Monday, October 26, 2026

ಸಿದ್ಧಗಂಗಾ ಸಂಸ್ಥೆಯಲ್ಲಿ ವಾಲ್ಮೀಕಿ ಜಯಂತಿ



 ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಇಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಆದಿಕವಿ ವಾಲ್ಮೀಕಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ 8ನೇ ತರಗತಿ ಬಾಲಕಿ ಸಾನ್ವಿ ಮಹರ್ಷಿ ವಾಲ್ಮೀಕಿ ಕುರಿತು ಭಾಷಣ ಮಾಡಿದಳು. ಬದಲಾವಣೆ ಹೇಗೆ ಯಾವಾಗ ಸಾಧ್ಯವೆಂಬುದನ್ನು ನಾವು ವಾಲ್ಮೀಕಿ ಜೀವನ ಚರಿತ್ರೆಯಿಂದ ತಿಳಿದುಕೊಳ್ಳಬೇಕು. ರಾಮಾಯಣದಂತಹ ಮೇರು ಕೃತಿ, ಶ್ರೀರಾಮನಂತಹ ಆದರ್ಶ ಪುರುಷನನ್ನು ಜಗತ್ತಿಗೆ ಪರಿಚಯಿಸಿದ ಮಹರ್ಷಿ ವಾಲ್ಮೀಕಿಯ ಸಂದೇಶ ಸರ್ವಕಾಲಕ್ಕೂ ಅನ್ವಯವೆಂದಳು. ನಂತರ ಮಕ್ಕಳು ಮಹರ್ಷಿ ವಾಲ್ಮೀಕಿಯ ಚಿತ್ರ ಬಿಡಿಸಿದರು. ಕವನ ರಚನೆ, ಪ್ರಬಂಧ ರಚನೆ ಮಾಡಿ ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಿಸಿದರು. ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸಿಬ್ಬಂದಿ ವರ್ಗದವರು ಹಾಜರಿದ್ದರು.

No comments:

Post a Comment