ಭಾರತ ಮಾತೆಯ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ವೀರ ಯೋಧರ ಶೌರ್ಯ, ತ್ಯಾಗ ಮತ್ತು ದೇಶಭಕ್ತಿಯನ್ನು ಸ್ಮರಿಸುವ ಉದ್ದೇಶದಿಂದ 26 ಜುಲೈ 2026 ರಂದು ಕಾರ್ಗಿಲ್ ವಿಜಯ ದಿವಸ್ ಅನ್ನು ಸಿದ್ಧಗಂಗಾ ಲೋಕಲ್ ಅಸೋಸಿಯೇಷನ್, ದಾವಣಗೆರೆ ವತಿಯಿಂದ ಅತ್ಯಂತ ಗೌರವ ಹಾಗೂ ಶ್ರದ್ಧೆಯಿಂದ ಆಚರಿಸಲಾಯಿತು.ಈ ಸಂದರ್ಭದಲ್ಲಿ ಸ್ಕೌಟ್ ಮಾಸ್ಟರ್ ಶ್ರೀ ಮಹೇಶ್ ಎಂ.ಸಿ. ಅವರು ಕಾರ್ಗಿಲ್ ಯುದ್ಧದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ತಿಳಿಸಿದರು, 1999ರಲ್ಲಿ ಪಾಕಿಸ್ತಾನದ ನುಸುಳುಕೋರರು ಕಾರ್ಗಿಲ್ ಪ್ರದೇಶದ ಎತ್ತರದ ಪರ್ವತ ಶಿಖರಗಳನ್ನು ಅಕ್ರಮವಾಗಿ ಆಕ್ರಮಿಸಿಕೊಂಡ ಸಂದರ್ಭದಲ್ಲಿ ಭಾರತೀಯ ಸೇನೆಯು "ಆಪರೇಷನ್ ವಿಜಯ್" ನಡೆಸಿ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ಧೈರ್ಯ, ಶೌರ್ಯ ಮತ್ತು ದೇಶಪ್ರೇಮದಿಂದ ಹೋರಾಡಿ ಶತ್ರುಗಳನ್ನು ಹಿಮ್ಮೆಟ್ಟಿಸಿ ವಿಜಯ ಸಾಧಿಸಿತು ಎಂದು ವಿವರಿಸಿದರು ಹಾಗು ಭಾರತೀಯ ಯೋಧರು ಹಿಮಾಚ್ಛಾದಿತ ಪರ್ವತ ಪ್ರದೇಶಗಳಲ್ಲಿ ತೀವ್ರ ಚಳಿ, ಕಡಿಮೆ ಆಮ್ಲಜನಕ ಮತ್ತು ನಿರಂತರ ಶತ್ರುಗಳ ಗುಂಡಿನ ದಾಳಿಯನ್ನು ಲೆಕ್ಕಿಸದೆ ದೇಶದ ಗಡಿಯನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದರು,ಅನೇಕ ವೀರ ಯೋಧರು ತಮ್ಮ ಅಮೂಲ್ಯ ಜೀವವನ್ನು ದೇಶಕ್ಕಾಗಿ ಅರ್ಪಿಸಿದರು. ಅವರ ಈ ತ್ಯಾಗದಿಂದಲೇ ಇಂದು ನಾವು ಸುರಕ್ಷಿತವಾಗಿ ಬದುಕುತ್ತಿದ್ದೇವೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಸಂಧರ್ಭದಲ್ಲಿ ಸ್ಥಳೀಯ ಸಂಸ್ಥೆಯ ಸ್ಕೌಟ್ ಮಾಸ್ಟರ್ ನಿಂಗರಾಜು RG HWB, ತಬಸುಮ್ ಬಾನು advance, ನೀಲಮ್ಮ ತಲವಾಡ HWB ಇವರು ಉಪಸ್ಥಿತರಿದ್ದು ಮಕ್ಕಳಿಗೆ ರಾಷ್ಟ್ರಧ್ವಜ ಮತ್ತು ಸಶಸ್ತ್ರ ಪಡೆಗಳಿಗೆ ಸದಾ ಗೌರವ ನೀಡಬೇಕು ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸ್ಪೂರ್ತಿತುಂಬಿದರು.
Monday, July 27, 2026
Friday, July 17, 2026
ಸಿದ್ದಗಂಗಾ ನೀಟ್ ಫಲಿತಾಂಶ : ವರುಣ್ ಎಂ AIR 279 ನೇ ರ‍್ಯಾಂಕ್
ಜುಲೈ 17,
ಜೂನ್ ತಿಂಗಳ ನೀಟ್ ಪರೀಕ್ಷೆಯಲ್ಲಿ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ತ್ಯುತ್ತಮ ಸಾಧನೆ ಮಾಡಿದ್ದಾರೆ. ವರುಣ್ ಎಂ ಗೆ ಆಲ್ ಇಂಡಿಯಾ ರ‍್ಯಾಂಕಿಂಗ್‌ನಲ್ಲಿ 279 ನೇ ಸ್ಥಾನ ಪಡೆದಿದ್ದಾನೆ. 38 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕೆ ಅರ್ಹತೆ ಪಡೆದಿದ್ದಾರೆ. ಕೆ. ವಿಷ್ಣು 565, ಮೋಕ್ಷ ಜಿ ಹೆಚ್ 560, ಪ್ರವೀಣ್ ಕುಮಾರ್ ಪೂಜಾರ್ 547, ಮುನಾಜ್ ಆಲಿಯಾ ಜಿ ಆರ್ 543, ಜಗದೀಶ್ ಸಿ ಜಿ 524, ಪ್ರಣವ್ ದಿಗ್ಗಾವಿ 521, ಜಯದೇವ ಜಿ ಡಿ 520, ಚಂದನ್ ಎಂ ಡಿ 520, ಪಾಲ್ಗುಣ್ ಎಂ ಬಾಗೂರ್ 514, ತನುಷ ಎಸ್ ಸೋಗಿ 510, ದೀಪಾ ಬಿ ಜೆ 509, ಮಾನ್ಯ ಯು 504 ಅಂಕಗಳನ್ನು ಪಡೆದು ಪಾಲಕರಿಗೆ ಮತ್ತು ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಎಲ್ಲಾ ಪಾಲಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಕಾಲೇಜಿನ ಬೋಧಕ ವರ್ಗದವರಿಗೆ ಸಿದ್ಧಗಂಗಾ ಆಡಳಿತ ಮಂಡಳಿ ಅಭಿನಂದನೆಗಳನ್ನು ಸಲ್ಲಿಸಿದೆ.
Subscribe to:
Posts (Atom)

