Monday, December 19, 2022

 ಸಿದ್ಧಗಂಗಾ ಕಾಲೇಜಿನ ಬಾಲಕ-ಬಾಲಕಿಯರಿಂದ

ರಾಷ್ಟ್ರ – ರಾಜ್ಯಮಟ್ಟದ ಕ್ರೀಡೆಗಳಲ್ಲಿ ಅಪ್ರತಿಮ ಸಾಧನೆ



ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ ರಾಜ್ಯ ಮಟ್ಟದ ಕ್ರೀಡೆಗಳಲ್ಲಿ ದಾವಣಗೆರೆಯ ಸಿದ್ಧಗಂಗಾ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಬಾಲಕ – ಬಾಲಕಿಯರು ಅತ್ಯುತ್ತಮ ಸಾಧನೆ ಮಾಡಿದ್ದಾರೆ. 

ಬಾಲಕಿಯರ ವಿಭಾಗದಿಂದ ಸೃಷ್ಠಿ ಕೆ ಬೆಳ್ಳೂಡಿ ರಾಜ್ಯ ಮಟ್ಟದ ಬಾಸ್ಕೆಟ್‌ ಬಾಲ್‌ನಲ್ಲಿ ದ್ವಿತೀಯ, ಯುವ ಸಬಲೀಕರಣ ಪ್ರಾಧಿಕಾರದ ವಿಭಾಗ ಮಟ್ಟದ ನೆಟ್‌ಬಾಲ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾಳೆ. ಹಾವೇರಿ ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಮಾನ್ಯ ಜೆ. ಮತ್ತು ದೀಪ್ತಿ, ಚಿಕ್ಕಬಳ್ಳಾಪುರದಲ್ಲಿ ನಡೆದ ಬಾಲ್‌ ಬ್ಯಾಡ್‌ಮಿಂಟನ್‌ನಲ್ಲಿ ಅಕ್ಷತಾ ಟಿ. ವಿ ಮತ್ತು ಸಿಂಧು ಸಿ. ವಿ, ಶಿವಮೊಗ್ಗದಲ್ಲಿ ನಡೆದ ಕರಾಟೆಯಲ್ಲಿ ರಕ್ಷಾ ಜಿ. ಆರ್, ಉಡುಪಿಯಲ್ಲಿ ನಡೆದ ವಾಲಿಬಾಲ್‌ನಲ್ಲಿ ಕವನ ವೈ ಮತ್ತು ಸ್ನೇಹ ಟಿ. ಬಿ, ಬೆಂಗಳೂರು ಗ್ರಾಮಾಂತರದಲ್ಲಿ ನಡೆದ ಥ್ರೊ ಬಾಲ್‌ ನಲ್ಲಿ ಶ್ರೀಕಮಲ, ಮಂಡ್ಯ ಜಿಲ್ಲೆಯಲ್ಲಿ ನಡೆದ ಚೆಸ್‌ನಲ್ಲಿ ಅನುಷಾ ಹೆಚ್, ದೀಪಾ ಜೆ. ಮೈದೂರ್‌ ಹಾಗೂ ರಾಯಚೂರು ಜಿಲ್ಲೆಯಲ್ಲಿ ನಡೆದ ಟೆನ್ನಿಸ್‌ ವಾಲಿಬಾಲ್‌ನಲ್ಲಿ ಸುಪ್ರಿಯ ಎಂ, ನಂದಿತ ವಿ, ಪ್ರಕಾಶ್‌, ರೇಣುಕಾ ಎಂ, ಧನುಷ್‌ ಕೆ. ಜೆ, ಸುಪ್ರಿಯ, ಹರ್ಷಿತ  ಎ. ಎನ್ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ಜಿಲ್ಲೆಗೆ, ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಬಾಲಕರ ವಿಭಾಗದಲ್ಲಿ ವೈಭವ್‌‌ ಎಸ್, ವಿನಾಯಕ ಬಿ ತಮಿಳು ನಾಡಿನ ದಿಂಡಿಗಲ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ರೋಲ್‌ಬಾಲ್‌ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ರಾಯಚೂರಿನಲ್ಲಿ ನಡೆದ ರಾಜ್ಯ ಮಟ್ಟದ ಟೆನ್ನಿಸ್‌ ವಾಲಿಬಾಲ್‌ನಲ್ಲಿ ಭಾಗವಹಿಸಿದ ಶಶಾಂಕ ಕೆ. ಎಸ್, ಕಾರ್ತಿಕ್  ಟಿ. ವಿ, ಸುಹಾಸ್‌, ಧನುಷ್‌ ಎಲ್, ಅವನೀಶ್‌ ಡಿ. ಹೆಚ್ , ಶಿವರಾಜ್‌ ಹೆಚ್.‌ ಬಿ ಇವರಲ್ಲಿ ಕಾರ್ತಿಕ್  ಟಿ. ವಿ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ನಡೆದ ಚೆಸ್‌ನಲ್ಲಿ ಆದಿತ್ಯ ದೀಪಕ್‌, ಅಭಿಷೇಕ್‌ ವೈ. ಎಂ ಬೆಸ್ಟ್‌ ಆಟಗಾರರಾಗಿದ್ದರು. ಆದಿತ್ಯ ದೀಪಕ್‌ ಜಾರ್ಖಂಡ್ ನಲ್ಲಿ ನಡೆಯುವ ರಾಷ್ಟ್ರಮಟ್ಟದ ಚೆಸ್‌ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾನೆ. 

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದ ಕ್ರೀಡೆಗಳಲ್ಲಿ ಉಲ್ಲಾಸ್‌ ರೆಡ್ಡಿ, ಸಿದ್ಧನಗೌಡ, ಹರೀಶ್‌ ಹೆಚ್.‌ ಕೆ ಇವರು ರಾಜ್ಯಮಟ್ಟದ ಥ್ರೋಬಾಲ್‌ನಲ್ಲಿ, ಸೂಫಿಯಾನ್‌ ಎಸ್.‌ ಎಂ ಚಿಕ್ಕೋಡಿ ಜಿಲ್ಲೆಯಲ್ಲಿ ನಡೆದ ಷಟಲ್‌ ಬ್ಯಾಡ್ಮಿಂಟನ್‌ ನಲ್ಲಿ, ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಕರಾಟೆಯಲ್ಲಿ ಮನೋಜ್‌ ಶೀಲವಂತ್‌ ಮತ್ತು ಮಧು, ಹಾವೇರಿ ಜಿಲ್ಲೆಯಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ಶಿವರಾಜ್‌ ಸಿ. ಜೆ ಮತ್ತು ವಿನಾಯಕ ಕೆ. ಹಾಗೂ ಮೈಸೂರು ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಟೇಬಲ್‌ ಟೆನ್ನಿಸ್‌ನಲ್ಲಿ ಮಲ್ಲಿಕಾರ್ಜುನ್  ಜೆ. ಎಸ್ ಮತ್ತು ಅಭಿಷೇಕ್‌ ಬಿ. ಎಸ್ ಉತ್ತಮ ಪ್ರದರ್ಶನ ನೀಡಿ ಸಿದ್ಧಗಂಗಾ ಕಾಲೇಜಿನ ಉತ್ತಮ ಕ್ರೀಡಾಪಟುಗಳೆಂದು ಹೆಸರು ಗಳಿಸಿದ್ದಾರೆ.

