Friday, November 26, 2021
Wednesday, November 3, 2021
NEET Result 2021
2020 21 ಸಾಲಿನ ನೀಟ್ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಾದ ಹರ್ಷಿತ್ S ಅಭಿಲಾಷ K.S, ದರ್ಶನ್ K.V, ಮೋಹನ್ ಕುಮಾರ್ G, ಹರ್ಷ B,G, ಚಂದನ B.P , ಮಂಜುನಾಥ್ M.B, ಪವನ್ C ಗೌಳಿ, ತಿಪ್ಪೇಸ್ವಾಮಿ M, ವಿಕಾಸ್ M, ಕೃಷ್ಣಗೌಡ G, ಲೋಹಿತ್ K.N, ನಂದಿತಾ K, ಧನಿಕ L, ನಿರ್ಮಲ ಗುಬ್ಬಿ, ನಂದ S ಸುರಲೇಶ್ವರ್, ನರೇಂದ್ರ K, ಭರತ್ TR TM, ಪವನ್ P.A, ಕಾರ್ತಿಕ್ G ಇವರು ಅಮೋಘ ಸಾಧನೆಯನ್ನು ಮಾಡಿ ಸಂಸ್ಥೆಯ ಕೀರ್ತಿಯ ಪಥಕ್ಕೆ ಮೆರುಗನ್ನು ನೀಡಿದ್ದಾರೆ.
ಹರ್ಷಿತ್ S 720 ಕ್ಕೆ 659 ಅಂಕಗಳೊಂದಿಗೆ ರಾಷ್ಟ್ರಮಟ್ಟದಲ್ಲಿ 2800 ನೇ Rank ಅನ್ನು ಪಡೆದಿದ್ದಾರೆ, ಕು. ಅಭಿಲಾಷ K.S 720 ಕ್ಕೆ 654 ಅಂಕಗಳನ್ನು ಪಡೆದು ರಾಷ್ಟ್ರಮಟ್ಟದಲ್ಲಿ 3428 ನೇ Rank ಪಡೆದಿದ್ದಾರೆ.
ದರ್ಶನ್ K.V 610, ಮೋಹನ್ ಕುಮಾರ್ G 608, ಹರ್ಷ B,G 587, ಚಂದನ B.P 586, ಮಂಜುನಾಥ್ M.B 585, ಪವನ್ C ಗೌಳಿ 578, ತಿಪ್ಪೇಸ್ವಾಮಿ M 557, ವಿಕಾಸ್ M 552, ಕೃಷ್ಣಗೌಡ G 532, ಲೋಹಿತ್ K.N 530, ನಂದಿತಾ K 528, ಧನಿಕ L 526, ನಿರ್ಮಲ ಗುಬ್ಬಿ 525, ನಂದ S ಸುರಲೇಶ್ವರ್ 516, ನರೇಂದ್ರ K 515, ಭರತ್ TR TM 508, ಪವನ್ P.A 503, ಕಾರ್ತಿಕ್ G 499 ಅಂಕಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಜಸ್ಟಿನ್ ಡಿಸೋಜ, ಅಧ್ಯಕ್ಷರಾದ ಶ್ರೀ ಹೇಮಂತ್, ನಿರ್ದೇಶಕರಾದ ಡಾಕ್ಟರ್ ಜಯಂತ್ ಕಾರ್ಯದರ್ಶಿಗಳಾದ ಶ್ರೀ ಪ್ರಶಾಂತ ರವರು ಹರ್ಷವನ್ನು ವ್ಯಕ್ತಪಡಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು, ಕಾಲೇಜಿನ ಪ್ರಾಚಾರ್ಯರಾದ ಶ್ರೀ ನಿರಂಜನ್, ಹಾಗೂ ಉಪನ್ಯಾಸಕರು ಮತ್ತು ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ,
Thursday, October 28, 2021
Wednesday, September 22, 2021
CET 2021 - Result
CET ಯಲ್ಲಿ ಅದ್ವಿತೀಯ ಫಲಿತಾಂಶ
ಸಿದ್ಧಗಂಗಾ ಹರ್ಷಿತ್ ಗೆ 60ನೇ Rank
ಪ್ರಸಕ್ತ ಶೈಕ್ಷಣಿಕ ವರ್ಷದ ದ್ವಿತೀಯ PUC ಯ KCET ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ Rank ಗಳೊಂದಿಗೆ ಉತ್ತಮ ಫಲಿತಾಂಶ ತಂದು ಸಾಧನೆ ಮೆರೆದಿದ್ದಾರೆ. ಹರ್ಷಿತ್ S 60ನೇ RANK ಪಡೆದು ಕಾಲೇಜಿನ ಟಾಪರ್ ಆಗಿ ಹೊರಹೊಮ್ಮಿದ್ದಾನೆ. ಅಭಿಲಾಷ K.S. 167ನೇ Rank ಪಡೆದರೆ, ಚಂದನ B.P. 484ನೇ Rank ಪಡೆದಿದ್ದಾಳೆ.ಪ್ರಜ್ವಲ್ ಎಸ್ ಕ್ಷೀರಸಾಗರ್ 816,ಮಂಜುನಾಥ ಎಂ ಬಿ 853,ತಿಪ್ಪೇಸ್ವಾಮಿ ಎಂ 906, ಚನ್ನವೀರೇಶ್ ಎಂ 1051Rank ಪಡೆದಿದ್ದಾರೆ. 5000 ನೊಳಗೆ 103 Rank.10.000 ನೊಳಗೆ 211 Rank ನೊಂದಿಗೆ ಅತ್ಯುತ್ತಮ ಫಲಿತಾಂಶ ತಂದ ವಿದ್ಯಾರ್ಥಿಗಳಿಗೆ ಸಿದ್ಧಗಂಗಾ ವಿದ್ಯಾಸಂಸ್ಥೆ ಅಭಿನಂದಿಸಿದೆ
Sunday, August 15, 2021
ಸಿದ್ಧಗಂಗಾ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಧ್ವಜಾರೋಹಣ ಮಾಡಿದ SSLC ಟಾಪರ್ಸ್
ದಾವಣಗೆರೆ, ಆ.15
ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ SSಐಅ ಯಲ್ಲಿ 625 ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಬಾಲಕಿಯರಾದ ಅನುಷಾ ಗ್ರೇಸ್ ಮತ್ತು ವಿಜೇತಾ ಮುತ್ತಗಿಯವರಿಂದ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು. ಧ್ವಜಾರೋಹಣದ ನಂತರ ಮಾತನಾಡಿದ ಈ ಇಬ್ಬರೂ ಬಾಲಕಿಯರು ತಮಗೆ ದೊರೆತ ಈ ಸದಾವಕಾಶದಿಂದ ರೋಮಾಂಚಿತಗೊಂಡಿದ್ದೇವೆ ಎಂದು ಹೇಳುತ್ತಾ ತಮ್ಮ ಸಾಧನೆಗೆ ಪ್ರೇರಣೆ ನೀಡಿದ ಎಲ್ಲ ಶಿಕ್ಷಕರಿಗೆ ಮತ್ತು ಪ್ರೋತ್ಸಾಹ ನೀಡಿದ ಪಾಲಕರಿಗೆ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ 600 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಮಕ್ಕಳಿಗೆ ಪಾಲಕರೊಂದಿಗೆ ಸನ್ಮಾನ ಕಾರ್ಯಕ್ರಮವನ್ನು ಸಂಸ್ಥೆ ಏರ್ಪಡಿಸಿತ್ತು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸರಾದ ಶಿವಲಿಂಗಪ್ಪನವರು ತಮ್ಮ ವಿಶೇಷ ಉಪನ್ಯಾಸದಲ್ಲಿ ಸ್ವಾತಂತ್ರ್ಯ ಪೂರ್ವದ ಭಾರತ, ಸ್ವಾತಂತ್ರ್ಯಾನಂತರದ ಭಾರತದ ಸ್ಥೂಲ ಪರಿಚಯ ಮಾಡಿಕೊಡುತ್ತಾ ಮಕ್ಕಳು ಸಂಸ್ಕಾರವಂತರಾಗಿ ತಮ್ಮ ಭವಿಷ್ಯ ರೂಪಿಸಿಕೊಂಡು ದೇಶವನ್ನು ಮುನ್ನಡೆಸಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಪರಿಣಾಮಕಾರಿಯಾಗಿ ಭಾಷಣ ಮಾಡಿದ ಸಂಸ್ಥೆಯ ನಿರ್ದೇಶಕರಾದ ಡಾ|| ಜಯಂತ್ ರವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನೇಕ ದೇಶಭಕ್ತರ ಉಕ್ತಿಗಳನ್ನು ಉಚ್ಛರಿಸುತ್ತಾ ಸಭಿಕರಲ್ಲಿ ದೇಶಭಕ್ತಿಯ ಸಂಚಲನ ಮೂಡಿಸಿದರು.
ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ’ಸೌಜ ರವರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ SSಐಅ ಮಕ್ಕಳ ಐತಿಹಾಸಿಕ ದಾಖಲೆಯನ್ನು ಶ್ಲಾಘಿಸುತ್ತಾ ಎಲ್ಲರನ್ನು ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು.
ದೇಶಭಕ್ತಿ ಗೀತೆಗಳನ್ನು ತೇಜಸ್ವಿನಿ, ನಿರ್ಮಲ ಗುಬ್ಬಿ, ಸಿಂಚನ, ಕಾವ್ಯ ಮತ್ತು ರುದ್ರಾಕ್ಷಿಬಾಯಿ ಹಾಗೂ ಕನ್ನಡ ಉಪನ್ಯಾಸಕ ನಾಗರಾಜ್ರವರು ಪ್ರಸ್ತುತಿ ಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಉ.ಅ ನಿರಂಜನ್ ರವರು ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಿರುವ ಆಡಳಿತ ಮಂಡಳಿ ಮತ್ತು ಕರೋನಾ ಸಮಯದಲ್ಲಿ ಮನೆ ಮನೆಗೆ ಪಾಠಗಳನ್ನು ಮಕ್ಕಳಿಗೆ ನಿರಂತರವಾಗಿ ತಲುಪಿಸುತ್ತಿರುವ ಶಿಕ್ಷಕ ಮತ್ತು ಉಪನ್ಯಾಸಕರನ್ನು ಅಭಿನಂದಿಸುತ್ತಾ ತಾಂತ್ರಿಕ ವರ್ಗವನ್ನು ಮುನ್ನಡೆಸುತ್ತಿರುವ ಸಂಸ್ಥೆಯ ಅಧ್ಯಕ್ಷ ಪ್ರಶಾಂತ್ರವರ ಕಾರ್ಯ ವೈಖರಿಯನ್ನು ಮುಕ್ತವಾಗಿ ಶ್ಲಾಘಿಸಿದರು. ಎಲೆಮರೆಯ ಕಾಯಿಯಂತೆ ತಮ್ಮ ಕಾಯಕವನ್ನು ಸದ್ದುಗದ್ದಲವಿಲ್ಲದೆ ನಿರ್ವಹಿಸುತ್ತಿರುವ ಸಂಸ್ಥೆಯ ಕಾರ್ಯದರ್ಶಿ ಹೇಮಂತ್ರವರನ್ನು ಅಭಿನಂದಿಸಿದರು.
