ದಾವಣಗೆರೆ ಜ 9
ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಪ್ರತಿವರ್ಷ ಸಾಂಸ್ಕೃತಿಕ ಸ್ಪರ್ಧೆಗಳನ್ನು ತಾಲ್ಲೂಕು, ಜಿಲ್ಲಾ, ವಿಭಾಗೀಯ ಮತ್ತು ರಾಜ್ಯಮಟ್ಟದಲ್ಲಿ ಏರ್ಪಡಿಸಲಾಗುತ್ತದೆ. ವಿವಿಧ ಸ್ಪರ್ಧೆಗಳಲ್ಲಿ ಪದವಿಪೂರ್ವ ಕಾಲೇಜಿನ ಮಕ್ಕಳು ಭಾಗವಹಿಸುತ್ತಾರೆ. ಈ ವರ್ಷ ರಾಜ್ಯಮಟ್ಟದ ಸ್ಪರ್ಧೆಗಳನ್ನು ತುಮಕೂರಿನ ಎಂಪ್ರೆಸ್ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ರಸ ಪ್ರಶ್ನೆ ವಿಭಾಗದಲ್ಲಿ ದಾವಣಗೆರೆಯ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಅಜಯ್ ಕುಮಾರ್ ಆರ್ ಮತ್ತು ರವಿಕುಮಾರ್ ಎನ್ ಪ್ರಥಮ ಸ್ಧಾನಗಳಿಸಿ ಕಾಲೇಜಿಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈ ಈರ್ವರು ಬಾಲಕರ ಅಪ್ರತಿಮ ಸಾಧನೆಯನ್ನು ಕಾಲೇಜಿನ ಪ್ರಾಚಾರ್ಯೆ ವಾಣಿಶ್ರೀ ಮತ್ತು ಬೋಧಕವರ್ಗದವರು ಶ್ಲಾಘಿಸಿ ಅಭಿನಂದಿಸಿದ್ದಾರೆ. ಈ ಬಾಲಕರು ಇವರು ಪ್ರಶಸ್ತಿ ಪತ್ರದ ಜೊತಗೆ ತಲಾ 12 ಸಾವಿರ ನಗದು ಬಹುಮಾನ ಪಡೆದಿದ್ದಾರೆ. ಅಜಯ್ ಕುಮಾರ್ ಮತ್ತು ರವಿಕುಮಾರ್ ಅವರನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ|| ಜಯಂತ್ ಕಾರ್ಯದರ್ಶಿ, ಹೇಮಂತ್ ಹಾಗೂ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜರವರು ಅಭಿನಂದಿಸಿ, ತಮ್ಮ ಕಾಲೇಜಿನ ವಿದ್ಯಾರ್ಥಿಗಳ ಈ ಹೆಮ್ಮೆಯ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
No comments:
Post a Comment