ರಾಷ್ಟ್ರ – ರಾಜ್ಯ ಮಟ್ಟದಲ್ಲಿ ತಮ್ಮ ಕ್ರೀಡಾ ಪ್ರತಿಭೆ ಮೆರೆದ ಬಾಲಕ – ಬಾಲಕಿಯರಿಗೆ ಸಿದ್ಧಗಂಗಾ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರು ಅಭಿನಂದನೆ ಸಲ್ಲಿಸಿದ್ದಾರೆ.

Friday, December 16, 2022

 ಪ್ರತಿಭಾ ಕಾರಂಜಿ : ಸಿದ್ಧಗಂಗಾ ಫಲ್ಗುಣಿ ರಾಜ್ಯ ಮಟ್ಟಕ್ಕೆ ಆಯ್ಕೆ


ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸಿದ್ಧಗಂಗಾ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ  ಫಲ್ಗುಣಿ ಜಿ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಹಂತ 3 ರಲ್ಲಿ ಕನ್ನಡ ಭಾಷಾ ಬೆಳವಣಿಗೆ ಮತ್ತು ಅಭಿವೃದ್ಧಿಯ ಬಗ್ಗೆ ನಿರ‍್ಗಳವಾಗಿ ಭಾಷಣ ಮಾಡಿದ ಈ ಬಾಲಕಿ ಕ್ಲಸ್ಟರ್‌, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಈಗ ರಾಜ್ಯ ಮಟ್ಟದ ಸ್ರ‍್ಧೆಗೆ ರ‍್ಹಳಾಗಿದ್ದಾಳೆ. ಸುಪ್ರಿಯಾ ಮತ್ತು ವಿ. ಗಿರಿ ಯವರ ಪುತ್ರಿ ಫಲ್ಗುಣಿಗೆ ಶಾಲಾ ಆಡಳಿತ ಮಂಡಳಿಯವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.

Wednesday, November 2, 2022

ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ವೈಶಿಷ್ಠ್ಯ ಪೂರ್ಣ ಆಚರಣೆ



ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ
ವೈಶಿಷ್ಠ್ಯ  ಪೂರ್ಣ ಆಚರಣೆ
ನ.೧
೬೭ನೇ ಕನ್ನಡ ರಾಜ್ಯೋತ್ಸವವನ್ನು ನಗರದ ಸಿದ್ಧಗಂಗಾ ಶಾಲಾ-ಕಾಲೇಜಿನ ಮಕ್ಕಳು ವೈಶಿಷ್ಠö್ಯಪೂರ್ಣವಾಗಿ ಆಚರಿಸಿದರು. ಬೆಳಿಗ್ಗೆ ೦೮:೩೦ಕ್ಕೆ ಸಂಸ್ಥೆಯ ಹಿರಿಯ ಶಿಕ್ಷಕಿ ರಮಾದೇವಿ ಅವರಿಂದ ಧ್ವಜಾರೋಹಣೆ ನೆರವೇರಿತು. ನಾಡಗೀತೆ ನಂತರ ಉದಯವಾಗಲಿ ಕನ್ನಡನಾಡು, ಬಾರಿಸು ಕನ್ನಡ ಡಿಂಡಿಮ, ಹಚ್ಚೇವು ಕನ್ನಡದ ದೀಪ, ವಿಶ್ವವಿನೂತನ ಗೀತೆಗಳನ್ನು ಒಟ್ಟಾಗಿ ಹಾಡಿ ಮಕ್ಕಳು ನಾಡಪ್ರೇಮ, ಭಾಷಾ ಪ್ರೇಮವನ್ನು ಸಂಗೀತದ ಮೂಲಕ ಪ್ರಸ್ತುತ ಪಡಿಸಿದರು. ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಸಂತೋಷ್‌ರವರು ಮೈಸೂರು ರಾಜ್ಯ ಹೇಗೆ ಕರ್ನಾಟಕ ಎಂಬ ಹೆಸರು ಪಡೆಯಿತು ಹಾಗೂ ಕರ್ನಾಟಕ ಏಕೀಕರಣಕ್ಕಾಗಿ ದುಡಿದ ಮಹನೀಯರ ಬಗ್ಗೆ ಸವಿಸ್ತಾರವಾಗಿ ತಿಳಿಸುತ್ತಾ ಕನ್ನಡ ಭಾಷೆಗೆ ವಿದೇಶಿಯರ ಕೊಡುಗೆಯನ್ನು ಸ್ಮರಿಸಿದರು. ೧೦ನೇ ತರಗತಿ ವಿದ್ಯಾರ್ಥಿನಿ ವರ್ಷಿಣಿ ಕನ್ನಡ ಭಾಷೆಯ ಮಹತ್ವವನ್ನು ತಿಳಿಸಿದಳು. ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ’ಸೌಜ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಜಿ. ಸಿ. ನಿರಂಜನ್‌ರವರು ವಂದನಾರ್ಪಣೆ ಸಲ್ಲಿಸಿದರು. ಶಾಲಾ-ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದು ಕಾರ್ಯಕ್ರಮ ವೀಕ್ಷಿಸಿದರು. ಕನ್ನಡ ಬಾವುಟಗಳಿಂದ ಸಿಂಗಾರಗೊAಡ ಶಾಲಾ ಆವರಣ, ಕನ್ನಡಾಂಬೆಯ ಪೂಜಾ ಕಾರ್ಯಕ್ರಮದಿಂದಾಗಿ ಕಾರ್ಯಕ್ರಮ ಹೆಚ್ಚು ಮೆರಗು ಪಡೆಯಿತು. 



 

Thursday, September 1, 2022

ಕರಾಟೆಯಲ್ಲಿ ನಮ್ರತಾ ವಿಭೂತಿ ಸಾಧನೆ


2022 ರ ಡಾ. ಎಪಿಜೆ ಅಬ್ದುಲ್ ಕಲಾಂ ಸ್ಮಾರಕ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ಸಿದ್ಧಗಂಗಾ ಬಾಲಕಿ ನಮ್ರತಾ U ವಿಭೂತಿ ಕಟಾ ಮತ್ತು ಕುಮ್ಟೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾಳೆ. ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಆಗಸ್ಟ್ 28 ರಂದು ನಡೆದ ಈ ಸ್ಪರ್ಧೆಗಳನ್ನು ಮಾರ್ಷಿಯಲ್ ಆರ್ಟ್ಸ್ ಅಕಾಡೆಮಿಯವರು ಆಯೋಜಿಸಿದ್ದರು. ಪದಕಗಳನ್ನು ಮತ್ತು ಪ್ರಶಸ್ತಿ ಪತ್ರಗಳನ್ನು ಪಡೆದಿರುವ ನಮ್ರತಾಳನ್ನು ತಾಯಿ ಪದ್ಮ ಮತ್ತು ತಂದೆ ಉಮಾಪತಿಯವರು ಹಾಗೂ ಸಿದ್ಧಗಂಗಾ ಶಾಲೆಯ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ. 



