ದಾವಣಗೆರೆ ಅ .21
ಭಾರತ್ ವಿಕಾಸ್ ಪರಿಷದ್ ನಿಂದ ಭಾನುವಾರ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಭಾರತ್ ಕೋ ಜಾನೋ ಕ್ವಿಜ್ ಸ್ಪರ್ಧೆಯಲ್ಲಿ ದಾವಣಗೆರೆ ನಗರದ ಸಿದ್ಧಗಂಗಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಪ್ರಥಮ ಸ್ಥಾನಗಳಿಸಿ ವಿಭಾಗೀಯ ಮಟ್ಟಕ್ಕೆ ಸ್ಪರ್ಧಿಸಲು ಅರ್ಹತೆ ಪಡೆದಿದ್ದಾರೆ.ಆಗಸ್ಟ್ ನಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾರತ್ ಕೋ ಜಾನೋ ಸೀನಿಯರ್ ವಿಭಾಗದ ಕ್ವಿಜ್ನಲ್ಲಿ ಆಯ್ಕೆಯಾದ ಸಿದ್ಧಗಂಗಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅಜಯ್ ಕುಮಾರ್ ಆರ್ ಮತ್ತು ವಿದ್ಯಾರ್ಥಿನಿ ಭೂಮಿಕಾ ಇಟಗಿ ಇವರು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರು. ಪಾರಿತೋಷಕಮತ್ತು 3000 ರೂ. ನಗದು ಬಹುಮಾನ ಪಡೆದಿದ್ದರು. ಇದೀಗ ರಾಜ್ಯ ಮಟ್ಟದಲ್ಲೂ ಸ್ಪರ್ಧಿಸಿ ಪ್ರಥಮ ಬಹುಮಾನತಮ್ಮದಾಗಿಸಿಕೊಂಡಿದ್ದಾರೆ.ಅಜಯ್ ಕುಮಾರ್ ಮತ್ತು ಭೂಮಿಕಾರವರನ್ನು ಸಿದ್ಧಗಂಗಾ ಕಾಲೇಜಿನ ಆಡಳಿತ ಮಂಡಳಿ ಮತ್ತು ಪ್ರಾಚಾರ್ಯ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.
No comments:
Post a Comment