Thursday, April 23, 2026

ಸಿದ್ಧಗಂಗಾ ಕಾಂಪೋಜಿಟ್‌ ಹೈಸ್ಕೂಲ್‌ಗೆ 100ಕ್ಕೆ 100 ಫಲಿತಾಂಶ ಶ್ರೀ. ವಿ. ಮಠದ್‌ಗೆ 621



2025-26ನೇ ಸಾಲಿನ ಎಸ್.‌ಎಸ್.‌ಎಲ್‌.ಸಿ. ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ನಗರದ ಶ್ರೀ ಸಿದ್ಧಗಂಗಾ ಕಾಂಪೋಜಿಟ್‌ ಹೈಸ್ಕೂಲ್‌ಗೆ 100ಕ್ಕೆ 100 ಫಲಿತಾಂಶ ದೊರಕಿದೆ. ವಿ. ಮಠದ್‌ ಮತ್ತು ಮೀನಾ ವಿ. ಮಠದ್‌ ದಂಪತಿಗಳ ಪುತ್ರಿ ಶ್ರೀ. ವಿ. ಮಠದ್‌ 625ಕ್ಕೆ 621 ಅಂಕ ಗಳಿಸಿದ್ದಾಳೆ. ಕನ್ನಡ 125, ಇಂಗ್ಲೀಷ್‌ 100, ಹಿಂದಿ 100, ಗಣಿತ 100, ವಿಜ್ಞಾನ 96, ಸಮಾಜ 100 ಒಟ್ಟು 621 ಅಂಕಗಳನ್ನು ಪಡೆದುಕೊಂಡಿದ್ದಾಳೆ. A+ ಗ್ರೇಡಿನಲ್ಲಿ 49, A ಗ್ರೇಡಿನಲ್ಲಿ 102, B+ ಗ್ರೇಡಿನಲ್ಲಿ 62, B ಗ್ರೇಡಿನಲ್ಲಿ 50, C+ ಗ್ರೇಡಿನಲ್ಲಿ 18, C ಗ್ರೇಡಿನಲ್ಲಿ 6 ಮಕ್ಕಳು ಉತ್ತೀರ್ಣರಾಗಿ ಶಾಲೆಗೆ 100ಕ್ಕೆ 100 ಫಲಿತಾಂಶ ನೀಡಿದ್ದಾರೆ. ಕನ್ನಡದಲ್ಲಿ 6, ಇಂಗ್ಲೀಷ್‌ನಲ್ಲಿ 1, ಹಿಂದಿಯಲ್ಲಿ 31, ಗಣಿತದಲ್ಲಿ 1, ಸಮಾಜ ವಿಜ್ಞಾನದಲ್ಲಿ 5 ಮಕ್ಕಳು ಒಟ್ಟು 42 ಮಕ್ಕಳು ವಿವಿಧ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.




ಶ್ರೀ. ವಿ. ಮಠದ್‌ 621, ರಚನಾ ಯು. 616, ಶ್ರೇಯಾ ಎಸ್.‌ ಎಮ್‌. 608, ಮೊಹಮ್ಮದ್‌ ರಯಾನ್‌ ರಜಾ 606, ಆಶಾ ಟಿ. ಹೆಚ್.. 603 ಮತ್ತು ಬಿಬಿ ಜೈನಾಬ್‌ 601 ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಅತ್ತುತ್ಯಮ ಫಲಿತಾಂಶ ನೀಡಿದ ಎಲ್ಲ ಮಕ್ಕಳಿಗೆ ಮತ್ತು ಬೋಧಕ ವರ್ಗದವರಿಗೆ ಮುಖ್ಯ ಶಿಕ್ಷಕಿ ರೇಖಾರಾಣಿ. ಕೆ. ಎಸ್.‌, ಸಂಸ್ಥೆಯ ಅಧ್ಯಕ್ಷರಾದ ಪ್ರಶಾಂತ್‌, ಕಾರ್ಯದರ್ಶಿ ಹೇಮಂತ್‌, ನಿರ್ದೇಶಕರಾದ ಡಾ|| ಜಯಂತ್‌ ಮತ್ತು ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿʼಸೌಜ ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.