12 ಅಡಿ ಎತ್ತರದ ಸಿದ್ಧಗಂಗಾ ಪರಿಸರ ಸ್ನೇಹಿ ಗಣೇಶ ಮೂರ್ತಿ












12 ಅಡಿ ಎತ್ತರದ ಸಿದ್ಧಗಂಗಾ ಪರಿಸರ ಸ್ನೇಹಿ ಗಣೇಶ ಮೂರ್ತಿ 
ಪ್ರತಿ ವರ್ಷದಂತೆ ಈ ವರ್ಷವೂ ದಾವಣಗೆರೆಯ ಸಿದ್ಧಗಂಗೆಯ ಆವರಣದಲ್ಲಿ ಬೃಹತ್ ಗಣಪ ಸಭಾ ಮಂಟಪದಲ್ಲಿ ಕಂಗೊಳಿಸುತ್ತಿದ್ದಾನೆ. 12 ಅಡಿ ಎತ್ತರದ ಪೇಪರ್ ಗಣೇಶ ಸರ್ವಾಂಗ ಸುಂದರವಾಗಿದ್ದು ಶಿಲಾ ಮೂರ್ತಿಯಂತೆ ಕಾಣುತ್ತಿದ್ದಾನೆ. ಶಾಲೆಯ ಚಿತ್ರಕಲಾ ಶಿಕ್ಷಕರಾದ ಯೋಗಿಪ್ರಸಾದ್, ರಾಜೇಶ್,ರಾಜಶೇಖರ್, ಹೀನಾ ಕೌಸರ್, ಸ್ವಾತಿ, ಪ್ರಿಯಾಂಕ, ಇವರ ಕೈ ಚಳಕದಿಂದ ಮೂಡಿದ ಈ ಗಣಪನನ್ನು ತಯಾರಿಸುವಲ್ಲಿ 9 ಮತ್ತು 10 ನೇ ತರಗತಿ ಮಕ್ಕಳು ಕೈ ಜೋಡಿಸಿದ್ದರು. ತಾವೇ ರೂಪಿಸಿದ ಗಣಪ ಎಂಬ ಹೆಮ್ಮೆ ಶಾಲಾ ಮಕ್ಕಳದು. ಪ್ರತಿಷ್ಠಾಪನೆಗೆ ಮುನ್ನ ಪ್ರಮುಖ ಬೀದಿಗಳಲ್ಲಿ ಗಣಪನ ಮೆರವಣಿಗೆ ಮಾಡಿದರು. ಮಕ್ಕಳು ಸಾಂಪ್ರದಾಯಿಕ ಉಡುಗೆ ಧರಿಸಿ ಭಕ್ತಿಗೀತೆಗಳನ್ನು ಹಾಡುತ್ತಾ ಮೆರವಣಿಗೆಯಲ್ಲಿ ಸಾಗುತ್ತಿದ್ದ ದೃಶ್ಯ ಕಣ್ಮನ ಸೆಳೆಯುವಂತಿತ್ತು. ನಂದಿಕೋಲು, ಪಟಗಳು, ಬಣ್ಣ ಬಣ್ಣದ ಛತ್ರಿಗಳು ಗಣಪನ ಶೋಭೆಯನ್ನು ಇನ್ನಷ್ಟು ಹೆಚ್ಚಿಸಿತು. ಮಧ್ಯಾನ್ಹ 12 ಗಂಟೆಗೆ ಗಣೇಶನ ಪ್ರತಿಷ್ಠಾಪನೆ ವಿಜೃಂಭಣೆಯಿಂದ ನೆರವೇರಿತು. ಸಾರ್ವಜನಿಕರ ವೀಕ್ಷಣೆಗೆ ಅಪರೂಪದ ಈ ಪರಿಸರ ಸ್ನೇಹಿ ಪೇಪರ್ ಗಣಪತಿ ಸೆಪ್ಟೆಂಬರ್ 9 ರ ವರೆಗೆ ಲಭ್ಯವಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಹೇಮಂತ್ ಮತ್ತು  ನಿರ್ದೇಶಕ ಜಯಂತ್ ಅವರು ತಿಳಿಸಿದ್ದಾರೆ. 

Tuesday, August 30, 2022

ಸಿದ್ಧಗಂಗಾ ಸ್ಕೌಟ್-ಗೈಡ್ಸ್ ಮಕ್ಕಳಿಂದ ಪರಿಸರ ಗಣಪತಿ

 













ವಿಘ್ನನಿವಾರಕ, ವಿದ್ಯಾ ಗಣಪತಿಯ ವಿವಿಧ  ಆಕಾರ - ಗಾತ್ರದ  ಗಣಪತಿಗಳು ಸಿದ್ಧಗಂಗಾ ಅಂಗಳದಲ್ಲಿ ಇಂದು ಕಂಗೊಳಿಸಿದವು . ವಿಶೇಷವೆಂದರೆ ಈ ಎಲ್ಲಾ ಗಣಪತಿಗಳು ಪರಿಸರ ಸ್ನೇಹಿ ಗಣಪಗಳಾಗಿದ್ದವು . ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ ಸ್ಕೌಟ್ಸ್ ,ಗೈಡ್ಸ್  ಮಕ್ಕಳು ಮೈದಾ ,ಅರಿಶಿನ ,ಜೇಡಿ ಮಣ್ಣು ,ಸೋಪು ,ಗೋಧಿಹಿಟ್ಟು  ಹೀಗೆ  ಸ್ಥಳೀಯ ಲಭ್ಯ ಪರಿಸರ ವಸ್ತುಗಳಿಂದ ಗಣೇಶನನ್ನು ನಿರ್ಮಿಸಿದ್ದರು . ಪುಟ್ಟ ಪುಟ್ಟ  ಕೈಗಲ್ಲಿ  ಸುಂದರ ಗಣಪಗಳು ವಿಶೇಷ  ಭೂಷಣಗಳೊಂದಿಗೆ  ಅಲಂಕೃತಗೊಂಡಿದ್ದವು .  ಎಲ್ .ಟಿ  ಶಶಿಕಲಾ ಅವರ  ನೇತೃತ್ವದಲ್ಲಿ  ಶಾಲೆಯ ಗೈಡ್ಸ್  ಶಿಕ್ಷಕರಾದ ನಿರ್ಮಲ , ಮಂಜುಳ , ದೀಪ ಎನ್ , ಸುನೀತಾ , ಸುನೀತಾಬಾಯಿ , ವೇದಾವತಿ , ವಾಹಿದಾ  ಮತ್ತು  ಸ್ಕೌಟ್ ಮಾಸ್ಟರ್ ಗಳಾದ  ಆರೋಗ್ಯಮ್ಮ ,ದುಗ್ಗಪ್ಪ ,ಮಹೇಶ್ , ಶ್ರೀನಿವಾಸ್ ,ಸಾಮ್ಯಾನಾಯ್ಕ , ಎ ಡಿ ಸಿ  ಸ್ಕೌಟ್  ಡಾ।। ಜಯಂತ್ , ಎ ಡಿ ಸಿ ಗೈಡ್ಸ್  ರೇಖಾರಾಣಿ , ಖಜಾಂಚಿ ಗಾಯತ್ರಿಯವರು ಮಕ್ಕಳಿಗೆ ಮಾರ್ಗದರ್ಶನ  ನೀಡಿ ಗಣೀಶ ಹಬ್ಬದ ಸಂಭ್ರಮ ಹಂಚಿಕೊಂಡರು .

