ನಗರದ ಸಿದ್ಧಗಂಗಾ ಶಾಲಾ-ಕಾಲೇಜುಗಳಲ್ಲಿ ಇಂದು ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪ್ರಿಕೆಜಿಯ ಪುಟಾಣಿ ಭುವಿತ್ ಕನಕದಾಸರ ವೇಷ ಧರಿಸಿ ಎಲ್ಲರ ಗಮನ ಸೆಳೆದನು. 2 ನೇ ತರಗತಿ ಬಾಲಕ ಜಯಸೂರ್ಯಸ್ವಾಮಿ ಕನಕದಾಸರ ಪ್ರಸಿದ್ಧ “ದಾಸನಾಗು ವಿಶೇಷನಾಗು” ಕೀರ್ತನೆ ಹಾಡಿದನು. 4 ನೇ ತರಗತಿ ಬಾಲಕಿ ಆರಾಧ್ಯ ಕನಕದಾಸರ ಜೀವನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಎಲ್ಲರಿಗೂ ತಿಳಿಸಿಕೊಟ್ಟಳು. ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಕ್ತಿಯಿಂದ ಪೂಜಿಸಲಾಯಿತು. ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿʼಸೌಜ ಮತ್ತು ಶಿಕ್ಷಕರು ಹಾಗೂ ಉಪನ್ಯಾಸಕರು ಆಚರಣೆಯಲ್ಲಿ ಭಾವಗಹಿಸಿದರು.
Saturday, November 8, 2025
Saturday, November 1, 2025
ಸಿದ್ಧಗಂಗಾ ಸಂಸ್ಥೆಯಲ್ಲಿ ಸಂಭ್ರಮದ ರಾಜ್ಯೋತ್ಸವ.
ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆಯ ಶಾಲಾ-ಕಾಲೇಜಿನ ಮಕ್ಕಳು ಮತ್ತು ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ಪಾಲಕರು ಸೇರಿ70ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು.
ಸಿದ್ಧಗಂಗಾ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಸದಾಶಿವ ಹೊಳ್ಳರವರು ಧ್ವಜಾರೋಹಣ ನೆರವೇರಿಸಿದರು. ಕರ್ನಾಟಕದ ಹಿರಿಮೆಯನ್ನು ತಿಳಿಸುತ್ತಾ ನಾಡಿಗಾಗಿ ಶ್ರಮಿಸಿದ ದಿಗ್ಗಜರನ್ನು ಸ್ಮರಿಸಿದರು. ಭಾರತ ಜನನಿಯ ತನುಜಾತೆ ಕರ್ನಾಟಕ ಮಾತೆಯ ವೈಭವವನ್ನು ವರ್ಣಿಸಿದರು.
70 ಮಕ್ಕಳಿಂದ “ಹಚ್ಚೇವು ಕನ್ನಡ ದೀಪ” ಗೀತೆಯನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಲಾಯಿತು. ಅಕ್ಕಮಹಾದೇವಿ ಮತ್ತು ಬಸವಣ್ಣನವರ ವಚನಗಳನ್ನು ಸಿ.ಬಿ.ಎಸ್.ಇ ಎಲ್.ಕೆ.ಜಿ. ರಾಘವಿ ಮತ್ತು ಮನಿಷ್ ಗೌಡ ಹೇಳಿದರು. ಒಂದನೇ ತರಗತಿ ರಿಷಿಕ್ ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಪರಿಚಯ ಮಾಡಿದರೆ, 2ನೇ ತರಗತಿ ತಾನ್ವಿ ಹರೀಶ್, ನಿದಾ ಫಾತಿಮ ಕಾದಂಬರಿಕಾರ ಎಸ್. ಎಲ್. ಭೈರಪ್ಪನವರ ಪರಿಚಯ ಮಾಡಿಕೊಟ್ಟರು. ಎಲ್.ಕೆ.ಜಿ. ರೇವಂತ್ ಆರ್ಯ ಮತ್ತು 8ನೇ ತರಗತಿ ಓಜಸ್ ರಾಜ್ಯೋತ್ಸವದ ಶುಭಾಷಯ ತಿಳಿಸಿದರು. ಪುಣಾಣಿ ಮಕ್ಕಳು ಜೋಗದ ಸಿರಿ ಬೆಳಕಿನಲ್ಲಿ ಹಾಡನ್ನು ಇಂಪಾಗಿ ಹಾಡಿದರು.ಸಿ.ಬಿ.ಎಸ್.ಇ. 6ನೇ ತರಗತಿ ಮಕ್ಕಳು ಬಾರಿಸು ಕನ್ನಡ ಡಿಂಡಿಮ ಮತ್ತು ಕನ್ನಡ ಹೊನ್ನುಡಿ ದೇವಿಯನು ಪೂಜಿಸು ಹಾಡುಗಳಿಗೆ ಆಕರ್ಷಕ ನೃತ್ಯ ಮಾಡಿದರು. ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸ್ವಾಗತ ಮತ್ತು ವಂದನಾರ್ಪಣೆ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಜಸ್ಟಿನ್ ಡಿʼಸೌಜ ಮಾಡಿದರೆ, ಶಿಕ್ಷಕಿ ಆಶಾರವರು ಅಚ್ಚುಕಟ್ಟಾಗಿ ನಿರೂಪಣೆ ನಡೆಸಿಕೊಟ್ಟರು. ಸಂಸ್ಥೆಯ ಕಾರ್ಯದರ್ಶಿ ಹೇಮಂತ್ ಮತ್ತು ನಿರ್ದೇಶಕ ಡಾ|| ಜಯಂತ್ರವರು ಭಾಗವಹಿಸಿದ್ದರು. ಮಕ್ಕಳು ಹಳದಿ ಕೆಂಪು ಬಣ್ಣದ ವಸ್ತ್ರಗಳಲ್ಲಿ ಕಂಗೊಳಿಸಿದರು. ಸಂಗೀತ ಶಿಕ್ಷಕರು, ದೈಹಿಕ ಶಿಕ್ಷಕರು ರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದುಕೊಟ್ಟರು.
Tuesday, October 28, 2025
ಸಿದ್ಧಗಂಗಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಗಿರೀಶ್ ಆರ್ ನೇಸರ್ಗಿ ಯಿಂದ ಅದ್ವಿತೀಯ ಸಾಧನೆ
6/10/2025 ರಿಂದ 10/10/2025ರ ವರೆಗೆ ಜಮ್ಮು ಕಾಶ್ಮೀರದಲ್ಲಿ ನಡೆದ 19 ವರ್ಷದ ಕೆಳಗಿನವರಿಗೆ ಆಡಿಸುವ 69ನೇ ರಾಷ್ಟ್ರ ಮಟ್ಟದ ಶಾಲಾ ಪಂದ್ಯಗಳಲ್ಲಿ ಫುಟ್ಬಾಲ್ ಆಟಗಾರನಾಗಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ನಮ್ಮ ರಾಜ್ಯಕ್ಕೆ ̧ ಜಿಲ್ಲೆಗೆ ಹಾಗೂ ಕಾಲೇಜಿಗೆ ಕೀರ್ತಿ
ತರುವುದರ ಮೂಲಕ ದಾವಣಗೆರೆಯ ಕ್ರೀಡಾ ಇತಿಹಾಸದ ಸುವರ್ಣ ಪುಟಗಳಲ್ಲಿ ದಾಖಲಿಸಲ್ಪಟ್ಟು ಸಿದ್ಧಗಂಗಾ ಸಂಸ್ಥೆಗೆ, ಪೋಷಕರಿಗೆ ಹೆಮ್ಮೆಯ ತುರಾಯಿ ಮುಡಿಸಿದ್ದಾರೆ .
ಶ್ರೀಮತಿ ವಾಣಿಶ್ರೀ ಹಾಗೂ ಉಪನ್ಯಾಸಕ ವರ್ಗ, ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಯ ಈ ಸಾಧನೆಯನ್ನು ಅಭಿನಂದಿಸಿರುತ್ತಾರೆ
Friday, September 26, 2025
ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಶ್ರೀ ಸಿದ್ಧಗಂಗಾ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆ.
2025-26 ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ನಗರದ ಕಾಲೇಜುಗಳಲ್ಲಿ ಒಂದಾದ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಮಕ್ಕಳು ನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಜಯಗಳಿಸಿ ರಾಷ್ಟ್ರಮಟ್ಟ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಹಾಗೂ ದಾವಣಗೆರೆ ನಗರದಲ್ಲಿ ನಡೆದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಫುಟ್ಬಾಲ್ ಕ್ರೀಡಾ ಕೂಟದಲ್ಲಿ ಗಿರೀಶ್ ಆರ್ ನೇಸರ್ಗಿ ಎಂಬ ವಿದ್ಯಾರ್ಥಿ ಜಮ್ಮು- ಕಾಶ್ಮೀರದಲ್ಲಿ ನೆಡೆಯುವ ರಾಷ್ಟ್ರಮಟ್ಟದ ಫುಟ್ಬಾಲ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾನೆ.
