Friday, January 22, 2021

ಸಿದ್ಧಗಂಗಾ ಶಿವಕುಮಾರ ಸ್ವಾಮಿಗಳ ಎರಡನೇ ವರ್ಷದ ಪುಣ್ಯಸ್ಮರಣೆ

 ವಿನಮ್ರತೆ ಇದ್ದಲ್ಲಿ ಜ್ಞಾನ ಇರುತ್ತದೆ. 

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ.

ದಾವಣಗೆರೆ ಜ. 21, ಇಡೀ ಜಗತ್ತು ತಿರುಗಿ ನೋಡುವಂತೆ ಸತ್ಕಾರ್ಯ ಮಾಡಿದವರು ಸಿದ್ಧಗಂಗಾ ಶಿವಕುಮಾರ ಶ್ರೀಗಳು. ಅವರ ಹೆಸರಲ್ಲಿರುವ ದಾವಣಗೆರೆ ಸಿದ್ಧಗಂಗಾ ವಿದ್ಯಾಸಂಸ್ಥೆ ಕೂಡ ಅದರಂತೆಯೇ ನಡೆಯುತ್ತಿರುವ ಕಾರಣ ಈ ಸಂಸ್ಥೆಯಲ್ಲಿ ಕಲಿತವರು ಸುಸಂಸ್ಕøತರಾಗುತ್ತಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರು ಅಭಿಪ್ರಾಯ ವ್ಯಕ್ತಪಡಿಸಿದರು. 

ಅವರಿಂದು ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿ ನಡೆದಾಡುವ ದೇವರೆಂದೇ ಭಾವಿಸಿದ್ದ ಸಿದ್ಧಗಂಗಾ ಶಿವಕುಮಾರ ಸ್ವಾಮಿಗಳ ಎರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಮತ್ತು ದಾಸೋಹದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ವಿನಮ್ರತೆ ಇದ್ದಲ್ಲಿ ಜ್ಞಾನ ಇರುತ್ತದೆ ಎಂದ ಅವರು ಮಕ್ಕಳಿಗೆ ಸುಜ್ಞಾನವಂತರಾಗುವ ಶಿಕ್ಷಣ ಪಡೆಯಲು ತಿಳಿಸಿದರು. 

ಪಿ. ಯು. ಸಿ ಹಂತದ ವಿದ್ಯಾರ್ಥಿಗಳು ಮುಂದೆ ನಾನು ಏನಾಗಬೇಕೆಂದು ಕನಸು ಕಟ್ಟುವ ಸಮಯ. ಈ ಸಮಯದಲ್ಲಿ ನೀವು ಉನ್ನತ ಮಟ್ಟದ ಕನಸನ್ನೇ ಕಟ್ಟಿ ಭವಿಷ್ಯದಲ್ಲಿ ನಿಮಗೆ ಒಳ್ಳೆಯದಾಗುತ್ತೆ ಎಂದರು.

ಜಾತಿ, ವರ್ಣಗಳನ್ನ ಮೀರಿ ಸಮಾಜದ ಆಸ್ತಿಯಾಗಿ ನಿಮ್ಮ ಬಳಿ ಬರುವ ಎಲ್ಲರಿಗೂ ಒಳಿತನ್ನು ಬಯಸಿ ಎಂದು ನೆರೆದಿದ್ದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮುಂದುವರೆದು ಮಾತನಾಡಿದ ಬೀಳಗಿಯವರು ದೊಡ್ಡ ಮರದ ನೆರಳಿನಲ್ಲಿ ಬೆಳೆಯುವವರು ವಿಭೂತಿ  ಸಂಸ್ಕøತಿಯನ್ನು ಉಳಿಸಿ ಬೆಳೆಸಬೇಕೆಂದರು. ದಾಸೋಹ ಉದ್ಘಾಟನೆಯ ನಂತರ ಸಾಂಕೇತಿಕವಾಗಿ ಕೆಲವು ಮಕ್ಕಳಿಗೆ ಪ್ರಸಾದ ವಿನಿಯೋಗಿಸಿದರು.

ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮಿಗಳು ದಿವ್ಯಸಾನಿಧ್ಯ ವಹಿಸಿ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮಿಗಳು ನಮ್ಮ ನಾಡಿನ ಸಹಸ್ರಾರು ನಿರ್ಗತಿಕರ ದಾರಿದೀಪವಾಗಿದ್ದರು ಅವರು ಇಂದು ನಮ್ಮ ಜೊತೆಗಿಲ್ಲ ಆದರೆ ಅವರ ಆದರ್ಶ ನಮ್ಮ ಜೊತೆಗಿದೆÉ. ಅವುಗಳನ್ನ ನಾವು ಪಾಲಿಸೋಣ ಎಂದರು.

ಮಹಾನಗರ ಪಾಲಿಕೆ ಸದಸ್ಯೆ ಶ್ರೀಮತಿ ಶ್ವೇತಾ ಶ್ರೀನಿವಾಸ್ ಉಪಸ್ಥಿತರಿದ್ದರು.


ಪ್ರಾರಂಭದಲ್ಲಿ ಸಿದ್ಧಗಂಗಾ ಪಿ. ಯು. ಕಾಲೇಜು ಪ್ರಾಂಶುಪಾಲರಾದ ನಿರಂಜನ ಜಿ. ಸಿ. ಸ್ವಾಗತಿಸಿದರು. ಪಿ. ಯು. ಕಾಲೇಜು ನಿರ್ದೇಶಕ ಜಯಂತ್ ಡಿ. ಎಸ್. ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಸಿದ್ಧಗಂಗೆ ಶ್ರೀಗಳವರ ತ್ರಿವಿಧ  ದಾಸೋಹ  ಸೇವೆಯನ್ನು ಮತ್ತು ಅವರ ಮಾರ್ಗದಲ್ಲೇ ಮುನ್ನಡೆದ ಎಂ. ಎಸ್. ಶಿವಣ್ಣನವರ ಕಾಯಕವನ್ನು ನಿರೂಪಿಸುತ್ತಾ ನಡೆದಾಡುವ ದೇವರು ಪಾದಸ್ಪರ್ಶ ಮಾಡಿದ ಪುಣ್ಯಭೂಮಿ ಈ ಸಿದ್ಧಗಂಗಾ ವಿದ್ಯಾಸಂಸ್ಥೆ ಎಂದರು. ಕನ್ನಡ ಉಪನ್ಯಾಸಕ ಸದಾಶಿವ ಹೊಳ್ಳ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ದರ್ಶನ್ ರುದ್ರಾಕ್ಷಿಬಾಯಿ ಮತ್ತು ತಂಡದವರು ಸುಶ್ರಾವ್ಯವಾಗಿ ಹಾಡಿ ಭಕ್ತಿ ಸೇವೆ ಸಮರ್ಪಿಸಿದರು. ಸುಮಾರು ಮೂರು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಮತ್ತು ಭಕ್ತರಿಗೆ ದಾಸೋಹ ವ್ಯವಸ್ಥೆಯನ್ನು ಸಂಸ್ಥೆಯ ಕಾರ್ಯದರ್ಶಿ ಡಿ. ಎಸ್. ಹೇಮಂತ್ ಮತ್ತು ಪ್ರಶಾಂತ್‍ರವರು ನಿರ್ವಹಿಸಿದರು.

ಸಂಸ್ಥಾಪಕ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಸ್ಟಿನ್ ಡಿ’ಸೌಜ ಎಲ್ಲರಿಗೂ ವಂದಿಸಿದರು. 