Tuesday, August 16, 2022

75 th INDEPENDENCE DAY





 











ಸ್ವಾತಂತ್ರ ಸಂಭ್ರಮದ  75 ವರ್ಷಗಳ ಇತಿಹಾಸ  ತೆರೆದಿಟ್ಟ ಸಿದ್ದಗಂಗಾ ಶಾಲಾ ಕಾಲೇಜಿನ ಮಕ್ಕಳು

ಕ್ಷಣಕ್ಕೊಂದು ದೃಶ್ಯ , ಗಳಿಗೆಗೊಂದು ಘಟನೆ . ವೀಕ್ಷಕರು  ಕಣ್ಣು ಮಿಟುಕಿಸಲೂ  ಇಚ್ಛೆ ಪಡದಂತೆ  ಸಹಸ್ರಾರು ಮಕ್ಕಳ ನೃತ್ಯ  ವೈಭವವನ್ನು  ಇಂದು ನಗರದ ಕ್ರೀಡಾಂಗಣದಲ್ಲಿ  ಕಣ್ತುಂಬಿಕೊಂಡರು.  ಸಿದ್ದಗಂಗಾ ಸಂಸ್ಥೆಯ ಶಾಲಾ ಕಾಲೇಜಿನ ಎರಡು ಸಾವಿರಕ್ಕೂ ಹೆಚ್ಚು  ಮಕ್ಕಳು ಅಮೃತ ಮಹೋತ್ಸವಕ್ಕೆ  " ವಂದೇ ಮಾತರಂ " ನೃತ್ಯ ರೂಪಕದ  ಮೂಲಕ ದೇಶಭಕ್ತಿಯ ಸಂಚಲನ ಮೂಡಿಸಿದರು. 

ಕಾರ್ಗಿಲ್ ಯುದ್ಧ , ಪುಲ್ವಾಮ ಘಟನೆ, ಯೋಧರ ಹೋರಾಟದ ಮೂಲಕ ಅವರಿಗೆ ಶ್ರದ್ಧಾಂಜಲಿ  ಸಲ್ಲಿಸಿದರೆ , ಭಾರತೀಯ  ನೃತ್ಯ ಪರಂಪರೆಗಳನ್ನು  ಏಕ ಕಾಲದಲ್ಲಿ ಅನಾವರಣಗೊಳಿಸಿ  ವೈವಿಧ್ಯತೆಯಲ್ಲಿ ಏಕತೆ ಮೆರೆದರು. ಭರತನಾಟ್ಯ , ಮಣಿಪುರಿ ,ಕಥಕ್ಕಳಿ , ಪೂಜಾ ಕುಣಿತ , ನಂದಿಕೋಲು , ಜನಪದ  ನೃತ್ಯಗಳಲ್ಲಿ ಏಕ ಕಾಲದಲ್ಲಿ ಮಕ್ಕಳು ಗೀತೆಗೆ ತಕ್ಕ ಹೆಜ್ಜೆ ಹಾಕುತ್ತಾ ಇಡೀ  ಕ್ರೀಡಾಂಗಣವನ್ನು  ತ್ರಿವರ್ಣ ಧ್ವಜಮಯ  ಗೊಳಿಸಿದರು . ಪ್ರಾರಂಭದಲ್ಲಿ ವಿಜ್ಞಾನಿಗಳು  ಇಸ್ರೋ  ಸಂಸ್ಥೆಯಿಂದ  ರಾಕೆಟ್ ಉಡಾವಣೆಯನ್ನು  ಯಶಸ್ವಿಯಾಗಿ  ಮಾಡಿದರು . ನಂತರ ಇಡೀ ಭೂಮಂಡಲವನ್ನು  ವ್ಯಾಪಿಸಿದ  ಕರೋನಾ  ವಿರುದ್ಧ  ಭಾರತೀಯರು  ಹೋರಾಟ ನಡೆಸಿದ್ದು, ವಿಜ್ಞಾನಿಗಳು ಲಸಿಕೆ ಕಂಡು ಹಿಡಿದು ಕರೋನಾ ಮೆಟ್ಟಿ ನಿಂತ  ದೃಶ್ಯ  ಊಹೆಗೂ ಮೀರಿದ್ದಾಗಿತ್ತು.  ವೈದ್ಯರು  ಕರೋನಾ ರೋಗಿಗಳನ್ನು  ಉಳಿಸಲು  ನಡೆಸಿದ ಹೋರಾಟ ,ಕರೋನಾ ವೈರಸ್ ಗಳು  ಸ್ವೇಚ್ಚೆ ಯಾಗಿ  ಜನ ಜಂಗುಳಿಯನ್ನು  ಕಂಗಾಲಾಗಿಸಿದ ಮನಕಲುಕುವ ದೃಶ್ಯ ಎರಡು ವರ್ಷಗಳ  ಕರೋನಾ ಆಘಾತವನ್ನು ನೆನಪಿಸುವಂತೆ  ಮಾಡಿತು . ಕ್ರೀಡಾಂಗಣ ಸ್ತಬ್ಧವಾಗಿ  ಕೇವಲ ಚಪ್ಪಾಳೆ  ಶಬ್ದ  ಮಾತ್ರ  ಕೇಳುತಿತ್ತು . ದೃಶ್ಯಕ್ಕೆ  ತಕ್ಕ ಪರಿಕರ , ಕಟೌಟ್ ಗಳು ನೃತ್ಯ ರೂಪಕದ ಶೋಭೆ ಹೆಚ್ಚಿಸಿತು . ಹಿನ್ನಲೆಯಲ್ಲಿ  ಸುಮಾರು 900  ಬಾಲಕರು ಜೈಹಿಂದ್ ,ಇಂಡಿಯಾ ,ಅಬ್ದುಲ್ ಕಲಾಂ ,ಪಿ . ಎಸ್ . ಎಲ್ . ವಿ ,ಪುಲ್ವಾಮ  ಹೀಗೆ  ಸಂದರ್ಭಕ್ಕೆ  ತಕ್ಕಂತೆ  ಇಂಗ್ಲಿಷ್  ಅಕ್ಷರ  ಜೋಡಣೆ ನಡೆಸಿ ವೀಕ್ಷಕರನ್ನು  ಬೆರಗಾಗಿಸಿದರು. ಡಾll ಜಯಂತ್ ರವರ ಪರಿಕಲ್ಪನೆಯಲ್ಲಿ  ರೂಪುಗೊಂಡ ನೃತ್ಯ ರೂಪಕಕ್ಕೆ  ಸಂಸ್ಥೆಯ  ಎಲ್ಲ  ಶಿಕ್ಷಕ - ಶಿಕ್ಷಕಿಯರು  ಸಹಕರಿಸಿ  ಯಶಸ್ವಿಗೊಳಿಸಿ ಕೊಟ್ಟಿದ್ದು  ಪಾಲಕರ ಸಂಭ್ರಮ  ಇಮ್ಮಡಿಗೊಳಿಸಿತು .  ಕಣ್ಣಿಗೆ ಬಟ್ಟೆ ಕಟ್ಟಿಕೊಂಡು  ವಿಜ್ಞಾನಿ ಕಲಾಂ ಮತ್ತು ಸಾರಾಭಾಯಿ  ಅವರ ಬೃಹತ್ ಚಿತ್ರ ಮೂಡಿಸಿದ  ಮಕ್ಕಳ ಏಕಾಗ್ರತೆಗೆ  ವೀಕ್ಷಕರು ಬೆರಗಾದರು. 



