Tuesday, August 30, 2022

ಸಿದ್ಧಗಂಗಾ ಸ್ಕೌಟ್-ಗೈಡ್ಸ್ ಮಕ್ಕಳಿಂದ ಪರಿಸರ ಗಣಪತಿ

 













ವಿಘ್ನನಿವಾರಕ, ವಿದ್ಯಾ ಗಣಪತಿಯ ವಿವಿಧ  ಆಕಾರ - ಗಾತ್ರದ  ಗಣಪತಿಗಳು ಸಿದ್ಧಗಂಗಾ ಅಂಗಳದಲ್ಲಿ ಇಂದು ಕಂಗೊಳಿಸಿದವು . ವಿಶೇಷವೆಂದರೆ ಈ ಎಲ್ಲಾ ಗಣಪತಿಗಳು ಪರಿಸರ ಸ್ನೇಹಿ ಗಣಪಗಳಾಗಿದ್ದವು . ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ ಸ್ಕೌಟ್ಸ್ ,ಗೈಡ್ಸ್  ಮಕ್ಕಳು ಮೈದಾ ,ಅರಿಶಿನ ,ಜೇಡಿ ಮಣ್ಣು ,ಸೋಪು ,ಗೋಧಿಹಿಟ್ಟು  ಹೀಗೆ  ಸ್ಥಳೀಯ ಲಭ್ಯ ಪರಿಸರ ವಸ್ತುಗಳಿಂದ ಗಣೇಶನನ್ನು ನಿರ್ಮಿಸಿದ್ದರು . ಪುಟ್ಟ ಪುಟ್ಟ  ಕೈಗಲ್ಲಿ  ಸುಂದರ ಗಣಪಗಳು ವಿಶೇಷ  ಭೂಷಣಗಳೊಂದಿಗೆ  ಅಲಂಕೃತಗೊಂಡಿದ್ದವು .  ಎಲ್ .ಟಿ  ಶಶಿಕಲಾ ಅವರ  ನೇತೃತ್ವದಲ್ಲಿ  ಶಾಲೆಯ ಗೈಡ್ಸ್  ಶಿಕ್ಷಕರಾದ ನಿರ್ಮಲ , ಮಂಜುಳ , ದೀಪ ಎನ್ , ಸುನೀತಾ , ಸುನೀತಾಬಾಯಿ , ವೇದಾವತಿ , ವಾಹಿದಾ  ಮತ್ತು  ಸ್ಕೌಟ್ ಮಾಸ್ಟರ್ ಗಳಾದ  ಆರೋಗ್ಯಮ್ಮ ,ದುಗ್ಗಪ್ಪ ,ಮಹೇಶ್ , ಶ್ರೀನಿವಾಸ್ ,ಸಾಮ್ಯಾನಾಯ್ಕ , ಎ ಡಿ ಸಿ  ಸ್ಕೌಟ್  ಡಾ।। ಜಯಂತ್ , ಎ ಡಿ ಸಿ ಗೈಡ್ಸ್  ರೇಖಾರಾಣಿ , ಖಜಾಂಚಿ ಗಾಯತ್ರಿಯವರು ಮಕ್ಕಳಿಗೆ ಮಾರ್ಗದರ್ಶನ  ನೀಡಿ ಗಣೀಶ ಹಬ್ಬದ ಸಂಭ್ರಮ ಹಂಚಿಕೊಂಡರು .

Tuesday, August 16, 2022

75 th INDEPENDENCE DAY





 











ಸ್ವಾತಂತ್ರ ಸಂಭ್ರಮದ  75 ವರ್ಷಗಳ ಇತಿಹಾಸ  ತೆರೆದಿಟ್ಟ ಸಿದ್ದಗಂಗಾ ಶಾಲಾ ಕಾಲೇಜಿನ ಮಕ್ಕಳು

ಕ್ಷಣಕ್ಕೊಂದು ದೃಶ್ಯ , ಗಳಿಗೆಗೊಂದು ಘಟನೆ . ವೀಕ್ಷಕರು  ಕಣ್ಣು ಮಿಟುಕಿಸಲೂ  ಇಚ್ಛೆ ಪಡದಂತೆ  ಸಹಸ್ರಾರು ಮಕ್ಕಳ ನೃತ್ಯ  ವೈಭವವನ್ನು  ಇಂದು ನಗರದ ಕ್ರೀಡಾಂಗಣದಲ್ಲಿ  ಕಣ್ತುಂಬಿಕೊಂಡರು.  ಸಿದ್ದಗಂಗಾ ಸಂಸ್ಥೆಯ ಶಾಲಾ ಕಾಲೇಜಿನ ಎರಡು ಸಾವಿರಕ್ಕೂ ಹೆಚ್ಚು  ಮಕ್ಕಳು ಅಮೃತ ಮಹೋತ್ಸವಕ್ಕೆ  " ವಂದೇ ಮಾತರಂ " ನೃತ್ಯ ರೂಪಕದ  ಮೂಲಕ ದೇಶಭಕ್ತಿಯ ಸಂಚಲನ ಮೂಡಿಸಿದರು. 