ಈ ಕ್ರೀಡಾಪಟುಗಳನ್ನು ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಡಾ. ಜಸ್ಟಿನ್ ಡಿ”ಸೌಜ, ನಿರ್ದೇಶಕರಾದ ಡಾ. ಜಯಂತ್, ಕಾರ್ಯದರ್ಶಿಗಳಾದ ಹೇಮಂತ್ ಡಿ.ಎಸ್., ಪ್ರಾಂಶುಪಾಲರಾದ ವಾಣಿಶ್ರೀ ಹಾಗೂ ಉಪನ್ಯಾಸಕ ವೃಂದದವರು, ದೈಹಿಕ ಶಿಕ್ಷಣ ಉಪನ್ಯಾಸಕರಾದ ಲಿಂಗರಾಜ್ ಹೆಚ್, ರಘು ಹೆಚ್.ಎಂ., ಶ್ರೀನಿವಾಸ್ ಹಾಗು ಸುನೀತಾ ಇವರ ತರಬೇತಿಯಲ್ಲಿ ಮಕ್ಕಳು ಉತ್ತಮ ಸಾಧನೆಯನ್ನು ಮಾಡಿದ್ದಾರೆ.
Wednesday, August 27, 2025
ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಶ್ರದ್ಧಾ-ಭಕ್ತಿಯ ಆಕರ್ಷಕ ಮೆರವಣಿಗೆಯೊಂದಿಗೆ ಪೇಪರ್ ಗಣೇಶನ ಪ್ರತಿಷ್ಠಾಪನೆ
ದಾವಣಗೆರೆ ಆ. 27,
12 ಅಡಿ ಎತ್ತರದ ಭವ್ಯ ಗಣಪತಿ ಮಕ್ಕಳು ಎಳೆಯುತ್ತಿದ್ದ ರಥದ ಮೇಲೆ ಗಂಭೀರವದನವಾಗಿ ವಿರಾಜಮಾನನಾಗಿದ್ದನು. ಶಾಲೆಯ ಮಕ್ಕಳು ವಿವಿಧ ವೇಷ ಭೂಷಣಗಳಲ್ಲಿ ಆಗಮಿಸಿದ್ದರು. ತಿರುಪತಿ ವೆಂಕಟೇಶ, ಧನಲಕ್ಷ್ಮಿ, ಮಧುರೆ ಮೀನಾಕ್ಷಿ, ಚಾಮುಂಡೇಶ್ವರಿ, ಗಣಪತಿ, ಶಿವಾಜಿ, ರಾಮ, ಸೀತೆ, ಲಕ್ಷ್ಮಣ, ಹನುಮಂತ, ಪರಶುರಾಮ, ರಾಧಾಕೃಷ್ಣ ಹೀಗೆ ಸುಮಾರು ಇನ್ನೂರಕ್ಕೂ ಹೆಚ್ಚು ಮಕ್ಕಳು ಪೌರಾಣಿಕ ಪಾತ್ರದಲ್ಲಿ ಕಣ್ಮನ ಸೆಳೆಯುವಂತಿದ್ದರು. ಬೆಳಿಗ್ಗೆ 9 ಗಂಟೆಗೆ ಶಾಲೆಯಿಂದ ಪರಿಸರ ಸ್ನೇಹಿ ಪೇಪರ್ ಗಣಪತಿಯನ್ನು ಗಾಂಧಿ ಸರ್ಕಲ್ಗೆ ತಂದರು. ಅಲ್ಲಿಂದ ನಂದಿಕೋಲು, ಡೊಳ್ಳು, ವೀರಗಾಸೆ, ಪಟಗಳನ್ನು ಹಿಡಿದ ಮಕ್ಕಳು ಆಗಮಿಸಿ ಮೆರವಣಿಗೆಗೆ ಸಿದ್ಧರಾದರು. ಜೊತೆಗೆ ಸಾವಿರಕ್ಕೂ ಹೆಚ್ಚು ಮಕ್ಕಳು ಸಾಂಪ್ರದಾಯಿಕ ಉಡುಗೆಯಲ್ಲಿ ಶಿಸ್ತುಬದ್ಧವಾಗಿ ಮೆರವಣಿಗೆಯೊಡನೆ ಹೆಜ್ಜೆ ಹಾಕಿದರು.
