳಿಂದ ಪುಷ್ಪನಮನ ಸಲ್ಲಿಸಲಾಯಿತು ಸುಬೇದಾರ್ ಮಲ್ಲನಗೌಡ ಪಾಟಿಲ್ ರವರು ಪುಲ್ವಾಮ ಧಾಳಿಯಲ್ಲಿ ಪ್ರಾಣತೆತ್ತ ಸೈನಿಕರ ಬಗೆಗೆ ಮಾಹಿತಿನೀಡಿ ಸ್ಕೌಟ್ ಗೈಡ್ ಮಕ್ಕಳಲ್ಲಿನ ದೇಶಪ್ರೇಮಾಭಿಮಾನವನ್ನು ಕಂಡು ಸಂತಸಪಟ್ಟರು ಈ ಸಂಧರ್ಭದಲ್ಲಿ ಜಿಲ್ಲಾಸಂಸ್ಥೆಯ ಪದಾದಿಕಾರಿಗಳು ಹಾಗು ಸ್ಥಳೀಯ ಸಂಸ್ಥೆಯ ಶ್ರೀನಿವಾಸ್ NL (HWB) ಉಪಸ್ಥಿತರಿದ್ದರು
ದಾವಣಗೆರೆ, ಪೆ.13
ಬಾಲ್ಯದಿಂದಲೂ ಕುತೂಹಲ, ವಿಜ್ಞಾನದಲ್ಲಿ ಆಸಕ್ತಿ, ಇಸ್ರೋದೊಡನೆ ನಿರಂತರ ಸಂಪರ್ಕದ ಪ್ರತಿಫಲವಾಗಿ ನಗರದ ಸಿದ್ಧಗಂಗಾ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ದೀಪಕ್ ಜಿ.ಕೆ ಜನವರಿ 3 ರಂದು ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ “ಜೂನಿಯರ್ ಸೈಂಟಿಸ್ಟ್ ಪ್ರಶಸ್ತಿ” ಪಡೆದಿದ್ದಾನೆ. 6ನೇ ತರಗತಿಯಲ್ಲಿದ್ದಾಗ ಭಾರತದ ಬಾಹ್ಯಾಕಾಶ ಸಂಶೋಧನಾ ಕೇಂದ್ರದವರು ನಡೆಸಿದ “ಪ್ಯೂರಿಫೈ ದ ಅರ್ಥ್” ಸ್ಪರ್ಧೆಯಲ್ಲಿ ದೀಪಕ್ ಭಾಗವಹಿಸಿ ಸಮಾಧಾನಕರ ಬಹುಮಾನ ಪಡೆದನು. ಇಸ್ರೋದ ಕಾರ್ಯನಿರ್ವಾಹಕ ಅಧಿಕಾರಿ ಸರ್ ಕೌಸ್ತುಬ್ ರವರ ಪರಿಚಯ ಮತ್ತು ಮಾರ್ಗದರ್ಶನದಿಂದ “ಗ್ರಿಪ್ಪರ್ ಎಕ್ಸ್ ಪ್ಲೊರೇಷನ್” ಕಂಡು ಹಿಡಿದಿದ್ದಾರೆ.