Wednesday, April 15, 2026

10ನೇ ತರಗತಿ ಸಿ.ಬಿ.ಎಸ್.ಇ. ಸಿದ್ಧಗಂಗಾ ಶಾಲೆಗೆ ಶೇಕಡ 100 ಫಲಿತಾಂಶ



2025-26ನೇ ಸಾಲಿನ 10ನೇ ತರಗತಿ ಕೇಂದ್ರ ಪಠ್ಯಕ್ರಮದ ಫಲಿತಾಂಶ ಪ್ರಕಟವಾಗಿದ್ದು ನಗರದ ಶ್ರೀ ಸಿದ್ಧಗಂಗಾ ಸಿ.ಬಿ.ಎಸ್.‌ಇ. ಶಾಲೆ ಶೇಕಡ 100 ಫಲಿತಾಂಶ ಪಡೆದಿದೆ. ಪ್ರೇಕ್ಷಾ ಪಿ. ರಾಮಘಟ್‌ ಶೇಕಡ 95.60 ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಇಂಗ್ಲೀಷ್‌ 94, ಕನ್ನಡ 95, ಗಣಿತ 96, ವಿಜ್ಞಾನ 97, ಸಮಾಜ 96 ಒಟ್ಟು 478 ಅಂಕಗಳನ್ನು ಪಡೆದಿದ್ದಾಳೆ. ಬಾಲಕಿ ಪ್ರಕಾಶ್‌ ಆರ್. ಮತ್ತು ವೇದಾವತಿ ಆರ್.‌ ಶಿಕ್ಷಕ ದಂಪತಿಗಳ ಪುತ್ರಿಯಾಗಿದ್ದಾಳೆ. ಮುಹಮ್ಮದ್‌ ಫರ್‌ಹಾನ್‌ ಆರ್.ಎನ್.‌ 95.4%, ಸಂಪ್ರೀತ್‌ ಡಿ ಬೈರಡಿಗಿ 94.4%, ಚಿನ್ಮಯಿ ಎಸ್.ಎಲ್.‌ 94%, ನೀರಜ್‌ ಕೆ.ಟಿ. 93.4%, ಸುಚಿತ್‌ ಎ. 92.6%, ಪದ್ಮ ಸಿ.ಆರ್.‌ 91.6%, ಪರ್ಣಿಕಾ ಎಸ್.‌ 91.6%, ಲಕ್ಷ್ಮೀಸಾಗರ್‌ ಎ.ವಿ. 90.8%, ಶಾಶ್ವತ್.‌ ಎಲ್‌.ಎ. 90.2%, ಸಾನ್ವಿ ಜಿ.ಬಿ. 90% ಪಡೆದಿದ್ದಾರೆ. 90%ಗಿಂತ ಅಧಿಕ ಅಂಕಗಳಿಸಿದವರು 12 ಮಕ್ಕಳು, 85%ಗಿಂತ ಹೆಚ್ಚು ಅಂಕಗಳನ್ನು ಗಳಿಸಿದವರ ಸಂಖ್ಯೆ 15, 60%ಗಿಂತ ಹೆಚ್ಚು ಅಂಕಗಳನ್ನು ಗಳಿಸಿದವರು 97 ಹಾಗೂ 50%ಗಿಂತ ಹೆಚ್ಚು ಪಡೆದವರು 8 ಮಕ್ಕಳಿದ್ದಾರೆ. ದ್ವಿತೀಯ ಸ್ಥಾನ ಪಡೆದ ಮುಹಮ್ಮದ್‌ ಫರ್‌ಹಾನ್‌ ಆರ್.ಎನ್. ಇಂಗ್ಲೀಷ್‌ನಲ್ಲಿ 99, ಚಿನ್ಮಯಿ ಎಸ್.‌ಎಲ್‌ ಗಣಿತದಲ್ಲಿ 99, ನೀರಜ್.‌ ಕೆ.ಟಿ. ಕನ್ನಡದಲ್ಲಿ 99, ಪದ್ಮ ಸಿ.ಆರ್.‌ ಕನ್ನಡದಲ್ಲಿ 99 ಮತ್ತು ಪರ್ಣಿಕ ಎಸ್.‌ ಕನ್ನಡದಲ್ಲಿ 99 ಪಡೆದು ದಾಖಲೆ ಸ್ಥಾಪಿಸಿದ್ದಾರೆ. 100ಕ್ಕೆ 100 ಫಲಿತಾಂಶ ನೀಡಿರುವ ಮಕ್ಕಳನ್ನು ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿʼಸೌಜ, ಪ್ರಾಚಾರ್ಯರಾದ ಗಾಯತ್ರಿ ಚಿಮ್ಮಡ್‌, ಅಧ್ಯಕ್ಷರಾದ ಪ್ರಶಾಂತ್‌, ನಿರ್ದೇಶಕರಾದ ಜಯಂತ್, ಕಾರ್ಯದರ್ಶಿ ಹೇಮಂತ್‌, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.



