Tuesday, December 24, 2024
ಮೆದುಳನ್ನು ಸಕ್ರಿಯವಾಗಿ ತೊಡಗಿಸಿದರೆ ಎಲ್ಲಾ ಸಮಸ್ಯೆಗಳಿಂದ ಮುಕ್ತ,: ಡಾ ಸಿ ಆರ್ ಚಂದ್ರಶೇಖರ್
ಸಿದ್ಧಗಂಗಾ@55 - 4 ದಿನಗಳ ಸಂಭ್ರಮ ಸನ್ಮಾನ-ಪುರಸ್ಕಾರ, ಬಹುಮಾನಗಳ ಮಹಾಪೂರ
ಡಿಸೆಂಬರ್ 26 ರಂದು ದ್ವಿತೀಯ ದಿನದ ಕಾರ್ಯಕ್ರಮವನ್ನು ಉಡುಪಿಯ ಡಾ ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆಯ ಖ್ಯಾತ ಮನ: ಶಾಸ್ತ್ರಜ್ಞರಾದ ಹಾಗೂ ಪ್ರಸಿದ್ಧ ವೈದ್ಯ ಲೇಖಕರಾದ ಡಾ|| ವಿರೂಪಾಕ್ಷ ದೇವರಮನೆಯವರು ಉದ್ಘಾಟಿಸುವರು. 2023-24 ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ 400 ವಿದ್ಯಾರ್ಥಿಗಳಲ್ಲಿ 132 ವಿದ್ಯಾರ್ಥಿಗಳನ್ನು “ಸಿದ್ಧಗಂಗಾ ಪ್ರತಿಭಾ ಪುರಸ್ಕಾರ” ನೀಡಿ ಸನ್ಮಾನಿಸಲಾಗುವುದು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿವಿಧ ತರಗತಿಗಳ ಮಕ್ಕಳು ಪ್ರದರ್ಶಿಸುವರು.
ಮೂರನೇ ದಿನದ ಕಾರ್ಯಕ್ರಮ ಡಿಸೆಂಬರ್ 27ರಂದು ಸಂಜೆ 5.30ಕ್ಕೆ ದಾವಣಗೆರೆ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ|| ಸುರೇಶ್ ಬಿ. ಇಟ್ನಾಳ್ ಐ.ಎ.ಎಸ್ ಇವರು ಉದ್ಘಾಟಿಸುವರು. ದ್ವಿತೀಯ ಪಿಯುಸಿಯ 136 ಮಕ್ಕಳಿಗೆ ಪ್ರತಿಭಾ ಪುರಸ್ಕಾರಗಳನ್ನು ಪ್ರದಾನ ಮಾಡಲಾಗುತ್ತದೆ. ಮಕ್ಕಳಿಂದ ಸುಂದರ ನೃತ್ಯಗಳ ಪ್ರದರ್ಶನವಿರುತ್ತದೆ. ಡಿಸೆಂಬರ್ 28ರ ನಾಲ್ಕನೇ ದಿನದ ಕಾರ್ಯಕ್ರಮವನ್ನು ಸಂಜೆ 5.30 ಕ್ಕೆ ಸಿದ್ಧಗಂಗಾ ವಿದ್ಯಾಸಂಸ್ಥೆಯ ನಿರ್ದೇಶಕರೂ ಎಂ.ಎಸ್.ಎಸ್ ಸೂಪರ್ ಬ್ರೈನ್ ಸೆಂಟರ್‌ನ ಅಧ್ಯಕ್ಷರೂ ಆದ ಡಾ|| ಡಿ. ಎಸ್ ಜಯಂತ್ ರವರು ಉದ್ಘಾಟಿಸುವರು. ದ್ವಿತೀಯ ಪಿಯುಸಿಯ 136 ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಹಾಗೂ ವೈವಿಧ್ಯಮಯ ನೃತ್ಯಗಳು ಪ್ರದರ್ಶನಗೊಳ್ಳುತ್ತವೆ. ವಾರ್ಷಿಕ ಸಂಭ್ರಮದ ಹಿನ್ನಲೆಯಲ್ಲಿ ಮಕ್ಕಳು ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾಗಿ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ಪಡೆದಿದ್ದಾರೆ. ಭರತನಾಟ್ಯ, ಜನಪದ, ದೇಶಭಕ್ತಿ, ಪರಿಸರ, ಪ್ರಕೃತಿ, ಭಕ್ತಿಗೀತೆ, ಭಾವಗೀತೆ,ಸಾಮಾಜಿಕ ಜಾಗೃತಿ, ಯೋಗ ಹೀಗೆ ಹಲವಾರು ವಿಷಯಗಳನ್ನೊಳಗೊಂಡಂತೆ ನಾಲ್ಕು ದಿನಗಳಲ್ಲಿ ನೂರಕ್ಕೂ ಹೆಚ್ಚುಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧಗೊಂಡಿದ್ದಾರೆ.