ರಾಕೆಟ್ ಉಡಾವಣೆಯಲ್ಲಿ ಪ್ರಮುಖ ಪಾತ್ರ ಲ್ಯಾಂಡರ್ ಎಂದರಿತ ಬಾಲಕ ದೀಪಕ್ “ಲ್ಯಾಂಡರ್ ಗ್ರಿಪ್ಪರ್” ಮೇಲೆ ತನ್ನ ಅಧ್ಯಯನ ಕೇಂದ್ರೀಕರಿಸಿ ಸಂಶೋಧನೆ ಪ್ರಾರಂಭಿಸಿದನು. ಗ್ರಿಪ್ಪರ್ ಜೊತೆ ಸೆನ್ಸಾರ್ ಜೋಡಿಸಿದಾಗ ಅದು ವಿಫಲವಾಗಿದ್ದನ್ನು ಕಂಡು ಗ್ರಿಪ್ಪರ್ ಜೊತೆ “ಬ್ಲೂಟೂತ್ ಮೆಮೊರಿ ಸ್ಪೆನ್ಸರ್” ಉಪಯೋಗಿಸಿದಾಗ “ಲ್ಯಾಂಡರ್ ಗ್ರಿಪ್ಪರ್” ಸಫಲವಾಯಿತು. ಈ ಪ್ರಯತ್ನವನ್ನು ಇಸ್ರೋಗೆ ಅಂತರ್ಜಾಲದಲ್ಲಿ ಕಳಿಸಿಕೊಟ್ಟಾಗ ಇಸ್ರೋ ಮುಖ್ಯಸ್ಥರು ಒಪ್ಪಿಗೆ ಸೂಚಿಸಿ ಲ್ಯಾಂಡರ್ ಗ್ರಿಪ್ಪರ್ ಮಾದರಿ ಮಾಡಲು ಸೂಚಿಸಿದರು. ಈ ಸಂಶೋಧನೆಯನ್ನು 23 ದಿನಗಳ ಕಾಲ ಪರಿಶೀಲಿಸಿ ಅಂತಿಮವಾಗಿ ಜನವರಿ 25ರಂದು “ಜೂನಿಯರ್ ಸೈಂಟಿಸ್ಟ್” ಪ್ರಶಸ್ತಿ ನೀಡಿ ಪುರಸ್ಕರಿಸಿದ್ದಾರೆ. ಕೆ ಎಸ್ ಆರ್ ಟಿಸಿ ಯಲ್ಲಿ ಕಂಡೆಕ್ಟರ್ ದಂಪತಿಗಳಾದ ಗಂಗಾಧರ ಮತ್ತು ರಾಜೇಶ್ವರಿಯವರ ಸುಪುತ್ರ ದೀಪಕ್ ಜಿ.ಕೆ ಪಾಲಕರಿಗೆ, ಶಾಲೆಗೆ ಮತ್ತು ದಾವಣಗೆರೆ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿವರ್ಗದವರು ಬಾಲಕನ ಪ್ರತಿಭೆಗೆ ಅಭಿನಂದಿಸಿದ್ದಾರೆ.
ದಾವಣಗೆರೆ, ಜ 26,
ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಶಿಕ್ಷಕ- ಶಿಕ್ಷಕಿಯರು ಸಂಭ್ರಮದಿಂದ 76ನೇ ಗಣರಾಜ್ಯೋತ್ಸವನ್ನು ಆಚರಿಸಿದರು. ಹಿರಿಯ ಶಿಕ್ಷಕಿ ವೇದಾವತಿಯವರು ಧ್ವಜಾರೋಹಣ ಕಾರ್ಯ ನಡೆಸಿಕೊಟ್ಟರು. 7ನೇ ತರಗತಿ ಅನುಷಾ ಬಿ.ಪಿ ಮತ್ತು ಯು. ಕೆ. ಜಿ. ಯ ಅಥರ್ವ ಗಣರಾಜ್ಯೋತ್ಸವದ ಶುಭಾಷಯ ತಿಳಿಸಿ ಆಚರಣೆಯ ಮಹತ್ವವನ್ನು ವಿವರಿಸಿದರು. ಸಂಗೀತ ಶಿಕ್ಷಕರಾದ ರುದ್ರಾಕ್ಷಿ ಬಾಯಿ ಮತ್ತು ಮಂಗಳ ಅವರ ನೇತೃತ್ವದಲ್ಲಿ ಮಕ್ಕಳು ಸುಶ್ರಾವ್ಯವಾಗಿ ದೇಶಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು.ವೇದಿಕೆಯಲ್ಲಿ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ವಾಣಿಶ್ರೀ, ಸಿ. ಬಿ. ಎಸ್. ಇ. ಶಾಲೆಯ ಪ್ರಾಚಾರ್ಯೆ ಗಾಯತ್ರಿ ಚಿಮ್ಮಡ್, ಸಿದ್ಧಗಂಗಾ ಕಾಂಪೋಜಿಟ್ ಶಾಲೆಯ ಮುಖ್ಯ ಶಿಕ್ಷಕಿ ರೇಖಾರಾಣಿ ಕೆ. ಎಸ್. ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ಶಿಕ್ಷಕಿ ಆಶಾ ನಡೆಸಿಕೊಟ್ಟರು. ಸ್ವಾಗತ ಮತ್ತು ವಂದನಾರ್ಪಣೆಯನ್ನು ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿʼಸೌಜ ನೆರವೇರಿಸಿದರು. ಸಂಸ್ಥೆಯ ಕಾರ್ಯದರ್ಶಿ ಡಿ. ಎಸ್. ಹೇಮಂತ್, ನಿರ್ದೇಶಕ ಡಾ|| ಡಿ. ಎಸ್. ಜಯಂತ್ ರವರು ಮತ್ತು ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಿದ್ದರು.
