2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ನಗರದ ಶ್ರೀ ಸಿದ್ಧಗಂಗಾ ಕಾಂಪೋಜಿಟ್ ಹೈಸ್ಕೂಲ್‌ಗೆ 100ಕ್ಕೆ 100 ಫಲಿತಾಂಶ ದೊರಕಿದೆ. ವಿ. ಮಠದ್ ಮತ್ತು ಮೀನಾ ವಿ. ಮಠದ್ ದಂಪತಿಗಳ ಪುತ್ರಿ ಶ್ರೀ. ವಿ. ಮಠದ್ 625ಕ್ಕೆ 621 ಅಂಕ ಗಳಿಸಿದ್ದಾಳೆ. ಕನ್ನಡ 125, ಇಂಗ್ಲೀಷ್ 100, ಹಿಂದಿ 100, ಗಣಿತ 100, ವಿಜ್ಞಾನ 96, ಸಮಾಜ 100 ಒಟ್ಟು 621 ಅಂಕಗಳನ್ನು ಪಡೆದುಕೊಂಡಿದ್ದಾಳೆ. A+ ಗ್ರೇಡಿನಲ್ಲಿ 49, A ಗ್ರೇಡಿನಲ್ಲಿ 102, B+ ಗ್ರೇಡಿನಲ್ಲಿ 62, B ಗ್ರೇಡಿನಲ್ಲಿ 50, C+ ಗ್ರೇಡಿನಲ್ಲಿ 18, C ಗ್ರೇಡಿನಲ್ಲಿ 6 ಮಕ್ಕಳು ಉತ್ತೀರ್ಣರಾಗಿ ಶಾಲೆಗೆ 100ಕ್ಕೆ 100 ಫಲಿತಾಂಶ ನೀಡಿದ್ದಾರೆ. ಕನ್ನಡದಲ್ಲಿ 6, ಇಂಗ್ಲೀಷ್‌ನಲ್ಲಿ 1, ಹಿಂದಿಯಲ್ಲಿ 31, ಗಣಿತದಲ್ಲಿ 1, ಸಮಾಜ ವಿಜ್ಞಾನದಲ್ಲಿ 5 ಮಕ್ಕಳು ಒಟ್ಟು 42 ಮಕ್ಕಳು ವಿವಿಧ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.
ಶ್ರೀ. ವಿ. ಮಠದ್ 621, ರಚನಾ ಯು. 616, ಶ್ರೇಯಾ ಎಸ್. ಎಮ್. 608, ಮೊಹಮ್ಮದ್ ರಯಾನ್ ರಜಾ 606, ಆಶಾ ಟಿ. ಹೆಚ್.. 603 ಮತ್ತು ಬಿಬಿ ಜೈನಾಬ್ 601 ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಅತ್ತುತ್ಯಮ ಫಲಿತಾಂಶ ನೀಡಿದ ಎಲ್ಲ ಮಕ್ಕಳಿಗೆ ಮತ್ತು ಬೋಧಕ ವರ್ಗದವರಿಗೆ ಮುಖ್ಯ ಶಿಕ್ಷಕಿ ರೇಖಾರಾಣಿ. ಕೆ. ಎಸ್., ಸಂಸ್ಥೆಯ ಅಧ್ಯಕ್ಷರಾದ ಪ್ರಶಾಂತ್, ಕಾರ್ಯದರ್ಶಿ ಹೇಮಂತ್, ನಿರ್ದೇಶಕರಾದ ಡಾ|| ಜಯಂತ್ ಮತ್ತು ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿʼಸೌಜ ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.
2025-26ನೇ ಸಾಲಿನ 10ನೇ ತರಗತಿ ಕೇಂದ್ರ ಪಠ್ಯಕ್ರಮದ ಫಲಿತಾಂಶ ಪ್ರಕಟವಾಗಿದ್ದು ನಗರದ ಶ್ರೀ ಸಿದ್ಧಗಂಗಾ ಸಿ.ಬಿ.ಎಸ್.ಇ. ಶಾಲೆ ಶೇಕಡ 100 ಫಲಿತಾಂಶ ಪಡೆದಿದೆ. ಪ್ರೇಕ್ಷಾ ಪಿ. ರಾಮಘಟ್ ಶೇಕಡ 95.60 ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಇಂಗ್ಲೀಷ್ 94, ಕನ್ನಡ 95, ಗಣಿತ 96, ವಿಜ್ಞಾನ 97, ಸಮಾಜ 96 ಒಟ್ಟು 478 ಅಂಕಗಳನ್ನು ಪಡೆದಿದ್ದಾಳೆ. ಬಾಲಕಿ ಪ್ರಕಾಶ್ ಆರ್. ಮತ್ತು ವೇದಾವತಿ ಆರ್. ಶಿಕ್ಷಕ ದಂಪತಿಗಳ ಪುತ್ರಿಯಾಗಿದ್ದಾಳೆ. ಮುಹಮ್ಮದ್ ಫರ್‌ಹಾನ್ ಆರ್.ಎನ್. 95.4%, ಸಂಪ್ರೀತ್ ಡಿ ಬೈರಡಿಗಿ 94.4%, ಚಿನ್ಮಯಿ ಎಸ್.ಎಲ್. 94%, ನೀರಜ್ ಕೆ.ಟಿ. 93.4%, ಸುಚಿತ್ ಎ. 92.6%, ಪದ್ಮ ಸಿ.ಆರ್. 91.6%, ಪರ್ಣಿಕಾ ಎಸ್. 91.6%, ಲಕ್ಷ್ಮೀಸಾಗರ್ ಎ.ವಿ. 90.8%, ಶಾಶ್ವತ್. ಎಲ್.ಎ. 90.2%, ಸಾನ್ವಿ ಜಿ.ಬಿ. 