Friday, April 12, 2019

ಶ್ರದ್ಧಾ - ಭಕ್ತಿಯಿಂದ ನೆರವೇರಿದ ಸಿದ್ಧಲಿಂಗೇಶ್ವರ ರಥೋತ್ಸವ

ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ
ಶ್ರದ್ಧಾ - ಭಕ್ತಿಯಿಂದ ನೆರವೇರಿದ ಸಿದ್ಧಲಿಂಗೇಶ್ವರ ರಥೋತ್ಸವ

ದಾವಣಗೆರೆ, ಏ. 13

ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಏಪ್ರಿಲ್ 12ರಂದು ಸಂಜೆ 7:30 ಕ್ಕೆ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಯ ರಥೋತ್ಸವವನ್ನು ಶ್ರದ್ಧಾ - ಭಕ್ತಿಯಿಂದ ನೆರೆದ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಸಂಜೆ 6 ಗಂಟೆಗೆ ಸಂಸ್ಥೆಯ ಆವರಣದಲ್ಲಿರುವ ಶ್ರೀ ಸಿದ್ಧಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಹಾಗೂ ರುದ್ರಾಭಿಷೇಕವನ್ನು ಅರ್ಚಕರಾದ ಚನ್ನಬಸವಯ್ಯನವರು ನೆರವೇರಿಸಿದರು. ಶಾಲೆಯ ಚಿತ್ರಕಲಾ ಶಿಕ್ಷಕರಾದ ಶಿವಕುಮಾರ್ ಮತ್ತು ಪ್ರಸನ್ನಕುಮಾರ್ ಇವರಿಂದ ಶೃಂಗರಿಸಲ್ಪಟ್ಟ ರಥದ ಪೀಠದ ಮೇಲೆ ಸಿದ್ಧಲಿಂಗೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಸಂಸ್ಥೆಯ ನಿರ್ದೇಶಕರಾದ ಡಾ|| ಜಯಂತ್‍ರವರು ಪ್ರತಿಷ್ಠಾಪಿಸಿದರು. ತೇರೆಳೆಯಲು ಭಕ್ತರು ಸಿದ್ಧರಾಗಿದ್ದರು. ಅತ್ಯುತ್ಸಾಹದಿಂದ ಪ್ರದಕ್ಷಿಣೆಯಲ್ಲಿ ಭಾಗವಹಿಸಿದ ಭಕ್ತರು ಎಡೆಯೂರಿನಲ್ಲಿದ್ದಷ್ಟೇ ಸಂಭ್ರಮಪಟ್ಟರು. ಐಸಿರಿ, ರುದ್ರಾಕ್ಷಿಬಾಯಿ ಮತ್ತು ಮಂಜುನಾಥ್‍ರವರು ಸಂಗೀತ ಸೇವೆ ನಡೆಸಿಕೊಟ್ಟರು. ನಾಗರಾಜ ಗಾಯಕ್‍ವಾಡ್ ಮತ್ತು ರಾಜೇಶ್ವರಿ ಚಿತ್ತಾಕರ್ಷಕವಾದ ಬಣ್ಣದ ಬೃಹತ್ ರಂಗೋಲಿ ಬಿಡಿಸಿ ಎಲ್ಲರ ಗಮನ ಸೆಳೆದರು. ದಾಸೋಹ ಕಾರ್ಯದಲ್ಲಿ ಕೈಜೋಡಿಸಿದ ನಿತ್ಯಾನಂದ ಮಂದಿರದ ಭಕ್ತರು, ಎ.ಹೆಚ್. ಶಿವಮೂರ್ತಿಸ್ವಾಮಿ, ಜಯಲಕ್ಷ್ಮಿ ಸೋಮಶೇಖರ್, ನಾಗರಾಜ ನಾಯ್ಡು, ಸುಮಾ ಪರಶಿವಮೂರ್ತಿ, ಹೂವಿನ ಸೇವೆ ಸಲ್ಲಿಸಿದ ಸುನಂದ ತಿಪ್ಪೇಸ್ವಾಮಿ ಇವರಿಗೆ ಧನ್ಯವಾದ ತಿಳಿಸಲಾಯಿತು. ಅನೇಕ ಗಣ್ಯರು ಸರತಿ ಸಾಲಿನಲ್ಲಿ ನಿಂತು ಭಕ್ತಿಯಿಂದ ಪ್ರಸಾದ ಸೇವನೆ ಮಾಡಿದರು. ಪ್ರಸಾದ ವಿತರಣೆಯ ವ್ಯವಸ್ಥೆಯನ್ನು ಹಿರಿಯ ವಿದ್ಯಾರ್ಥಿಗಳು ಸಂಸ್ಥೆಯ ಕಾರ್ಯದರ್ಶಿ ಡಿ.ಎಸ್. ಹೇಮಂತ್‍ರವರ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಿದರು. ಸಂಸ್ಥೆಯ ಸಂಸ್ಥಾಪಕರಾದ ಎಂ.ಎಸ್. ಶಿವಣ್ಣನವರು ಉಪಸ್ಥಿತರಿದ್ದು ಶ್ರೀಸ್ವಾಮಿಯ ಕಾರ್ಯಕಲಾಪಗಳನ್ನು ವೀಕ್ಷಿಸಿದರು.




1 comment:

  1. Great Information sharing.I am very happy to read this article .. thanks for giving us go through info.Fantastic nice. I appreciate this post Take a look at Restoration Hardware Black Friday 2020

    ReplyDelete