Thursday, April 9, 2026

ಸಿದ್ಧಗಂಗಾ ಪದವಿಪೂರ್ವ ಕಾಲೇಜಿನ ರಶ್ಮಿ ಹೆಚ್.‌ ಎಸ್.‌ಗೆ 600ಕ್ಕೆ 591



2025-26ನೇ ಸಾಲಿನ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ನಗರದ ಶ್ರೀ ಸಿದ್ಧಗಂಗಾ ಪದವಿ ಪೂರ್ವ ವಿಜ್ಞಾನ ಕಾಲೇಜಿನ ರಶ್ಮಿ ಹೆಚ್.‌ ಎಸ್.‌ 600ಕ್ಕೆ 591 ಅಂಕಗಳನ್ನು ಗಳಿಸಿ ಶೇಕಡವಾರು 98.5% ಪಡೆದಿದ್ದಾರೆ. ಬಾಲಕಿ ಸುರೇಶ್‌ ಹೆಚ್.‌ ಎಸ್.‌ ಮತ್ತು ಜ್ಯೋತಿ ಎನ್.‌ ಎಂ. ದಂಪತಿಗಳ ಪುತ್ರಿ. ಕನ್ನಡ 99, ಆಂಗ್ಲ 97, ಭೌತಶಾಸ್ತ್ರ 100, ರಸಾಯನಶಾಸ್ತ್ರ 98 ಗಣಿತ 100 ಮತ್ತು ಜೀವಶಾಸ್ತ್ರ 97 ಅಂಕಗಳನ್ನು ಗಳಿಸಿದ್ದಾಳೆ. ಪ್ರಣವ್‌ ದಿಗ್ಗಾವಿ 587, ಚಂದನ ಎನ್.‌ 587 ದೀಪಾ ಬಿ.ಜೆ. 584, ಸರ್ವಮಂಗಳ 584, ಸಾತ್ವಿಕ್‌ ನಾಗಸಾಯಿ 584, ಸ್ಪೂರ್ತಿ ಪಿ.ಆರ್. 584 ಅಂಕಗಳನ್ನು ಪಡೆದಿದ್ದಾರೆ. 



381 ಮಕ್ಕಳು ಅತ್ಯುನ್ನತ ಶ್ರೇಣಿ, 244 ಮಕ್ಕಳು ಪ್ರಥಮ ದರ್ಜೆ ಮತ್ತು 7 ಮಕ್ಕಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕನ್ನಡದಲ್ಲಿ 18, ಭೌತಶಾಸ್ತ್ರದಲ್ಲಿ 9, ಗಣಿತಶಾಸ್ತ್ರದಲ್ಲಿ 36, ಜೀವಶಾಸ್ತ್ರದಲ್ಲಿ 4, ಕಂಪ್ಯೂಟರ್‌ ಸೈನ್ಸ್‌ನಲ್ಲಿ 8 ಮಕ್ಕಳು ಒಟ್ಟು 75 ಮಕ್ಕಳು ವಿವಿಧ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ. ಅತ್ಯುತ್ತಮ ಫಲಿತಾಂಶ ನೀಡಿರುವ ಎಲ್ಲ ಮಕ್ಕಳನ್ನು ಕಾಲೇಜಿನ ಪ್ರಾಚಾರ್ಯರಾದ ವಾಣಿಶ್ರೀ ಮತ್ತು ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು, ಆಡಳಿತ ಮಂಡಳಿಯ ಪ್ರಶಾಂತ್‌ ಡಿ.ಎಸ್.‌, ಕಾರ್ಯದರ್ಶಿ ಹೇಮಂತ್‌ ಡಿ.ಎಸ್.‌, ಡಾ|| ಜಯಂತ್‌ ಡಿ.ಎಸ್.‌ ಮತ್ತು ಮುಖ್ಯಸ್ಥೆ ಜಸ್ಟಿನ್‌ ಡಿʼಸೌಜ ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.