 

Friday, August 12, 2022

FLAG MARCH 75th INDEPENDENCE DAY


 


75 ನೇ  ಸ್ವಾತಂತ್ರ ಸಂಭ್ರಮ 
ಸಾಗರದಂತೆ  ಹರಿದು ಬಂದ ಸಿದ್ದಗಂಗಾ ಶಾಲಾ ಕಾಲೇಜಿನ ಮಕ್ಕಳು 

ಎತ್ತ ನೋಡಿದರೂ ತ್ರಿವರ್ಣ ಧ್ವಜಗಳು , ಸಾಗರದಂತೆ  ಹರಿದು ಬಂದ ವಿದ್ಯಾರ್ಥಿ ಸಮೂಹ . ಸೂರ್ಯ ರಶ್ಮಿಗೆ ಮಿರಮಿರನೆ ಮಿಂಚುತ್ತಿದ್ದ ಬಾವುಟಗಳು . ಮುಗಿಲು ಮುಟ್ಟಿದ ಉತ್ಸಾಹ. " ಜೈ ಭಾರತ್ ಮಾತಾಕೀ " , " ವಂದೇ ಮಾತರಂ " ಘೋಷಣೆಗಳು  ರಸ್ತೆಗಳಲ್ಲಿ ಅನುರಣಿಸಿತು . ನಾಗರೀಕರು ಬೆಕ್ಕಸ ಬೆರಗಾಗಿ ನೋಡುತ್ತಿದ್ದರು . ಶಿಸ್ತಿನಿಂದ ಹೆಜ್ಜೆ ಹಾಕಿದ ಸಾವಿರಾರು ಮಕ್ಕಳು ರಾಷ್ಟ್ರಭಕ್ತಿಯನ್ನು ಆವಾಹಿಸಿಕೊಂಡಿದ್ದರು . ಬಿಸಿಲು - ಮಳೆ  ಲೆಕ್ಕಿಸದೆ  ಡಾಂಗೆ ಪಾರ್ಕ್ ರಸ್ತೆಯಿಂದ - ಶಿವಪ್ಪಯ್ಯ ಸರ್ಕಲ್ - ಜಯದೇವ ಸರ್ಕಲ್ - ಅಂಬೇಡ್ಕರ್ ಸರ್ಕಲ್ - ವಿದ್ಯಾರ್ಥಿ ಭವನ  ಸರ್ಕಲ್ ದಾಟಿ ಸಂಸ್ಥೆಯತ್ತ ಹೆಜ್ಜೆ ಹಾಕಿದ ಮಕ್ಕಳು ರಸ್ತೆಯುದ್ದಕ್ಕೂ ಸಂಚಲನ ಮೂಡಿಸಿದರು . 


ಈ ಬೃಹತ್ ಮೆರವಣಿಗೆಗೆ ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರಾದ ವಿಶ್ವನಾಥ್ P. ಮುದ್ದಜ್ಜಿಯವರು ಚಾಲನೆ ನೀಡಿದರು . ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ  ಜಿ .ಆರ್.ತಿಪ್ಪೇಶಪ್ಪ, ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ  ನಿರಂಜನಮೂರ್ತಿ , ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾದ ಗಡಿಗುಡಾಳ್ ಮಂಜುನಾಥ್ , ಯುವ ಕಾಂಗ್ರೆಸ್ ನಾಯಕ  K . G . ಶಿವಕುಮಾರ್ , ಶಾಲಾ ಕಾಲೇಜಿನ ಸಿಬ್ಬಂದಿ ವರ್ಗದವರು ಹಾಜರಿದ್ದರು .  ಬ್ಯಾoಡ್  ಸೆಟ್ಟಿನ ಸುಮಧುರ ನಾದಕ್ಕೆ ಮಕ್ಕಳು ಶಿಸ್ತಿನಿಂದ  ಹೆಜ್ಜೆ  ಹಾಕಿದರು . ರಾಷ್ಟ್ರಗೀತೆ  ಹಾಡುವುದರ ಮೂಲಕ ಪ್ರಾರಂಭವಾದ ಮೆರವಣಿಗೆ ರಾಷ್ಟ್ರ  ಗೀತೆಯೊಂದಿಗೆ ಮುಕ್ತಾಯಗೊಂಡಿತು . " ಆಜಾದಿ ಕೀ ಅಮೃತ್ ಮಹೋತ್ಸವ " ವನ್ನು  ಸಿದ್ದಗಂಗಾ  ವಿದ್ಯಾ  ಸಂಸ್ಥೆ  ಅರ್ಥಪೂರ್ಣವಾಗಿ  ಆಚರಿಸಿತು . ಸಂಸ್ಥೆಯ ಕಾರ್ಯದರ್ಶಿ D.S. ಹೇಮಂತ್  ಮತ್ತು  ನಿರ್ದೇಶಕ ಡಾll ಜಯಂತ್ ರವರ  ಮಾರ್ಗದರ್ಶನದಲ್ಲಿ  ನಡೆದ ಈ ಅಭೂತ ಪೂರ್ವ  ಕಾರ್ಯಕ್ರಮದಲ್ಲಿ  ಸಹಕರಿಸಿದ ಪ್ರತಿಯೊಬ್ಬರನ್ನೂ  ಸಂಸ್ಥೆಯ ಮುಖ್ಯಸ್ಥೆ  ಜಸ್ಟಿನ್  ಡಿ'ಸೌಜ  ವಂದಿಸಿದರು. 