ಪಾಲಕರಿಗೆ, ಹಿರಿಯ ವಿದ್ಯಾರ್ಥಿಗಳಿಗೆ ಮತ್ತು ತಮ್ಮೆಲ್ಲರಿಗೆ ಆತ್ಮೀಯ ಸ್ವಾಗತ ಕೋರುತ್ತಿದ್ದಾರೆ.ಪ್ರತಿದಿನದ ಕಾರ್ಯಕ್ರಮದಲ್ಲಿ ಶಾಲಾ ಕಾಲೇಜಿನ ಬೋಧಕ ವರ್ಗದವರು ಮುಖ್ಯ ಅತಿಥಿಗಳಾಗಿರುತ್ತಾರೆ. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ ಸೌಜ, ಕಾರ್ಯದರ್ಶಿ D S ಹೇಮಂತ್, ನಿರ್ದೇಶಕ ಡಾ|| ಜಯಂತ್,ಕಾಲೇಜಿನ ಪ್ರಾಚಾರ್ಯರಾದ ವಾಣಿಶ್ರೀ, ಸಿ ಬಿ ಎಸ್ ಇ ಪ್ರಾಚಾರ್ಯ ಗಾಯತ್ರಿ ಚಿಮ್ಮಡ್, ಪ್ರೌಢಶಾಲೆಯ ಮುಖ್ಯಶಿಕ್ಷಕಿ K S ರೇಖಾ ರಾಣಿ, ಮತ್ತಿತರರು ಹಾಜರಿರುತ್ತಾರೆ.
Friday, November 22, 2024
ವರ್ಷದ ಉತ್ತಮ ಪ್ರೌಢಶಾಲಾ ವಿದ್ಯಾರ್ಥಿಯಾಗಿ ಸಿದ್ಧಗಂಗಾ ಶಾಲೆಯ ಯಶಸ್ವಿನಿ ಕೆ.ಪಿ ಆಯ್ಕೆ
ದಾವಣಗೆರೆ. ನ.22
ದಾವಣಗೆರೆ ಜಿಲ್ಲಾ ಶಿಶು ಕಲ್ಯಾಣ ಮಂಡಳಿಯ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ವನಿತಾ ಸಮಾಜದಲ್ಲಿ ಏರ್ಪಡಿಸಲಾಗಿದ್ದ ವರ್ಷದ ಉತ್ತಮ ಪ್ರೌಢಶಾಲಾ ವಿದ್ಯಾರ್ಥಿ ಆಯ್ಕೆ ಸ್ಪರ್ಧೆಯಲ್ಲಿ ನಗರದ ಸಿದ್ಧಗಂಗಾ ಪ್ರೌಢಶಾಲೆಯ ವಿದ್ಯಾರ್ಥಿನಿ ಯಶಸ್ವಿನಿ ಕೆ.ಪಿ ಆಯ್ಕೆಯಾಗಿದ್ದಾಳೆ. ನವೆಂಬರ್ 24 ರ ಭಾನುವಾರ ಸಂಜೆ 5 ಗಂಟೆಗೆ ವನಿತಾ ಸಮಾಜದಲ್ಲಿ ಯಶಸ್ವಿನಿ ಕೆ.ಪಿ ಯ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.ಸಿದ್ಧಗಂಗಾ ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ಯಶಸ್ವಿನಿ ಕೆ.ಪಿ ಪ್ರತಿಭಾವಂತೆ, ಪಠ್ಯಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಬಾಲಕಿ, ಹಲವಾರು ಬಹುಮಾನಗಳ ವಿಜೇತೆ, ಇಂಡಿಯನ್ ಟ್ಯಾಲೆಂಟ್ ಪರೀಕ್ಷೆಯಲ್ಲಿ RANK , ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಥೆ ಹೇಳುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ರಾಜ್ಯ ಮಟ್ಟದ ವಿಜ್ಞಾನ ವಿಚಾರ ಸಂಕಿರಣದಲ್ಲಿ ಮತ್ತು ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಭಾಷಣ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿ ಶಾಲಾಮಟ್ಟದಲ್ಲಿ ನಡೆಯುವ ಅನೇಕ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ. ಸಮರ್ಥನಾಯಕತ್ವ ಗುಣ ಹೊಂದಿರುವ ಈ ಬಾಲಕಿ ವಿನಯ ಸಂಪನ್ನೆ ಎಂದು ಶಾಲಾ ಮುಖ್ಯಶಿಕ್ಷಕಿ ರೇಖಾರಾಣಿಯವರು ಶ್ಲಾಘಿಸಿದ್ದಾರೆ. 10 ನೇ ತರಗತಿಯ ಶಿಕ್ಷಕ ವೃಂದ ಮತ್ತು ಸಹಪಾಠಿಗಳು ಯಶಸ್ವಿನಿಯನ್ನು ಅಭಿನಂದಿಸಿದ್ದಾರೆ. ಯಶಸ್ವಿನಿಯ ತಂದೆ ಪಾಲಾಕ್ಷಪ್ಪ ಮತ್ತು ತಾಯಿ ಜ್ಯೋತಿಕಲಾ ಅವರು ಮಗಳ ಆಯ್ಕೆಯನ್ನು ಸಂಭ್ರಮದಿಂದ ಹಂಚಿಕೊಂಡಿದ್ದಾರೆ.
