ದಾವಣಗೆರೆ ಜುಲೈ 21: 2020 21 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ್ದು ಜಿಲ್ಲೆಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಶ್ರೀ ಸಿದ್ದಗಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆ ಮೆರೆದಿದ್ದಾರೆ, ವಿದ್ಯಾರ್ಥಿಗಳ SSLC ಹಾಗೂ ಪ್ರಥಮ PUC ಅಂಕಗಳ ಆಧಾರದ ಮೇಲೆ ನಿರ್ಧರಿಸಲ್ಪಟ್ಟ ಫಲಿತಾಂಶದಲ್ಲಿ ಸಿದ್ದಗಂಗಾ ಪಿಯು ಕಾಲೇಜಿನ ಭೂಮಿಕಾ ಎಂ, ಚಂದನ್ ಬಿಪಿ, ಚೇತನ್ ಹೆಚ್ ವಿ, ದಿವ್ಯಶ್ರೀ ಟಿಕೆ, ಗೌರಿ ಜಯಣ್ಣ ಇಟಗಿ, ಅಭಿಲಾಷ ಕೆಎಸ್, ಪ್ರೀತಿ ಎನ್ ಎಂ, ರಾಜೇಶ್ವರಿ ಜಿ, ಸಂಜನಾ ಎಂ ಜಿ, ಪಿ ವೆಂಕಟ ದುರ್ಗ ಪ್ರಸಾದ್, ತನಿಷ ತಾನಾಜಿ ಶಿಂದೆ ಟಿ, ತೇಜಸ್ವಿನಿ ಜಿಕೆ, ವರುಣ್ ಕುಮಾರ್ ಎ ಎಂಬ ಒಟ್ಟು 13 ವಿದ್ಯಾರ್ಥಿಗಳು 600ಕ್ಕೆ 600 ಅಂಕಗಳನ್ನು ಪಡೆದು ಅವಿಸ್ಮರಣೀಯ ಫಲಿತಾಂಶಕ್ಕೆ ನಾಂದಿ ಹಾಡಿದ್ದಾರೆ. ಕಾಲೇಜಿನಿಂದ ಒಟ್ಟು 544 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ(ಡಿಸ್ಟಿಂಕ್ಷನ್) ಯೊಂದಿಗೂ 342 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ, ಕಾಲೇಜಿನ ಈ ಅದ್ವಿತೀಯ ಪಲಿತಾಂಶ ಕ್ಕೆ ಕಾರಣರಾದ ಎಲ್ಲ ವಿದ್ಯಾರ್ಥಿಗಳನ್ನು ಹಾಗೂ ಸಿಬ್ಬಂದಿಯನ್ನು ಕಾಲೇಜಿನ ಮುಖ್ಯಸ್ಥರಾದ ಶ್ರೀಮತಿ ಜಸ್ಟಿನ್ ಡಿಸೋಜ ಪ್ರಾಚಾರ್ಯರಾದ ಶ್ರೀ ನಿರಂಜನ್ ಡಿ ಸಿ, ಕಾಲೇಜಿನ ನಿರ್ದೇಶಕರಾದ ಡಾಕ್ಟರ್ ಜಯಂತ್ ಕಾರ್ಯದರ್ಶಿಗಳಾದ ಶ್ರೀ ಹೇಮಂತ್ ಡಿ ಎಸ್ ಹಾಗೂ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಡಿಎಸ್ ಇವರು ಅಭಿನಂದಿಸಿದ್ದಾರೆ
No comments:
Post a Comment