Saturday, July 30, 2022

NDA ಗೆ ಆಯ್ಕೆಯಾದ ಸಿದ್ಧಗಂಗಾ ಕಾಲೇಜಿನ ಹೇಮಂತ್ ಸ್ವಾಮಿಗೆ ಆತ್ಮೀಯ ಸನ್ಮಾನ - ಬೀಳ್ಕೊಡುಗೆ

















ಸಿದ್ಧಗಂಗೆಯ ಅಂಗಳದಲ್ಲಿ ಸಂಭ್ರಮದ ಆಚರಣೆ. ಕರ್ನಾಟಕ ಪ್ರತಿನಿಧಿಸಿ ಯು ಪಿ ಎಸ್ ಸಿ  ಪರೀಕ್ಷೆಯಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ ಆಯ್ಕೆಯಾದ ಏಕೈಕ ವಿದ್ಯಾರ್ಥಿ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಹೇಮಂತ್ ಸ್ವಾಮಿಗೆ ಹೃದಯ ಸ್ಪರ್ಶಿ ಸನ್ಮಾನ ಮತ್ತು ಬೀಳ್ಕೊಡುಗೆ. ಸಂಸ್ಥೆಯ ಸಹಸ್ರಾರು ಮಕ್ಕಳು ಅಭಿಮಾನದಿಂದ ಹೇಮಂತ್ ಸ್ವಾಮಿಯನ್ನು ಆದರ್ಶರೂಪದಲ್ಲಿ ಕಂಡರು. ವಾಯುಸೇನೆಯಲ್ಲಿ ತರಬೇತಿ ಪಡೆಯಲು ತೆರಳುತ್ತಿರುವ ತಮ್ಮ ಆತ್ಮೀಯ ಸ್ನೇಹಿತನನ್ನು ಪುಷ್ಪವೃಷ್ಠಿಗರೆದು ರಾಷ್ಟ್ರಧ್ವಜ ಗೌರವ ನೀಡಿ ಬೀಳ್ಕೊಟ್ಟರು. ದಾವಣಗೆರೆ ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಿದ ಸಿದ್ಧಗಂಗೆಯ ಈ ಪ್ರತಿಭಾವಂತನನ್ನು ಗುರು ವೃಂದದವರು ಹಾರೈಸಿ-ಹರಸಿ ಕಳಿಸಿಕೊಟ್ಟರು. 

ಭಾರತದಾದ್ಯಂತ ಪರೀಕ್ಷೆ ಬರೆದ 8 ಲಕ್ಷ ಅಭ್ಯರ್ಥಿಗಳಲ್ಲಿ 8 ಸಾವಿರ ಅಭ್ಯರ್ಥಿಗಳು ದ್ವಿತೀಯ ಹಂತಕ್ಕೆ ಬರುತ್ತಾರೆ. ಇದರಲ್ಲಿ 250 ಅಭ್ಯರ್ಥಿಗಳು ತೃತೀಯ ಹಂತಕ್ಕೆ ಬರುತ್ತಾರೆ. ಅಂತಿಮ ಆಯ್ಕೆಯಲ್ಲಿ 81 ಅಭ್ಯರ್ಥಿಗಳು ಉಳಿಯುತ್ತಾರೆ. ಆ 81 ಅದೃಷ್ಠವಂತರಲ್ಲಿ ಹೇಮಂತ್ ಸ್ವಾಮಿ ಎಂಬುದು ಆತನ ನಿರಂತರ ಪ್ರಯತ್ನ, ಸತತ ಪರಿಶ್ರಮದ ಪ್ರತಿಫಲ. ಅಪರೂಪದ ಈ ಸಾಧನೆಯನ್ನು ಕಂಪ್ಯೂಟರ್ ವಿಭಾಗದ ಪ್ರಾಧ್ಯಾಪಕರಾದ ನಫೀಸ್‌ರವರು ವಿವರಿಸಿದರು. ಪ್ರಾಚಾರ್ಯ ನಿರಂಜನ್, ನಿರ್ದೇಶಕ ಡಾ|| ಜಯಂತ್, ಹಿರಿಯ ಉಪನ್ಯಾಸಕರಾದ ಎಲ್. ವಿ. ಸುಬ್ರಹ್ಮಣ್ಯ, ಸಿದ್ದಪ್ಪ, ನರಸಿಂಹ, ಲಕ್ಷ್ಮೀ ನಾರಾಯಣ, ಜಯಣ್ಣ ಇಟಗಿ, ಪ್ರದೀಪ್, ಸದಾಶಿವ ಹೊಳ್ಳ, ವಾಣಿಶ್ರೀ ಇವರು ಎಲ್ಲ ಉಪನ್ಯಾಸಕರೊಡಗೂಡಿ ಹೇಮಂತ್ ಸ್ವಾಮಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಹೂಮಳೆಗರೆದು ಗೌರವಿಸಿದರು. ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ’ಸೌಜ, ಉಪ ಪ್ರಾಚಾರ್ಯೆ ಗಾಯಿತ್ರಿ ಚಿಮ್ಮಡ್ ಹಾಜರಿದ್ದರು. ಶಾಲಾ ಕಾಲೇಜಿನ ಮಕ್ಕಳು ಹೇಮಂತ್ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ಸಿದ್ಧಗಂಗಾ ಸಂಸ್ಥೆಯ  ತನ್ನ ಸ್ನೇಹಿತರು ಮತ್ತು ಗುರುವೃಂದದವರು ನೀಡಿದ ಈ ಅವಿಸ್ಮರಣೀಯ ಗೌರವವನ್ನು ತಾನು ಎಂದೂ ಮರೆಯುವುದಿಲ್ಲವೆಂದು ಕೃತಜ್ಞತೆಯಿಂದ ವಿನಯದಿಂದ ಹೇಮಂತ್ ಸ್ವಾಮಿ ಎಲ್ಲರನ್ನೂ ವಂದಿಸಿದನು.

