Thursday, September 1, 2022

12 ಅಡಿ ಎತ್ತರದ ಸಿದ್ಧಗಂಗಾ ಪರಿಸರ ಸ್ನೇಹಿ ಗಣೇಶ ಮೂರ್ತಿ












12 ಅಡಿ ಎತ್ತರದ ಸಿದ್ಧಗಂಗಾ ಪರಿಸರ ಸ್ನೇಹಿ ಗಣೇಶ ಮೂರ್ತಿ 
ಪ್ರತಿ ವರ್ಷದಂತೆ ಈ ವರ್ಷವೂ ದಾವಣಗೆರೆಯ ಸಿದ್ಧಗಂಗೆಯ ಆವರಣದಲ್ಲಿ ಬೃಹತ್ ಗಣಪ ಸಭಾ ಮಂಟಪದಲ್ಲಿ ಕಂಗೊಳಿಸುತ್ತಿದ್ದಾನೆ. 12 ಅಡಿ ಎತ್ತರದ ಪೇಪರ್ ಗಣೇಶ ಸರ್ವಾಂಗ ಸುಂದರವಾಗಿದ್ದು ಶಿಲಾ ಮೂರ್ತಿಯಂತೆ ಕಾಣುತ್ತಿದ್ದಾನೆ. ಶಾಲೆಯ ಚಿತ್ರಕಲಾ ಶಿಕ್ಷಕರಾದ ಯೋಗಿಪ್ರಸಾದ್, ರಾಜೇಶ್,ರಾಜಶೇಖರ್, ಹೀನಾ ಕೌಸರ್, ಸ್ವಾತಿ, ಪ್ರಿಯಾಂಕ, ಇವರ ಕೈ ಚಳಕದಿಂದ ಮೂಡಿದ ಈ ಗಣಪನನ್ನು ತಯಾರಿಸುವಲ್ಲಿ 9 ಮತ್ತು 10 ನೇ ತರಗತಿ ಮಕ್ಕಳು ಕೈ ಜೋಡಿಸಿದ್ದರು. ತಾವೇ ರೂಪಿಸಿದ ಗಣಪ ಎಂಬ ಹೆಮ್ಮೆ ಶಾಲಾ ಮಕ್ಕಳದು. ಪ್ರತಿಷ್ಠಾಪನೆಗೆ ಮುನ್ನ ಪ್ರಮುಖ ಬೀದಿಗಳಲ್ಲಿ ಗಣಪನ ಮೆರವಣಿಗೆ ಮಾಡಿದರು. ಮಕ್ಕಳು ಸಾಂಪ್ರದಾಯಿಕ ಉಡುಗೆ ಧರಿಸಿ ಭಕ್ತಿಗೀತೆಗಳನ್ನು ಹಾಡುತ್ತಾ ಮೆರವಣಿಗೆಯಲ್ಲಿ ಸಾಗುತ್ತಿದ್ದ ದೃಶ್ಯ ಕಣ್ಮನ ಸೆಳೆಯುವಂತಿತ್ತು. ನಂದಿಕೋಲು, ಪಟಗಳು, ಬಣ್ಣ ಬಣ್ಣದ ಛತ್ರಿಗಳು ಗಣಪನ ಶೋಭೆಯನ್ನು ಇನ್ನಷ್ಟು ಹೆಚ್ಚಿಸಿತು. ಮಧ್ಯಾನ್ಹ 12 ಗಂಟೆಗೆ ಗಣೇಶನ ಪ್ರತಿಷ್ಠಾಪನೆ ವಿಜೃಂಭಣೆಯಿಂದ ನೆರವೇರಿತು. ಸಾರ್ವಜನಿಕರ ವೀಕ್ಷಣೆಗೆ ಅಪರೂಪದ ಈ ಪರಿಸರ ಸ್ನೇಹಿ ಪೇಪರ್ ಗಣಪತಿ ಸೆಪ್ಟೆಂಬರ್ 9 ರ ವರೆಗೆ ಲಭ್ಯವಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಹೇಮಂತ್ ಮತ್ತು  ನಿರ್ದೇಶಕ ಜಯಂತ್ ಅವರು ತಿಳಿಸಿದ್ದಾರೆ. 

No comments:

Post a Comment