ವಿಘ್ನನಿವಾರಕ, ವಿದ್ಯಾ ಗಣಪತಿಯ ವಿವಿಧ ಆಕಾರ - ಗಾತ್ರದ ಗಣಪತಿಗಳು ಸಿದ್ಧಗಂಗಾ ಅಂಗಳದಲ್ಲಿ ಇಂದು ಕಂಗೊಳಿಸಿದವು . ವಿಶೇಷವೆಂದರೆ ಈ ಎಲ್ಲಾ ಗಣಪತಿಗಳು ಪರಿಸರ ಸ್ನೇಹಿ ಗಣಪಗಳಾಗಿದ್ದವು . ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ ಸ್ಕೌಟ್ಸ್ ,ಗೈಡ್ಸ್ ಮಕ್ಕಳು ಮೈದಾ ,ಅರಿಶಿನ ,ಜೇಡಿ ಮಣ್ಣು ,ಸೋಪು ,ಗೋಧಿಹಿಟ್ಟು ಹೀಗೆ ಸ್ಥಳೀಯ ಲಭ್ಯ ಪರಿಸರ ವಸ್ತುಗಳಿಂದ ಗಣೇಶನನ್ನು ನಿರ್ಮಿಸಿದ್ದರು . ಪುಟ್ಟ ಪುಟ್ಟ ಕೈಗಲ್ಲಿ ಸುಂದರ ಗಣಪಗಳು ವಿಶೇಷ ಭೂಷಣಗಳೊಂದಿಗೆ ಅಲಂಕೃತಗೊಂಡಿದ್ದವು . ಎಲ್ .ಟಿ ಶಶಿಕಲಾ ಅವರ ನೇತೃತ್ವದಲ್ಲಿ ಶಾಲೆಯ ಗೈಡ್ಸ್ ಶಿಕ್ಷಕರಾದ ನಿರ್ಮಲ , ಮಂಜುಳ , ದೀಪ ಎನ್ , ಸುನೀತಾ , ಸುನೀತಾಬಾಯಿ , ವೇದಾವತಿ , ವಾಹಿದಾ ಮತ್ತು ಸ್ಕೌಟ್ ಮಾಸ್ಟರ್ ಗಳಾದ ಆರೋಗ್ಯಮ್ಮ ,ದುಗ್ಗಪ್ಪ ,ಮಹೇಶ್ , ಶ್ರೀನಿವಾಸ್ ,ಸಾಮ್ಯಾನಾಯ್ಕ , ಎ ಡಿ ಸಿ ಸ್ಕೌಟ್ ಡಾ।। ಜಯಂತ್ , ಎ ಡಿ ಸಿ ಗೈಡ್ಸ್ ರೇಖಾರಾಣಿ , ಖಜಾಂಚಿ ಗಾಯತ್ರಿಯವರು ಮಕ್ಕಳಿಗೆ ಮಾರ್ಗದರ್ಶನ ನೀಡಿ ಗಣೀಶ ಹಬ್ಬದ ಸಂಭ್ರಮ ಹಂಚಿಕೊಂಡರು .
No comments:
Post a Comment