Tuesday, April 16, 2019

II PU Result - ದ್ವಿತೀಯ ಪಿ ಯು ಫಲಿತಾಂಶ

ದ್ವಿತೀಯ ಪಿ ಯು ಫಲಿತಾಂಶ
ಸಿದ್ಧಗಂಗಾ ವಿಜ್ಞಾನ ಕಾಲೇಜಿಗೆ ಅಭಿನಂದನೆಗಳ ಮಹಾಪೂರ

   ದಾವಣಗೆರೆ, ಏಪ್ರಿಲ್ 15, ಕಳೆದ ಮಾರ್ಚ್ ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷಾ ಪಲಿತಾಂಶ ಪ್ರಕಟವಾಗಿದ್ದು ವಿಜ್ಞಾನ ವಿಭಾಗದಲ್ಲಿ ದಾವಣಗೆರೆ ಸಿದ್ಧಗಂಗಾ  ಪಿಯು ವಿಜ್ಞಾನ ಕಾಲೇಜ್ ನ ತಸ್ಮಿಯಾ ಕೌಸರ್  ಟಾಪರ್ ಸ್ಥಾನ ಪಡೆದಿದ್ದಾಳೆ.

  ತಸ್ಮಿಯಾ ಕೌಸರ್  600 ಕ್ಕೆ 586 ಅಂಕಗಳಿಸಿ ಶೇ. 97.66 ಅಂಕ ಪಡೆದಿದ್ದಾಳೆ. ಕನ್ನಡ 96, ಇಂಗ್ಲಿಷ್ 96, ಭೌತಶಾಸ್ತ್ರ 99, ರಸಾಯನಶಾಸ್ತ್ರ 98, ಗಣಿತ 100, ಜೀವಶಾಸ್ತ್ರ 97 ಅಂಕ ಗಳಿಸಿದ್ದಾಳೆ. ನಗರದ ಶೇಖ್  ಆಹ್ಮದ್  ಮತ್ತು ಖುಸ್ತರ್ ಉನ್ನೀಸಾ ಶಿಕ್ಷಕ ದಂಪತಿಗಳ ಪುತ್ರಿಯಾದ ತಸ್ಮಿಯಾ ಕೌಸರ್  ವಿಜ್ಞಾನ ವಿಭಾಗದಲ್ಲಿ  ಪ್ರಥಮ ಸ್ಥಾನ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾಳೆ.

  ಮಾರ್ಚ್ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಾವಣಗೆರೆ ನಗರದ ಸಿದ್ದಗಂಗಾ ಪದವಿಪೂರ್ವ ವಿಜ್ಞಾನ ಕಾಲೇಜಿನ 714 ವಿದ್ಯಾರ್ಥಿಗಳಲ್ಲಿ 282 ಡಿಸ್ಟಿಂಕ್ಷನ್ ನಲ್ಲಿ , 399 ಪ್ರಥಮ ದರ್ಜೆ , 11 ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿ ಉತ್ತಮ ಫಲಿತಾಂಶ ನೀಡಿದ್ದಾರೆ.

 ಗಣಿತದಲ್ಲಿ 19 , ರಸಾಯನಶಾಸ್ತ್ರದಲ್ಲಿ 13,  ಗಣಕ ಶಾಸ್ತ್ರದಲ್ಲಿ 10 , ಕನ್ನಡದಲ್ಲಿ 3  ಜೀವಶಾಸ್ತ್ರದಲ್ಲಿ  3 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಗಳಿಸಿ ದಾಖಲೆ ಸೃಷ್ಟಿಸಿದ್ದಾರೆ.


3 comments:


  1. Great Information sharing.I am very happy to read this article .. thanks for giving us go through info.Fantastic nice. I appreciate this post Take a look at MetroPCS Black Friday 2020 Sale

    ReplyDelete