Sunday, April 5, 2026

ಅಭೂತಪೂರ್ವ ಯಶಸ್ಸು ಕಂಡ ರಾಜ್ಯಮಟ್ಟದ ಎಂ.ಎಸ್.ಎಸ್.‌ ಕ್ವಿಜ್‌

ದಾವಣಗೆರೆ, ಏ.5 

ನಗರದ ಶ್ರೀ ಸಿದ್ಧಗಂಗಾ ಸಂಸ್ಥೆಯಲ್ಲಿ ಏರ್ಪಡಿಸಿದ ರಾಜ್ಯಮಟ್ಟದ ಪ್ರತಿಷ್ಠಿತ ಎಂ.ಎಸ್.‌ಎಸ್.‌ ಕ್ವಿಜ್‌ಗೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಮಕ್ಕಳ ಮಹಾಪೂರ ಹರಿದು ಬಂದು ಅಭೂತಪೂರ್ವ ಯಶಸ್ಸು ಕಂಡಿತು. ಬೀದರ್‌ನಿಂದ ಚಾಮರಾಜನಗರದವರೆಗಿನ ಸುಮಾರು 8 ಸಾವಿರ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಆಗಮಿಸಿದ್ದರು. 10ನೇ ತರಗತಿ ಪರೀಕ್ಷೆ ಬರೆದ ಮಕ್ಕಳಿಗಾಗಿ ಪರೀಕ್ಷೆ ಮುಗಿದ ನಂತರ ಪ್ರತೀ ವರ್ಷ ಏರ್ಪಡಿಸುವ ಈ ಲಿಖಿತ ಕ್ವಿಜ್‌ ಎರಡು ಹಂತಗಳಲ್ಲಿ ನಡೆಯಿತು. ಬೆಳಿಗ್ಗೆ 11:00 ರಿಂದ 12:30 ಮತ್ತು ಮಧ್ಯಾಹ್ನ 02:00 ರಿಂದ 03:30 ರವರೆಗೆ ಅತ್ಯಂತ ವ್ಯವಸ್ಥಿತವಾಗಿ ನಡೆದ ಈ ಕ್ವಿಜ್‌ ಕಾರ್ಯಕ್ರಮ ಎಲ್ಲರ ಮೆಚ್ಚುಗೆ ಪಡೆಯಿತು. ಸಿದ್ಧಗಂಗಾ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಶಿಕ್ಷಣ ಶಿಲ್ಪಿ ಡಾ|| ಎಂ.ಎಸ್.‌ ಶಿವಣ್ಣನವರ ಗೌರವಾರ್ಥ ಕಳೆದ 12 ವರ್ಷಗಳಿಂದ ಏರ್ಪಡಿಸುತ್ತಾ ಬಂದಿರುವ ಈ ಲಿಖಿತ ಕ್ವಿಜ್‌ನಲ್ಲಿ ಪ್ರಥಮ ಬಹುಮಾನವಾಗಿ 50 ಸಾವಿರ, ದ್ವಿತೀಯ ಬಹುಮಾನ 25 ಸಾವಿರ, ತೃತೀಯ ಬಹುಮಾನ 10 ಸಾವಿರ ಮತ್ತು ತಲಾ 1 ಸಾವಿರದಂತೆ 10 ಸಮಾಧಾನಕರ ಬಹುಮಾನ ಪಡೆಯುವರು. ಜೊತೆಗೆ ಪದವಿಪೂರ್ವ ವಿಜ್ಞಾನದ 2 ವರ್ಷಗಳ ಶಿಕ್ಷಣ ಉಚಿತವಾಗಿ ಪಡೆಯುವರು. ಇದಲ್ಲದೆ ಹೆಚ್ಚು ಅಂಕಗಳಿಸಿದ 100 ಮಕ್ಕಳಿಗೂ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಆಗಮಿಸಿದ 10 ಸಹಸ್ರಕ್ಕೂ ಹೆಚ್ಚು ಮಕ್ಕಳಿಗೆ, ಪಾಲಕರಿಗೆ ಮತ್ತು ಶಿಕ್ಷಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿʼಸೌಜ, ಅಧ್ಯಕ್ಷರಾದ ಪ್ರಶಾಂತ್.‌ ಡಿ.ಎಸ್.‌, ಕಾರ್ಯದರ್ಶಿ ಹೇಮಂತ್‌. ಡಿ.ಎಸ್.‌, ನಿರ್ದೇಶಕರಾದ ಡಾ|| ಜಯಂತ್‌. ಡಿ.ಎಸ್.‌ ಮತ್ತು ಡಾ|| ಪ್ರಿತೀಶ್‌ ಹಾಗೂ ಶಾಲಾ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮವನ್ನು ಅತ್ಯಂತ ಶಿಸ್ತಿನಿಂದ ಯಶಸ್ವಿಯಾಗಿ ನಿರ್ವಹಿಸಿದರು. 