ದಾವಣಗೆರೆ, ಜ. 21
ತುಮಕೂರಿನ ಶ್ರೀ ಸಿದ್ಧಗಂಗಾ ಮಠಾಧ್ಯಕ್ಷರೂ, ತ್ರಿವಿಧ ದಾಸೋಹಿಗಳೂ,ನಡೆದಾಡುವ ದೇವರೆಂದೇ ಎಲ್ಲರ ಮನಸ್ಸಿನಲ್ಲಿ ನೆಲೆ ನಿಂತಿರುವ ಮಹಾ ತಪಸ್ವಿ ಪರಮಪೂಜ್ಯ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 6ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನು ದಾವಣಗೆರೆಯ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಭಕ್ತಿ ಗೀತೆಗಳ ಹಿನ್ನಲೆಯಲ್ಲಿ ಮಕ್ಕಳು ಶ್ರೀಗಳವರ ಭಾವಚಿತ್ರಕ್ಕೆ ಮತ್ತು ಪಾದುಕೆಗಳಿಗೆ ನಮಿಸಿ ಬಿಲ್ಪತ್ರೆಗಳನ್ನು ಸಮರ್ಪಿಸಿದರು. ಸಂಸ್ಥೆಯ ಕಾರ್ಯದರ್ಶಿ ಡಿ.ಎಸ್. ಹೇಮಂತïರವರ ನೇತೃತ್ವದಲ್ಲಿ ಎಲ್ಲ ಮಕ್ಕಳಿಗೆ ಫಲಹಾರದ ವ್ಯವಸ್ಥೆ ಏರ್ಪಡಿಸಲಾಗಿತ್ತು. ಶಾಲಾ-ಕಾಲೇಜಿನ ಸಿಬ್ಬಂದಿ ವರ್ಗದವರು, ಪ್ರಿಕೆಜಿಯಿಂದ ದ್ವಿತೀಯ ಪಿಯುಸಿವರೆಗಿನ ಆರು ಸಾವಿರ ಮಕ್ಕಳು ಮತ್ತು ಅನೇಕ ಪಾಲಕರು ಇಂದಿನ ದಾಸೋಹ ದಿನಾಚರಣೆಯಲ್ಲಿ ಭಾಗವಹಿಸಿ ತಮ್ಮ ಭಕ್ತಿ ಸಮರ್ಪಣೆ ಮಾಡಿದರು. ಸ್ವಾಮಿಜಿಯವರ ಸೇವಾದೀಕ್ಷೆ ಬಗ್ಗೆ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿʼಸೌಜರವರು ಮಕ್ಕಳಿಗೆ ತಿಳಿಸಿಕೊಟ್ಟರು. ಸಂಸ್ಥೆಯ ಸಂಸ್ಥಾಪಕರಾದ ಶಿವಣ್ಣನವರು ಗುರುಗಳ ಬಗ್ಗೆ ಹೊಂದಿದ್ದ ಅನನ್ಯ ಭಕ್ತಿಭಾವವನ್ನು ವಿವರಿಸಿದರು.
ದಾವಣಗೆರೆ ಜ 9
ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಪ್ರತಿವರ್ಷ ಸಾಂಸ್ಕೃತಿಕ ಸ್ಪರ್ಧೆಗಳನ್ನು ತಾಲ್ಲೂಕು, ಜಿಲ್ಲಾ, ವಿಭಾಗೀಯ ಮತ್ತು ರಾಜ್ಯಮಟ್ಟದಲ್ಲಿ ಏರ್ಪಡಿಸಲಾಗುತ್ತದೆ. ವಿವಿಧ ಸ್ಪರ್ಧೆಗಳಲ್ಲಿ ಪದವಿಪೂರ್ವ ಕಾಲೇಜಿನ ಮಕ್ಕಳು ಭಾಗವಹಿಸುತ್ತಾರೆ. ಈ ವರ್ಷ ರಾಜ್ಯಮಟ್ಟದ ಸ್ಪರ್ಧೆಗಳನ್ನು ತುಮಕೂರಿನ ಎಂಪ್ರೆಸ್ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ರಸ ಪ್ರಶ್ನೆ ವಿಭಾಗದಲ್ಲಿ ದಾವಣಗೆರೆಯ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಅಜಯ್ ಕುಮಾರ್ ಆರ್ ಮತ್ತು ರವಿಕುಮಾರ್ ಎನ್ ಪ್ರಥಮ ಸ್ಧಾನಗಳಿಸಿ ಕಾಲೇಜಿಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈ ಈರ್ವರು ಬಾಲಕರ ಅಪ್ರತಿಮ ಸಾಧನೆಯನ್ನು ಕಾಲೇಜಿನ ಪ್ರಾಚಾರ್ಯೆ ವಾಣಿಶ್ರೀ ಮತ್ತು ಬೋಧಕವರ್ಗದವರು ಶ್ಲಾಘಿಸಿ ಅಭಿನಂದಿಸಿದ್ದಾರೆ. ಈ ಬಾಲಕರು ಇವರು ಪ್ರಶಸ್ತಿ ಪತ್ರದ ಜೊತಗೆ ತಲಾ 12 ಸಾವಿರ ನಗದು ಬಹುಮಾನ ಪಡೆದಿದ್ದಾರೆ. ಅಜಯ್ ಕುಮಾರ್ ಮತ್ತು ರವಿಕುಮಾರ್ ಅವರನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ|| ಜಯಂತ್ ಕಾರ್ಯದರ್ಶಿ, ಹೇಮಂತ್ ಹಾಗೂ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜರವರು ಅಭಿನಂದಿಸಿ, ತಮ್ಮ ಕಾಲೇಜಿನ ವಿದ್ಯಾರ್ಥಿಗಳ ಈ ಹೆಮ್ಮೆಯ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
| Dr . M.S. SHIVANNA |
Instructions for the day of MSS Quiz - MSS ಲಿಖಿತ ಕ್ವಿಜ್ ದಿನದ ಸೂಚನೆಗಳು
Frequently Asked Questions - FAQ
Eligibility to participate - ಭಾಗವಹಿಸಲು ಅರ್ಹತೆ
1. Students writing board exam for SSLC or CBSE 10th Grade this year. ಈ ವರ್ಷ SSLC ಅಥವಾ CBSE 10ನೇ ತರಗತಿಗೆ ಬೋರ್ಡ್ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು.
2. Other boards like ICSE can participate, however quiz will be based on NCERT textbook. ICSE ನಂತಹ ಇತರ ಬೋರ್ಡ್ ವಿದ್ಯಾರ್ಥಿಗಳು ಭಾಗವಹಿಸಬಹುದು, ಆದರೆ ಕ್ವಿಜ್ NCERT ಪಠ್ಯಪುಸ್ತಕವನ್ನು ಆಧರಿಸಿರುತ್ತದೆ
3. Only students from Karnataka state are eligible to participate. ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಲು ಅರ್ಹರು
Date and format of Quiz - ಕ್ವಿಜ್ ದಿನಾಂಕ ಮತ್ತು ಸ್ವರೂಪ
1. Quiz will be held on Sunday, 6th April 2025 at 11 AM as a written test. ಕ್ವಿಜ್ 6ನೇ ಏಪ್ರಿಲ್ 2025 ರಂದು ಭಾನುವಾರ ಬೆಳಿಗ್ಗೆ 11 ಕ್ಕೆ ಲಿಖಿತ ರೂಪದಲ್ಲಿರುತ್ತ್ತದೆ.
2. Quiz will be held in offline format at Siddaganga School Campus in Davanagere (address and google map link provided above). ಲಿಖಿತ ಕ್ವಿಜ್ ದಾವಣಗೆರೆಯ ಸಿದ್ದಗಂಗಾ ಶಾಲಾ ಕ್ಯಾಂಪಸ್ನಲ್ಲಿ ಆಫ್ಲೈನ್ ಸ್ವರೂಪದಲ್ಲಿ ನಡೆಯಲಿದೆ.(ವಿಳಾಸ ಮತ್ತು ಗೂಗಲ್ ಮ್ಯಾಪ್ ಲಿಂಕ್ ಮೇಲೆ ನೀಡಲಾಗಿದೆ)
3. Quiz will be in form of MCQ, 30 Questions from Science & 30 Questions from Maths. ಲಿಖಿತ ಕ್ವಿಜ್ MCQ ರೂಪದಲ್ಲಿರುತ್ತದೆ, ವಿಜ್ಞಾನದಿಂದ 30 ಪ್ರಶ್ನೆಗಳು ಮತ್ತು ಗಣಿತದಿಂದ 30 ಪ್ರಶ್ನೆಗಳು.