Friday, November 1, 2024
ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಸಂಭ್ರಮದ ರಾಜ್ಯೋತ್ಸವ
ದಾವಣಗೆರೆ ನ. 1.
ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆಯ ಶಾಲಾ – ಕಾಲೇಜಿನ ಮಕ್ಕಳು ಮತ್ತು ಸಿಬ್ಬಂದಿ ವರ್ಗದವರು 69 ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು. ಹಿರಿಯ ಶಿಕ್ಷಕಿ ವಸಂತ ಆರ್. ರವರು ಧ್ವಜಾರೋಹಣ ನೆರವೇರಿಸಿದರು. ಸಂಗೀತ ಶಿಕ್ಷಕರಾದ ಮಂಗಳ ಮತ್ತು ರುದ್ರಾಕ್ಷಿಬಾಯಿ ನೇತೃತ್ವದಲ್ಲಿ ಕನ್ನಡ ಭಾವಗೀತೆಗಳನ್ನು ಮಕ್ಕಳು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು. ಕರ್ನಾಟಕ ಏಕೀಕರಣದ ಬಗ್ಗೆ, ಕನ್ನಡ ನಾಡು, ಶ್ರೀಮಂತಿಕೆ, ಭಾಷಾ ಪ್ರೌಢಿಮೆ, ಸುಂದರ ಲಿಪಿಯ ಬಗ್ಗೆ ಮಕ್ಕಳು ಭಾಷಣ ಮಾಡಿದರು. ಜಾನಪದ ಪ್ರಕಾರಗಳಾದ ಡೊಳ್ಳು, ಕಂಸಾಳೆ, ನಂದಿಕೋಲುಗಳ ಪ್ರಾತ್ಯಕ್ಷಿಕೆ ನೀಡಿ ಈ ಕಲೆಗಳ ಭವ್ಯತೆ, ಆಚರಣೆ, ವಸ್ತ್ರ ವಿನ್ಯಾಸದ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕಿಯರಾದ ಉಷಾರಾಣಿ ಎಸ್ ಎಲ್, ವಿಜಯಶ್ರೀ ಬಿ ಸಿ, ವಸಂತ ಆರ್. ರವರು ಬರೆದಿದ್ದ ಕವನಗಳನ್ನು ಮಕ್ಕಳು ವಾಚಿಸಿದರು. ಆಕರ್ಷಕ ರಂಗೋಲಿ ಚಿತ್ತಾರದ ನಡುವೆ ಕರ್ನಾಟಕ ಮಾತೆಯ ಭಾವ ಚಿತ್ರ ಮತ್ತು ಕರ್ನಾಟಕ ಭೂಪಟ ಸುಂದರವಾಗಿ ಕಂಗೊಳಿಸುತ್ತಿತ್ತು. ವೇದಿಕೆಯ ಮೇಲೆ ಸಂಸ್ಥೆಯ ಕಾರ್ಯದರ್ಶಿ ಡಿ ಎಸ್ ಹೇಮಂತ್, ನಿರ್ದೇಶಕರಾದ ಡಾ|| ಜಯಂತ್ ಡಿ. ಎಸ್., ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರೇಖಾರಾಣಿ ಕೆ. ಎಸ್., ಸಿ ಬಿ ಎಸ್ ಇ ಶಾಲೆಯ ಪ್ರಾಚಾರ್ಯರಾದ ಗಾಯತ್ರಿ ಚಿಮ್ಮಡ್ ಇವರು ಉಪಸ್ಥಿತರಿದ್ದರು. ಸ್ವಾಗತ, ಪ್ರಾಸ್ತಾವಿಕ ಮತ್ತು ವಂದನಾರ್ಪಣೆಯನ್ನು ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿʼಸೌಜ ರವರು ನಡೆಸಿಕೊಟ್ಟರು. ಶಿಕ್ಷಕಿ ಆಶಾ ಎಸ್. ರವರು ಕಾರ್ಯಕ್ರಮ ನಿರೂಪಿಸಿದರು.
