ದಾವಣಗೆರೆ ಸಿದ್ಧಗಂಗಾ ಶಾಲೆಯಲ್ಲಿ ಮಕ್ಕಳಿಂದ
ನಡೆದಾಡುವ ದೇವರ ಬೃಹತ್ ರಂಗೋಲಿ ಚಿತ್ರ
ಜನವರಿ 23,
ಸಿದ್ಧಗಂಗೆಯ ದಿವ್ಯ ಚೈತನ್ಯ ಅಗಲಿ ಇಂದಿಗೆ ಮೂರು ದಿನ. ನಡೆದಾಡುವ ದೇವರ ಸ್ಮರಣೆ ನಾಡಿನಾದ್ಯಂತ ಹತ್ತು ಹಲವಾರು ವಿಧಗಳಲ್ಲಿ ಆಚರಿಸಿ ಭಕ್ತಗಣ ತಮ್ಮ ದುಃಖವನ್ನು ಶಮನಗೊಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಯುಗ ಪುರುಷ, ಶಿವಯೋಗಿಯ ದರ್ಶನ ಭಾಗ್ಯ ಪಡೆದವರು ತಮ್ಮ ನೆನಪುಗಳನ್ನು ಮೆಲಕು ಹಾಕುತ್ತಿದ್ದಾರೆ.
ತಪೋನಿಧಿಯ ಪಾದಸ್ಪರ್ಶದಿಂದ ಪುನೀತಗೊಂಡಿದ್ದ ದಾವಣಗೆರೆ ನಗರದ ಸಿದ್ಧಗಂಗಾ ಶಾಲೆಯ ಆವರಣದ ನೆಲದ ಮೇಲೆ ನಡೆದಾಡುವ ದೇವರ ಬೃಹತ್ ರಂಗೋಲಿ ಚಿತ್ರ ಬಿಡಿಸಿ ಅಂಗಳವನ್ನು ಮತ್ತಷ್ಟು ಪಾವನಗೊಳಿಸಿ ಮಕ್ಕಳು ತಮ್ಮ ಭಕ್ತಿ ಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದರು.
10ನೇ ತರಗತಿಯ ಸುಮಾರು 50 ಮಕ್ಕಳು ಈ ರಂಗೋಲಿ ಬಿಡಿಸುವ ಕಾರ್ಯ ಕೈಗೊಂಡರು. ಡಾ|| ಜಯಂತ್ ಅವರ ನಿರ್ದೇಶನದಲ್ಲಿ ಚಿತ್ರಕಲಾ ಶಿಕ್ಷಕರಾದ ಪ್ರಸನ್ನ ಕುಮಾರ್ ಕೆ. ಎನ್. ಮತ್ತು ಶಿವಕುಮಾರ್ ಟಿ. ಅವರ ನೇತೃತ್ವದಲ್ಲಿ ಹಸನ್ಮುಖದ ನಡೆದಾಡುವ ದೇವರ ಬೃಹತ್ ರಂಗೋಲಿ ಕಂಗೊಳಿಸಿತು. ನೂರು ಕೆಜಿಯಷ್ಟು ಬ್ಲ್ಯಾಕ್ ಆಕ್ಸೈಡ್ ಉಪಯೋಗಿಸಿ ಸುಮಾರು ಒಂದು ಗಂಟೆಯ ಅವಧಿಯಲ್ಲಿ ನಿಧಾನವಾಗಿ ಅರಳಿದ ಈ ರಂಗೋಲಿ ಎತ್ತರದ ಸ್ಥಳದಿಂದ ನೋಡಿದಾಗ ಕಣ್ಮನ ಸೆಳೆಯುವಂತಿದೆ. 90 X 90 ಅಡಿ ಸ್ಥಳದಲ್ಲಿ ರಂಗೋಲಿ ಮೂಡುತ್ತಿದ್ದ ಚಚ್ಚೌಕದ ಸುತ್ತಲೂ ನಿಂತ ಹೈಸ್ಕೂಲ್ ಮಕ್ಕಳು ಈ ರಂಗೋಲಿಗೊಂದು ಸುಂದರವಾದ ಚೌಕಟ್ಟು ಹೊಂದಿಸಿಕೊಟ್ಟರು. ಸಾರ್ವಜನಿಕ ವೀಕ್ಷಣೆಗೆ ಈ ರಂಗೋಲಿ ಶುಕ್ರವಾರದವರೆಗೆ ಲಭ್ಯವಿರುತ್ತದೆ. ಮೊದಲ ಮಹಡಿ ಹತ್ತಿ ನೋಡಿದರೆ ರಂಗೋಲಿಯಲ್ಲಿ ಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಹಸನ್ಮುಖ ಸ್ಪಷ್ಟವಾಗಿ ಗೋಚರವಾಗುತ್ತದೆ.

No comments:
Post a Comment