625 ಕ್ಕೆ 624 ಅಂಕಗಳಿಸಿದ ದಾವಣಗೆರೆ ನಗರದ ಶ್ರೀ ಸಿದ್ಧಗಂಗಾ ಕಾಂಪೋಜಿಟ್ ಹೈಸ್ಕೂಲಿನ ಎಸ್. ಎಸ್. ಎಲ್. ಸಿ. ವಿದ್ಯಾರ್ಥಿನಿಯಾದ ಚೇತನಾ ಆರ್. ಗೆ ದಾವಣಗೆರೆ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ದಾರುಕೇಶ್‌ರವರು ಶಾಲು ಹೊದಿಸಿ ಪೇಟ ತೊಡಿಸಿ ಹಾರಹಾಕಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಬಾಲಕಿಯ ತಂದೆ ನಿವೃತ್ತ ಯೋಧ ರಘುನಾಥ ಜಗತಾಪ್ ಮತ್ತು ತಾಯಿ ರೇಣುಕಾ ಬಾಯಿ, ಶಿಕ್ಷಣ ಸಂಯೋಜಕರಾಗಿದ್ದ ಮುರುಗೇಂದ್ರಯ್ಯನವರು ಹಾಜರಿದ್ದರು. ಬಾಲಕಿಯ ಸಾಧನೆಯನ್ನು ಶ್ಲಾಘಿಸಿದ ಶಿಕ್ಷಣಾಧಿಕಾರಿಗಳು ಮುಂದಿನ ಗುರಿ ಐ. ಎ. ಎಸ್. ಮಾಡಬೇಕೆಂಬುದಾಗಿ ಬಾಲಕಿ ಹೇಳಿದಾಗ ಮತ್ತಷ್ಟು ಸಂಭ್ರಮಿಸಿದರು. ಜಿಲ್ಲೆಗೆ ಕೀರ್ತಿ ಬರುವಂತೆ ಮಾಡಿದ ಸಿದ್ಧಗಂಗಾ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಬೋಧಕ ವರ್ಗದವರ ಶ್ರದ್ಧೆ ಮತ್ತು ಬದ್ಧತೆಯನ್ನು ಹೊಗಳಿದರು.
Shambhavi. R
ReplyDeleteShambhavi. R
Delete123456
ReplyDelete2531008
ReplyDelete