Monday, October 21, 2024
“ ಭಾರತ್ ಕೋ ಜಾನೋ “ ರಾಜ್ಯಮಟ್ಟದ ಕ್ವಿಜ್ ಸ್ಪರ್ಧೆ ಸಿದ್ಧಗಂಗಾ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ
ದಾವಣಗೆರೆ ಅ .21
ಭಾರತ್ ವಿಕಾಸ್ ಪರಿಷದ್ ನಿಂದ ಭಾನುವಾರ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಭಾರತ್ ಕೋ ಜಾನೋ ಕ್ವಿಜ್ ಸ್ಪರ್ಧೆಯಲ್ಲಿ ದಾವಣಗೆರೆ ನಗರದ ಸಿದ್ಧಗಂಗಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಪ್ರಥಮ ಸ್ಥಾನಗಳಿಸಿ ವಿಭಾಗೀಯ ಮಟ್ಟಕ್ಕೆ ಸ್ಪರ್ಧಿಸಲು ಅರ್ಹತೆ ಪಡೆದಿದ್ದಾರೆ.ಆಗಸ್ಟ್ ನಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾರತ್ ಕೋ ಜಾನೋ ಸೀನಿಯರ್ ವಿಭಾಗದ ಕ್ವಿಜ್ನಲ್ಲಿ ಆಯ್ಕೆಯಾದ ಸಿದ್ಧಗಂಗಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅಜಯ್ ಕುಮಾರ್ ಆರ್ ಮತ್ತು ವಿದ್ಯಾರ್ಥಿನಿ ಭೂಮಿಕಾ ಇಟಗಿ ಇವರು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರು. ಪಾರಿತೋಷಕಮತ್ತು 3000 ರೂ. ನಗದು ಬಹುಮಾನ ಪಡೆದಿದ್ದರು. ಇದೀಗ ರಾಜ್ಯ ಮಟ್ಟದಲ್ಲೂ ಸ್ಪರ್ಧಿಸಿ ಪ್ರಥಮ ಬಹುಮಾನತಮ್ಮದಾಗಿಸಿಕೊಂಡಿದ್ದಾರೆ.ಅಜಯ್ ಕುಮಾರ್ ಮತ್ತು ಭೂಮಿಕಾರವರನ್ನು ಸಿದ್ಧಗಂಗಾ ಕಾಲೇಜಿನ ಆಡಳಿತ ಮಂಡಳಿ ಮತ್ತು ಪ್ರಾಚಾರ್ಯ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.
Sunday, September 15, 2024
ಜಿಲ್ಲಾಡಳಿತದ ಸಹಯೋಗದಲ್ಲಿ ಸಿದ್ಧಗಂಗಾ ಶಾಲೆ ಮಕ್ಕಳಿಂದ ಐತಿಹಾಸಿಕ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ
Saturday, September 7, 2024
ಸಿದ್ಧಗಂಗಾ ವಿದ್ಯಾಸಂಸ್ಥೆ ಯಲ್ಲಿ ಪರಿಸರ ಸ್ನೇಹಿ 12 ಅಡಿಯ ಪೇಪರ್ ಗಣೇಶ
Sunday, April 14, 2024
MSS QUIZ RESULT -2024
Click this link to see you result - https://www.siddaganga.com/mss/find-result.php
Enter your Register number and your date of birth to see your result ,