ಸಾಮಾಜಿಕ ಅಂತರ ಕಾಯ್ದುಕೊಂಡು ಸಂಸ್ಥೆಯ ಶಾಲಾ ಕಾಲೇಜಿನ ಬೋಧಕವರ್ಗ ಮತ್ತು ಬೋಧಕೇತರ ಸಿಬ್ಬಂದಿ, ತಾಂತ್ರಿಕ ವರ್ಗ ಮತ್ತು ಕಛೇರಿ ಸಿಬ್ಬಂದಿಯವರು, ಹಲವಾರು ಪಾಲಕರು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಕನ್ನಡ ಉಪಾನ್ಯಾಸಕರಾದ ಸದಾಶಿವ ಹೊಳ್ಳ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು.
Tuesday, August 10, 2021
SSLC 2021 Result
ಸಿದ್ಧಗಂಗಾ ಶಾಲೆಗೆ ಅದ್ವಿತೀಯ ಫಲಿತಾಂಶ 625 ಕ್ಕೆ 625 ಗಳಿಸಿದ ಇಬ್ಬರು ಬಾಲಕಿಯರು
ದಾವಣಗೆರೆ ಆಗಸ್ಟ್ 9, 2021
2020-21 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು ಸಿದ್ಧಗಂಗಾ ಶಾಲೆಗೆ ಅದ್ವಿತೀಯ ಫಲಿತಾಂಶ ದೊರೆತಿದೆ ಅನುಷಾ ಗ್ರೇಸ್.ಡಿ. ಚಿಂದವಾಳ್ ಮತ್ತು ವಿಜೇತ ಬಸವರಾಜು ಮುತ್ತಗಿ ಈ ಇಬ್ಬರು ಬಾಲಕಿಯರು 625ಕ್ಕೆ 625 ಅಂಕಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.
ವರ್ಷಿತ ಕೆ.ಎಲ್. 621 ಪೂರ್ವಿಕಾ ಎಂ.ಎ. 619, ಸಿದ್ದಾಂತ ಡಿ.ಜೆ. 615, ಪ್ರಣವ್ ಬಾಗೂರ್ 613, ಸಂಜನ 611, ಆಕಾಶ್ ಎಂ.ಎಸ್. 609, ಧೀರಜ್ ಎ.ವಿ. 607, ವಿಕಾಸ್ ಬಿ.ಎಸ್. 607, ಲಿಖಿತ 605, ತೇಜಸ್ ಹೆಚ್.ಎಸ್. 604, ತೇಜಸ್ ಎಸ್.ಎನ್. 604 ಮತ್ತು ನಿದಾ ಸುಲ್ತಾನಾ 600 ಅಂಕಗಳಿಸಿದ್ದಾರೆ.
ಅತ್ತ್ಯುತ್ತಮ ಶ್ರೇಣಿಯಲ್ಲಿ 90 ಮಕ್ಕಳು, ಪ್ರಥಮ ದರ್ಜೆಯಲ್ಲಿ 209 ಮಕ್ಕಳು, ದ್ವಿತೀಯ ದರ್ಜೆಯಲ್ಲಿ 19 ಮಕ್ಕಳು ಉತ್ತೀರ್ಣರಾಗಿದ್ದಾರೆ.
ಕನ್ನಡದಲ್ಲಿ 8 (125/125), ಇಂಗ್ಲೀಷ್ 18, ಹಿಂದಿ 32, ಗಣಿತ 4, ವಿಜ್ಞಾನ 4, ಸಮಾಜ 3 ಮಕ್ಕಳು ಆಯಾ ವಿಷಯಗಳಲ್ಲಿ 100 ಕ್ಕೆ 100 ಅಂಕಪಡೆದಿದ್ದಾರೆ.