ಶಾಲೆಯ ವಾದ್ಯವೃಂದದವರು ಭಕ್ತಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಾ ನಡೆದರು. ನಡುನಡುವೆ ಮಕ್ಕಳ ಉದ್ಘೋಷ ದಾರಿಹೋಕರ ಗಮನ ಸೆಳೆಯಿತು. ಕ್ಷಣಕಾಲ ನಿಂತು ಗಣಪತಿಗೆ ಕೈ ಮುಗಿಯುತ್ತಿದ್ದರು. ಮೆರವಣಿಗೆ ಗಾಂಧಿ ಸರ್ಕಲ್ನಿಂದ ಜಯದೇವ ಸರ್ಕಲ್, ಅಂಬೇಡ್ಕರ್ ಸರ್ಕಲ್ ಮೂಲಕವಾಗಿ ಸಿದ್ಧಗಂಗಾ ಶಾಲೆಯ ಆವರಣ ತಲುಪಿತು. ಬೃಹತ್ ಮೆರವಣಿಗೆ ಭಕ್ತಿಪೂರ್ವಕ ವಾತಾವರಣ ಸೃಷ್ಠಿಸಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಸಿದ್ಧಗಂಗಾ ಸಂಸ್ಥೆಯ ಮಕ್ಕಳೇ ತಯಾರಿಸಿದ ಈ ಪೇಪರ್ ಗಣಪತಿ ನೋಡಿ ದಿಗ್ಭೃಾಂತರಾದರು. ಕೆಲವರು ಸ್ಪರ್ಶಿಸಿ ಪುನೀತರಾದರು. ನಾಲ್ಕು ಮಕ್ಕಳು ಎತ್ತಬಹುದಾದ 12 ಅಡಿ ಎತ್ತರದ ಪರಿಸರ ಸ್ನೇಹಿ ಗಣಪ ಸಾರ್ವಜನಿಕ ವೀಕ್ಷಣೆಗೆ 10 ದಿನಗಳ ಕಾಲ ಲಭ್ಯವಿದೆ. 11ನೇ ದಿನ ವಿಸರ್ಜಿಸಲಾಗುವುದು.
ಪ್ರತಿವರ್ಷ ಗಣೇಶ ಚತುರ್ಥಿಯನ್ನು ವಿಭಿನ್ನವಾಗಿ ಸಾಂಪ್ರದಾಯಿಕವಾಗಿ ಆಚರಿಸುವ ಮಕ್ಕಳಲ್ಲಿ ಭಕ್ತಿಭಾವ ಮೂಡಿಸುವುದರ ಜೊತೆಗೆ ಶಾಲಾ ಮಕ್ಕಳೇ ರೂಪಿಸುವ ಗಣಪತಿ ಪೂಜೆಗೆ ಹಲವಾರು ಪಾಲಕರು ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯ ನಿರ್ದೇಶಕ ಡಾ|| ಜಯಂತ್ ಅವರ ಪರಿಕಲ್ಪನೆಯಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಶಾಲೆಯ ಚಿತ್ರಕಲಾ ಶಿಕ್ಷಕರ ನೆರವಿನಿಂದ ಸುಂದರ ರೂಪ ತಾಳುವ ಪೇಪರ್ ಗಣಪತಿಗೆ ಪ್ರತಿನಿತ್ಯ ಬೆಳಿಗ್ಗೆ ಶಾಲಾ ಮಕ್ಕಳು ಪೂಜಾ ಕಾರ್ಯದ ನೇತೃತ್ವ ವಹಿಸುವರು. ಕಾರ್ಯದರ್ಶಿ ಹೇಮಂತ್ ಹಾಗೂ ದೈಹಿಕ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಪ್ರತಿ ತರಗತಿಯ ಶಿಕ್ಷಕರು ಈ ಮಕ್ಕಳಿಗೆ ಮಾರ್ಗದರ್ಶನ ನೀಡುವರು. ಭಾವೈಕ್ಯತೆ, ಭಾತೃತ್ವ ಬೆಳೆಸುವಲ್ಲಿ ಮಹಾಗಣಪತಿಯ ಪಾತ್ರ ಹಿರಿದಾಗಿದೆ. ಇಡೀ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಪರಸ್ಪರ ಸಹಕಾರದಿಂದ ಈ ಬೃಹತ್ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದಾರೆ.