90% ಪಡೆದಿದ್ದಾರೆ. 90%ಗಿಂತ ಅಧಿಕ ಅಂಕಗಳಿಸಿದವರು 12 ಮಕ್ಕಳು, 85%ಗಿಂತ ಹೆಚ್ಚು ಅಂಕಗಳನ್ನು ಗಳಿಸಿದವರ ಸಂಖ್ಯೆ 15, 60%ಗಿಂತ ಹೆಚ್ಚು ಅಂಕಗಳನ್ನು ಗಳಿಸಿದವರು 97 ಹಾಗೂ 50%ಗಿಂತ ಹೆಚ್ಚು ಪಡೆದವರು 8 ಮಕ್ಕಳಿದ್ದಾರೆ. ದ್ವಿತೀಯ ಸ್ಥಾನ ಪಡೆದ ಮುಹಮ್ಮದ್ ಫರ್‌ಹಾನ್ ಆರ್.ಎನ್. ಇಂಗ್ಲೀಷ್‌ನಲ್ಲಿ 99, ಚಿನ್ಮಯಿ ಎಸ್.ಎಲ್ ಗಣಿತದಲ್ಲಿ 99, ನೀರಜ್. ಕೆ.ಟಿ. ಕನ್ನಡದಲ್ಲಿ 99, ಪದ್ಮ ಸಿ.ಆರ್. ಕನ್ನಡದಲ್ಲಿ 99 ಮತ್ತು ಪರ್ಣಿಕ ಎಸ್. ಕನ್ನಡದಲ್ಲಿ 99 ಪಡೆದು ದಾಖಲೆ ಸ್ಥಾಪಿಸಿದ್ದಾರೆ. 100ಕ್ಕೆ 100 ಫಲಿತಾಂಶ ನೀಡಿರುವ ಮಕ್ಕಳನ್ನು ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿʼಸೌಜ, ಪ್ರಾಚಾರ್ಯರಾದ ಗಾಯತ್ರಿ ಚಿಮ್ಮಡ್, ಅಧ್ಯಕ್ಷರಾದ ಪ್ರಶಾಂತ್, ನಿರ್ದೇಶಕರಾದ ಜಯಂತ್, ಕಾರ್ಯದರ್ಶಿ ಹೇಮಂತ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
2025-26ನೇ ಸಾಲಿನ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ನಗರದ ಶ್ರೀ ಸಿದ್ಧಗಂಗಾ ಪದವಿ ಪೂರ್ವ ವಿಜ್ಞಾನ ಕಾಲೇಜಿನ ರಶ್ಮಿ ಹೆಚ್. ಎಸ್. 600ಕ್ಕೆ 591 ಅಂಕಗಳನ್ನು ಗಳಿಸಿ ಶೇಕಡವಾರು 98.5% ಪಡೆದಿದ್ದಾರೆ. ಬಾಲಕಿ ಸುರೇಶ್ ಹೆಚ್. ಎಸ್. ಮತ್ತು ಜ್ಯೋತಿ ಎನ್. ಎಂ. ದಂಪತಿಗಳ ಪುತ್ರಿ. ಕನ್ನಡ 99, ಆಂಗ್ಲ 97, ಭೌತಶಾಸ್ತ್ರ 100, ರಸಾಯನಶಾಸ್ತ್ರ 98 ಗಣಿತ 100 ಮತ್ತು ಜೀವಶಾಸ್ತ್ರ 97 ಅಂಕಗಳನ್ನು ಗಳಿಸಿದ್ದಾಳೆ. ಪ್ರಣವ್ ದಿಗ್ಗಾವಿ 587, ಚಂದನ ಎನ್. 587 ದೀಪಾ ಬಿ.ಜೆ. 584, ಸರ್ವಮಂಗಳ 584, ಸಾತ್ವಿಕ್ ನಾಗಸಾಯಿ 584, ಸ್ಪೂರ್ತಿ ಪಿ.ಆರ್. 584 ಅಂಕಗಳನ್ನು ಪಡೆದಿದ್ದಾರೆ.
381 ಮಕ್ಕಳು ಅತ್ಯುನ್ನತ ಶ್ರೇಣಿ, 244 ಮಕ್ಕಳು ಪ್ರಥಮ ದರ್ಜೆ ಮತ್ತು 7 ಮಕ್ಕಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕನ್ನಡದಲ್ಲಿ 18, ಭೌತಶಾಸ್ತ್ರದಲ್ಲಿ 9, ಗಣಿತಶಾಸ್ತ್ರದಲ್ಲಿ 36, ಜೀವಶಾಸ್ತ್ರದಲ್ಲಿ 4, ಕಂಪ್ಯೂಟರ್ ಸೈನ್ಸ್‌ನಲ್ಲಿ 8 ಮಕ್ಕಳು ಒಟ್ಟು 75 ಮಕ್ಕಳು ವಿವಿಧ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ. ಅತ್ಯುತ್ತಮ ಫಲಿತಾಂಶ ನೀಡಿರುವ ಎಲ್ಲ ಮಕ್ಕಳನ್ನು ಕಾಲೇಜಿನ ಪ್ರಾಚಾರ್ಯರಾದ ವಾಣಿಶ್ರೀ ಮತ್ತು ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು, ಆಡಳಿತ ಮಂಡಳಿಯ ಪ್ರಶಾಂತ್ ಡಿ.ಎಸ್., ಕಾರ್ಯದರ್ಶಿ ಹೇಮಂತ್ ಡಿ.ಎಸ್., ಡಾ|| ಜಯಂತ್ ಡಿ.ಎಸ್. ಮತ್ತು ಮುಖ್ಯಸ್ಥೆ ಜಸ್ಟಿನ್ ಡಿʼಸೌಜ ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.