ಆರು ವಿಷಯಗಳನ್ನು 2 ದಿನದ ಪರೀಕ್ಷೆಗಳಲ್ಲಿ ಬರೆಯುವ ಒತ್ತಡವಿದ್ದರೂ ಮಕ್ಕಳು ಮಾನಸಿಕವಾಗಿ ಸಿದ್ಧರಾಗಿ ಪರೀಕ್ಷೆಯನ್ನು ಆತ್ಮಸ್ಥೈರ್ಯದಿಂದ ಎದುರಿಸಿ ಉತ್ತಮ ಫಲಿತಾಂಶ ನೀಡಿದ್ದಾರೆ. ಉತ್ತೀರ್ಣರಾದ ಎಲ್ಲಾ ಮಕ್ಕಳನ್ನು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ಆಡಳಿತ ಮಂಡಳಿಯವರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.Tuesday, August 3, 2021
CBSE 10 Result - 2021
ದಾವಣಗೆರೆ, ಆ - 3
2020-21 ನೇ ಸಾಲಿನ ಸಿಬಿಎಸ್ಇ ಪಠ್ಯಕ್ರಮದ ಫಲಿತಾಂಶ ಪ್ರಕಟವಾಗಿದ್ದು ಸಿದ್ಧಗಂಗಾ ಶಾಲೆಗೆ 100 ಕ್ಕೆ 100 ಫಲಿತಾಂಶ ಬಂದಿದೆ.![]() |
| TARUN P |
![]() |
| PUNEETH R |
ಸಿದ್ಧಗಂಗಾ ಶಾಲೆಯ ಪುನೀತ್.ಖ ಮತ್ತು ತರುಣ್.P 94.80% ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮರಾಗಿದ್ದಾರೆ. ಅತ್ಯುತ್ತಮ ಶ್ರೇಣಿಯಲ್ಲಿ 10 ವಿದ್ಯಾರ್ಥಿಗಳು, ಪ್ರಥಮ ದರ್ಜೆಯಲ್ಲಿ 32 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ.
ಕೋವಿಡ್ ಪರಿಸ್ಥಿತಿಯಲ್ಲಿ ಆನ್ಲೈನ್ ತರಗತಿ ಪಾಠಗಳನ್ನು ಕೇಳಿ ಉತ್ತಮ ಫಲಿತಾಂಶ ನೀಡಿರುವ ಮಕ್ಕಳನ್ನು ಪ್ರಾಚಾರ್ಯರಾದ ಗಾಯತ್ರಿ ಚಿಮ್ಮಡ್ ಮತ್ತು ಉಪಪ್ರಾಂಶುಪಾಲರಾದ ಮಿಶೈಲ್ ಅನ್ವಿತಾ ಡಿ’ಸೌಜರವರು ಮತ್ತು ಬೋಧಕ ಸಿಬ್ಬಂದಿಯವರು ಹಾಗೂ ಆಡಳಿತ ಮಂಡಳಿಯ ಹೇಮಂತ್, ಜಯಂತ್ ಮತ್ತು ಪ್ರಶಾಂತ್ರವರು ಅಭಿನಂದಿಸಿದ್ದಾರೆ
Thursday, July 22, 2021
Admission open for 1 PUC (State Syllabus Students)
Dear Parent,
Admission for I PUC will be open to all SSLC (State Syllabus 10 Std) students. There will be a eligibility test based on Science & Mathematics. Upon clearing this test, parents can get their child admitted by paying fee as per the table below. However students can get up to 100% tuition fee as MSS scholarship program in the name of founder M S Shivanna.
Contact office for further detail
Landline : 08192-233635
Mobile : 8073301604
Address : 2347, Siddalingeshwara Nagar, Davanagere
Virtual Tour : https://youtu.be/f-pSmnSXD6c
Direction : https://goo.gl/maps/kb5hpAGk4STb2v7Y6
Details of MSS Scholarship (For State Syllabus Students Only)
