ದಾರಣಗೆರೆ, ಏಪ್ರಿಲ್ 25
ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಎನ್. ರವಿಕಿರಣ್ ಮರುಮೌಲ್ಯಮಾಪನದ ನಂತರ 600ಕ್ಕೆ 597 ಅಂಕಗಳನ್ನು ಗಳಿಸಿ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ತೃತೀಯ ರಾåಂಕ್ ಗಳಿಸಿದ್ದಾನೆ. ಆಂಗ್ಲ ಭಾಷೆಯಲ್ಲಿ 100ಕ್ಕೆ 97 ಅಂಕ ಗಳಿಸಿದ್ದ ರವಿಕಿರಣ್ ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಿದ್ದನು. ಮರುಮೌಲ್ಯಮಾಪನದಲ್ಲಿ ಎರಡು ಅಂಕಗಳು ಹೆಚ್ಚಾಗಿ 100ಕ್ಕೆ 99 ಅಂಕ ಪಡೆದಿದ್ದಾನೆ. ಕನ್ನಡ 100, ಭೌತಶಾಸ್ತ್ರ 100, ಜೀವಶಾಸ್ತ್ರ 100 ಮತ್ತು ಗಣಿತ, ರಸಾಯನ ಶಾಸ್ತ್ರ ಹಾಗೂ ಆಂಗ್ಲ ಭಾಷೆಯಲ್ಲಿ ತಲಾ 99, ಒಟ್ಟು 597 ಅಂಕಗಳನ್ನು ಗಳಿಸಿ ಕಾಲೇಜಿಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಉಪ್ಪನಾಯಕನಹಳ್ಳಿಯ ನಾಗರಾಜ್ ಮತ್ತು ಸಿದ್ದಮ್ಮ ರೈತ ದಂಪತಿಗಳ ಪುತ್ರ ರವಿಕಿರಣ್ ಅಂಕಗಳ ಏರಿಕೆಯಿಂದ ಸಂತಸ ಪಟ್ಟಿದ್ದಾನೆ. ಬಾಲಕನ ನಿರೀಕ್ಷಿತ ಸಾಧನೆಗೆ ಸಿದ್ಧಗಂಗಾ ಆಡಳಿತ ಮಂಡಳಿ ಮತ್ತು ಬೋಧಕ ವರ್ಗದವರು ಅಭಿನಂದಿಸಿದ್ದಾರೆ.
No comments:
Post a Comment