Friday, August 12, 2022

FLAG MARCH 75th INDEPENDENCE DAY


 


75 ನೇ  ಸ್ವಾತಂತ್ರ ಸಂಭ್ರಮ 
ಸಾಗರದಂತೆ  ಹರಿದು ಬಂದ ಸಿದ್ದಗಂಗಾ ಶಾಲಾ ಕಾಲೇಜಿನ ಮಕ್ಕಳು 

ಎತ್ತ ನೋಡಿದರೂ ತ್ರಿವರ್ಣ ಧ್ವಜಗಳು , ಸಾಗರದಂತೆ  ಹರಿದು ಬಂದ ವಿದ್ಯಾರ್ಥಿ ಸಮೂಹ . ಸೂರ್ಯ ರಶ್ಮಿಗೆ ಮಿರಮಿರನೆ ಮಿಂಚುತ್ತಿದ್ದ ಬಾವುಟಗಳು . ಮುಗಿಲು ಮುಟ್ಟಿದ ಉತ್ಸಾಹ. " ಜೈ ಭಾರತ್ ಮಾತಾಕೀ " , " ವಂದೇ ಮಾತರಂ " ಘೋಷಣೆಗಳು  ರಸ್ತೆಗಳಲ್ಲಿ ಅನುರಣಿಸಿತು . ನಾಗರೀಕರು ಬೆಕ್ಕಸ ಬೆರಗಾಗಿ ನೋಡುತ್ತಿದ್ದರು . ಶಿಸ್ತಿನಿಂದ ಹೆಜ್ಜೆ ಹಾಕಿದ ಸಾವಿರಾರು ಮಕ್ಕಳು ರಾಷ್ಟ್ರಭಕ್ತಿಯನ್ನು ಆವಾಹಿಸಿಕೊಂಡಿದ್ದರು . ಬಿಸಿಲು - ಮಳೆ  ಲೆಕ್ಕಿಸದೆ  ಡಾಂಗೆ ಪಾರ್ಕ್ ರಸ್ತೆಯಿಂದ - ಶಿವಪ್ಪಯ್ಯ ಸರ್ಕಲ್ - ಜಯದೇವ ಸರ್ಕಲ್ - ಅಂಬೇಡ್ಕರ್ ಸರ್ಕಲ್ - ವಿದ್ಯಾರ್ಥಿ ಭವನ  ಸರ್ಕಲ್ ದಾಟಿ ಸಂಸ್ಥೆಯತ್ತ ಹೆಜ್ಜೆ ಹಾಕಿದ ಮಕ್ಕಳು ರಸ್ತೆಯುದ್ದಕ್ಕೂ ಸಂಚಲನ ಮೂಡಿಸಿದರು . 


ಈ ಬೃಹತ್ ಮೆರವಣಿಗೆಗೆ ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರಾದ ವಿಶ್ವನಾಥ್ P. ಮುದ್ದಜ್ಜಿಯವರು ಚಾಲನೆ ನೀಡಿದರು . ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ  ಜಿ .ಆರ್.ತಿಪ್ಪೇಶಪ್ಪ, ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ  ನಿರಂಜನಮೂರ್ತಿ , ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾದ ಗಡಿಗುಡಾಳ್ ಮಂಜುನಾಥ್ , ಯುವ ಕಾಂಗ್ರೆಸ್ ನಾಯಕ  K . G . ಶಿವಕುಮಾರ್ , ಶಾಲಾ ಕಾಲೇಜಿನ ಸಿಬ್ಬಂದಿ ವರ್ಗದವರು ಹಾಜರಿದ್ದರು .  ಬ್ಯಾoಡ್  ಸೆಟ್ಟಿನ ಸುಮಧುರ ನಾದಕ್ಕೆ ಮಕ್ಕಳು ಶಿಸ್ತಿನಿಂದ  ಹೆಜ್ಜೆ  ಹಾಕಿದರು . ರಾಷ್ಟ್ರಗೀತೆ  ಹಾಡುವುದರ ಮೂಲಕ ಪ್ರಾರಂಭವಾದ ಮೆರವಣಿಗೆ ರಾಷ್ಟ್ರ  ಗೀತೆಯೊಂದಿಗೆ ಮುಕ್ತಾಯಗೊಂಡಿತು . " ಆಜಾದಿ ಕೀ ಅಮೃತ್ ಮಹೋತ್ಸವ " ವನ್ನು  ಸಿದ್ದಗಂಗಾ  ವಿದ್ಯಾ  ಸಂಸ್ಥೆ  ಅರ್ಥಪೂರ್ಣವಾಗಿ  ಆಚರಿಸಿತು . ಸಂಸ್ಥೆಯ ಕಾರ್ಯದರ್ಶಿ D.S. ಹೇಮಂತ್  ಮತ್ತು  ನಿರ್ದೇಶಕ ಡಾll ಜಯಂತ್ ರವರ  ಮಾರ್ಗದರ್ಶನದಲ್ಲಿ  ನಡೆದ ಈ ಅಭೂತ ಪೂರ್ವ  ಕಾರ್ಯಕ್ರಮದಲ್ಲಿ  ಸಹಕರಿಸಿದ ಪ್ರತಿಯೊಬ್ಬರನ್ನೂ  ಸಂಸ್ಥೆಯ ಮುಖ್ಯಸ್ಥೆ  ಜಸ್ಟಿನ್  ಡಿ'ಸೌಜ  ವಂದಿಸಿದರು. 

No comments:

Post a Comment