ಮನುಷ್ಯ ಇತರ ಎಲ್ಲಾ ಪ್ರಾಣಿಗಳಿಗಿಂತ ಭಿನ್ನವಾಗಲು ಅವನ ಮೆದುಳೇ ಕಾರಣ, ಹತ್ತಾರು ಟನ್ ಭಾರವಿರುವ ಬ್ಲೂವೆಲ್, ನೂರಾರು ಟನ್ ಭಾರವಿರುವ ಆನೆಗಳ ಮೆದುಳಿಗಿಂತ ಕೇವಲ ಕೆಲವೇ ಕೇಜಿಗಳಲ್ಲಿ ತೂಗುವ ಮಾನವನ ಮೆದುಳಿನ ತೂಕ ಅವುಗಳಿಗಿಂತ ಹೆಚ್ಚು. ನಾವು ಈ ತೂಕವನ್ನು ಭಾರದಲ್ಲಿ ಲೆಕ್ಕ ಹಾಕದೆ ಮೌಲ್ಯದಿಂದ ಲೆಕ್ಕ ಹಾಕಿದಾಗ ಮನುಷ್ಯನ ವಿಕಾಸದ ಹಾದಿ ತಿಳಿಯುತ್ತದೆ ಎಂದು ಪದ್ಮಶ್ರೀ ಡಾಕ್ಟರ್ ಸಿ .ಆರ್ .ಚಂದ್ರಶೇಖರ್ ಹೇಳಿದರು, ಅವರು ಇಲ್ಲಿನ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ 55ನೇ ವಾರ್ಷಿಕೋತ್ಸವದ ಅಂಗವಾಗಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸುತ್ತಾ ಮನುಷ್ಯನ ಮನಸ್ಸು ಮತ್ತು ಮೆದುಳು ಸಕ್ರಿಯವಾಗಿ ಕಾರ್ಯನಿರ್ವಹಿಸಿದನರೆ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ, ವಿದ್ಯಾರ್ಥಿಗಳು ಇಂದಿನ ಶೈಕ್ಷಣಿಕ ಸವಾಲುಗಳನ್ನು ಸಮಸ್ಯೆಗಳಾಗಿ ಮಾಡಿಕೊಳ್ಳದೆ ನಿರ್ಮಲ ಹಾಗೂ ಸಮಾಧಾನ ಚಿತ್ರದಿಂದ ಚಟುವಟಿಕೆಗಳಲ್ಲಿ ಭಾಗವಹಿಸಿ ಯಶಸ್ಸು ಗಳಿಸಲು ಕರೆ ನೀಡಿದರು ಎರಡು ಗಂಟೆಗೂ ಹೆಚ್ಚು ಸಮಯ ಮಕ್ಕಳ ಅನೇಕ ಪ್ರಶ್ನೆಗಳಿಗೆ ಲವಲವಿಕೆಯಿಂದ ಉತ್ತರಿಸಿದ ಮಾನಸಿಕ ಆರೋಗ್ಯ ತಜ್ಞ ಡಾಕ್ಟರ್ ಸಿಆರ್ ಚಂದ್ರಶೇಖರ್ ಸಂಜೆ ಶ್ರೀ ಸಿದ್ದಗಂಗಾ ವಿದ್ಯಾ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
No comments:
Post a Comment