ನಗರದ ಶ್ರೀ ಸಿದ್ಧಗಂಗಾ ಸಂಸ್ಥೆಯಲ್ಲಿ ಏರ್ಪಡಿಸಿದ ರಾಜ್ಯಮಟ್ಟದ ಪ್ರತಿಷ್ಠಿತ ಎಂ.ಎಸ್.ಎಸ್. ಕ್ವಿಜ್‌ಗೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಮಕ್ಕಳ ಮಹಾಪೂರ ಹರಿದು ಬಂದು ಅಭೂತಪೂರ್ವ ಯಶಸ್ಸು ಕಂಡಿತು. ಬೀದರ್‌ನಿಂದ ಚಾಮರಾಜನಗರದವರೆಗಿನ ಸುಮಾರು 8 ಸಾವಿರ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಆಗಮಿಸಿದ್ದರು. 10ನೇ ತರಗತಿ ಪರೀಕ್ಷೆ ಬರೆದ ಮಕ್ಕಳಿಗಾಗಿ ಪರೀಕ್ಷೆ ಮುಗಿದ ನಂತರ ಪ್ರತೀ ವರ್ಷ ಏರ್ಪಡಿಸುವ ಈ ಲಿಖಿತ ಕ್ವಿಜ್ ಎರಡು ಹಂತಗಳಲ್ಲಿ ನಡೆಯಿತು. ಬೆಳಿಗ್ಗೆ 11:00 ರಿಂದ 12:30 ಮತ್ತು ಮಧ್ಯಾಹ್ನ 02:00 ರಿಂದ 03:30 ರವರೆಗೆ ಅತ್ಯಂತ ವ್ಯವಸ್ಥಿತವಾಗಿ ನಡೆದ ಈ ಕ್ವಿಜ್ ಕಾರ್ಯಕ್ರಮ ಎಲ್ಲರ ಮೆಚ್ಚುಗೆ ಪಡೆಯಿತು. ಸಿದ್ಧಗಂಗಾ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಶಿಕ್ಷಣ ಶಿಲ್ಪಿ ಡಾ|| ಎಂ.ಎಸ್. ಶಿವಣ್ಣನವರ ಗೌರವಾರ್ಥ ಕಳೆದ 12 ವರ್ಷಗಳಿಂದ ಏರ್ಪಡಿಸುತ್ತಾ ಬಂದಿರುವ ಈ ಲಿಖಿತ ಕ್ವಿಜ್‌ನಲ್ಲಿ ಪ್ರಥಮ ಬಹುಮಾನವಾಗಿ 50 ಸಾವಿರ, ದ್ವಿತೀಯ ಬಹುಮಾನ 25 ಸಾವಿರ, ತೃತೀಯ ಬಹುಮಾನ 10 ಸಾವಿರ ಮತ್ತು ತಲಾ 1 ಸಾವಿರದಂತೆ 10 ಸಮಾಧಾನಕರ ಬಹುಮಾನ ಪಡೆಯುವರು. ಜೊತೆಗೆ ಪದವಿಪೂರ್ವ ವಿಜ್ಞಾನದ 2 ವರ್ಷಗಳ ಶಿಕ್ಷಣ ಉಚಿತವಾಗಿ ಪಡೆಯುವರು. ಇದಲ್ಲದೆ ಹೆಚ್ಚು ಅಂಕಗಳಿಸಿದ 100 ಮಕ್ಕಳಿಗೂ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಆಗಮಿಸಿದ 10 ಸಹಸ್ರಕ್ಕೂ ಹೆಚ್ಚು ಮಕ್ಕಳಿಗೆ, ಪಾಲಕರಿಗೆ ಮತ್ತು ಶಿಕ್ಷಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿʼಸೌಜ, ಅಧ್ಯಕ್ಷರಾದ ಪ್ರಶಾಂತ್. ಡಿ.ಎಸ್., ಕಾರ್ಯದರ್ಶಿ ಹೇಮಂತ್. ಡಿ.ಎಸ್., ನಿರ್ದೇಶಕರಾದ ಡಾ|| ಜಯಂತ್. ಡಿ.ಎಸ್. ಮತ್ತು ಡಾ|| ಪ್ರಿತೀಶ್ ಹಾಗೂ ಶಾಲಾ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮವನ್ನು ಅತ್ಯಂತ ಶಿಸ್ತಿನಿಂದ ಯಶಸ್ವಿಯಾಗಿ ನಿರ್ವಹಿಸಿದರು.
94 ಕೊಠಡಿಗಳಲ್ಲಿ 188 ಸಿಬ್ಬಂದಿ ವರ್ಗದ ನೆರವಿನೊಂದಿಗೆ 600 ವಿದ್ಯಾರ್ಥಿಗಳ ಸ್ವಯಂಸೇವೆಯಿಂದ ವ್ಯವಸ್ಥೆಯಲ್ಲಿ ಕಿಂಚಿತ್ತೂ ಲೋಪವಾಗದಂತೆ ಬೆಳಿಗ್ಗೆ 07 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ಈ ಐತಿಹಾಸಿಕ ಕಾರ್ಯಕ್ರಮ ನೆರವೇರಿತು. ಆಗಮಿಸಿದ ಎಲ್ಲ ವಿದ್ಯಾರ್ಥಿಗಳಿಗೆ 80 ಟ್ಯಾಬ್‌ಗಳ ಮೂಲಕ ಎಂ.ಎಸ್.ಎಸ್. ಕ್ವಿಜ್ ಪ್ರವೇಶ ಪತ್ರ ವಿತರಿಸಿ, ಸಂಬಂಧಪಟ್ಟ ಕೊಠಡಿಗಳಿಗೆ ಹಾಲಿ ಪಿ.ಯು.ಸಿ. ಓದುತ್ತಿರುವ ವಿದ್ಯಾರ್ಥಿಗಳು ಮಾರ್ಗದರ್ಶನ ನೀಡಿದರು. ದೂರದೂರಿನಿಂದ ಆಗಮಿಸಿದವರಿಗೆ ಬಸ್ ನಿಲ್ದಾಣ ಮತ್ತು ರೇಲ್ವೇ ಸ್ಟೇಷನ್‌ನಿಂದ ಸಂಸ್ಥೆಯವರೆಗೆ ಶಾಲಾ ಬಸ್‌ಗಳಲ್ಲಿ ಕರೆತರಲು ವ್ಯವಸ್ಥೆ ಮಾಡಲಾಗಿತ್ತು. ಸಂಸ್ಥೆಯ ಅಧ್ಯಕ್ಷರಾದ ಪ್ರಶಾಂತ್ ರವರ ತಾಂತ್ರಿಕ ನಿಪುಣತೆಯಿಂದಾಗಿ ಅಗಾಧ ಸಂಖ್ಯೆಯಲ್ಲಿ ಆಗಮಿಸಿದ ವಿದ್ಯಾರ್ಥಿಗಳ ನೊಂದಣಿಗೆ ಯಾವ ಹಂತದಲ್ಲೂ ತೊಡಕಾಗಲಿಲ್ಲ. ಡಾ|| ಜಯಂತ್‌ರವರು ಎಂ.ಎಸ್.ಎಸ್. ಕ್ವಿಜ್ ಮತ್ತು ಎಂ.