ದಾವಣಗೆರೆ, ಜ. 21
ತುಮಕೂರಿನ ಶ್ರೀ ಸಿದ್ಧಗಂಗಾ ಮಠಾಧ್ಯಕ್ಷರೂ, ತ್ರಿವಿಧ ದಾಸೋಹಿಗಳೂ,ನಡೆದಾಡುವ ದೇವರೆಂದೇ ಎಲ್ಲರ ಮನಸ್ಸಿನಲ್ಲಿ ನೆಲೆ ನಿಂತಿರುವ ಮಹಾ ತಪಸ್ವಿ ಪರಮಪೂಜ್ಯ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 6ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನು ದಾವಣಗೆರೆಯ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಭಕ್ತಿ ಗೀತೆಗಳ ಹಿನ್ನಲೆಯಲ್ಲಿ ಮಕ್ಕಳು ಶ್ರೀಗಳವರ ಭಾವಚಿತ್ರಕ್ಕೆ ಮತ್ತು ಪಾದುಕೆಗಳಿಗೆ ನಮಿಸಿ ಬಿಲ್ಪತ್ರೆಗಳನ್ನು ಸಮರ್ಪಿಸಿದರು. ಸಂಸ್ಥೆಯ ಕಾರ್ಯದರ್ಶಿ ಡಿ.ಎಸ್. ಹೇಮಂತïರವರ ನೇತೃತ್ವದಲ್ಲಿ ಎಲ್ಲ ಮಕ್ಕಳಿಗೆ ಫಲಹಾರದ ವ್ಯವಸ್ಥೆ ಏರ್ಪಡಿಸಲಾಗಿತ್ತು. ಶಾಲಾ-ಕಾಲೇಜಿನ ಸಿಬ್ಬಂದಿ ವರ್ಗದವರು, ಪ್ರಿಕೆಜಿಯಿಂದ ದ್ವಿತೀಯ ಪಿಯುಸಿವರೆಗಿನ ಆರು ಸಾವಿರ ಮಕ್ಕಳು ಮತ್ತು ಅನೇಕ ಪಾಲಕರು ಇಂದಿನ ದಾಸೋಹ ದಿನಾಚರಣೆಯಲ್ಲಿ ಭಾಗವಹಿಸಿ ತಮ್ಮ ಭಕ್ತಿ ಸಮರ್ಪಣೆ ಮಾಡಿದರು. ಸ್ವಾಮಿಜಿಯವರ ಸೇವಾದೀಕ್ಷೆ ಬಗ್ಗೆ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿʼಸೌಜರವರು ಮಕ್ಕಳಿಗೆ ತಿಳಿಸಿಕೊಟ್ಟರು. ಸಂಸ್ಥೆಯ ಸಂಸ್ಥಾಪಕರಾದ ಶಿವಣ್ಣನವರು ಗುರುಗಳ ಬಗ್ಗೆ ಹೊಂದಿದ್ದ ಅನನ್ಯ ಭಕ್ತಿಭಾವವನ್ನು ವಿವರಿಸಿದರು.
No comments:
Post a Comment