CBSE 10 ನೇ ತರಗತಿ ಫಲಿತಾಂಶ
ಸಿದ್ಧಗಂಗಾ ಶಾಲೆಗೆ ಈ ವರ್ಷವೂ 100 ಕ್ಕೆ 100
“ಹಾಜ್ರ ಖಾನುಂ ಅಫ್ರಿದಿ” ಶಾಲೆಗೆ ಪ್ರಥಮ
ದಾವಣಗೆರೆ ಜುಲೈ 15,
2020 ರ ಮಾರ್ಚ್ ತಿಂಗಳಲ್ಲಿ ಕೋವಿಡ್ – 19 ರ ಲಾಕ್‍ಡೌನ್‍ಗಿಂತ ಮುಂಚಿತವಾಗಿ 10 ನೇ ತರಗತಿ ಸಿಬಿಎಸ್‍ಇ ಪಠ್ಯಕ್ರಮದ ಬೋರ್ಡ್ ಪರೀಕ್ಷೆಗಳನ್ನು ನಡೆಸಲಾಗಿತ್ತು. ಪ್ರತಿ ಬಾರಿಯಂತೆ ಈ ಬಾರಿಯೂ ನಗರದ ಸಿದ್ಧಗಂಗಾ ಶಾಲೆಗೆ ನೂರಕ್ಕೆ ನೂರು ಫಲಿತಾಂಶ ಬಂದಿದೆ.
ತಾಜ್ ಮೊಹಮದ್ ಅಫ್ರಿದಿ ಮತ್ತು ಸಮೀನಾ ಅಂಜುಂ ದಂಪತಿಯ ಪುತ್ರಿ ಹಾಜ್ರ ಖಾನುಂ ಅಫ್ರಿದಿ 94.6% ಅಂಕ ಗಳಿಸಿದ್ದಾಳೆ. ಇಂಗ್ಲಿಷ್ 94, ಹಿಂದಿ 99, ಗಣಿತ 97, ವಿಜ್ಞಾನ 88, ಸಮಾಜ 95 ಅಂಕಗಳು ಒಟ್ಟು 473 ಅಂಕಗಳನ್ನು ಪಡೆದಿದ್ದಾಳೆ.
ಶ್ರೇಯಸ್ ವಸಂತ್ ಕುಮಾರ್ ಪಟಕಿ 94% , ಚಿನ್ಮಯಿ ಒ.ಆ 92.6% ಶೇಕಡವಾರು ಅಂಕಗಳನ್ನು ಗಳಿಸಿ ದ್ವಿತೀಯ ಮತ್ತು ತೃತೀಯ ಸ್ಥಾನದಲ್ಲಿದ್ದಾರೆ. ಚಿನ್ಮಯಿ ದ್ವಿತೀಯ ಭಾಷೆ ಮತ್ತು ಸಮಾಜ ವಿಜ್ಞಾನದಲ್ಲಿ ತಲಾ 99 ಅಂಕಗಳನ್ನು ಪಡೆದಿರುವುದು ವಿಶೇಷ.
9 ಮಕ್ಕಳು ಡಿಸ್ಟಿಂಕ್ಷನ್‍ನಲ್ಲಿ 32 ಮಕ್ಕಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ನೂರಕ್ಕೆ ನೂರು ಉತ್ತೀರ್ಣರಾಗಿ ಅತ್ಯುತ್ತಮ ಫಲಿತಾಂಶಕ್ಕೆ ಕಾರಣರಾದ ಮಕ್ಕಳನ್ನು ಆಡಳಿತ ಮಂಡಳಿಯವರು, ಪ್ರಾಚಾರ್ಯರಾದ ಶ್ರೀಮತಿ M.P. ಶಾಂತಿ ಮತ್ತು ಎಲ್ಲ ಬೋಧಕವರ್ಗದವರು ಅಭಿನಂದಿಸಿದ್ದಾರೆ.

No comments:
Post a Comment