Tuesday, May 13, 2025

ಸಿದ್ಧಗಂಗಾ ಸಿಬಿಎಸ್‌ಇ 10ನೇ ತರಗತಿ ಕೃತಿಕಾ ಎಸ್. ವಿ. ಪ್ರಥಮ - ಶಾಲೆಗೆ 99% ಫಲಿತಾಂಶ



ದಾವಣಗೆರೆ ಮೇ, 13

ಕಳೆದ ಫೆಬ್ರವರಿ–ಮಾರ್ಚ್‌ನಲ್ಲಿ ನಡೆದ 10 ನೇ ತರಗತಿ ಸಿ ಬಿ ಎಸ್‌ ಇ ಬೋರ್ಡಿನ ಫಲಿತಾಂಶ ಪ್ರಕಟವಾಗಿದ್ದು ನಗರದ ಸಿದ್ಧಗಂಗಾ ಶಾಲೆಯ ಕೃತಿಕಾ ಎಸ್‌. ವಿ. ಶೇಕಡ 96 ಅಂಕಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಇಂಗ್ಲೀಷ್‌ 94, ಕನ್ನಡ 99, ಗಣಿತ 95, ವಿಜ್ಞಾನ 98, ಸಮಾಜ 94 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ. ಕೃತಿಕಾ- ವೀರಭದ್ರಪ್ಪ ಮತ್ತು ರಶ್ಮಿ ಕೆ. ಸಿ. ದಂಪತಿಗಳ ಪುತ್ರಿ. ದರ್ಶನ್‌ ಕೆ. ಸಿ. 93.80%, ನಿಖಿಲ್‌ ಎಂ. ಎಂ.‌ 93.80%, ಡಯಾನಾ ಜಿ. ಕೆ. 93.40 %, ಸುಮುಖ್‌ ಬಿ. ಕೆ. 92.20%, ಸೃಷ್ಠಿ ಎಂ. ಎಸ್‌. 92%, ಪ್ರೀತಂ ಎಸ್. ಜಿ. ಸ್ವಾಮಿ 91.40%, ಸಿಂಚನಾ ವಿ. ಜಿ. 91.40%, ಸೌಕಾರ್‌ ಎಲ್. ಎಸ್‌. 90.80%, ದಾನೀಶ್‌ ಸಿ. ಟಿ. 90.60%, ರಾಹುಲ್‌ ಪಿ. ಐ. 90.40% ಪಡೆದಿದ್ದಾರೆ. ಶೇಕಡ 95 ಕ್ಕಿಂತ ಹೆಚ್ಚು ಓರ್ವ ವಿದ್ಯಾರ್ಥಿನಿ, 90% ಕ್ಕಿಂತ ಹೆಚ್ಚು 11 ಮಕ್ಕಳು, 85% ಕ್ಕಿಂತ ಹೆಚ್ಚು 26 ಮಕ್ಕಳು, 60% ಕ್ಕಿಂತ ಹೆಚ್ಚು 12 ಮಕ್ಕಳು ಉತ್ತಮ ಅಂಕಗಳನ್ನು ಗಳಿಸಿದ್ದಾರೆ. ನಿಖಿಲ್‌ ಎಂ. ಎಂ. ಮತ್ತು ಸಿಂಚನಾ ವಿ. ಜಿ. ಕನ್ನಡ ವಿಷಯದಲ್ಲಿ 100 ಕ್ಕೆ 100 ಮತ್ತು ದರ್ಶನ್‌ ಕೆ. ಸಿ. ವಿಜ್ಞಾನದಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.

ಅತ್ಯುತ್ತಮ ಫಲಿತಾಂಶ ನೀಡಿರುವ ಎಲ್ಲಾ ಮಕ್ಕಳನ್ನು ಮತ್ತು ಅವರ ಪಾಲಕರನ್ನು ಪ್ರಾಚಾರ್ಯರಾದ ಗಾಯಿತ್ರಿ ಚಿಮ್ಮಡ್‌ ಮತ್ತು ಅಧ್ಯಾಪಕ ವೃಂದದವರು ಅಭಿನಂದಿಸಿದ್ದಾರೆ. ದಾಖಲೆಯ ಫಲಿತಾಂಶ ನೀಡಿದ ಸಿ ಬಿ ಎಸ್‌ ಇ 10 ನೇ ತರಗತಿಯ ಎಲ್ಲ ಮಕ್ಕಳನ್ನು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರನ್ನು ಆಡಳಿತ ಮಂಡಳಿಯ ಮುಖ್ಯಸ್ಥೆ ಜಸ್ಟಿನ್‌ ಡಿʼಸೌಜ, ಕಾರ್ಯದರ್ಶಿ ಹೇಮಂತ್‌ ಮತ್ತು ನಿರ್ದೇಶಕ ಡಾ. ಜಯಂತ್‌ ಶ್ಲಾಘಿಸಿದ್ದಾರೆ.

No comments:

Post a Comment