Tuesday, August 26, 2025
ವಿದ್ಯಾರ್ಥಿಗಳ ಶ್ರಮದಿಂದ ಮೂಡಿದ ಪರಿಸರ ಸ್ನೇಹಿ ಪೇಪರ್ ಗಣಪತಿ – ಎಲ್ಲರಿಗೂ ಮಾದರಿ
ದಾವಣಗೆರೆ | 26/08/2025
Friday, August 15, 2025
“ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ”
Sunday, August 10, 2025
ವಂದೇ ಭಾರತ್ ಸ್ವಾಗತ : ಭಾಗವಹಿಸಿದ ಸಿದ್ಧಗಂಗಾ ಸ್ಕೌಟ್ ಮತ್ತು ಗೈಡ್ ಮಕ್ಕಳು
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಶ್ರೀ ಸಿದ್ಧಗಂಗಾ ಸ್ಥಳೀಯ ಸಂಸ್ಥೆ ದಾವಣಗೆರೆ, ದಿನಾಂಕ 10-08-2025 ರಂದು, ಬೆಂಗಳೂರಿನಿಂದ ಬೆಳಗಾವಿಗೆ ನೂತನ ವಂದೇ ಭಾರತ್ ಎಕ್ಸ್ಪ್ರೆಸ್ ಟ್ರೈನ್ ಅನ್ನು ಮಾನ್ಯ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಹಸಿರು ನಿಶಾನೆ ತೋರಿಸಿ ಉದ್ಘಾಟಿಸಿದರು ಈ ನಿಮಿತ್ತ ದಾವಣಗೆರೆ ರೈಲು ನಿಲ್ದಾಣದಲ್ಲಿ ನೂತನ ಕಾರ್ಯವೈಕರಿಯುಳ್ಳ ರೈಲನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು, ಶ್ರೀ ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ ಸ್ಕೌಟ್ ಗೈಡ್ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ನೃತ್ಯ,ಹಾಗೂ ನೈರುತ್ಯ ರೈಲ್ವೆ ವಿಭಾಗದಿಂದ ಆಯೋಜಿಸಿದ್ದ ಚಿತ್ರಕಲಾ,ಭಾಷಣ,ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ಸಿದ್ಧಗಂಗಾಶಾಲೆಯ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸದೆ ಶ್ರೀಮತಿ ಪ್ರಭಾಮಲ್ಲಿಕಾರ್ಜುನ್ ಮೇಡಂ ಅವರಿಂದ ಪ್ರಥಮ.ದ್ವಿತೀಯ, ತೃತೀಯ ಸ್ಥಾನ ಪಡೆದು ಪ್ರಶಸ್ತಿಪತ್ರ ಹಾಗೂ ಬಹುಮಾನ ಪಡೆದರು,ದಾವಣಗೆರೆಇಂದ ಹಾವೇರಿಯ ತನಕ ನೂತನ ವಂದೇಭಾರತ್ ರೈಲಿನಲ್ಲಿ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಪ್ರಯಾಣಿಸಿ ಪುಳಕಗೊಂಡರು ಸ್ಥಳೀಯ ಸಂಸ್ಥೆಯ 105 ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Saturday, June 14, 2025
ಸಿದ್ಧಗಂಗಾ ಮುಖ್ಯಸ್ಥೆ ಜಸ್ಟಿನ್ ಡಿʼಸೌಜರಿಗೆ ಸುವರ್ಣ ಸಾಧಕಿ ಪ್ರಶಸ್ತಿ
ದಾವಣಗೆರೆ-JUNE 14
ಕನ್ನಡ ಪ್ರಭ ಮತ್ತು ಸುವರ್ಣ ಏಷ್ಯಾನೆಟ್ ಸಮೂಹ ಸಂಸ್ಥೆಗಳಿಂದ ಜೂನ್ 14 ರಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಸುವರ್ಣ ಸಾಧಕಿ ಪ್ರಶಸ್ತಿಯನ್ನು ನಗರದ ಸಿದ್ಧಗಂಗಾ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿʼಸೌಜರವರಿಗೆ ಪ್ರದಾನ ಮಾಡಲಾಯಿತು. ಶಿಕ್ಷಣ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಇವರು ಸಲ್ಲಿಸುತ್ತಿರುವ ಅನುಪಮ ಸೇವೆಗೆ ಈ ಪ್ರಶಸ್ತಿಯನ್ನು ಕೊಡಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಹಿರಿಯ ನಾಗರೀಕರ ಮತ್ತು ಅಂಗವಿಕಲರ ಸಬಲೀಕರಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರïರವರಿಂದ ಪ್ರಶಸ್ತಿ ಸ್ವೀಕರಿಸಿದರು. ವೇದಿಕೆಯಲ್ಲಿ ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ಬಾಗಲಕೋಟೆ ಜಿಲ್ಲಾಧಿಕಾರಿ ಕೆ.ಎಂ ಜಾನಕಿ, ವಿಟಿಯು ಕುಲಪತಿ ಡಾ|| ವಿದ್ಯಾಶಂಕರ ಮತ್ತು ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕïವಾಡ್ ಇದ್ದರು.ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅನುವಾದಕಿ ದೀಪಾ ಸೇರಿದಂತೆ ಸಮಾಜದ ವಿವಿಧ ಸ್ತರಗಳಲ್ಲಿ ಸಾಧನೆ ಮಾಡಿದ 35 ಸಾಧಕಿಯರನ್ನು ಈ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
Thursday, June 5, 2025
Friday, May 23, 2025
S S L C ಮರು ಮೌಲ್ಯಮಾಪನ ಸಿದ್ಧಗಂಗಾ ಯಶಸ್ವಿನಿ ಕೆ.ಪಿ ಗೆ 625 ಕ್ಕೆ 624
ದಾವಣಗೆರೆ ಮೇ23,
ನಗರದ ಶ್ರೀ ಸಿದ್ಧಗಂಗಾ ಕಾಂಪೋಜಿಟ್ ಹೈಸ್ಕೊಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಯಶಸ್ವಿನಿ ಕೆ.ಪಿ ಫಲಿತಾಂಶ ಪ್ರಕಟಗೊಂಡಾಗ 625 ಕ್ಕೆ 623 ಅಂಕಗಳಿಸಿ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ 3ನೇ ಸ್ಥಾನ ಪಡೆದುಕೊಂಡಿದ್ದಳು. ಹಿಂದಿ ವಿಷಯದಲ್ಲಿ ತನಗೆ 100 ಕ್ಕೆ 100 ಬರಬೇಕೆಂದು ವಿಶ್ವಾಸಪೂರ್ಣವಾಗಿ ಹೇಳಿದ್ದರಿಂದ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಳು. ಬಾಲಕಿಯ ವಿಶ್ವಾಸದಂತೆ ಹಿಂದಿಯಲ್ಲಿ 100ಕ್ಕೆ 100 ಪಡೆದಿದ್ದಾಳೆ. ಕನ್ನಡ ವಿಷಯದಲ್ಲಿ ಒಂದು ಅಂಕದ ಪ್ರಶ್ನೆಗೆ ಉತ್ತರ ತಪ್ಪಾಗಿದೆ. 124 ಬಂದಿರುವುದು ಸರಿ ಇದೆ ಎಂದು ಹೇಳುತ್ತಾಳೆ. ದಾವಣಗೆರೆ ಜಿಲ್ಲೆಗೆ ಮತ್ತು ಸಿದ್ಧಗಂಗಾ ಶಾಲೆಗೆ ಕೀರ್ತಿ ತಂದ ಈ ಬಾಲಕಿ ಮರು ಮೌಲ್ಯಮಾಪನದ ನಂತರ ಕನ್ನಡ 124, ಹಿಂದಿ 100, ಇಂಗ್ಲಿಷ್ 100, ಗಣಿತ 100, ವಿಜ್ಞಾನ 100 ಮತ್ತು ಸಮಾಜ 100. ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಯಶಸ್ವಿನಿ ಕೆ.ಪಿ ಯ ಈ ಅದ್ವಿತೀಯ ಸಾಧನೆಯನ್ನು ವಿದ್ಯಾಸಂಸ್ಥೆಯ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಶ್ಲಾಘಿಸಿ ಅಭಿನಂದಿಸಿದ್ದಾರೆ.