ಎಸ್.ಎಸ್. ಸ್ಕಾಲರ್‌ಶಿಪ್ ಬಗ್ಗೆ ಮಾಹಿತಿ ನೀಡಿದರು. ಡಾ|| ಪ್ರೀತಿಶ್, ಮನೋಹರ್ ನೂಜಾಡಿ, ಹರ್ಷ ಸಿ. ಗುಂಟನೂರು, ಜರೀನ್ ತಾಜ್ ಎಂ.ಡಿ., ವಿಜಯಶ್ರೀ ಬಿ.ಸಿ. ಮತ್ತು ಕವಿತಾ ಹೆಚ್. ಇವರು ಪ್ರಶ್ನೆ ಪತ್ರಿಕೆ ನಿರ್ವಹಣೆ ಮತ್ತು ವಿತರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಕಾರ್ಯದರ್ಶಿ ಹೇಮಂತ್‌ರವರು ಹಿರಿಯ ವಿದ್ಯಾರ್ಥಿಗಳ ಮತ್ತು ಸ್ನೇಹಿತರ ಸಹಕಾರದಿಂದ ಹಾಗೂ ಶಾಲೆಯ ಗಣಕಯಂತ್ರದ ತಜ್ಞ ತಂಡದವರ ಅವಿರತ ಶ್ರಮ ಮೇಳೈಸಿ ಕ್ವಿಜ್ ಕಾರ್ಯಕ್ರಮ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್ ಡಿʼಸೌಜ ಸಹಕರಿಸಿದ ಎಲ್ಲರನ್ನೂ ವಂದಿಸಿದರು.
2026 ಜನವರಿಯಲ್ಲಿ ನಡೆದ JEE MAINS ಪರೀಕ್ಷೆಯಲ್ಲಿ ದಾವಣಗೆರೆಯ ಶ್ರೀ ಸಿದ್ಧಗಂಗಾ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಸಾಧನೆಯನ್ನು ಗೈದಿದ್ದಾರೆ. ಶೇಕಡ 99.03 ಪರ್ಸೆಂಟೈಲ್ ಅಂಕಗಳಿಸಿರುವ ಸಂಜಯ್ ಎಸ್ ಕಾಲೇಜಿಗೆ ಪ್ರಥಮ ಸ್ಥಾನದಲ್ಲಿದ್ದಾನೆ, ದರ್ಶನ್ ರುದ್ರಪ್ಪ ಕರಿಯಜ್ಜಿ 97.64, ಸಮರ್ಥ ಮನೋಹರ್ ಕೋರಿ 96.92, ರಶ್ಮಿ ಹೆಚ್ ಎಸ್ 95.82, ಜಯದೇವ ಜಿ ಡಿ 95.74, ಜಗದೀಶ ಸಿ ಜಿ 95.17, ಪ್ರವೀಣ್ ಕುಮಾರ್ ಪೂಜಾರ್ 94.08, ಎಸ್.ಹೆಚ್ ಮೋಹನ 93.21, ದರ್ಶನ್ ಆರ್ 93.12, ಮೋಕ್ಷ ಜೆ ಹೆಚ್ 92.94, ಸರ್ವಮಂಗಳ ಭೀಮಪ್ಪ ಸೌಕಾರ್ 92.88, ಚೈತನ್ಯ ಆರ್ 92.56, ದೀಪ ಬಿ ಜೆ 92.46, ಚಂದನ್ ಎಂ ಡಿ 91.71, ಪ್ರಣವ್ ದಿಗ್ಗಾವಿ 91.7, ಕೆ ವಿಷ್ಣು 91.58, ಮಾನ್ಯ ಯು 91.47, ಚಂದನ ಎನ್ 91.01, ಜ್ಯೋತಿ ಅರುಣ ಕುಮಾರ್ 90.11 ಪರ್ಸೆಂಟೈಲ್ ಅಂಕಗಳನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ಪ್ರಶಂಸಿಸಿದ ಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್ ಡಿʼಸೌಜ ರವರು ಮುಂದಿನ ಪರೀಕ್ಷೆಗಳಿಗೂ ಶುಭ ಹಾರೈಸಿದರು. ಪಿ ಯು ಕಾಲೇಜಿನ ನಿರ್ದೇಶಕರಾದ ಡಾ|| ಜಯಂತ್ ಡಿ ಎಸ್, ಅಧ್ಯಕ್ಷರಾದ ಪ್ರಶಾಂತ್ ಡಿ ಎಸ್ ಹಾಗೂ ಕಾರ್ಯದರ್ಶಿ ಹೇಮಂತ್ ಡಿ ಎಸ್ ರವರು ಹರ್ಷವನ್ನು ವ್ಯಕ್ತಪಡಿಸಿ ಮಕ್ಕಳನ್ನು ಅಭಿನಂದಿಸಿದ್ದಾರೆ. ಕಾಲೇಜಿನ ಪ್ರಾಚಾರ್ಯರಾದ ವಾಣಿಶ್ರೀ ಹಾಗೂ ಉಪನ್ಯಾಸಕ ವೃಂದ ಮತ್ತು ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಶಾಲಾ-ಕಾಲೇಜಿನ ಮಕ್ಕಳು 77 ನೇ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ ಸ್ಕೌಟ್ ಗೈಡ್ಸ್ ನ ಕಾರ್ಯದರ್ಶಿ ಎಂ.ಸಿ. ಮಹೇಶ್ ರವರು ಧ್ವಜಾರೋಹಣ ನೆರವೇರಿಸಿದರು. ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಎಲ್‌ಕೆಜಿ ಯುಸ್ರಾ ಖಾಜಿ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯ ಕೋರಿದಳು. 2 ನೇ ತರಗತಿ ಯಶಸ್ ಆರ್.ಎಸ್ ಡಾ. ಬಿ.ಆರ್ ಅಂಬೇಡ್ಕರ್ ಬಗ್ಗೆ, ಚೈತ್ರಿಕ ಸಂವಿಧಾನ ದಿನಾಚರಣೆ ಬಗ್ಗೆ ಮೂರನೇ ತರಗತಿ ಫಜೀಲತ್ ಕೋಠಿ ಮತ್ತು ಹರ್ಷಿತ್ ಟಿ ಇವರು ಸಂವಿಧಾನದ ಪೀಠಿಕೆ ಮತ್ತು ಸಂವಿಧಾನದಲ್ಲಿರುವ ವಿವರಣೆ ತಿಳಿಸಿ ಹೇಳಿದರು.
