Friday, May 2, 2025

SSLC ಫಲಿತಾಂಶ ಸಿದ್ಧಗಂಗಾ ಹೈಸ್ಕೂಲಿನ ಯಶಸ್ವಿನಿ ಕೆ. ಪಿ. ಗೆ 623/625 , ಜಿಲ್ಲೆಗೆ ಪ್ರಥಮ - ರಾಜ್ಯಕ್ಕೆ 3ನೇ ರಾå0ಕ್‌


ದಾವಣಗೆರೆ, ಮೇ 2.

ನಗರದ ಶ್ರೀ ಸಿದ್ಧಗಂಗಾ ಕಾಂಪೋಜಿಟ್‌ ಹೈಸ್ಕೂಲಿನ ಯಶಸ್ವಿನಿ ಕೆ. ಪಿ. 625 ಕ್ಕೆ 623 ಅಂಕಗಳನ್ನು ಗಳಿಸಿ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ 3ನೇ ರಾå0ಕ್‌ ಗಳಿಸಿದ್ದಾಳೆ. ಕನ್ನಡ 124, ಇಂಗ್ಲೀಷ್‌ 100, ಹಿಂದಿ 99,ಗಣಿತ 100, ವಿಜ್ಞಾನ 100, ಸಮಾಜ 100 ಒಟ್ಟು 623 ಅಂಕಗಳನ್ನು ಪಡೆದಿದ್ದಾಳೆ. ಯಶಸ್ವಿನಿ ಈಡಿಗಾರ್‌ 622, ಕೀರ್ತಿ ಡಿ. ಎಸ್.‌ 622, ಸುಶ್ಮಿತ ಯು. 620, ಶ್ರೀ ರಕ್ಷ ಶ್ರೀನಿವಾಸ್‌ 612, ಯುಕ್ತ ಬಿ 612, ಹರ್ಷಿತ ಹೆಚ್.‌ ವೈ 608, ಶ್ರೀದೇವಿ ಎಲ್‌. ಆರ್‌. 607, ಮುರುಳಿ ಜಿ ಆರ್.‌ 606, ನಿಹಾರಿಕಾ ಸಿ. ಯು. 606, ನಿಶ್ಚಲ್‌ ಕೆ. ಪಿ. 606, ಚನ್ನಬಸಮ್ಮ ಕೆ. ಪಿ. ಎಂ. 605, ಅಜಯ್‌ ಆರ್‌. 604, ಕಲ್ಲೇಶ್‌ ಎಂ. 603, ಪ್ರಜ್ವಲ್‌ ಕೆ. ಯು. 603, ಅನ್ನಪೂರ್ಣ ಜೆ. ಕೆ. 602 ಬಿಂದು ಕೆ. ಎಸ್.‌ 601, ಪ್ರತೀಕ್ಷಾ ಎ. ವಿ. 601, ಓಂಶುಕ್ಲಾ ಬಿ. ಕೆ. 600, ಪ್ರಜ್ವಲ್‌ ಆರ್‌ ಜಿ. 600, ತನುಶ್ರೀ ಕೆ ಜಿ. 600, ಒಟ್ಟು 21 ಮಕ್ಕಳು 625 ಕ್ಕೆ 600 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. 73 ಮಕ್ಕಳು ಶೇಕಡಾ 90 ರಷ್ಟು ಮಾರ್ಕ್ಸ್‌ ಪಡೆದಿದ್ದಾರೆ. ಡಿಸ್ಟಿಂಕ್ಷನ್‌ನಲ್ಲಿ 119, ಪ್ರಥಮ ದರ್ಜೆ 144, ದ್ವಿತೀಯ ದರ್ಜೆಯಲ್ಲಿ 28 ಮಕ್ಕಳು ಉತ್ತೀರ್ಣರಾಗಿ ಶಾಲೆಗೆ ಉತ್ತಮ ಫಲಿತಾಂಶ ನೀಡಿದ್ದಾರೆ. ಕನ್ನಡದಲ್ಲಿ 125 ಕ್ಕೆ 125 ನಾಲ್ಕು ವಿದ್ಯಾರ್ಥಿಗಳು, ಇಂಗ್ಲೀಷ್‌ನಲ್ಲಿ 8, ಹಿಂದಿಯಲ್ಲಿ 20, ವಿಜ್ಞಾನದಲ್ಲಿ 5 ಗಣಿತ 4, ಸಮಾಜ ವಿಜ್ಞಾನ 7 ಮಕ್ಕಳು, ಒಟ್ಟು 48 ಮಕ್ಕಳು 100 ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ.




ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಯಶಸ್ವಿನಿ ಕೆ ಪಿ ಜ್ಯೋತಿಕಲಾ, ಪಾಲಾಕ್ಷಪ್ಪ ಕೆ ವಿ ದಂಪತಿಗಳ ಪುತ್ರಿ. ಶಾಲೆಗೆ ಅತ್ಯುತ್ತಮ ಫಲಿತಾಂಶ ಕೊಟ್ಟ ಎಲ್ಲಾ ಮಕ್ಕಳನ್ನು ಶಾಲೆಯ ಮುಖ್ಯಸ್ಥರಾದ ಜಸ್ಟಿನ್‌ ಡಿʼಸೌಜ,ಮುಖ್ಯ ಶಿಕ್ಷಕಿ ರೇಖಾರಾಣಿ, ಕಾರ್ಯದರ್ಶಿ ಡಿ. ಎಸ್.‌ ಹೇಮಂತ್‌, ನಿರ್ದೇಶಕ ಡಾ|| ಜಯಂತ್‌, ಬೋಧಕಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

No comments:

Post a Comment