Friday, July 22, 2022

CBSE GRADE 10 RESULT 2021-22








 ಸಿದ್ಧಗಂಗಾ  ಶಾಲೆಗೆ 98.43 % ಫಲಿತಾಂಶ - ಹರ್ಷಿತಾಗೆ 97%
ಕೇಂದ್ರ  ಪಠ್ಯಕ್ರಮದ 10 ನೇ ತರಗತಿ  ಫಲಿತಾಂಶ ಪ್ರಕಟವಾಗಿದ್ದು  ಸಿದ್ಧಗಂಗಾ ಶಾಲೆಯ ಹರ್ಷಿತಾ ಸಿ ಪಿ 500 ಕ್ಕೆ  486 ಅಂಕಗಳನ್ನು ಪಡೆದು ಶೇಕಡಾ 97 ಅಂಕ  ಗಳಿಸಿದ್ದಾಳೆ . ಇಂಗ್ಲಿಷ್ 92, ಕನ್ನಡ 99, ಗಣಿತ 99, ವಿಜ್ಞಾನ 100, ಸಮಾಜ  96 ಅಂಕಗಳನ್ನು ಗಳಿಸಿ ಶಾಲೆಗೇ ಪ್ರಥಮ ಸ್ಥಾನ ಪಡೆದಿದ್ದಾಳೆ. ನಿತ್ಯಶ್ರೀ ಕೊಂತಿಕಲ್ 96 % , ಮಮತ  ಜೆ  ಬಿ 96%, ಸಹನಾ ಎಲ್  95% ,ಮನೋಜ್ ಕೆ ಟಿ 95%, ಮಾನ್ಯ ಪಿ  94%, ಜಹ್ರಾ ಫಾತೀಮಾ 93%, ನೇಹಾ ಎಸ್ ನಾಯ್ಕ್  93%, ವರ್ಷಾ  93%, ಮುಜಕಿರ್ 91% , ಅಫ್ರಾ ಜೈನಬ್ 90%, ಮಧು ಆರ್ 90% ಪಡೆದಿದ್ದಾರೆ . ಸಹನಾ ಎಲ್ ಗಣಿತದಲ್ಲಿ ಮತ್ತು ಹರ್ಷಿತಾ ಸಿ ಪಿ ವಿಜ್ಞಾನದಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ .12 ಮಕ್ಕಳು ಶೇಕಡಾ 90ಕ್ಕೂ  ಹೆಚ್ಚು , 20 ಮಕ್ಕಳು  ಶೇಕಡಾ 80ಕ್ಕೂ  ಹೆಚ್ಚು ಅಂಕಗಳಿಸಿದ್ದಾರೆ.ಅತ್ಯುನ್ನತ ಶ್ರೇಣಿಯಲ್ಲಿ 20 ಮಕ್ಕಳು, ಪ್ರಥಮ ದರ್ಜೆಯಲ್ಲಿ 38 ಮಕ್ಕಳು, ದ್ವಿತೀಯ  ದರ್ಜೆಯಲ್ಲಿ 5 ಮಕ್ಕಳು ಸ್ಥಾನ ಪಡೆದಿದ್ದಾರೆ. 

ಅತ್ಯುತ್ತಮ  ಫಲಿತಾಂಶ ನೀಡಿರುವ 10 ನೆೇ ತರಗತಿಯ ಮಕ್ಕಳಿಗೆ ಮತ್ತು ಬೋಧಕ ವರ್ಗದವರಿಗೆ ಪ್ರಾಚಾರ್ಯೆರಾದ  ಗಾಯತ್ರಿ ಚಿಮ್ಮಡ್ , ಉಪ  ಪ್ರಾಚಾರ್ಯೆ ಮಂಜುಳಾ ಹಂಪಾಳಿ , ಕಾರ್ಯದರ್ಶಿ ಶ್ರೀ ಹೇಮಂತ್ ಡಿ ಎಸ್ , 
ನಿರ್ದೇಶಕ  ಡಾ ।। ಜಯಂತ್ , ಮುಖ್ಯಸ್ಥೆ  ಜಸ್ಟಿನ್ ಡಿ'ಸೌಜ  ಅಭಿನಂದಿಸಿದ್ದಾರೆ. 

Saturday, June 18, 2022

2 PUC RESULT 2021-22


 


ಸಿದ್ಧಗಂಗಾ  P U  ಕಾಲೇಜಿಗೆ  ಅಮೋಘ ಫಲಿತಾಂಶ

ವಿನಾಯಕನಿಗೆ  600 ಕ್ಕೆ 593

ಏಪ್ರಿಲ್ - ಮೇ ನಲ್ಲಿ ನಡೆದ ದ್ವಿತೀಯ P U ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ದಾವಣಗೆರೆಯ ಪ್ರತಿಷ್ಠಿತ ಕಾಲೇಜು ಎಂದೇ ಪ್ರಸಿದ್ದವಾಗಿರುವ  ಶ್ರೀ  ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ  ವಿನಾಯಕ L  600 ಕ್ಕೆ 593 ಅಂಕಗಳಿಸಿ ಪ್ರಥಮ ಸ್ಥಾನದಲ್ಲಿದ್ದಾನೆ . ಚಿನ್ಮಯ್ M D  591,ರಕ್ಷಿತ S R  589,ದಿವ್ಯಶ್ರೀ   589,ಸೋನು ನಿಂಗರೆಡ್ಡಿ  588, ರಾಘವೇಂದ್ರ 587,ಕಿರಣ್ V  586,ಮಂಜುನಾಥ ಸ್ವಾಮಿ  586, ಪೂಜಾ N U ,ಶಾಹಿದ್  ಹುಸೇನ್ T A  ಮತ್ತು  ಸಿದ್ದನಗೌಡ ಹಿತ್ತಲಮನಿ 585 ಅಂಕಗಳನ್ನು ಪಡೆದು ಅದ್ವಿತೀಯ ಸಾಧನೆ ತೋರಿದ್ದಾರೆ . 

ಹಿಂದಿ - 1 ,ಸಂಸ್ಕೃತ -2, ಭೌತಶಾಸ್ತ್ರ - 14, ರಾಸಾಯನಶಾಸ್ತ್ರ - 22 ,,ಗಣಿತ - 141, ಜೀವಶಾಸ್ತ್ರ - 16 ಮತ್ತು ಕಂಪ್ಯೂಟರ್ ಸೈನ್ಸ್ - 9 ಒಟ್ಟು 205 ಮಕ್ಕಳು ಮೇಲ್ಕಂಡ  ವಿಷಯಗಳಲ್ಲಿ 100 ಕ್ಕೆ 100 ಅಂಕಗಳನ್ನು   ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ . 307 ಮಕ್ಕಳು ಅತ್ಯುನ್ನತ ಶ್ರೇಣಿಯಲ್ಲಿ, 251 ಮಕ್ಕಳು  ಪ್ರಥಮ ದರ್ಜೆಯಲ್ಲಿ ಮತ್ತು 20 ಮಕ್ಕಳು ದ್ವಿತೀಯ ದರ್ಜೆಯಲ್ಲಿ  ಉತ್ತೀರ್ಣರಾಗಿ ದಾಖಲೆಯ  ಫಲಿತಾಂಶ ನೀಡಿದ ಪ್ರತಿಯೊಬ್ಬರಿಗೂ  ಕಾಲೇಜಿನ ಪ್ರಾಚಾರ್ಯರಾದ  G. C. ನಿರಂಜನ್ , ಮ್ಯಾನೇಜಿಂಗ್ ಡೈರೆಕ್ಟರ್  ಡಾll ಜಯಂತ್ D. S, ಸಂಸ್ಥೆಯ  ಕಾರ್ಯದರ್ಶಿ D. S. ಹೇಮಂತ್ , ಮುಖ್ಯಸ್ಥರಾದ ಜಸ್ಟಿನ್ ಡಿ'ಸೌಜ  ಮತ್ತು  ಎಲ್ಲಾ  ಬೋಧಕ - ಬೋಧಕೇತರ  ಸಿಬ್ಬಂದಿ  ವರ್ಗದವರು ಅಭಿನಂದಿಸಿದ್ದಾರೆ. 