Sunday, November 22, 2020

ಕನ್ನಡ ಕೀರ್ತಿ ಕಳಸ ಪ್ರಶಸ್ತಿ

Kannada Keerthi  kalasa prashasti pradaana samaarambha

ಕನ್ನಡ ಕೀರ್ತಿ ಕಳಸ ಪ್ರಶಸ್ತಿ ಪ್ರದಾನ ಸಮಾರಂಭ 


ದಾವಣಗೆರೆಯ ಸಮಾನ ಮನಸ್ಕರ ಸೇವಾ ಸಮಿತಿಯ ಪ್ರಥಮ ವರ್ಷದ ವಾರ್ಷಿಕೋತ್ಸವ ಮತ್ತು 65ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ 2019-20ನೇ ಸಾಲಿನ ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ SSLC ಪರೀಕ್ಷೆಯ ಪ್ರಥಮ ಭಾಷೆ ಕನ್ನಡದಲ್ಲಿ 125 ಕ್ಕೆ 125 ಪರಿಪೂರ್ಣ ಅಂಕ ಪಡೆದ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಪ್ರೌಢಶಾಲಾ ಮಕ್ಕಳಿಗೆ "ಕನ್ನಡ ಕೀರ್ತಿ ಕಳಸ" ಪ್ರಶಸ್ತಿ.

ದಿನಾಂಕ : 22 ನವಂಬರ್ 2020ನೇ ಭಾನುವಾರ ಬೆಳಿಗ್ಗೆ 10-35ಕ್ಕೆ 

ಸ್ಥಳ : ಶ್ರೀ ಸಿದ್ಧಗಂಗಾ ವಿದ್ಯಾ ಸಂಸ್ಥೆ ಆವರಣ, ದಾವಣಗೆರೆ

 

Sunday, November 1, 2020

ಸಿದ್ಧಗಂಗಾ ಶಾಲೆಯ ವಿನೂತನ ಕನ್ನಡ ರಾಜ್ಯೋತ್ಸವ

ಸಿದ್ಧಗಂಗಾ ವಿದ್ಯಾ ಸಂಸ್ಥೆಯಿಂದ ವಿನೂತನ ಮಾದರಿಯ ಕನ್ನಡ ರಾಜ್ಯೋತ್ಸವ Kannada Rajyotsava 2020 by Siddaganga Students, Davanagere

Friday, October 30, 2020

ಕನ್ನಡ ಕುವರ - ಕುವರಿ

ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಹಾಗು ಶ್ರೀ ಸಿದ್ಧಗಂಗಾ ವಿದ್ಯಾ ಸಂಸ್ಥೆ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ 2019-20 ನೇ ಸಾಲಿನ SSLC ಪರೀಕ್ಷೆಯ ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಕನ್ನಡ ಕೌಸ್ತುಭ, ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿ, ಕನ್ನಡ ಕುವರ ಕನ್ನಡ ಕುವರಿ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭ - 2020 

Saturday, October 17, 2020

NEET Results-2020

ಕಳೆದ ತಿಂಗಳು ನಡೆದ NEET ಪರೀಕ್ಷೆಯಲ್ಲಿ ದಾವಣಗೆರೆಯ ಸಿದ್ದಗಂಗಾ ವಿಜ್ಞಾನ ಕಾಲೇಜಿನ ಮಕ್ಕಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ ದಾಖಲೆಯ ಅಂಕಗಳನ್ನು ಪಡೆದಿದ್ದಾರೆ. ವೈದ್ಯಕೀಯ ಶಿಕ್ಷಣ ಪಡೆಯುವಲ್ಲಿ ಸಾಧನೆ ತೋರಿದ್ದಾರೆ  ಅದರಲ್ಲಿ 643 ಅಂಕಗಳಿಸಿದ ಲಕ್ಷ್ಮಿ ಶಿವ ಸಾಲಿ, 635 ಪಡೆದ ಸಾಗರ್ ಮಾಮನಿ, 613 ಪಡೆದ  ಇಮಾಮ್ ಜಾಫರ್ ಸಾದಿಕ್, 595 ಪಡೆದ ಬಿರೇಶ್ , 593 ವಿಜಯ್ ಕಿಶನ್, 582 ಅಂಕಗಳಿಸಿದ ನಿಸರ್ಗ ಎ ಕೌಟಿ ,  567 ಅಂಕಗಳನ್ನು ಪಡೆದ ಕಿರಣ್ ಮತ್ತು ಸಹನಾ ಉಲ್ಲೇಖನಾರ್ಹ . 

