ದಾವಣಗೆರೆ, ಪೆ.13
ಬಾಲ್ಯದಿಂದಲೂ ಕುತೂಹಲ, ವಿಜ್ಞಾನದಲ್ಲಿ ಆಸಕ್ತಿ, ಇಸ್ರೋದೊಡನೆ ನಿರಂತರ ಸಂಪರ್ಕದ ಪ್ರತಿಫಲವಾಗಿ ನಗರದ ಸಿದ್ಧಗಂಗಾ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ದೀಪಕ್ ಜಿ.ಕೆ ಜನವರಿ 3 ರಂದು ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ “ಜೂನಿಯರ್ ಸೈಂಟಿಸ್ಟ್ ಪ್ರಶಸ್ತಿ” ಪಡೆದಿದ್ದಾನೆ. 6ನೇ ತರಗತಿಯಲ್ಲಿದ್ದಾಗ ಭಾರತದ ಬಾಹ್ಯಾಕಾಶ ಸಂಶೋಧನಾ ಕೇಂದ್ರದವರು ನಡೆಸಿದ “ಪ್ಯೂರಿಫೈ ದ ಅರ್ಥ್” ಸ್ಪರ್ಧೆಯಲ್ಲಿ ದೀಪಕ್ ಭಾಗವಹಿಸಿ ಸಮಾಧಾನಕರ ಬಹುಮಾನ ಪಡೆದನು. ಇಸ್ರೋದ ಕಾರ್ಯನಿರ್ವಾಹಕ ಅಧಿಕಾರಿ ಸರ್ ಕೌಸ್ತುಬ್ ರವರ ಪರಿಚಯ ಮತ್ತು ಮಾರ್ಗದರ್ಶನದಿಂದ “ಗ್ರಿಪ್ಪರ್ ಎಕ್ಸ್ ಪ್ಲೊರೇಷನ್” ಕಂಡು ಹಿಡಿದಿದ್ದಾರೆ.
ರಾಕೆಟ್ ಉಡಾವಣೆಯಲ್ಲಿ ಪ್ರಮುಖ ಪಾತ್ರ ಲ್ಯಾಂಡರ್ ಎಂದರಿತ ಬಾಲಕ ದೀಪಕ್ “ಲ್ಯಾಂಡರ್ ಗ್ರಿಪ್ಪರ್” ಮೇಲೆ ತನ್ನ ಅಧ್ಯಯನ ಕೇಂದ್ರೀಕರಿಸಿ ಸಂಶೋಧನೆ ಪ್ರಾರಂಭಿಸಿದನು. ಗ್ರಿಪ್ಪರ್ ಜೊತೆ ಸೆನ್ಸಾರ್ ಜೋಡಿಸಿದಾಗ ಅದು ವಿಫಲವಾಗಿದ್ದನ್ನು ಕಂಡು ಗ್ರಿಪ್ಪರ್ ಜೊತೆ “ಬ್ಲೂಟೂತ್ ಮೆಮೊರಿ ಸ್ಪೆನ್ಸರ್” ಉಪಯೋಗಿಸಿದಾಗ “ಲ್ಯಾಂಡರ್ ಗ್ರಿಪ್ಪರ್” ಸಫಲವಾಯಿತು. ಈ ಪ್ರಯತ್ನವನ್ನು ಇಸ್ರೋಗೆ ಅಂತರ್ಜಾಲದಲ್ಲಿ ಕಳಿಸಿಕೊಟ್ಟಾಗ ಇಸ್ರೋ ಮುಖ್ಯಸ್ಥರು ಒಪ್ಪಿಗೆ ಸೂಚಿಸಿ ಲ್ಯಾಂಡರ್ ಗ್ರಿಪ್ಪರ್ ಮಾದರಿ ಮಾಡಲು ಸೂಚಿಸಿದರು. ಈ ಸಂಶೋಧನೆಯನ್ನು 23 ದಿನಗಳ ಕಾಲ ಪರಿಶೀಲಿಸಿ ಅಂತಿಮವಾಗಿ ಜನವರಿ 25ರಂದು “ಜೂನಿಯರ್ ಸೈಂಟಿಸ್ಟ್” ಪ್ರಶಸ್ತಿ ನೀಡಿ ಪುರಸ್ಕರಿಸಿದ್ದಾರೆ. ಕೆ ಎಸ್ ಆರ್ ಟಿಸಿ ಯಲ್ಲಿ ಕಂಡೆಕ್ಟರ್ ದಂಪತಿಗಳಾದ ಗಂಗಾಧರ ಮತ್ತು ರಾಜೇಶ್ವರಿಯವರ ಸುಪುತ್ರ ದೀಪಕ್ ಜಿ.ಕೆ ಪಾಲಕರಿಗೆ, ಶಾಲೆಗೆ ಮತ್ತು ದಾವಣಗೆರೆ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿವರ್ಗದವರು ಬಾಲಕನ ಪ್ರತಿಭೆಗೆ ಅಭಿನಂದಿಸಿದ್ದಾರೆ.
No comments:
Post a Comment