ಡಿಸೆಂಬರ್ 26 ರಂದು ದ್ವಿತೀಯ ದಿನದ ಕಾರ್ಯಕ್ರಮವನ್ನು ಉಡುಪಿಯ ಡಾ ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆಯ ಖ್ಯಾತ ಮನ: ಶಾಸ್ತ್ರಜ್ಞರಾದ ಹಾಗೂ ಪ್ರಸಿದ್ಧ ವೈದ್ಯ ಲೇಖಕರಾದ ಡಾ|| ವಿರೂಪಾಕ್ಷ ದೇವರಮನೆಯವರು ಉದ್ಘಾಟಿಸುವರು. 2023-24 ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ 400 ವಿದ್ಯಾರ್ಥಿಗಳಲ್ಲಿ 132 ವಿದ್ಯಾರ್ಥಿಗಳನ್ನು “ಸಿದ್ಧಗಂಗಾ ಪ್ರತಿಭಾ ಪುರಸ್ಕಾರ” ನೀಡಿ ಸನ್ಮಾನಿಸಲಾಗುವುದು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿವಿಧ ತರಗತಿಗಳ ಮಕ್ಕಳು ಪ್ರದರ್ಶಿಸುವರು.
ಮೂರನೇ ದಿನದ ಕಾರ್ಯಕ್ರಮ ಡಿಸೆಂಬರ್ 27ರಂದು ಸಂಜೆ 5.30ಕ್ಕೆ ದಾವಣಗೆರೆ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ|| ಸುರೇಶ್ ಬಿ. ಇಟ್ನಾಳ್ ಐ.ಎ.ಎಸ್ ಇವರು ಉದ್ಘಾಟಿಸುವರು. ದ್ವಿತೀಯ ಪಿಯುಸಿಯ 136 ಮಕ್ಕಳಿಗೆ ಪ್ರತಿಭಾ ಪುರಸ್ಕಾರಗಳನ್ನು ಪ್ರದಾನ ಮಾಡಲಾಗುತ್ತದೆ. ಮಕ್ಕಳಿಂದ ಸುಂದರ ನೃತ್ಯಗಳ ಪ್ರದರ್ಶನವಿರುತ್ತದೆ. ಡಿಸೆಂಬರ್ 28ರ ನಾಲ್ಕನೇ ದಿನದ ಕಾರ್ಯಕ್ರಮವನ್ನು ಸಂಜೆ 5.30 ಕ್ಕೆ ಸಿದ್ಧಗಂಗಾ ವಿದ್ಯಾಸಂಸ್ಥೆಯ ನಿರ್ದೇಶಕರೂ ಎಂ.ಎಸ್.ಎಸ್ ಸೂಪರ್ ಬ್ರೈನ್ ಸೆಂಟರ್‌ನ ಅಧ್ಯಕ್ಷರೂ ಆದ ಡಾ|| ಡಿ. ಎಸ್ ಜಯಂತ್ ರವರು ಉದ್ಘಾಟಿಸುವರು. ದ್ವಿತೀಯ ಪಿಯುಸಿಯ 136 ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಹಾಗೂ ವೈವಿಧ್ಯಮಯ ನೃತ್ಯಗಳು ಪ್ರದರ್ಶನಗೊಳ್ಳುತ್ತವೆ. ವಾರ್ಷಿಕ ಸಂಭ್ರಮದ ಹಿನ್ನಲೆಯಲ್ಲಿ ಮಕ್ಕಳು ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾಗಿ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ಪಡೆದಿದ್ದಾರೆ. ಭರತನಾಟ್ಯ, ಜನಪದ, ದೇಶಭಕ್ತಿ, ಪರಿಸರ, ಪ್ರಕೃತಿ, ಭಕ್ತಿಗೀತೆ, ಭಾವಗೀತೆ,ಸಾಮಾಜಿಕ ಜಾಗೃತಿ, ಯೋಗ ಹೀಗೆ ಹಲವಾರು ವಿಷಯಗಳನ್ನೊಳಗೊಂಡಂತೆ ನಾಲ್ಕು ದಿನಗಳಲ್ಲಿ ನೂರಕ್ಕೂ ಹೆಚ್ಚುಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧಗೊಂಡಿದ್ದಾರೆ.ಪಾಲಕರಿಗೆ, ಹಿರಿಯ ವಿದ್ಯಾರ್ಥಿಗಳಿಗೆ ಮತ್ತು ತಮ್ಮೆಲ್ಲರಿಗೆ ಆತ್ಮೀಯ ಸ್ವಾಗತ ಕೋರುತ್ತಿದ್ದಾರೆ.ಪ್ರತಿದಿನದ ಕಾರ್ಯಕ್ರಮದಲ್ಲಿ ಶಾಲಾ ಕಾಲೇಜಿನ ಬೋಧಕ ವರ್ಗದವರು ಮುಖ್ಯ ಅತಿಥಿಗಳಾಗಿರುತ್ತಾರೆ. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ ಸೌಜ, ಕಾರ್ಯದರ್ಶಿ D S ಹೇಮಂತ್, ನಿರ್ದೇಶಕ ಡಾ|| ಜಯಂತ್,ಕಾಲೇಜಿನ ಪ್ರಾಚಾರ್ಯರಾದ ವಾಣಿಶ್ರೀ, ಸಿ ಬಿ ಎಸ್ ಇ ಪ್ರಾಚಾರ್ಯ ಗಾಯತ್ರಿ ಚಿಮ್ಮಡ್, ಪ್ರೌಢಶಾಲೆಯ ಮುಖ್ಯಶಿಕ್ಷಕಿ K S ರೇಖಾ ರಾಣಿ, ಮತ್ತಿತರರು ಹಾಜರಿರುತ್ತಾರೆ.
No comments:
Post a Comment