ಆಲ್ ಇಂಡಿಯಾ ranking ನಲ್ಲಿ  ಸಿದ್ದರಾಮೇಶ್ವರ KM 512 , ಉದಯ್ H ದುಮ್ಮಿಹಾಳ 837, ಅಕ್ಷತಾ ಬಿಜಿ  1179 ನೇ  rank ನಲ್ಲಿದ್ದರೆ   ಎಂದು ಕಾಲೇಜಿನ ಪ್ರಾಚಾರ್ಯರಾದ ಗಾಯತ್ರಿ ಚಿಮ್ಮಡ ತಿಳಿಸಿದ್ದಾರೆ . ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ನಿರ್ದೇಶಕರಾದ ಡಾll ಜಯಂತ್ ಮತ್ತು ಉಪನ್ಯಾಸಕರು ಅಭಿನಂದಿಸಿದ್ದಾರೆ.



Sunday, September 13, 2020

JEE Result 2020 (Mains)



JEE Mainನಲ್ಲಿ ಸಿದ್ಧಗಂಗಾ ಕಾಲೇಜಿನ ಸಾಧನೆ

ದಾವಣಗೆರೆ . ಸೆ . 12

ಇತ್ತೀಚೆಗೆ ನಡೆದ JEE Mainನಲ್ಲಿ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಮೇಘ ಹಿರೇಮಠ್  305 ನೇ Rank, ಅಕ್ಷತ B.G. 1213 ನೇ Rank, ಹರ್ಷವರ್ಧನ 1781 ನೇ Rank, ರಾಜೇಶ್ ಮೈಸೂರ್ Mutt 1791 ನೇ Rank, V. ಶ್ರೀ ಕೃಷ್ಣ 2445, V. ನಾಗಸಾಯಿ 5020, ಮೇಘನ . D ಧುತ್ತರಗಿ 5094, ಅನುಶ್ರೀ K.C. 9821, ಹರ್ಷ .V 9898 Rank ಪಡೆದಿದ್ದಾರೆ. 65 ಕ್ಕಿಂತ ಹೆಚ್ಚು ಮಕ್ಕಳು JEE(Advanced) ಗೆ ಅರ್ಹತೆ ಪಡೆದಿದ್ದಾರೆ. ಉತ್ತಮ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಾಚಾರ್ಯರು ಮತ್ತು ಉಪನ್ಯಾಸಕರು ಅಭಿನಂದನೆ ಸಲ್ಲಿಸಿದ್ದಾರೆ.

























Saturday, August 22, 2020

K-CET 2020 Result

 ಸಿದ್ಧಗಂಗಾ ಕಾಲೇಜಿಗೆ K-CET ಯಲ್ಲಿ ಉತ್ತಮ ಫಲಿತಾಂಶ

ದಾವಣಗೆರೆ ಆ. 21

ಜುಲೈ ತಿಂಗಳ 30, 31 ರಂದು ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ನಗರದ ಸಿದ್ಧಗಂಗಾ ಪದವಿಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ ದೊರೆತಿದೆ.

ವಿನಾಯಕ ಹಾವೇರಿ ಬಿ. ಎಸ್ಸಿ., (ಅಗ್ರಿ) 263 ನೇ Rank, ನ್ಯಾಚುರೋಪತಿ ಮತ್ತು ಯೋಗ 346, ವೆಟರ್ನರಿ 446, ಬಿ ಮತ್ತು ಡಿ. ಫಾರ್ಮದಲ್ಲಿ 721 ನೇ Rank ಗಳಿಸಿದ್ದಾನೆ.

ನಿಸರ್ಗ ಎಸ್ ಕೌಟಿ ಬಿ. ಎಸ್ಸಿ(ಅಗ್ರಿ) 267, ಯೋಗ ನ್ಯಾಚುರೋಪತಿ 339, ವೆಟರ್ನರಿ 411, ಬಿ ಮತ್ತು ಡಿ ಫಾರ್ಮ 717ನೇ Rank ಪಡೆದಿದ್ದಾಳೆ.

ವಿರಂಚಿ ಎಲ್. ಎಸ್. ಬಿ. ಎಸ್ಸಿ(ಅಗ್ರಿ) 585 ಇಂಜಿನಿಯರಿಂಗ್ 955 ನೇ Rank ಪಡೆದಿದ್ದಾನೆ.

Nisarga
Vinayak

Viranchi


10000ದೊಳಗೆ Rank ಪಡೆದ ವಿದ್ಯಾರ್ಥಿಗಳು ಇಂಜಿನಿಯರಿಂಗ್‍ನಲ್ಲಿ 48, ಬಿ. ಎಸ್ಸಿ(ಅಗ್ರಿ) 66, ನ್ಯಾಚುರೋಪತಿ ಮತ್ತು ಯೋಗದಲ್ಲಿ 58, ವೆಟರ್ನರಿ ಸೈನ್ಸ್‍ನಲ್ಲಿ 45 ಬಿ ಫಾರ್ಮ ಮತ್ತು ಡಿ ಫಾರ್ಮದಲ್ಲಿ 38 ಒಟ್ಟು 293 ಇದ್ದಾರೆ.

ಉತ್ತಮ ಫಲಿತಾಂಶ ಪಡೆದಿರುವ ಮಕ್ಕಳನ್ನು ಸಂಸ್ಥೆಯ ನಿರ್ದೇಶಕರಾದ ಡಾ|| ಜಯಂತ್ ಪ್ರಾಚಾರ್ಯರಾದ ಗಾಯತ್ರಿ ಚಿಮ್ಮಡ್ ಮತ್ತು ಬೋಧಕ ವರ್ಗದವರು ಅಭಿನಂದಿಸಿದ್ದಾರೆ. 


Tuesday, August 11, 2020

SSLC Result - 2020

 ಸಿದ್ಧಗಂಗಾ ಜಿಲ್ಲೆಗೆ ನಂಬರ್ – 1 

ಸಿದ್ಧಗಂಗಾ ಕಾಂಪೋಜಿಟ್ ಹೈಸ್ಕೂಲ್

SSLC ಯಲ್ಲಿ ದಾಖಲೆಯ ಫಲಿತಾಂಶ 

ಜಿಲ್ಲಾ ಟಾಪರ್ ಆಕಾಶ್ ಆರ್

ದಾವಣಗೆರೆ. ಆ.10 

SSLC ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ದಾವಣಗೆರೆ ಜಿಲ್ಲೆಯ ಟಾಪರ್ ಆಗಿ ಸಿದ್ಧಗಂಗಾ ವಿದ್ಯಾ ಸಂಸ್ಥೆಯ ಆಕಾಶ್ ಆರ್ 625 ಕ್ಕೆ 623 ಅಂಕಗಳನ್ನು ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾನೆ. 

ಕನ್ನಡ 125 ಕ್ಕೆ 124, ಇಂಗ್ಲೀಷ್ 99, ಗಣಿತ 100, ವಿಜ್ಞಾನ 100, ಸಮಾಜ 100 ಅಂಕಗಳನ್ನು ಪಡೆದು ಶಾಲೆಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ರಾಜ್ಯದಲ್ಲಿ 623 ಅಂಕಗಳನ್ನು ಪಡೆದ 43 ವಿದ್ಯಾರ್ಥಿಗಳಲ್ಲಿ ಆಕಾಶ್ ಒಬ್ಬನಾಗಿದ್ದಾನೆ. ಸೆಕ್ಯುರಿಟಿ ಗಾರ್ಡ್ ಆಗಿರುವ ಆರ್.ರೇವಣಸಿದ್ದಪ್ಪ ಮತ್ತು ಗೃಹಿಣಿ ಮಾಲಾ ದಂಪತಿಗಳ ಏಕೈಕ ಪುತ್ರ ಆಕಾಶ್ ಸಿದ್ಧಗಂಗಾ ಸಂಸ್ಥೆಯ ಸರ್ವಕಾಲಿಕ ದಾಖಲೆ ಮುರಿದ ಪ್ರತಿಭಾವಂತ. ಸೌಮ್ಯ ಸ್ವಭಾವದ ಆಕಾಶ್ ಎಲ್ಲ ಶಿಕ್ಷಕರ ಮೆಚ್ಚಿನ ವಿದ್ಯಾರ್ಥಿ. 

ಸಿದ್ಧಗಂಗಾ ಶಾಲೆಗೆ ಈ ಬಾರಿಯ SSLC ಯಲ್ಲಿ 600 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದವರು 15 ಮಕ್ಕಳಿದ್ದಾರೆ. ವಿವಿಧ ವಿಷಯಗಳಲ್ಲಿ 90 ಮಕ್ಕಳು 100 ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ. ಕನ್ನಡದಲ್ಲಿ 8 ಮಕ್ಕಳು 125 ಕ್ಕೆ 125, ಹಿಂದಿಯಲ್ಲಿ 70 ಮಕ್ಕಳು, ಗಣಿತದಲ್ಲಿ 3, ವಿಜ್ಞಾನದಲ್ಲಿ 2, ಸಮಾಜದಲ್ಲಿ 7 ಮಕ್ಕಳು 100 ಕ್ಕೆ 100 ಅಂಕಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ. ಪರೀಕ್ಷೆಗೆ ಹಾಜರಾದ 324 ಮಕ್ಕಳಲ್ಲಿ 321 ಮಕ್ಕಳು ಉತ್ತೀರ್ಣರಾಗಿದ್ದಾರೆ. ಶೇ.99.07 ಫಲಿತಾಂಶ ಬಂದಿದೆ.

120 ಮಕ್ಕಳು ಡಿಸ್ಟಿಂಕ್ಷನ್‍ನಲಿ,್ಲ 203 ಮಕ್ಕಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 

ಉತ್ತಮ ಫಲಿತಾಂಶ ದೊರೆಯಲು ಶಿಕ್ಷಕರ ನಿರಂತರ ಪರಿಶ್ರಮ ಮತ್ತು ದಾವಣಗೆರೆ ಉಪನಿರ್ದೇಶಕರು ನಡೆಸಿದ ಸರಣಿ ಪರೀಕ್ಷೆಗಳು ಕಾರಣವೆಂದು ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ’ಸೌಜ ತಿಳಿಸಿದ್ದಾರೆ. 

ಸಾಧನೆಗೈದ ಎಲ್ಲ ಮಕ್ಕಳನ್ನು ಸಂಸ್ಥೆಯ ಕಾರ್ಯದರ್ಶಿ ಹೇಮಂತ್ ನಿರ್ದೇಶಕರಾದ ಡಾ||ಜಯಂತ್ ಮತ್ತು ಎಲ್ಲ ಅಧ್ಯಾಪಕ ವರ್ಗದವರು ಅಭಿನಂದಿಸಿದ್ದಾರೆ. 



Thursday, July 16, 2020

CBSE X - Result 2020

CBSE 10 ನೇ ತರಗತಿ ಫಲಿತಾಂಶ
ಸಿದ್ಧಗಂಗಾ ಶಾಲೆಗೆ ಈ ವರ್ಷವೂ 100 ಕ್ಕೆ 100
“ಹಾಜ್ರ ಖಾನುಂ ಅಫ್ರಿದಿ” ಶಾಲೆಗೆ ಪ್ರಥಮ

ದಾವಣಗೆರೆ ಜುಲೈ 15,
2020 ರ ಮಾರ್ಚ್ ತಿಂಗಳಲ್ಲಿ ಕೋವಿಡ್ – 19 ರ ಲಾಕ್‍ಡೌನ್‍ಗಿಂತ ಮುಂಚಿತವಾಗಿ 10 ನೇ ತರಗತಿ ಸಿಬಿಎಸ್‍ಇ ಪಠ್ಯಕ್ರಮದ ಬೋರ್ಡ್ ಪರೀಕ್ಷೆಗಳನ್ನು ನಡೆಸಲಾಗಿತ್ತು. ಪ್ರತಿ ಬಾರಿಯಂತೆ ಈ ಬಾರಿಯೂ ನಗರದ ಸಿದ್ಧಗಂಗಾ ಶಾಲೆಗೆ ನೂರಕ್ಕೆ ನೂರು ಫಲಿತಾಂಶ ಬಂದಿದೆ.
ತಾಜ್ ಮೊಹಮದ್ ಅಫ್ರಿದಿ ಮತ್ತು ಸಮೀನಾ ಅಂಜುಂ ದಂಪತಿಯ ಪುತ್ರಿ ಹಾಜ್ರ ಖಾನುಂ ಅಫ್ರಿದಿ 94.6% ಅಂಕ ಗಳಿಸಿದ್ದಾಳೆ. ಇಂಗ್ಲಿಷ್ 94, ಹಿಂದಿ 99, ಗಣಿತ 97, ವಿಜ್ಞಾನ 88, ಸಮಾಜ 95 ಅಂಕಗಳು ಒಟ್ಟು 473 ಅಂಕಗಳನ್ನು ಪಡೆದಿದ್ದಾಳೆ.
ಶ್ರೇಯಸ್ ವಸಂತ್ ಕುಮಾರ್ ಪಟಕಿ 94% , ಚಿನ್ಮಯಿ ಒ.ಆ 92.6% ಶೇಕಡವಾರು ಅಂಕಗಳನ್ನು ಗಳಿಸಿ ದ್ವಿತೀಯ ಮತ್ತು ತೃತೀಯ ಸ್ಥಾನದಲ್ಲಿದ್ದಾರೆ. ಚಿನ್ಮಯಿ ದ್ವಿತೀಯ ಭಾಷೆ ಮತ್ತು ಸಮಾಜ ವಿಜ್ಞಾನದಲ್ಲಿ ತಲಾ 99 ಅಂಕಗಳನ್ನು ಪಡೆದಿರುವುದು ವಿಶೇಷ.
9 ಮಕ್ಕಳು ಡಿಸ್ಟಿಂಕ್ಷನ್‍ನಲ್ಲಿ 32 ಮಕ್ಕಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ನೂರಕ್ಕೆ ನೂರು ಉತ್ತೀರ್ಣರಾಗಿ ಅತ್ಯುತ್ತಮ ಫಲಿತಾಂಶಕ್ಕೆ ಕಾರಣರಾದ ಮಕ್ಕಳನ್ನು ಆಡಳಿತ ಮಂಡಳಿಯವರು, ಪ್ರಾಚಾರ್ಯರಾದ ಶ್ರೀಮತಿ M.P. ಶಾಂತಿ ಮತ್ತು ಎಲ್ಲ ಬೋಧಕವರ್ಗದವರು ಅಭಿನಂದಿಸಿದ್ದಾರೆ.

