ಸಿದ್ಧಗಂಗಾ ಹೈಸ್ಕೂಲಿನ ಚೇತನಾ ಆರ್. ಜಿಲ್ಲೆಗೆ ಟಾಪರ್
624 ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ
ಮಾರ್ಚ್ – ಏಪ್ರಿಲ್ ನಲ್ಲಿ ನಡೆದ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ದಾವಣಗೆರೆ ನಗರದ ಶ್ರೀ ಸಿದ್ಧಗಂಗಾ ಕಾಂಪೋಜಿಟ್ ಹೈಸ್ಕೂಲ್‌ನ ಚೇತನಾ ಆರ್ 625 ಕ್ಕೆ 624 ಅಂಕಗಳನ್ನು ಗಳಿಸಿ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದು, ಕನ್ನಡ 125, ಇಂಗ್ಲೀಷ್ 100, ಹಿಂದಿ 100, ಗಣಿತ 100, ವಿಜ್ಞಾನ 99, ಸಮಾಜ ವಿಜ್ಞಾನ 100, ಒಟ್ಟು 624 ಅಂಕಗಳನ್ನು ಗಳಿಸಿ ದಾಖಲೆ ಸ್ಥಾಪಿಸಿದ್ದಾಳೆ. ಭೂಮಿಕಾ ಬಸವರಾಜ್ ಮುತ್ತಗಿ 620, ವಿಕಾಸ್ ಎಂ 615, ವಿವೇಕ್ ಅಂಗಡಿ ಎನ್ ಎಂ 614, ತಾರಾ ಪಿ. ಜೆ. 611, ಫಾಲ್ಗುಣಿ ಜಿ. 609, ವಿನುತ ಎಂ. 609, ಕರುಣ್ ಸಾಗರ್ ಕೆ. ಎಂ. 607, ಶ್ರಾವಣಿ ಎಂ ಬಾಗೂರು 607, ವಿನುತಾ ಹೆಚ್. ಯು. 607, ಫಾಲ್ಗುಣ ಎನ್ ಬಾಗೂರು 606, ವಿಶಾಲಾಕ್ಷಿ ಭೀಮಪ್ಪ ಮೂರಾಮನ್ 606, ಹೆಚ್ ಶಶಾಂಕ್ ಶರ್ಮ 605, ಮೇಘರಾಜ್ ಬಣಕಾರ್ 603, ಶ್ರೇಯಾ ಜೆ. ಕೆ. 602 ಅಂಕಗಳನ್ನು ಗಳಿಸಿದ್ದಾರೆ. 48 ಮಕ್ಕಳು 90% ಗಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಅತ್ಯುನ್ನತ ಶ್ರೇಣಿಯಲ್ಲಿ 93 ಮಕ್ಕಳು ಉತ್ತೀರ್ಣರಾಗಿದ್ದಾರೆ. ಕನ್ನಡ ವಿಷಯದಲ್ಲಿ 9, ಇಂಗ್ಲೀಷ್‌ನಲ್ಲಿ 3, ಹಿಂದಿ 39, ಗಣಿತ 4, ವಿಜ್ಞಾನ 1, ಸಮಾಜ ವಿಜ್ಞಾನ 4 ಮಕ್ಕಳು, ಒಟ್ಟಾರೆ 60 ಮಕ್ಕಳು ಈ ವಿಷಯಗಳಲ್ಲಿ 100 ಕ್ಕೆ 100 ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಚೇತನಾ ಆರ್ ಹಾಗೂ ಶಾಲೆಗೆ ಅತ್ಯುತ್ತಮ ಫಲಿತಾಂಶ ನೀಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲೆಯ ಬೋಧಕ ವರ್ಗ ಮತ್ತು ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.
All the best to 625
ReplyDelete