Tuesday, February 17, 2026

ಸಿದ್ಧಗಂಗಾ ಕಾಲೇಜಿಗೆ JEE MAINS ನಲ್ಲಿ ಶೇ. 99.03

2026 ಜನವರಿಯಲ್ಲಿ ನಡೆದ JEE MAINS ಪರೀಕ್ಷೆಯಲ್ಲಿ ದಾವಣಗೆರೆಯ ಶ್ರೀ ಸಿದ್ಧಗಂಗಾ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಅಮೋಘ ಸಾಧನೆಯನ್ನು ಗೈದಿದ್ದಾರೆ. ಶೇಕಡ 99.03 ಪರ್ಸೆಂಟೈಲ್‌ ಅಂಕಗಳಿಸಿರುವ ಸಂಜಯ್‌ ಎಸ್‌ ಕಾಲೇಜಿಗೆ ಪ್ರಥಮ ಸ್ಥಾನದಲ್ಲಿದ್ದಾನೆ, ದರ್ಶನ್‌ ರುದ್ರಪ್ಪ ಕರಿಯಜ್ಜಿ 97.64, ಸಮರ್ಥ ಮನೋಹರ್‌ ಕೋರಿ 96.92, ರಶ್ಮಿ ಹೆಚ್‌ ಎಸ್‌ 95.82, ಜಯದೇವ ಜಿ ಡಿ 95.74, ಜಗದೀಶ ಸಿ ಜಿ 95.17, ಪ್ರವೀಣ್‌ ಕುಮಾರ್‌ ಪೂಜಾರ್‌ 94.08, ಎಸ್.ಹೆಚ್‌ ಮೋಹನ 93.21, ದರ್ಶನ್‌ ಆರ್ 93.12, ಮೋಕ್ಷ ಜೆ ಹೆಚ್‌ 92.94, ಸರ್ವಮಂಗಳ ಭೀಮಪ್ಪ ಸೌಕಾರ್‌ 92.88, ಚೈತನ್ಯ ಆರ್‌ 92.56, ದೀಪ ಬಿ ಜೆ 92.46, ಚಂದನ್‌ ಎಂ ಡಿ 91.71, ಪ್ರಣವ್‌ ದಿಗ್ಗಾವಿ 91.7, ಕೆ ವಿಷ್ಣು 91.58, ಮಾನ್ಯ ಯು 91.47, ಚಂದನ ಎನ್‌ 91.01, ಜ್ಯೋತಿ ಅರುಣ ಕುಮಾರ್‌ 90.11 ಪರ್ಸೆಂಟೈಲ್‌ ಅಂಕಗಳನ್ನು ಪಡೆದಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಯನ್ನು ಪ್ರಶಂಸಿಸಿದ ಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್‌ ಡಿʼಸೌಜ ರವರು ಮುಂದಿನ ಪರೀಕ್ಷೆಗಳಿಗೂ ಶುಭ ಹಾರೈಸಿದರು. ಪಿ ಯು ಕಾಲೇಜಿನ ನಿರ್ದೇಶಕರಾದ ಡಾ|| ಜಯಂತ್‌ ಡಿ ಎಸ್‌, ಅಧ್ಯಕ್ಷರಾದ ಪ್ರಶಾಂತ್‌ ಡಿ ಎಸ್‌ ಹಾಗೂ ಕಾರ್ಯದರ್ಶಿ ಹೇಮಂತ್‌ ಡಿ ಎಸ್‌ ರವರು ಹರ್ಷವನ್ನು ವ್ಯಕ್ತಪಡಿಸಿ ಮಕ್ಕಳನ್ನು ಅಭಿನಂದಿಸಿದ್ದಾರೆ. ಕಾಲೇಜಿನ ಪ್ರಾಚಾರ್ಯರಾದ ವಾಣಿಶ್ರೀ ಹಾಗೂ ಉಪನ್ಯಾಸಕ ವೃಂದ ಮತ್ತು ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.



No comments:

Post a Comment