Wednesday, July 15, 2020

II PUC Result - 2020


ದ್ವಿತೀಯ ಪಿ.ಯು.ಸಿ ಫಲಿತಾಂಶ
ಸಿದ್ಧಗಂಗಾ ಕಾಲೇಜಿಗೆ 96%
ಟಾಪರ್ V.ನಾಗಸಾಯಿಗೆ 588
ಉದಯ್ PCMB ಯಲ್ಲಿ ಜಿಲ್ಲೆಗೆ ಪ್ರಥಮ
ದಾವಣಗೆರೆ ಜುಲೈ 14,
ಕೋವಿಡ್ ಆತಂಕದ ನಡುವೆಯೂ ಸಿದ್ಧಗಂಗಾ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಮಕ್ಕಳು ದ್ವಿತೀಯ ಪಿ.ಯು.ಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಕಾಲೇಜಿಗೆ 96% ಫಲಿತಾಂಶ ಲಭ್ಯವಾಗಿದೆ.
V.ನಾಗಸಾಯಿ ಎಂಬ ವಿದ್ಯಾರ್ಥಿ 600 ಕ್ಕೆ 588 ಅಂಕಗಳನ್ನು ಪಡೆದ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಕನ್ನಡ 96, ಇಂಗ್ಲೀಷ್ 94, ಭೌತಶಾಸ್ತ್ರ 99, ರಸಾಯನ ಶಾಸ್ತ್ರ 99, ಗಣಿತ 100, ಜೀವಶಾಸ್ತ್ರ 100, ಶೇಕಡ 98 ಅಂಕಗಳನ್ನು ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾನೆ.
ಕಾಲೇಜಿನ ಒಟ್ಟು 746 ಮಕ್ಕಳಲ್ಲಿ ಭೌತಶಾಸ್ತ್ರದಲ್ಲಿ 2 ರಸಾಯನ ಶಾಸ್ತ್ರದಲ್ಲಿ 4 ಗಣಿತ 81 ಜೀವಶಾಸ್ತ್ರ 7 ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿ 1 ಹೀಗೆ 95 ವಿದ್ಯಾರ್ಥಿಗಳು 100 ಕ್ಕೆ 100 ಪಡೆದು ವಿದ್ಯಾರ್ಥಿಗಳು ದಾಖಲೆ ನಿರ್ಮಿಸಿದ್ದಾರೆ.
ಉದಯ್ H ದುಮ್ಮಿನಾಳ್ ಎಂಬ ವಿದ್ಯಾರ್ಥಿ ಭೌತಶಾಸ್ತ್ರ 100 ರಸಾಯನ ಶಾಸ್ತ್ರ 100 ಗಣಿತ 100 ಜೀವಶಾಸ್ತ್ರ 100 ಹೀಗೆ PCMB ಯಲ್ಲಿ 400 ಕ್ಕೆ 400 ಅಂಕ ಪಡೆದು ಜಿಲ್ಲೆಯಲ್ಲಿ ದಾಖಲೆ ನಿರ್ಮಿಸಿದ್ದಾನೆ.
33 ಮಕ್ಕಳು 95% ಗಿಂತ ಹೆಚ್ಚು, 165 ಮಕ್ಕಳು 90% ಗಿಂತ ಹೆಚ್ಚು, ಒಟ್ಟು 308 ಮಕ್ಕಳು ಡಿಸ್ಟಿಂಕ್ಷನ್‍ನಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಪಡೆದಿದ್ದಾರೆ. ಕಬ್ಬಿಣದ ಕಡಲೆ ಎಂದೇ ಬಿಂಬಿತವಾಗಿರುವ ಗಣಿತದಲ್ಲಿ 81 ಮಕ್ಕಳು 100 ಕ್ಕೆ 100 ಪಡೆದು ಸಿದ್ಧಗಂಗೆಯ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಠಿಸಿದ್ದಾರೆ. ಈ ಎಲ್ಲ ಮಕ್ಕಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರಾದ ಗಾಯತ್ರಿ ಚಿಮ್ಮಡ್ ಮತ್ತು ಎಲ್ಲ ಉಪನ್ಯಾಸಕ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
ಸಿದ್ಧಗಂಗಾ ಕಾಲೇಜ್ ಸಾಧನೆಗಳ ಸರಮಾಲೆ
ವಿಜ್ಞಾನ ವಿಭಾಗದಲ್ಲಿ ಈ ವರ್ಷವೂ ಯಶೋಮಾಲೆ
ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಉದಯ್ ಎಚ್ ದುಮ್ಮಿನಾಳ್ ಎಂಬ ವಿದ್ಯಾರ್ಥಿಯ ಸಾಧನೆ ಇಡೀ ಜಿಲ್ಲೆ ಹೆಮ್ಮೆ ಪಡುವಂತಿದೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ ವಿಷಯಗಳಲ್ಲಿ 100 ಕ್ಕೆ 100 ಒಟ್ಟು 400 ಕ್ಕೆ 400 ಅಂಕಗಳನ್ನು ಪಡೆದು ಸಿದ್ಧಗಂಗೆಯ ಸಾಧನೆಯ ಸರಮಾಲೆಗೆ ತನ್ನ ಯಶೋಮಾಲೆ ತೊಡಿಸಿದ್ದಾನೆ. ಹನುಮಂತಪ್ಪ ಎಚ್ ಮತ್ತು ರೇಣುಕಾ ಎಂಬ ದಂಪತಿಗಳ ಸುಪುತ್ರ ಉದಯ್‍ಗೆ ಹಾರ್ದಿಕ ಅಭಿನಂದನೆಗಳು.





2 comments: