Monday, October 26, 2026
ಸಿದ್ಧಗಂಗಾ ಸಂಸ್ಥೆಯಲ್ಲಿ ವಾಲ್ಮೀಕಿ ಜಯಂತಿ
ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಇಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಆದಿಕವಿ ವಾಲ್ಮೀಕಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ 8ನೇ ತರಗತಿ ಬಾಲಕಿ ಸಾನ್ವಿ ಮಹರ್ಷಿ ವಾಲ್ಮೀಕಿ ಕುರಿತು ಭಾಷಣ ಮಾಡಿದಳು. ಬದಲಾವಣೆ ಹೇಗೆ ಯಾವಾಗ ಸಾಧ್ಯವೆಂಬುದನ್ನು ನಾವು ವಾಲ್ಮೀಕಿ ಜೀವನ ಚರಿತ್ರೆಯಿಂದ ತಿಳಿದುಕೊಳ್ಳಬೇಕು. ರಾಮಾಯಣದಂತಹ ಮೇರು ಕೃತಿ, ಶ್ರೀರಾಮನಂತಹ ಆದರ್ಶ ಪುರುಷನನ್ನು ಜಗತ್ತಿಗೆ ಪರಿಚಯಿಸಿದ ಮಹರ್ಷಿ ವಾಲ್ಮೀಕಿಯ ಸಂದೇಶ ಸರ್ವಕಾಲಕ್ಕೂ ಅನ್ವಯವೆಂದಳು. ನಂತರ ಮಕ್ಕಳು ಮಹರ್ಷಿ ವಾಲ್ಮೀಕಿಯ ಚಿತ್ರ ಬಿಡಿಸಿದರು. ಕವನ ರಚನೆ, ಪ್ರಬಂಧ ರಚನೆ ಮಾಡಿ ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಿಸಿದರು. ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸಿಬ್ಬಂದಿ ವರ್ಗದವರು ಹಾಜರಿದ್ದರು.
Thursday, October 8, 2026
ವಿಭಾಗ ಮಟ್ಟದ-ಕ್ರೀಡಾಕೊಟಕ್ಕೆ ಆಯ್ಕೆಯಾದ ಸಿದ್ಧಗಂಗಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು
ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ದೀಕ್ಷೀತ್ ಎಚ್.ಎಲ್, ಅಮೃತ್, ತರುಣ, ಪುನೀತ್, ಕಿರಣ, ಮಂಜುನಾಥ, ಚಂದನ್ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಖೋ-ಖೋ ಕ್ರೀಡೆಯಲ್ಲಿ ಜಯಗಳಿಸಿ ವಿಭಾಗಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ, ಈ ಕ್ರೀಡಾಪಟುಗಳನ್ನ ಸಂಸ್ಥೆಯ ಮುಖ್ಯಸ್ಥರಾದ ಡಾ|| ಜಸ್ಟಿನ್ ಡಿಸೌಜ ಮೇಡಂ ಮತ್ತು ಸಂಸ್ಥೆಯ ಕಾರ್ಯದರ್ಶಿಗಳಾದ ಹೇಮಂತ್ ಸರ್, ಸಂಸ್ಥೆಯ ಮುಖ್ಯಶಿಕ್ಷಕಿಯದ ರೇಖಾರಾಣಿ ಮೇಡಂ, ಗಾಯಿತ್ರಿ ಮೇಡಂ ಎಲ್ಲಾ ಸಂಸ್ಥೆಯ ಶಿಕ್ಷಕರು ಹಾಗು ದೈಹಿಕ ಶಿಕ್ಷಣ ಶಿಕ್ಷಕರು ಆಟಗಾರರನ್ನು ಅಭಿನಂದಿಸಿದರು.
Subscribe to:
Posts (Atom)