6 ನೇ ತರಗತಿ ಸಾಕ್ಷಿ ಮತ್ತು ಗಾನಶ್ರೀ ಸಂವಿಧಾನದ ರಚನೆ ಮತ್ತು ಸಮಿತಿ ಸದಸ್ಯರ ಬಗ್ಗೆ ಬೆಳಕು ಚೆಲ್ಲಿದರು. ಅಭಿಷೇಕ್ ಎಂ.ಸಿ ಜನವರಿ 26 ರಂದು ಹುತಾತ್ಮನಾದ ಸಂಗೊಳ್ಳಿ ರಾಯಣ್ಣನ ತ್ಯಾಗ-ಬಲಿದಾನವನ್ನು ಸ್ಮರಿಸಿದನು. 1 ನೇ ತರಗತಿ ಮಕ್ಕಳು ಐ ಲವ್ ಮೈ ಇಂಡಿಯಾ, 3 ನೇ ತರಗತಿ ಮಕ್ಕಳು ವಂದೇ ಮಾತರಂ ಗೀತೆಗಳಿಗೆ ಆಕರ್ಷಕವಾಗಿ ನೃತ್ಯ ಪ್ರಸ್ತುತ ಪಡಿಸಿದರು. 7 ನೇ ತರಗತಿಯ ಜಾನ್ಹವಿ ತಂಡದವರು ಚೊಡೋ ಕಲ್ ಕಿ ಬಾತ್, ಐಜಾ ಅಫ್ಸರಿ ತಂಡದವರು ವಿಶ್ವ ವಿನೂತನ ವಿದ್ಯಾಚೇತನ, 6 ನೇ ತರಗತಿಯ ಕೀರ್ತನಾ ತಂಡದವರು ತಾಯಿ ಭಾರತಿಯ ಪಾದ ಪದ್ಮಗಳ ಎಂಬ ಗೀತೆಗಳನ್ನು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಿದರು. 1 ನೇ ತರಗತಿ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ತೊಟ್ಟು ಜೈಹೋ ಹಾಡಿಗೆ ರಾåಂಪ್ ವಾಕ್ ಮಾಡಿ ಎಲ್ಲರ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ವಾಣಿಶ್ರೀ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿದ್ಧಗಂಗಾ ಸಿಬಿಎಸ್‌ಇ ಪ್ರಾಚಾರ್ಯೆ ಗಾಯತ್ರಿ ಚಿಮ್ಮಡ್, ಕಾಂಪೋಜಿಟ್ ಹೈಸ್ಕೂಲ್ ಮುಖ್ಯ ಶಿಕ್ಷಕಿ ರೇಖಾರಾಣಿ, ಸಂಸ್ಥೆಯ ಕಾರ್ಯದರ್ಶಿ ಹೇಮಂತ್, ನಿರ್ದೇಶಕರಾದ ಜಯಂತ್ ಮತ್ತು ಮುಖ್ಯಸ್ಥರಾದ ಜಸ್ಟಿನ್ ಡಿʼಸೌಜ ಉಪಸ್ಥಿತರಿದ್ದರು. ಶಾಲಾ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಪಾಲ್ಗೊಂಡಿದ್ದರು. ಸಹ ಶಿಕ್ಷಕಿ ಆಶಾ. ಎಸ್ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಚಿತ್ರಕಲಾ ಶಿಕ್ಷಕರು ಮತ್ತು ದೈಹಿಕ ಶಿಕ್ಷಕರು ಧ್ವಜಸ್ತಂಭದ ಮುಂದೆ ಭಾರತದ ಭೂಪಟ ಮತ್ತು ರಂಗೋಲಿ ಬಿಡಿಸಿ ಸುಂದರವಾಗಿ ಸಿಂಗರಿಸಿದ್ದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಶ್ರೀ ಸಿದ್ಧಗಂಗಾ ಸ್ಥಳೀಯಸಂಸ್ಥೆ ದಾವಣಗೆರೆ, ದಿನಾಂಕ 22/01/2026 ಗುರುವಾರದಂದು ಸ್ಥಳೀಯ ಸಂಸ್ಥೆಯ 121 ಸ್ಕೌಟ್ ಮತ್ತು 66 ಗೈಡ್ಸ್ ವಿದ್ಯಾರ್ಥಿಗಳಿಗೆ ಕುಕ್ಕಿಂಗ್ ಪ್ರಾವಿಣ್ಯತಾ ಪದಕ ಪಡೆಯಲು “ಕುಕಿಂಗ್ ಆಕ್ಟಿವಿಟಿ ” ಹಮ್ಮಿಕೊಳ್ಳಲಾಗಿತ್ತು, ಶ್ರೀಮತಿ ರೇಖಾರಾಣಿ ಕೆ ಎಸ್ ,(ಏ ಡಿ ಸಿ ) ಮಕ್ಕಳಿಗೆ ಶುಭಹಾರೈಸಿ ಹಸಿರು ನಿಶಾನೆ ತೋರಿಸುವುದರ ಮೂಲಕ ವಿದ್ಯಾರ್ಥಿಗಳ ಫೂಟ್ ಹೈಕ್ ಗೆ ಚಾಲನೆ ನೀಡಿದರು ಹೈಕಿಂಗ್ ಮೂಲಕ ಆನಗೋಡಿನ ಸಿದ್ಧೇಶ್ವರ ಪ್ರೌಢಶಾಲಾ ಆವರಣ ತಲುಪಿದ ವಿದ್ಯಾರ್ಥಿಗಳು ಧ್ವಜಾರೋಹಣದ ಬಳಿಕ ತಮ್ಮ ತಮ್ಮ ದಳಗಳ ಪ್ಯಾಟ್ರೋಲ್ ಗುಂಪುಗಳಲ್ಲಿ ಸೌದೆಒಲೆಗಳಮೇಲೆ ಅವಲಕ್ಕಿ,ಮಂಡಕ್ಕಿ,ಈರುಳ್ಳಿ ಬಜ್ಜಿ,ಮೆಣಸಿನಕಾಯಿ, ಚಪಾತಿ ಬೆಂಡೆಕಾಯಿ ಪಲ್ಯ,ತಾಳಿಪಟ್ಟು,ಪನ್ನೀರ್ ರೋಲ್,ಗೋಬಿಮಂಚೂರಿ,ಪುದೀನಾ ರೈಸ್,ಶಾವಿಗೆ ಪಾಯಸ,ಶರಬತ್ತು, ಬಾದಾಮಿಹಾಲು,ಟಿ,ಕಾಫಿ,ಇನ್ನಿತರೆ ಖಾದ್ಯಗಳನ್ನು ತುಂಬಾ ರುಚಿಕರವಾಗಿ ಉತ್ಸಾಹದಿಂದ ತಯಾರಿಸಿದರು ಹಾಗು ಅಡುಗೆಮಾಡುವ ಕೌಶಲಗಳನ್ನು ತಿಳಿದುಕೊಂಡರು .
ಆನಗೋಡಿನಬಳಿ ಇರುವ ಶಿಕ್ಷಣ ಶಿಲ್ಪಿ ಎಂ ಎಸ್ ಶಿವಣ್ಣ ಶಿಲಾ ಸ್ಮಾರಕದ ಬಳಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಈ ಸಂಧರ್ಭದಲ್ಲಿ ಸ್ಕೌಟ್ ಮಾಸ್ಟರ್ಸ್ ಗಳಾದ ಶ್ರೀನಿವಾಸ್ ಎನ್ ಎಲ್ (ಹೆಚ್ ಡಬ್ಲ್ಯೂ ಬಿ ),ಆರೋಗ್ಯಮ್ಮ(ಹೆಚ್ ಡಬ್ಲ್ಯೂ ಬಿ),ತನುಜಾ (ಅಡ್ವಾನ್ಸ್ ಡ್ )ಹಾಗೂ ಗೈಡ್ ಕ್ಯಾಪ್ಟನ್ಸ್ ಸುನಿ ತಾ ಕೆ ಎಂ (ಹೆಚ್ ಡಬ್ಲ್ಯೂ ಬಿ),ಸುನಿತಾ ಎಂ, ಗೀತಾ ಪಟ್ಟಣಶೆಟ್ಟಿ (ಅಡ್ವಾನ್ಸ್ ಡ್ ) ಇವರು ಉಪಸ್ಥಿತರಿದ್ದರು, ಸ್ಥಳೀಯಸಂಸ್ಥೆಯ ಕಾರ್ಯದರ್ಶಿ ಮಹೇಶ್ ಎಂ,ಸಿ (ಹೆಚ್ ಡಬ್ಲ್ಯೂ ಬಿ) ಇವರು ಚಟುವಟಿಕೆಗಳನ್ನು ಉತ್ತಮವಾಗಿ ಸಂಘಟಿಸಿದರು .
ಸಂಕ್ರಾಂತಿಯ ಮುನ್ನಾ ದಿನವಾದ ಇಂದು ನಗರದ ಸಿದ್ಧಗಂಗಾ ಸಿ.ಬಿ.ಎಸ್.ಇ ಶಾಲೆಯ 6 ಮತ್ತು 3 ಹಾಗೂ LKG ಮಕ್ಕಳು ಸಂಕ್ರಾಂತಿ ಸಂತೆಯನ್ನು ಶಾಲಾ ಆವರಣದಲ್ಲಿ ಏರ್ಪಡಿಸಿದ್ದರು. ತರಕಾರಿ, ಸೊಪ್ಪು, ಬೇಳೆ ಕಾಳು, ಮಂಡಕ್ಕಿ ಉಸುಳಿ, ವಿವಿಧ ರೀತಿಯ ರೊಟ್ಟಿ ಪಲ್ಯಗಳು, ಮಜ್ಜಿಗೆ, ಎಳನೀರು, ಬಳೆ, ಮಾವಿನ ಸೊಪ್ಪು, ಬಾಳೆಕಂಬ, ಅರಿಶಿಣ ಕುಂಕುಮ, ಹೂ, ಎಲೆ ಅಡಿಕೆ ಹೀಗೆ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಮಾರಾಟ ಮಾಡಿದರು. ಕೂಡು-ಕಳೆಯುವ ಲೆಕ್ಕಕ್ಕೆ ಅನುಗುಣವಾಗಿ ಮನೆಯಿಂದಲೇ ಚಿಲ್ಲರೆ ನಾಣ್ಯಗಳನ್ನು ತಂದಿದ್ದರು. ಹಳ್ಳಿಯ ಸೊಗಡು ಬಿಂಬಿಸುವಂತೆ ಮಕ್ಕಳೆಲ್ಲರೂ ಯೂನಿಫಾರಂ ಬದಲಾಗಿ ಇಳಕಲ್ ಸೀರೆ, ಧೋತಿ-ಪಂಜೆ, ಶರ್ಟು, ಟವೆಲïಗಳನ್ನು ಧರಿಸಿ ಬಂದಿದ್ದರು. ಹಣೆಯ ಮೇಲೆ ವಿಭೂತಿ-ಕುಂಕುಮ ರಾರಾಜಿಸುತ್ತಿತ್ತು. ಪಂಚಾಯಿತಿ ಕಟ್ಟೆ, ಧಾನ್ಯದ ರಾಶಿಪೂಜೆ, ಹಳ್ಳಿ ಹೋಟೆಲ್, ಗ್ರಾಮದೇವತೆ ಪೂಜೆ ಹೀಗೆ ಹಳ್ಳಿಯ ವಾತಾವರಣ ಸೃಷ್ಠಿ ಮಾಡಿದ್ದರು. ಬಂದವರಿಗೆ ಆರತಿ ಬೆಳಗಿ ಎಳ್ಳು-ಬೆಲ್ಲ ನೀಡಿ ಅತಿಥಿ ಸತ್ಕಾರವನ್ನೂ ಮಾಡಿದರು. ಕೆಲವು ಮಕ್ಕಳು ಚನ್ನೆ ಮಣೆ ಗೋಲಿ, ಬುಗುರಿ, ಚಿನ್ನಿದಾಂಡು, ಗಾಳಿಪಟದ ಆಟದಲ್ಲಿ ತಲ್ಲೀನರಾಗಿದ್ದರು. ರಾಗಿ ಬೀಸುತ್ತಾ, ಕಣಿ ಹೇಳುತ್ತಾ, ಗಿಣಿ ಶಾಸ್ತ್ರ ನುಡಿಯುತ್ತಾ ಮಕ್ಕಳು ಆಹ್ವಾನಿತರನ್ನು ಮತ್ತಷ್ಟು ರಂಜಿಸಿದರು. ಶಿಕ್ಷಕರು ಮಾರ್ಗದರ್ಶನ ನೀಡುತ್ತಾ ಸಂಕ್ರಾಂತಿ ಸಂತೆಯನ್ನು ಯಶಸ್ವಿಗೊಳಿಸಿಕೊಟ್ಟರು.
ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ 56ನೇ ವಾರ್ಷಿಕ ಸಂಭ್ರಮ 2026ರ ಜನವರಿ 3 ರಿಂದ 6 ರವರೆಗೆ ನಾಲ್ಕು ದಿನಗಳವರೆಗೆ ನಡೆಯಲಿದೆ.
ಜನವರಿ 3ರ ಶನಿವಾರ ಸಂಜೆ ಮೊದಲ ದಿನದ ಸಿದ್ಧಗಂಗಾ ಸಂಭ್ರಮದ ಉದ್ಘಾಟನೆ ದಾವಣಗೆರೆ ಪೂರ್ವ ವಲಯದ ಐಜಿಪಿ ಡಾ. ರವಿಕಾಂತೇ ಗೌಡ ಐ.ಪಿ.ಎಸ್ ರವರು ಉದ್ಘಾಟಿಸಲಿದ್ದಾರೆ. ರಾಜ್ಯಮಟ್ಟದ ಪ್ರತಿಷ್ಠಿತ ಎಂ.ಎಸ್.ಎಸ್ ಕ್ವಿಜ್ 2025ರಲ್ಲಿ ವಿಜೇತ 30 ಮಕ್ಕಳಿಗೆ ಬಹುಮಾನ ವಿತರಣೆ. ಅರುಣೋದಯ ಬಿ.ವೈ ಮತ್ತು ದರ್ಶನ್ ಕೆ.ಸಿ ತಲಾ ಐವತ್ತು ಸಾವಿರರೂ.ಗಳನ್ನು ಬಹುಮಾನವಾಗಿ ಪಡೆಯುವರು, ಸಿರಿ ಬಿ.ಸಿ ದ್ವಿತೀಯ ಬಹುಮಾನವಾಗಿ 25ಸಾವಿರ, ತೃತೀಯ ಬಹುಮಾನವನ್ನು 9 ಮಕ್ಕಳು ಪ್ರತಿಯೊಬ್ಬರೂ 10 ಸಾವಿರ ಪಡೆಯುವರು,18 ಮಕ್ಕಳು ಸಮಾಧಾನಕರ ಬಹುಮಾನವಾಗಿ ಒಂದು ಸಾವಿರ ಪಡೆಯುವರು. ಸಿದ್ಧಗಂಗಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಕಮಟಂ ಶ್ರೀನಿವಾಸಲು, ವಿನಾಯಕ ಬಿ.ಎಂ, ಧನಂಜಯಪ್ಪ ಬಿ.ಎನ್, ನಿಂಗಮ್ಮ ಕೆ ಇವರು ಮುಖ್ಯ ಅತಿಥಿಗಳಾಗಿರುತ್ತಾರೆ. ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ವಾಣಿಶ್ರೀ ಅವರು ವಹಿಸಲಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕಗಳಿಸಿದ 146 ಮಕ್ಕಳು ಸಿದ್ಧಗಂಗಾ ಪ್ರತಿಭಾ ಪುರಸ್ಕಾರವನ್ನು ಪಡೆಯಲಿದ್ದಾರೆ.