4. Duration of examination is 60 minutes. ಪರೀಕ್ಷೆಯ ಅವಧಿ 60 ನಿಮಿಷಗಳು.
5. Students will be answering using OMR sheet provided during the quiz. ಲಿಖಿತ ಕ್ವಿಜ್ ಸಮಯದಲ್ಲಿ ಒದಗಿಸಲಾದ OMR ಶೀಟ್ ಬಳಸಿ ವಿದ್ಯಾರ್ಥಿಗಳು ಉತ್ತರಿಸುತ್ತಾರೆ.
6. NO NEGATIVE marking for wrong answer. ತಪ್ಪು ಉತ್ತರಕ್ಕೆ ನೆಗೆಟಿವ್ ಅಂಕ ಇರುವುದಿಲ್ಲ.
7. Syllabus for Quiz is based on reduced syllabus given by SSLC & CBSE boards. ಲಿಖಿತ ಕ್ವಿಜ್ ಪಠ್ಯಕ್ರಮವು ಈ ವರ್ಷ SSLC ಮತ್ತು CBSE ಬೋರ್ಡ್ಗಳು ನೀಡಿದ ಕಡಿತಗೊಂಡ ಪಠ್ಯಕ್ರಮವನ್ನು ಆಧರಿಸಿದೆ.
How to register for Quiz - ಕ್ವಿಜ್ ಗೆ ನೋಂದಾಯಿಸುವುದು ಹೇಗೆ
1. Send your name and School Name to 8073054295 by WhatsApp. You can also use this link to send message https://bit.ly/3v2GJlX . ವಿದ್ಯಾರ್ಥಿಗಳು ತಮ್ಮ ಹೆಸರು ಮತ್ತು ಶಾಲೆಯ ಹೆಸರನ್ನು 8073054295 ಗೆ WhatsApp ಸಂದೇಶವನ್ನು ಕಳುಹಿಸುವ ಮೂಲಕ ರಸಪ್ರಶ್ನೆಗೆ ನೋಂದಾಯಿಸಿಕೊಳ್ಳಬಹುದು. ಸಂದೇಶವನ್ನು ಕಳುಹಿಸಲು ನೀವು ಈ ಲಿಂಕ್ ಅನ್ನು ಸಹ ಬಳಸಬಹುದು https://bit.ly/3v2GJlX
2. Last date for registration is Saturday, 5th April 2025. ನೋಂದಣಿಗೆ ಕೊನೆಯ ದಿನಾಂಕ ಶನಿವಾರ 5 ನೇ ಏಪ್ರಿಲ್ 2025.
ಡಿಸೆಂಬರ್ 26 ರಂದು ದ್ವಿತೀಯ ದಿನದ ಕಾರ್ಯಕ್ರಮವನ್ನು ಉಡುಪಿಯ ಡಾ ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆಯ ಖ್ಯಾತ ಮನ: ಶಾಸ್ತ್ರಜ್ಞರಾದ ಹಾಗೂ ಪ್ರಸಿದ್ಧ ವೈದ್ಯ ಲೇಖಕರಾದ ಡಾ|| ವಿರೂಪಾಕ್ಷ ದೇವರಮನೆಯವರು ಉದ್ಘಾಟಿಸುವರು. 2023-24 ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ 400 ವಿದ್ಯಾರ್ಥಿಗಳಲ್ಲಿ 132 ವಿದ್ಯಾರ್ಥಿಗಳನ್ನು “ಸಿದ್ಧಗಂಗಾ ಪ್ರತಿಭಾ ಪುರಸ್ಕಾರ” ನೀಡಿ ಸನ್ಮಾನಿಸಲಾಗುವುದು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿವಿಧ ತರಗತಿಗಳ ಮಕ್ಕಳು ಪ್ರದರ್ಶಿಸುವರು.