1. MSS Scholarship exam will be based on 1st PUC syllabus.
2. Exam will be for 600 marks covering PCMB/CS & 2 Languages based on combination opted by student.
3. Exam will be tentatively held in the month of October 2021.
4. Exam will be in offline mode using Pen and Paper.
5. Eligible students will receive scholarship amount in the form of Cheque.
6. Only students who get admitted on or before Jult 31st 2021 will be eligible for MSS Scholarship.
7. MSS Scholarship will be applicable only for 1 PUC Students.
8. Date of exam and portion will be published later.
Wednesday, July 21, 2021
2 PUC Result 2021
ದಾವಣಗೆರೆ ಜುಲೈ 21: 2020 21 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ್ದು ಜಿಲ್ಲೆಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಶ್ರೀ ಸಿದ್ದಗಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆ ಮೆರೆದಿದ್ದಾರೆ, ವಿದ್ಯಾರ್ಥಿಗಳ SSLC ಹಾಗೂ ಪ್ರಥಮ PUC ಅಂಕಗಳ ಆಧಾರದ ಮೇಲೆ ನಿರ್ಧರಿಸಲ್ಪಟ್ಟ ಫಲಿತಾಂಶದಲ್ಲಿ ಸಿದ್ದಗಂಗಾ ಪಿಯು ಕಾಲೇಜಿನ ಭೂಮಿಕಾ ಎಂ, ಚಂದನ್ ಬಿಪಿ, ಚೇತನ್ ಹೆಚ್ ವಿ, ದಿವ್ಯಶ್ರೀ ಟಿಕೆ, ಗೌರಿ ಜಯಣ್ಣ ಇಟಗಿ, ಅಭಿಲಾಷ ಕೆಎಸ್, ಪ್ರೀತಿ ಎನ್ ಎಂ, ರಾಜೇಶ್ವರಿ ಜಿ, ಸಂಜನಾ ಎಂ ಜಿ, ಪಿ ವೆಂಕಟ ದುರ್ಗ ಪ್ರಸಾದ್, ತನಿಷ ತಾನಾಜಿ ಶಿಂದೆ ಟಿ, ತೇಜಸ್ವಿನಿ ಜಿಕೆ, ವರುಣ್ ಕುಮಾರ್ ಎ ಎಂಬ ಒಟ್ಟು 13 ವಿದ್ಯಾರ್ಥಿಗಳು 600ಕ್ಕೆ 600 ಅಂಕಗಳನ್ನು ಪಡೆದು ಅವಿಸ್ಮರಣೀಯ ಫಲಿತಾಂಶಕ್ಕೆ ನಾಂದಿ ಹಾಡಿದ್ದಾರೆ. ಕಾಲೇಜಿನಿಂದ ಒಟ್ಟು 544 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ(ಡಿಸ್ಟಿಂಕ್ಷನ್) ಯೊಂದಿಗೂ 342 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ, ಕಾಲೇಜಿನ ಈ ಅದ್ವಿತೀಯ ಪಲಿತಾಂಶ ಕ್ಕೆ ಕಾರಣರಾದ ಎಲ್ಲ ವಿದ್ಯಾರ್ಥಿಗಳನ್ನು ಹಾಗೂ ಸಿಬ್ಬಂದಿಯನ್ನು ಕಾಲೇಜಿನ ಮುಖ್ಯಸ್ಥರಾದ ಶ್ರೀಮತಿ ಜಸ್ಟಿನ್ ಡಿಸೋಜ ಪ್ರಾಚಾರ್ಯರಾದ ಶ್ರೀ ನಿರಂಜನ್ ಡಿ ಸಿ, ಕಾಲೇಜಿನ ನಿರ್ದೇಶಕರಾದ ಡಾಕ್ಟರ್ ಜಯಂತ್ ಕಾರ್ಯದರ್ಶಿಗಳಾದ ಶ್ರೀ ಹೇಮಂತ್ ಡಿ ಎಸ್ ಹಾಗೂ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಡಿಎಸ್ ಇವರು ಅಭಿನಂದಿಸಿದ್ದಾರೆ

















