Friday, May 23, 2025

S S L C ಮರು ಮೌಲ್ಯಮಾಪನ ಸಿದ್ಧಗಂಗಾ ಯಶಸ್ವಿನಿ ಕೆ.ಪಿ ಗೆ 625 ಕ್ಕೆ 624


ದಾವಣಗೆರೆ ಮೇ23,

ನಗರದ ಶ್ರೀ ಸಿದ್ಧಗಂಗಾ ಕಾಂಪೋಜಿಟ್‌ ಹೈಸ್ಕೊಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಯಶಸ್ವಿನಿ ಕೆ.ಪಿ ಫಲಿತಾಂಶ ಪ್ರಕಟಗೊಂಡಾಗ 625 ಕ್ಕೆ 623 ಅಂಕಗಳಿಸಿ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ 3ನೇ ಸ್ಥಾನ ಪಡೆದುಕೊಂಡಿದ್ದಳು. ಹಿಂದಿ ವಿಷಯದಲ್ಲಿ ತನಗೆ 100 ಕ್ಕೆ 100 ಬರಬೇಕೆಂದು ವಿಶ್ವಾಸಪೂರ್ಣವಾಗಿ ಹೇಳಿದ್ದರಿಂದ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಳು. ಬಾಲಕಿಯ ವಿಶ್ವಾಸದಂತೆ ಹಿಂದಿಯಲ್ಲಿ 100ಕ್ಕೆ 100 ಪಡೆದಿದ್ದಾಳೆ. ಕನ್ನಡ ವಿಷಯದಲ್ಲಿ ಒಂದು ಅಂಕದ ಪ್ರಶ್ನೆಗೆ ಉತ್ತರ ತಪ್ಪಾಗಿದೆ. 124 ಬಂದಿರುವುದು ಸರಿ ಇದೆ ಎಂದು ಹೇಳುತ್ತಾಳೆ. ದಾವಣಗೆರೆ ಜಿಲ್ಲೆಗೆ ಮತ್ತು ಸಿದ್ಧಗಂಗಾ ಶಾಲೆಗೆ ಕೀರ್ತಿ ತಂದ ಈ ಬಾಲಕಿ ಮರು ಮೌಲ್ಯಮಾಪನದ ನಂತರ ಕನ್ನಡ 124, ಹಿಂದಿ 100, ಇಂಗ್ಲಿಷ್‌ 100, ಗಣಿತ 100, ವಿಜ್ಞಾನ 100 ಮತ್ತು ಸಮಾಜ 100. ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಯಶಸ್ವಿನಿ ಕೆ.ಪಿ ಯ ಈ ಅದ್ವಿತೀಯ ಸಾಧನೆಯನ್ನು ವಿದ್ಯಾಸಂಸ್ಥೆಯ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಶ್ಲಾಘಿಸಿ ಅಭಿನಂದಿಸಿದ್ದಾರೆ.

No comments:

Post a Comment