Tuesday, May 13, 2025
ಸಿದ್ಧಗಂಗಾ ಸಿಬಿಎಸ್ಇ 10ನೇ ತರಗತಿ ಕೃತಿಕಾ ಎಸ್. ವಿ. ಪ್ರಥಮ - ಶಾಲೆಗೆ 99% ಫಲಿತಾಂಶ
ದಾವಣಗೆರೆ ಮೇ, 13
ಕಳೆದ ಫೆಬ್ರವರಿ–ಮಾರ್ಚ್ನಲ್ಲಿ ನಡೆದ 10 ನೇ ತರಗತಿ ಸಿ ಬಿ ಎಸ್ ಇ ಬೋರ್ಡಿನ ಫಲಿತಾಂಶ ಪ್ರಕಟವಾಗಿದ್ದು ನಗರದ ಸಿದ್ಧಗಂಗಾ ಶಾಲೆಯ ಕೃತಿಕಾ ಎಸ್. ವಿ. ಶೇಕಡ 96 ಅಂಕಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಇಂಗ್ಲೀಷ್ 94, ಕನ್ನಡ 99, ಗಣಿತ 95, ವಿಜ್ಞಾನ 98, ಸಮಾಜ 94 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ. ಕೃತಿಕಾ- ವೀರಭದ್ರಪ್ಪ ಮತ್ತು ರಶ್ಮಿ ಕೆ. ಸಿ. ದಂಪತಿಗಳ ಪುತ್ರಿ. ದರ್ಶನ್ ಕೆ. ಸಿ. 93.80%, ನಿಖಿಲ್ ಎಂ. ಎಂ. 93.80%, ಡಯಾನಾ ಜಿ. ಕೆ. 93.40 %, ಸುಮುಖ್ ಬಿ. ಕೆ. 92.20%, ಸೃಷ್ಠಿ ಎಂ. ಎಸ್. 92%, ಪ್ರೀತಂ ಎಸ್. ಜಿ. ಸ್ವಾಮಿ 91.40%, ಸಿಂಚನಾ ವಿ. ಜಿ. 91.40%, ಸೌಕಾರ್ ಎಲ್. ಎಸ್. 90.80%, ದಾನೀಶ್ ಸಿ. ಟಿ. 90.60%, ರಾಹುಲ್ ಪಿ. ಐ. 90.40% ಪಡೆದಿದ್ದಾರೆ. ಶೇಕಡ 95 ಕ್ಕಿಂತ ಹೆಚ್ಚು ಓರ್ವ ವಿದ್ಯಾರ್ಥಿನಿ, 90% ಕ್ಕಿಂತ ಹೆಚ್ಚು 11 ಮಕ್ಕಳು, 85% ಕ್ಕಿಂತ ಹೆಚ್ಚು 26 ಮಕ್ಕಳು, 60% ಕ್ಕಿಂತ ಹೆಚ್ಚು 12 ಮಕ್ಕಳು ಉತ್ತಮ ಅಂಕಗಳನ್ನು ಗಳಿಸಿದ್ದಾರೆ. ನಿಖಿಲ್ ಎಂ. ಎಂ. ಮತ್ತು ಸಿಂಚನಾ ವಿ. ಜಿ. ಕನ್ನಡ ವಿಷಯದಲ್ಲಿ 100 ಕ್ಕೆ 100 ಮತ್ತು ದರ್ಶನ್ ಕೆ. ಸಿ. ವಿಜ್ಞಾನದಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.
ಅತ್ಯುತ್ತಮ ಫಲಿತಾಂಶ ನೀಡಿರುವ ಎಲ್ಲಾ ಮಕ್ಕಳನ್ನು ಮತ್ತು ಅವರ ಪಾಲಕರನ್ನು ಪ್ರಾಚಾರ್ಯರಾದ ಗಾಯಿತ್ರಿ ಚಿಮ್ಮಡ್ ಮತ್ತು ಅಧ್ಯಾಪಕ ವೃಂದದವರು ಅಭಿನಂದಿಸಿದ್ದಾರೆ. ದಾಖಲೆಯ ಫಲಿತಾಂಶ ನೀಡಿದ ಸಿ ಬಿ ಎಸ್ ಇ 10 ನೇ ತರಗತಿಯ ಎಲ್ಲ ಮಕ್ಕಳನ್ನು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರನ್ನು ಆಡಳಿತ ಮಂಡಳಿಯ ಮುಖ್ಯಸ್ಥೆ ಜಸ್ಟಿನ್ ಡಿʼಸೌಜ, ಕಾರ್ಯದರ್ಶಿ ಹೇಮಂತ್ ಮತ್ತು ನಿರ್ದೇಶಕ ಡಾ. ಜಯಂತ್ ಶ್ಲಾಘಿಸಿದ್ದಾರೆ.