Wednesday, July 15, 2020

II PUC Result - 2020


ದ್ವಿತೀಯ ಪಿ.ಯು.ಸಿ ಫಲಿತಾಂಶ
ಸಿದ್ಧಗಂಗಾ ಕಾಲೇಜಿಗೆ 96%
ಟಾಪರ್ V.ನಾಗಸಾಯಿಗೆ 588
ಉದಯ್ PCMB ಯಲ್ಲಿ ಜಿಲ್ಲೆಗೆ ಪ್ರಥಮ
ದಾವಣಗೆರೆ ಜುಲೈ 14,
ಕೋವಿಡ್ ಆತಂಕದ ನಡುವೆಯೂ ಸಿದ್ಧಗಂಗಾ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಮಕ್ಕಳು ದ್ವಿತೀಯ ಪಿ.ಯು.ಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಕಾಲೇಜಿಗೆ 96% ಫಲಿತಾಂಶ ಲಭ್ಯವಾಗಿದೆ.
V.ನಾಗಸಾಯಿ ಎಂಬ ವಿದ್ಯಾರ್ಥಿ 600 ಕ್ಕೆ 588 ಅಂಕಗಳನ್ನು ಪಡೆದ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಕನ್ನಡ 96, ಇಂಗ್ಲೀಷ್ 94, ಭೌತಶಾಸ್ತ್ರ 99, ರಸಾಯನ ಶಾಸ್ತ್ರ 99, ಗಣಿತ 100, ಜೀವಶಾಸ್ತ್ರ 100, ಶೇಕಡ 98 ಅಂಕಗಳನ್ನು ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾನೆ.
ಕಾಲೇಜಿನ ಒಟ್ಟು 746 ಮಕ್ಕಳಲ್ಲಿ ಭೌತಶಾಸ್ತ್ರದಲ್ಲಿ 2 ರಸಾಯನ ಶಾಸ್ತ್ರದಲ್ಲಿ 4 ಗಣಿತ 81 ಜೀವಶಾಸ್ತ್ರ 7 ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿ 1 ಹೀಗೆ 95 ವಿದ್ಯಾರ್ಥಿಗಳು 100 ಕ್ಕೆ 100 ಪಡೆದು ವಿದ್ಯಾರ್ಥಿಗಳು ದಾಖಲೆ ನಿರ್ಮಿಸಿದ್ದಾರೆ.
ಉದಯ್ H ದುಮ್ಮಿನಾಳ್ ಎಂಬ ವಿದ್ಯಾರ್ಥಿ ಭೌತಶಾಸ್ತ್ರ 100 ರಸಾಯನ ಶಾಸ್ತ್ರ 100 ಗಣಿತ 100 ಜೀವಶಾಸ್ತ್ರ 100 ಹೀಗೆ PCMB ಯಲ್ಲಿ 400 ಕ್ಕೆ 400 ಅಂಕ ಪಡೆದು ಜಿಲ್ಲೆಯಲ್ಲಿ ದಾಖಲೆ ನಿರ್ಮಿಸಿದ್ದಾನೆ.
33 ಮಕ್ಕಳು 95% ಗಿಂತ ಹೆಚ್ಚು, 165 ಮಕ್ಕಳು 90% ಗಿಂತ ಹೆಚ್ಚು, ಒಟ್ಟು 308 ಮಕ್ಕಳು ಡಿಸ್ಟಿಂಕ್ಷನ್‍ನಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಪಡೆದಿದ್ದಾರೆ. ಕಬ್ಬಿಣದ ಕಡಲೆ ಎಂದೇ ಬಿಂಬಿತವಾಗಿರುವ ಗಣಿತದಲ್ಲಿ 81 ಮಕ್ಕಳು 100 ಕ್ಕೆ 100 ಪಡೆದು ಸಿದ್ಧಗಂಗೆಯ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಠಿಸಿದ್ದಾರೆ. ಈ ಎಲ್ಲ ಮಕ್ಕಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರಾದ ಗಾಯತ್ರಿ ಚಿಮ್ಮಡ್ ಮತ್ತು ಎಲ್ಲ ಉಪನ್ಯಾಸಕ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
ಸಿದ್ಧಗಂಗಾ ಕಾಲೇಜ್ ಸಾಧನೆಗಳ ಸರಮಾಲೆ
ವಿಜ್ಞಾನ ವಿಭಾಗದಲ್ಲಿ ಈ ವರ್ಷವೂ ಯಶೋಮಾಲೆ
ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಉದಯ್ ಎಚ್ ದುಮ್ಮಿನಾಳ್ ಎಂಬ ವಿದ್ಯಾರ್ಥಿಯ ಸಾಧನೆ ಇಡೀ ಜಿಲ್ಲೆ ಹೆಮ್ಮೆ ಪಡುವಂತಿದೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ ವಿಷಯಗಳಲ್ಲಿ 100 ಕ್ಕೆ 100 ಒಟ್ಟು 400 ಕ್ಕೆ 400 ಅಂಕಗಳನ್ನು ಪಡೆದು ಸಿದ್ಧಗಂಗೆಯ ಸಾಧನೆಯ ಸರಮಾಲೆಗೆ ತನ್ನ ಯಶೋಮಾಲೆ ತೊಡಿಸಿದ್ದಾನೆ. ಹನುಮಂತಪ್ಪ ಎಚ್ ಮತ್ತು ರೇಣುಕಾ ಎಂಬ ದಂಪತಿಗಳ ಸುಪುತ್ರ ಉದಯ್‍ಗೆ ಹಾರ್ದಿಕ ಅಭಿನಂದನೆಗಳು.