Wednesday, June 8, 2022

World Environment Day 2022





















ಸಿದ್ಧಗಂಗಾ  ಸಂಸ್ಥೆಯಲ್ಲಿ   ಪರಿಸರ  ದಿನಾಚರಣೆ  
50  ಸಾವಿರ  ಬೀಜದುಂಡೆ  ತಯಾರಿಸಿದ  ಮಕ್ಕಳು 

ಸಿದ್ಧಗಂಗಾ ಶಾಲೆಯಲ್ಲಿ ಮಕ್ಕಳ ಕಲರವ . ಭಾರತ್ ಸ್ಕೌಟ್ ಮತ್ತು ಗೈಡ್ಸ್ ನ ಸ್ಥಳೀಯ ಸಂಸ್ಥೆವತಿಯಿಂದ ಪರಿಸರ  ದಿನಾಚರಣೆ ವಿಶೇಷವಾಗಿ  ಹಮ್ಮಿಕೊಳ್ಳಲಾಗಿತ್ತು . 

ಮೂಟೆ ಮೂಟೆ ಕೆಂಪು  ಮಣ್ಣನ್ನು  ಬಯಲಲ್ಲಿ  ಸುರಿದರು . ವಿವಿಧ  ಜಾತಿಯ  ಕಾಡು ಮರಗಳ  ಬೀಜಗಳನ್ನು ರಾಶಿ  ಹಾಕಿದರು .  ಕ್ಷಣಾರ್ಧದಲ್ಲಿ  ಮಕ್ಕಳು  ತಮ್ಮ ತಮ್ಮ  ಗುಂಪು  ಮಾಡಿಕೊಂಡು ಮಣ್ಣನ್ನು ಹಂಚಿಕೊಂಡರು .  ಬೀಜಗಳನ್ನು  ಬೊಗಸೆಗಳಲ್ಲಿ  ತುಂಬಿಕೊಂಡರು .  ವಾಟರ್ ಬಾಟಲಿಗಳಿಂದ  ನೀರನ್ನು  ಸುರುವಿಕೊಂಡು  ಮಣ್ಣನ್ನು  ಉಂಡೆ ಕಟ್ಟುವ  ಹದಕ್ಕೆ  ಮೃದು  ಮಾಡಿಕೊಂಡರು .  ಪುಟ್ಟ  ಪುಟ್ಟ  ಕೈಗಳಲ್ಲಿ  ಉಂಡೆಗಳು  ರೂಪುಗೊಂಡಂತೆ  ಅದರ ಮಧ್ಯದೊಳಗೆ  ಬೀಜ  ಇಟ್ಟು  ದುಂಡಾದ ಆಕಾರ ಮಾಡಿ ಸಾಲಾಗಿ ಜೋಡಿಸಿದರು .  ವಿವಿಧ  ಗಾತ್ರದ ಬೀಜದುಂಡೆಗಳು  ತಯಾರಾದವು . ಒಣಗಲು  ಹರಡಿದರು .  ಸಾವಿರಾರು ಬೀಜದುಂಡೆಗಳನ್ನು  ಅರಣ್ಯ  ಇಲಾಖೆಯವರು ನಿಗದಿತ ಕಾಡು ಪ್ರದೇಶದಲ್ಲಿ ಬಿಸಾಡುವರು . ಮಳೆಗಾಲದಲ್ಲಿ  ಬೀಜಗಳು ಮೊಳಕೆಯೊಡೆದು ಸಸಿಯಾಗಿ ವೃಕ್ಷಗಳಾಗುತ್ತವೆ  ಎಂದು ತಿಳಿಸಿದಾಗ ಮಕ್ಕಳಲ್ಲಿ ಉತ್ಸಾಹ ತುಂಬಿತು . ಪರಿಸರ ದಿನಾಚರಣೆಯನ್ನು ಸಾರ್ಥಕವಾಗಿ  ಆಚರಿಸಿದ  ಭಾವನೆ  ಉಂಟಾಯಿತು .  ಜಿಲ್ಲಾ ಸ್ಕೌಟ್  ಗೈಡ್  ಸಂಸ್ಥೆಯಿಂದ ಆಗಮಿಸಿದ  ಕಾರ್ಯದರ್ಶಿ ರತ್ನ , ಎ ಡಿ ಸಿ ಹಾಲಪ್ಪ  ಮತ್ತು  ಎಸ್ ಜಿವಿ  ಅಶ್ವಿನಿಯವರು ಹಾಗೂ ಬೇರೆ ಬೇರೆ ಕಾಲೇಜುಗಳಿಂದ  ಬಂದಿದ್ದ  ರೋವರ್, ರೇಂಜರ್ ಗಳು ಮಕ್ಕಳ ಈ ಚಟುವಟಿಕೆಯನ್ನು ಶ್ಲಾಘಿಸಿದರು. ಸಂಸ್ಥೆಯ ಸ್ಕೌಟ್ ಮಾಸ್ಟರ್ ಮತ್ತು ಗೈಡ್ಸ್ ಕ್ಯಾಪ್ಟನ್ ,ಕಬ್ಸ್   ಬುಲ್ ಬುಲ್ ಫ್ಲಾಕ್ ಲೀಡರ್ಸ್ , ಬನ್ನೀಸ್  ಶಿಕ್ಷಕ - ಶಿಕ್ಷಕಿಯರು ಮತ್ತು ಹಲವಾರು ಪಾಲಕರು  ಮಕ್ಕಳ  ಉತ್ಸಾಹವನ್ನು  ಕುತೂಹಲದಿಂದ ವೀಕ್ಷಿಸಿದರು . ಬೀಜದುಂಡೆಗಳನ್ನು  ಕಟ್ಟುವಾಗ  ಹಿನ್ನಲೆಯಲ್ಲಿ  ಸುಶ್ರಾವ್ಯವಾಗಿ  ಮಕ್ಕಳು  ಪರಿಸರ  ಗೀತೆಗಳನ್ನು  ಹಾಡಿದರು . ಸಿದ್ಧಗಂಗಾ  ಸ್ಥಳೀಯ  ಸಂಸ್ಥೆಯ  ಕಾರ್ಯದರ್ಶಿ ಶಶಿಕಲಾರವರು  ಮಾರ್ಗದರ್ಶನ  ನೀಡಿದರು . 

Sunday, May 1, 2022

1 PUC Result - 2022

 1 PUC Result of Siddaganga PU College is published on website www.siddaganga.com

To check result click link here

To check result, enter your register number (8 digit number used for examination), date of birth and click Search

Make sure you choose the proper date of birth as per official record. 











All the Best

To check result click link here