94 ಕೊಠಡಿಗಳಲ್ಲಿ 188 ಸಿಬ್ಬಂದಿ ವರ್ಗದ ನೆರವಿನೊಂದಿಗೆ 600 ವಿದ್ಯಾರ್ಥಿಗಳ ಸ್ವಯಂಸೇವೆಯಿಂದ ವ್ಯವಸ್ಥೆಯಲ್ಲಿ ಕಿಂಚಿತ್ತೂ ಲೋಪವಾಗದಂತೆ ಬೆಳಿಗ್ಗೆ 07 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ಈ ಐತಿಹಾಸಿಕ ಕಾರ್ಯಕ್ರಮ ನೆರವೇರಿತು. ಆಗಮಿಸಿದ ಎಲ್ಲ ವಿದ್ಯಾರ್ಥಿಗಳಿಗೆ 80 ಟ್ಯಾಬ್‌ಗಳ ಮೂಲಕ ಎಂ.ಎಸ್.ಎಸ್.‌ ಕ್ವಿಜ್‌ ಪ್ರವೇಶ ಪತ್ರ ವಿತರಿಸಿ, ಸಂಬಂಧಪಟ್ಟ ಕೊಠಡಿಗಳಿಗೆ ಹಾಲಿ ಪಿ.ಯು.ಸಿ. ಓದುತ್ತಿರುವ ವಿದ್ಯಾರ್ಥಿಗಳು ಮಾರ್ಗದರ್ಶನ ನೀಡಿದರು. ದೂರದೂರಿನಿಂದ ಆಗಮಿಸಿದವರಿಗೆ ಬಸ್‌ ನಿಲ್ದಾಣ ಮತ್ತು ರೇಲ್ವೇ ಸ್ಟೇಷನ್‌ನಿಂದ ಸಂಸ್ಥೆಯವರೆಗೆ ಶಾಲಾ ಬಸ್‌ಗಳಲ್ಲಿ ಕರೆತರಲು ವ್ಯವಸ್ಥೆ ಮಾಡಲಾಗಿತ್ತು. ಸಂಸ್ಥೆಯ ಅಧ್ಯಕ್ಷರಾದ ಪ್ರಶಾಂತ್ ರವರ ತಾಂತ್ರಿಕ ನಿಪುಣತೆಯಿಂದಾಗಿ ಅಗಾಧ ಸಂಖ್ಯೆಯಲ್ಲಿ ಆಗಮಿಸಿದ ವಿದ್ಯಾರ್ಥಿಗಳ ನೊಂದಣಿಗೆ ಯಾವ ಹಂತದಲ್ಲೂ ತೊಡಕಾಗಲಿಲ್ಲ. ಡಾ|| ಜಯಂತ್‌ರವರು ಎಂ.ಎಸ್.‌ಎಸ್.‌ ಕ್ವಿಜ್‌ ಮತ್ತು ಎಂ.ಎಸ್.‌ಎಸ್.‌ ಸ್ಕಾಲರ್‌ಶಿಪ್‌ ಬಗ್ಗೆ ಮಾಹಿತಿ ನೀಡಿದರು. ಡಾ|| ಪ್ರೀತಿಶ್‌, ಮನೋಹರ್‌ ನೂಜಾಡಿ, ಹರ್ಷ ಸಿ. ಗುಂಟನೂರು, ಜರೀನ್‌ ತಾಜ್ ಎಂ.ಡಿ., ವಿಜಯಶ್ರೀ ಬಿ.ಸಿ. ಮತ್ತು ಕವಿತಾ ಹೆಚ್‌. ಇವರು ಪ್ರಶ್ನೆ ಪತ್ರಿಕೆ ನಿರ್ವಹಣೆ ಮತ್ತು ವಿತರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಕಾರ್ಯದರ್ಶಿ ಹೇಮಂತ್‌ರವರು ಹಿರಿಯ ವಿದ್ಯಾರ್ಥಿಗಳ ಮತ್ತು ಸ್ನೇಹಿತರ ಸಹಕಾರದಿಂದ ಹಾಗೂ ಶಾಲೆಯ ಗಣಕಯಂತ್ರದ ತಜ್ಞ ತಂಡದವರ ಅವಿರತ ಶ್ರಮ ಮೇಳೈಸಿ ಕ್ವಿಜ್‌ ಕಾರ್ಯಕ್ರಮ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್‌ ಡಿʼಸೌಜ ಸಹಕರಿಸಿದ ಎಲ್ಲರನ್ನೂ ವಂದಿಸಿದರು.