Friday, May 2, 2025
SSLC ಫಲಿತಾಂಶ ಸಿದ್ಧಗಂಗಾ ಹೈಸ್ಕೂಲಿನ ಯಶಸ್ವಿನಿ ಕೆ. ಪಿ. ಗೆ 623/625 , ಜಿಲ್ಲೆಗೆ ಪ್ರಥಮ - ರಾಜ್ಯಕ್ಕೆ 3ನೇ ರಾå0ಕ್
ದಾವಣಗೆರೆ, ಮೇ 2.
ನಗರದ ಶ್ರೀ ಸಿದ್ಧಗಂಗಾ ಕಾಂಪೋಜಿಟ್ ಹೈಸ್ಕೂಲಿನ ಯಶಸ್ವಿನಿ ಕೆ. ಪಿ. 625 ಕ್ಕೆ 623 ಅಂಕಗಳನ್ನು ಗಳಿಸಿ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ 3ನೇ ರಾå0ಕ್ ಗಳಿಸಿದ್ದಾಳೆ. ಕನ್ನಡ 124, ಇಂಗ್ಲೀಷ್ 100, ಹಿಂದಿ 99,ಗಣಿತ 100, ವಿಜ್ಞಾನ 100, ಸಮಾಜ 100 ಒಟ್ಟು 623 ಅಂಕಗಳನ್ನು ಪಡೆದಿದ್ದಾಳೆ. ಯಶಸ್ವಿನಿ ಈಡಿಗಾರ್ 622, ಕೀರ್ತಿ ಡಿ. ಎಸ್. 622, ಸುಶ್ಮಿತ ಯು. 620, ಶ್ರೀ ರಕ್ಷ ಶ್ರೀನಿವಾಸ್ 612, ಯುಕ್ತ ಬಿ 612, ಹರ್ಷಿತ ಹೆಚ್. ವೈ 608, ಶ್ರೀದೇವಿ ಎಲ್. ಆರ್. 607, ಮುರುಳಿ ಜಿ ಆರ್. 606, ನಿಹಾರಿಕಾ ಸಿ. ಯು. 606, ನಿಶ್ಚಲ್ ಕೆ. ಪಿ. 606, ಚನ್ನಬಸಮ್ಮ ಕೆ. ಪಿ. ಎಂ. 605, ಅಜಯ್ ಆರ್. 604, ಕಲ್ಲೇಶ್ ಎಂ. 603, ಪ್ರಜ್ವಲ್ ಕೆ. ಯು. 603, ಅನ್ನಪೂರ್ಣ ಜೆ. ಕೆ. 602 ಬಿಂದು ಕೆ. ಎಸ್. 601, ಪ್ರತೀಕ್ಷಾ ಎ. ವಿ. 601, ಓಂಶುಕ್ಲಾ ಬಿ. ಕೆ. 600, ಪ್ರಜ್ವಲ್ ಆರ್ ಜಿ. 600, ತನುಶ್ರೀ ಕೆ ಜಿ. 600, ಒಟ್ಟು 21 ಮಕ್ಕಳು 625 ಕ್ಕೆ 600 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. 73 ಮಕ್ಕಳು ಶೇಕಡಾ 90 ರಷ್ಟು ಮಾರ್ಕ್ಸ್ ಪಡೆದಿದ್ದಾರೆ. ಡಿಸ್ಟಿಂಕ್ಷನ್ನಲ್ಲಿ 119, ಪ್ರಥಮ ದರ್ಜೆ 144, ದ್ವಿತೀಯ ದರ್ಜೆಯಲ್ಲಿ 28 ಮಕ್ಕಳು ಉತ್ತೀರ್ಣರಾಗಿ ಶಾಲೆಗೆ ಉತ್ತಮ ಫಲಿತಾಂಶ ನೀಡಿದ್ದಾರೆ. ಕನ್ನಡದಲ್ಲಿ 125 ಕ್ಕೆ 125 ನಾಲ್ಕು ವಿದ್ಯಾರ್ಥಿಗಳು, ಇಂಗ್ಲೀಷ್ನಲ್ಲಿ 8, ಹಿಂದಿಯಲ್ಲಿ 20, ವಿಜ್ಞಾನದಲ್ಲಿ 5 ಗಣಿತ 4, ಸಮಾಜ ವಿಜ್ಞಾನ 7 ಮಕ್ಕಳು, ಒಟ್ಟು 48 ಮಕ್ಕಳು 100 ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ.


.jpg)



%20(1).jpg)
.jpg)
.jpg)