ಮೂರನೇ ದಿನದ ಕಾರ್ಯಕ್ರಮ ಡಿಸೆಂಬರ್ 27ರಂದು ಸಂಜೆ 5.30ಕ್ಕೆ ದಾವಣಗೆರೆ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ|| ಸುರೇಶ್ ಬಿ. ಇಟ್ನಾಳ್ ಐ.ಎ.ಎಸ್ ಇವರು ಉದ್ಘಾಟಿಸುವರು. ದ್ವಿತೀಯ ಪಿಯುಸಿಯ 136 ಮಕ್ಕಳಿಗೆ ಪ್ರತಿಭಾ ಪುರಸ್ಕಾರಗಳನ್ನು ಪ್ರದಾನ ಮಾಡಲಾಗುತ್ತದೆ. ಮಕ್ಕಳಿಂದ ಸುಂದರ ನೃತ್ಯಗಳ ಪ್ರದರ್ಶನವಿರುತ್ತದೆ. ಡಿಸೆಂಬರ್ 28ರ ನಾಲ್ಕನೇ ದಿನದ ಕಾರ್ಯಕ್ರಮವನ್ನು ಸಂಜೆ 5.30 ಕ್ಕೆ ಸಿದ್ಧಗಂಗಾ ವಿದ್ಯಾಸಂಸ್ಥೆಯ ನಿರ್ದೇಶಕರೂ ಎಂ.ಎಸ್.ಎಸ್ ಸೂಪರ್ ಬ್ರೈನ್ ಸೆಂಟರ್ನ ಅಧ್ಯಕ್ಷರೂ ಆದ ಡಾ|| ಡಿ. ಎಸ್ ಜಯಂತ್ ರವರು ಉದ್ಘಾಟಿಸುವರು. ದ್ವಿತೀಯ ಪಿಯುಸಿಯ 136 ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಹಾಗೂ ವೈವಿಧ್ಯಮಯ ನೃತ್ಯಗಳು ಪ್ರದರ್ಶನಗೊಳ್ಳುತ್ತವೆ. ವಾರ್ಷಿಕ ಸಂಭ್ರಮದ ಹಿನ್ನಲೆಯಲ್ಲಿ ಮಕ್ಕಳು ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾಗಿ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ಪಡೆದಿದ್ದಾರೆ. ಭರತನಾಟ್ಯ, ಜನಪದ, ದೇಶಭಕ್ತಿ, ಪರಿಸರ, ಪ್ರಕೃತಿ, ಭಕ್ತಿಗೀತೆ, ಭಾವಗೀತೆ,ಸಾಮಾಜಿಕ ಜಾಗೃತಿ, ಯೋಗ ಹೀಗೆ ಹಲವಾರು ವಿಷಯಗಳನ್ನೊಳಗೊಂಡಂತೆ ನಾಲ್ಕು ದಿನಗಳಲ್ಲಿ ನೂರಕ್ಕೂ ಹೆಚ್ಚುಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧಗೊಂಡಿದ್ದಾರೆ.ಪಾಲಕರಿಗೆ, ಹಿರಿಯ ವಿದ್ಯಾರ್ಥಿಗಳಿಗೆ ಮತ್ತು ತಮ್ಮೆಲ್ಲರಿಗೆ ಆತ್ಮೀಯ ಸ್ವಾಗತ ಕೋರುತ್ತಿದ್ದಾರೆ.ಪ್ರತಿದಿನದ ಕಾರ್ಯಕ್ರಮದಲ್ಲಿ ಶಾಲಾ ಕಾಲೇಜಿನ ಬೋಧಕ ವರ್ಗದವರು ಮುಖ್ಯ ಅತಿಥಿಗಳಾಗಿರುತ್ತಾರೆ. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ ಸೌಜ, ಕಾರ್ಯದರ್ಶಿ D S ಹೇಮಂತ್, ನಿರ್ದೇಶಕ ಡಾ|| ಜಯಂತ್,ಕಾಲೇಜಿನ ಪ್ರಾಚಾರ್ಯರಾದ ವಾಣಿಶ್ರೀ, ಸಿ ಬಿ ಎಸ್ ಇ ಪ್ರಾಚಾರ್ಯ ಗಾಯತ್ರಿ ಚಿಮ್ಮಡ್, ಪ್ರೌಢಶಾಲೆಯ ಮುಖ್ಯಶಿಕ್ಷಕಿ K S ರೇಖಾ ರಾಣಿ, ಮತ್ತಿತರರು ಹಾಜರಿರುತ್ತಾರೆ.