ಭಾನುವಾರ ಜನವರಿ 4 ರಂದು 2ನೇ ದಿನದ ಕಾರ್ಯಕ್ರಮವನ್ನು ಖ್ಯಾತ ವ್ಯಂಗ್ಯ ಚಿತ್ರಕಾರರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆದ ಡಾ.ಹೆಚ್.ಬಿ ಮಂಜುನಾಥ್‌ರವರು ಉದ್ಘಾಟಿಸುವರು. ಅಂದಿನ ಅಧ್ಯಕ್ಷತೆ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ನಿರ್ದೇಶಕರಾದ ಡಾ|| ಡಿ.ಎಸ್. ಜಯಂತ್ರವರು ವಹಿಸಲಿದ್ದಾರೆ. ಉಪನ್ಯಾಸಕರಾದ ಬಿ.ಎಂ ವಿಜಯ್ ಕುಮಾರ್, ವನ್ನಂ ಸುಬ್ಬರಾವ್, ಸಂತೋಷ್ ಎಸ್ ರವರು ಮುಖ್ಯ ಅತಿಥಿಗಳಾಗಿರುವರು. ದ್ವಿತೀಯ ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರದ ನಂತರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಜನವರಿ 5ರ ಸೋಮವಾರದಂದು 3ನೇ ದಿನದ ಸಂಜೆಯ ಕಾರ್ಯಕ್ರಮಕ್ಕೆ “ಸಂಪ್ರದಾಯ” ಸಹ ಸಂಸ್ಥಾಪಕರಾದ ಚೇತನ್ ಡಿ.ಸಿಯವರು ಚಾಲನೆ ನೀಡುವರು. ರಾಜ್ಯಮಟ್ಟದ ಪ್ರತಿಷ್ಠಿತ “ಶಿಕ್ಷಣ ಶಿಲ್ಪಿ ಡಾ. ಎಂ.ಎಸ್ ಶಿವಣ್ಣ ಪ್ರಶಸ್ತಿ”ಯನ್ನು ನಗರದ ಎಸ್ ಜೆ ಜೆ ಎಂ ಪ್ರೌಢಶಾಲೆಯ ಶೈಕ್ಷಣಿಕ ಸಲಹೆಗಾರರಾದ ಶಿಕ್ಷಣ ತಜ್ಞೆ ವಾಗ್ದೇವಿ ಆರ್ ಇವರಿಗೆ ಪ್ರದಾನ ಮಾಡಲಾಗುತ್ತದೆ. ಅಂದಿನ ಅಧ್ಯಕ್ಷತೆ ಸಿದ್ಧಗಂಗಾ ಸಿಬಿಎಸ್ಇಯ ಪ್ರಾಚಾರ್ಯೆ ಗಾಯತ್ರಿ ಚಿಮ್ಮಡ್ ವಹಿಸಲಿದ್ದಾರೆ. 2025ರ ಸಿಬಿಎಸ್ಇ 10ನೇ ತರಗತಿಯಲ್ಲಿ ಅತ್ಯುತ್ತಮ ದರ್ಜೆಯಲ್ಲಿ ಉತ್ತೀರ್ಣರಾದ 26 ಮಕ್ಕಳಿಗೆ ಪ್ರತಿಭಾ ಪುರಸ್ಕಾರವಿದೆ. ಸಿಬಿಎಸ್ಇ ಶಾಲೆಯ ಸಹ ಶಿಕ್ಷಕರಾದ ಆಶಾ, ಹರಿಣಿ, ಫಾರೂಕ್ ಉಸ್ಮಾನಿ ಮುಖ್ಯ ಅತಿಥಿಗಳಾಗಿರುತ್ತಾರೆ.
ನಾಲ್ಕನೇ ದಿನದ ಸಂಭ್ರಮದಲ್ಲಿ ಶೈಕ್ಷಣಿಕ ಸಲಹೆಗಾರರಾದ ಜಗನ್ನಾಥ್ ನಾಡಿಗೇರ್ರವರು ಉದ್ಘಾಟಕರಾಗಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ಡಿ.ಎಸ್ ಹೇಮಂತ್ರವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಿದ್ಧಗಂಗಾ ಶಾಲೆಯ ಸಹ ಶಿಕ್ಷಕರಾದ ಸ್ವಾತಿ, ಮಲ್ಲಿಕಾರ್ಜುನಯ್ಯ, ವೇದಾವತಿ ಇವರು ಮುಖ್ಯ ಅತಿಥಿಗಳು. ನಾಲ್ಕೂ ದಿನದ ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿʼಸೌಜ ಉಪಸ್ಥಿತರಿರುತ್ತಾರೆ. ಅಂದು ಎಸ್.ಎಸ್.ಎಲ್.ಸಿ ಯಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ 80 ಮಕ್ಕಳಿಗೆ ಪ್ರತಿಭಾ ಪುರಸ್ಕಾರವಿರುತ್ತದೆ.
ಪ್ರತಿದಿನ ಸಂಜೆ 5 ರಿಂದ 5:30 ರವರೆಗೆ ಸಾನ್ವಿ, ಜೀವಾಕ್ಷರಿ, ಅನುಶ್ರೀ, ಐಸಿರಿ, ಪ್ರಿಯಾಂಕ ಮತ್ತು ಸಂಗಡಿಗರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಡುವರು. ಸಿದ್ಧಗಂಗಾ ಕಾಂಪೋಜಿಟ್ ಸ್ಕೂಲಿನ ಮುಖ್ಯ ಶಿಕ್ಷಕಿ ರೇಖಾರಾಣಿ ಯವರು ನಾಲ್ಕೂ ದಿನಗಳು ಕಾರ್ಯಕ್ರಮದ ನಿರೂಪಣೆ ನಡೆಸಿಕೊಡುವರು.
* ಕ್ರೀಡೋತ್ಸವ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ 2500ಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಣೆ ಮಾಡಲಾಗಿದೆ.
* ವಾರ್ಷಿಕ ಸಂಭ್ರಮಾಚರಣೆಯಲ್ಲಿ ಪ್ರತಿದಿನ ಪ್ರತಿಭಾ ಪುರಸ್ಕಾರವಿರಲಿದೆ. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನೂರಕ್ಕೂ ಹೆಚ್ಚು ನೃತ್ಯಗಳಲ್ಲಿ ಮಕ್ಕಳು ತಮ್ಮ ಅಭಿನಯ ತೋರಲಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ಸಿದ್ಧಗಂಗಾ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಜಸ್ಟಿನ್ ಡಿʼಸೌಜ, ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಲರಾದ ವಾಣಿಶ್ರೀ, ಕಾರ್ಯದರ್ಶಿಗಳಾದ ಹೇಮಂತ್ ಡಿ. ಎಸ್, ಕಾಲೇಜಿನ ಟ್ರಸ್ಟಿಯಾದ ಜಯಂತ್ ಡಿ. ಎಸ್., ಮುಖ್ಯೋಪಾಧ್ಯಾಯರಾದ ಶ್ರೀಮತಿ ರೇಖಾರಾಣಿ ಕೆ. ಎಸ್. ರವರು ಉಪಸ್ಥಿತರಿದ್ದರು.