ಸಿದ್ಧಗಂಗಾ ಪಿಯು ಕಾಲೇಜಿಗೆ ಅತ್ಯುತ್ತಮ ಫಲಿತಾಂಶ
97.33 % ಪಡೆದ ಸಾಗರ್ ಮತ್ತು ಸಂಜನಾ ಕಾಲೇಜಿಗೆ ಪ್ರಥಮ
ಮಾರ್ಚ್ ನಲ್ಲಿ ನಡೆದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ದಾವಣಗೆರೆಯ ಸಿದ್ಧಗಂಗಾ ಪಿಯು ಕಾಲೇಜು ಅತ್ಯುತ್ತಮ ಫಲಿತಾಂಶ ಪಡೆದು ದಾಖಲೆ ಮಾಡಿದೆ. ಕನ್ನಡ ವಿಷಯದಲ್ಲಿ 6, ಸಂಸ್ಕೃತದಲ್ಲಿ 1, ಭೌತಶಾಸ್ತ್ರದಲ್ಲಿ 9, ರಸಾಯನ ಶಾಸ್ತ್ರದಲ್ಲಿ 2, ಗಣಿತದಲ್ಲಿ 18, ಜೀವಶಾಸ್ತ್ರದಲ್ಲಿ 1 ಒಟ್ಟು 37 ಬಾಲಕ-ಬಾಲಕಿಯರು 100 ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ. 37 ಮಕ್ಕಳು 95% ಗಿಂತ ಹೆಚ್ಚು, 151 ಮಕ್ಕಳು 90% ಗಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. 291 ಅತ್ಯುತ್ತಮ ಶ್ರೇಣಿ, 322 ಪ್ರಥಮ ದರ್ಜೆ, 29 ದ್ವಿತೀಯ ದರ್ಜೆ 4 ಮಕ್ಕಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಾಗರ್ ಎಸ್. ಆರ್. ಕನ್ನಡ 95, ಇಂಗ್ಲೀಷ್ 93, ಭೌತಶಾಸ್ತ್ರ 100, ರಸಾಯನ ಶಾಸ್ತ್ರ 98 ಗಣಿತ 100, ಜೀವಶಾಸ್ತ್ರ 98 ಒಟ್ಟು 584 ಅಂಕಗಳನ್ನು ಗಳಿಸಿದರೆ, ಸಂಜನ ಜಿ. ಎಸ್. ಕನ್ನಡ 100, ಇಂಗ್ಲೀಷ್ 96, ಭೌತಶಾಸ್ತ್ರ 99, ರಸಾಯನ ಶಾಸ್ತ್ರ 94, ಗಣಿತ 100, ಕಂಪ್ಯೂಟರ್ 95 ಒಟ್ಟು 584 ಅಂಕಗಳನ್ನು ಪಡೆದಿದ್ದಾರೆ. ಇಬ್ಬರೂ 97.33 % ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅತ್ಯುತ್ತಮ ಫಲಿತಾಂಶ ಪಡೆದ ಎಲ್ಲ ಮಕ್ಕಳಿಗೆ ಮತ್ತು ಅವರ ಪಾಲಕರಿಗೆ ಕಾಲೇಜಿನ ಪ್ರಾಚಾರ್ಯರಾದ ವಾಣಿಶ್ರೀ ಮತ್ತು ಎಲ್ಲ ಉಪನ್ಯಾಸಕರು ಹಾಗೂ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ
R0hith
ReplyDelete7090012958
ReplyDelete7090012958
ReplyDeleteBc papalingappa
ReplyDelete