ದಾವಣಗೆರೆ. ನ.22
ದಾವಣಗೆರೆ ಜಿಲ್ಲಾ ಶಿಶು ಕಲ್ಯಾಣ ಮಂಡಳಿಯ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ವನಿತಾ ಸಮಾಜದಲ್ಲಿ ಏರ್ಪಡಿಸಲಾಗಿದ್ದ ವರ್ಷದ ಉತ್ತಮ ಪ್ರೌಢಶಾಲಾ ವಿದ್ಯಾರ್ಥಿ ಆಯ್ಕೆ ಸ್ಪರ್ಧೆಯಲ್ಲಿ ನಗರದ ಸಿದ್ಧಗಂಗಾ ಪ್ರೌಢಶಾಲೆಯ ವಿದ್ಯಾರ್ಥಿನಿ ಯಶಸ್ವಿನಿ ಕೆ.ಪಿ ಆಯ್ಕೆಯಾಗಿದ್ದಾಳೆ. ನವೆಂಬರ್ 24 ರ ಭಾನುವಾರ ಸಂಜೆ 5 ಗಂಟೆಗೆ ವನಿತಾ ಸಮಾಜದಲ್ಲಿ ಯಶಸ್ವಿನಿ ಕೆ.ಪಿ ಯ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.ಸಿದ್ಧಗಂಗಾ ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ಯಶಸ್ವಿನಿ ಕೆ.ಪಿ ಪ್ರತಿಭಾವಂತೆ, ಪಠ್ಯಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಬಾಲಕಿ, ಹಲವಾರು ಬಹುಮಾನಗಳ ವಿಜೇತೆ, ಇಂಡಿಯನ್ ಟ್ಯಾಲೆಂಟ್ ಪರೀಕ್ಷೆಯಲ್ಲಿ RANK , ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಥೆ ಹೇಳುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ರಾಜ್ಯ ಮಟ್ಟದ ವಿಜ್ಞಾನ ವಿಚಾರ ಸಂಕಿರಣದಲ್ಲಿ ಮತ್ತು ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಭಾಷಣ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿ ಶಾಲಾಮಟ್ಟದಲ್ಲಿ ನಡೆಯುವ ಅನೇಕ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ. ಸಮರ್ಥನಾಯಕತ್ವ ಗುಣ ಹೊಂದಿರುವ ಈ ಬಾಲಕಿ ವಿನಯ ಸಂಪನ್ನೆ ಎಂದು ಶಾಲಾ ಮುಖ್ಯಶಿಕ್ಷಕಿ ರೇಖಾರಾಣಿಯವರು ಶ್ಲಾಘಿಸಿದ್ದಾರೆ. 10 ನೇ ತರಗತಿಯ ಶಿಕ್ಷಕ ವೃಂದ ಮತ್ತು ಸಹಪಾಠಿಗಳು ಯಶಸ್ವಿನಿಯನ್ನು ಅಭಿನಂದಿಸಿದ್ದಾರೆ. ಯಶಸ್ವಿನಿಯ ತಂದೆ ಪಾಲಾಕ್ಷಪ್ಪ ಮತ್ತು ತಾಯಿ ಜ್ಯೋತಿಕಲಾ ಅವರು ಮಗಳ ಆಯ್ಕೆಯನ್ನು ಸಂಭ್ರಮದಿಂದ ಹಂಚಿಕೊಂಡಿದ್ದಾರೆ.
ದಾವಣಗೆರೆ ನ. 1.
ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆಯ ಶಾಲಾ – ಕಾಲೇಜಿನ ಮಕ್ಕಳು ಮತ್ತು ಸಿಬ್ಬಂದಿ ವರ್ಗದವರು 69 ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು. ಹಿರಿಯ ಶಿಕ್ಷಕಿ ವಸಂತ ಆರ್. ರವರು ಧ್ವಜಾರೋಹಣ ನೆರವೇರಿಸಿದರು. ಸಂಗೀತ ಶಿಕ್ಷಕರಾದ ಮಂಗಳ ಮತ್ತು ರುದ್ರಾಕ್ಷಿಬಾಯಿ ನೇತೃತ್ವದಲ್ಲಿ ಕನ್ನಡ ಭಾವಗೀತೆಗಳನ್ನು ಮಕ್ಕಳು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು. ಕರ್ನಾಟಕ ಏಕೀಕರಣದ ಬಗ್ಗೆ, ಕನ್ನಡ ನಾಡು, ಶ್ರೀಮಂತಿಕೆ, ಭಾಷಾ ಪ್ರೌಢಿಮೆ, ಸುಂದರ ಲಿಪಿಯ ಬಗ್ಗೆ ಮಕ್ಕಳು ಭಾಷಣ ಮಾಡಿದರು. ಜಾನಪದ ಪ್ರಕಾರಗಳಾದ ಡೊಳ್ಳು, ಕಂಸಾಳೆ, ನಂದಿಕೋಲುಗಳ ಪ್ರಾತ್ಯಕ್ಷಿಕೆ ನೀಡಿ ಈ ಕಲೆಗಳ ಭವ್ಯತೆ, ಆಚರಣೆ, ವಸ್ತ್ರ ವಿನ್ಯಾಸದ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕಿಯರಾದ ಉಷಾರಾಣಿ ಎಸ್ ಎಲ್, ವಿಜಯಶ್ರೀ ಬಿ ಸಿ, ವಸಂತ ಆರ್. ರವರು ಬರೆದಿದ್ದ ಕವನಗಳನ್ನು ಮಕ್ಕಳು ವಾಚಿಸಿದರು. ಆಕರ್ಷಕ ರಂಗೋಲಿ ಚಿತ್ತಾರದ ನಡುವೆ ಕರ್ನಾಟಕ ಮಾತೆಯ ಭಾವ ಚಿತ್ರ ಮತ್ತು ಕರ್ನಾಟಕ ಭೂಪಟ ಸುಂದರವಾಗಿ ಕಂಗೊಳಿಸುತ್ತಿತ್ತು. ವೇದಿಕೆಯ ಮೇಲೆ ಸಂಸ್ಥೆಯ ಕಾರ್ಯದರ್ಶಿ ಡಿ ಎಸ್ ಹೇಮಂತ್, ನಿರ್ದೇಶಕರಾದ ಡಾ|| ಜಯಂತ್ ಡಿ. ಎಸ್., ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರೇಖಾರಾಣಿ ಕೆ. ಎಸ್., ಸಿ ಬಿ ಎಸ್ ಇ ಶಾಲೆಯ ಪ್ರಾಚಾರ್ಯರಾದ ಗಾಯತ್ರಿ ಚಿಮ್ಮಡ್ ಇವರು ಉಪಸ್ಥಿತರಿದ್ದರು. ಸ್ವಾಗತ, ಪ್ರಾಸ್ತಾವಿಕ ಮತ್ತು ವಂದನಾರ್ಪಣೆಯನ್ನು ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿʼಸೌಜ ರವರು ನಡೆಸಿಕೊಟ್ಟರು. ಶಿಕ್ಷಕಿ ಆಶಾ ಎಸ್. ರವರು ಕಾರ್ಯಕ್ರಮ ನಿರೂಪಿಸಿದರು.
ದಾವಣಗೆರೆ ಅ .21
ಭಾರತ್ ವಿಕಾಸ್ ಪರಿಷದ್ ನಿಂದ ಭಾನುವಾರ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಭಾರತ್ ಕೋ ಜಾನೋ ಕ್ವಿಜ್ ಸ್ಪರ್ಧೆಯಲ್ಲಿ ದಾವಣಗೆರೆ ನಗರದ ಸಿದ್ಧಗಂಗಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಪ್ರಥಮ ಸ್ಥಾನಗಳಿಸಿ ವಿಭಾಗೀಯ ಮಟ್ಟಕ್ಕೆ ಸ್ಪರ್ಧಿಸಲು ಅರ್ಹತೆ ಪಡೆದಿದ್ದಾರೆ.ಆಗಸ್ಟ್ ನಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾರತ್ ಕೋ ಜಾನೋ ಸೀನಿಯರ್ ವಿಭಾಗದ ಕ್ವಿಜ್ನಲ್ಲಿ ಆಯ್ಕೆಯಾದ ಸಿದ್ಧಗಂಗಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅಜಯ್ ಕುಮಾರ್ ಆರ್ ಮತ್ತು ವಿದ್ಯಾರ್ಥಿನಿ ಭೂಮಿಕಾ ಇಟಗಿ ಇವರು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರು. ಪಾರಿತೋಷಕಮತ್ತು 3000 ರೂ. ನಗದು ಬಹುಮಾನ ಪಡೆದಿದ್ದರು. ಇದೀಗ ರಾಜ್ಯ ಮಟ್ಟದಲ್ಲೂ ಸ್ಪರ್ಧಿಸಿ ಪ್ರಥಮ ಬಹುಮಾನತಮ್ಮದಾಗಿಸಿಕೊಂಡಿದ್ದಾರೆ.ಅಜಯ್ ಕುಮಾರ್ ಮತ್ತು ಭೂಮಿಕಾರವರನ್ನು ಸಿದ್ಧಗಂಗಾ ಕಾಲೇಜಿನ ಆಡಳಿತ ಮಂಡಳಿ ಮತ್ತು ಪ್ರಾಚಾರ್ಯ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.