ಕಾರ್ಗಿಲ್ ಯುದ್ಧ , ಪುಲ್ವಾಮ ಘಟನೆ, ಯೋಧರ ಹೋರಾಟದ ಮೂಲಕ ಅವರಿಗೆ ಶ್ರದ್ಧಾಂಜಲಿ  ಸಲ್ಲಿಸಿದರೆ , ಭಾರತೀಯ  ನೃತ್ಯ ಪರಂಪರೆಗಳನ್ನು  ಏಕ ಕಾಲದಲ್ಲಿ ಅನಾವರಣಗೊಳಿಸಿ  ವೈವಿಧ್ಯತೆಯಲ್ಲಿ ಏಕತೆ ಮೆರೆದರು. ಭರತನಾಟ್ಯ , ಮಣಿಪುರಿ ,ಕಥಕ್ಕಳಿ , ಪೂಜಾ ಕುಣಿತ , ನಂದಿಕೋಲು , ಜನಪದ  ನೃತ್ಯಗಳಲ್ಲಿ ಏಕ ಕಾಲದಲ್ಲಿ ಮಕ್ಕಳು ಗೀತೆಗೆ ತಕ್ಕ ಹೆಜ್ಜೆ ಹಾಕುತ್ತಾ ಇಡೀ  ಕ್ರೀಡಾಂಗಣವನ್ನು  ತ್ರಿವರ್ಣ ಧ್ವಜಮಯ  ಗೊಳಿಸಿದರು . ಪ್ರಾರಂಭದಲ್ಲಿ ವಿಜ್ಞಾನಿಗಳು  ಇಸ್ರೋ  ಸಂಸ್ಥೆಯಿಂದ  ರಾಕೆಟ್ ಉಡಾವಣೆಯನ್ನು  ಯಶಸ್ವಿಯಾಗಿ  ಮಾಡಿದರು . ನಂತರ ಇಡೀ ಭೂಮಂಡಲವನ್ನು  ವ್ಯಾಪಿಸಿದ  ಕರೋನಾ  ವಿರುದ್ಧ  ಭಾರತೀಯರು  ಹೋರಾಟ ನಡೆಸಿದ್ದು, ವಿಜ್ಞಾನಿಗಳು ಲಸಿಕೆ ಕಂಡು ಹಿಡಿದು ಕರೋನಾ ಮೆಟ್ಟಿ ನಿಂತ  ದೃಶ್ಯ  ಊಹೆಗೂ ಮೀರಿದ್ದಾಗಿತ್ತು.  ವೈದ್ಯರು  ಕರೋನಾ ರೋಗಿಗಳನ್ನು  ಉಳಿಸಲು  ನಡೆಸಿದ ಹೋರಾಟ ,ಕರೋನಾ ವೈರಸ್ ಗಳು  ಸ್ವೇಚ್ಚೆ ಯಾಗಿ  ಜನ ಜಂಗುಳಿಯನ್ನು  ಕಂಗಾಲಾಗಿಸಿದ ಮನಕಲುಕುವ ದೃಶ್ಯ ಎರಡು ವರ್ಷಗಳ  ಕರೋನಾ ಆಘಾತವನ್ನು ನೆನಪಿಸುವಂತೆ  ಮಾಡಿತು . ಕ್ರೀಡಾಂಗಣ ಸ್ತಬ್ಧವಾಗಿ  ಕೇವಲ ಚಪ್ಪಾಳೆ  ಶಬ್ದ  ಮಾತ್ರ  ಕೇಳುತಿತ್ತು . ದೃಶ್ಯಕ್ಕೆ  ತಕ್ಕ ಪರಿಕರ , ಕಟೌಟ್ ಗಳು ನೃತ್ಯ ರೂಪಕದ ಶೋಭೆ ಹೆಚ್ಚಿಸಿತು . ಹಿನ್ನಲೆಯಲ್ಲಿ  ಸುಮಾರು 900  ಬಾಲಕರು ಜೈಹಿಂದ್ ,ಇಂಡಿಯಾ ,ಅಬ್ದುಲ್ ಕಲಾಂ ,ಪಿ . ಎಸ್ . ಎಲ್ . ವಿ ,ಪುಲ್ವಾಮ  ಹೀಗೆ  ಸಂದರ್ಭಕ್ಕೆ  ತಕ್ಕಂತೆ  ಇಂಗ್ಲಿಷ್  ಅಕ್ಷರ  ಜೋಡಣೆ ನಡೆಸಿ ವೀಕ್ಷಕರನ್ನು  ಬೆರಗಾಗಿಸಿದರು. ಡಾll ಜಯಂತ್ ರವರ ಪರಿಕಲ್ಪನೆಯಲ್ಲಿ  ರೂಪುಗೊಂಡ ನೃತ್ಯ ರೂಪಕಕ್ಕೆ  ಸಂಸ್ಥೆಯ  ಎಲ್ಲ  ಶಿಕ್ಷಕ - ಶಿಕ್ಷಕಿಯರು  ಸಹಕರಿಸಿ  ಯಶಸ್ವಿಗೊಳಿಸಿ ಕೊಟ್ಟಿದ್ದು  ಪಾಲಕರ ಸಂಭ್ರಮ  ಇಮ್ಮಡಿಗೊಳಿಸಿತು .  ಕಣ್ಣಿಗೆ ಬಟ್ಟೆ ಕಟ್ಟಿಕೊಂಡು  ವಿಜ್ಞಾನಿ ಕಲಾಂ ಮತ್ತು ಸಾರಾಭಾಯಿ  ಅವರ ಬೃಹತ್ ಚಿತ್ರ ಮೂಡಿಸಿದ  ಮಕ್ಕಳ ಏಕಾಗ್ರತೆಗೆ  ವೀಕ್ಷಕರು ಬೆರಗಾದರು. 



 

Friday, August 12, 2022

FLAG MARCH 75th INDEPENDENCE DAY


 


75 ನೇ  ಸ್ವಾತಂತ್ರ ಸಂಭ್ರಮ 
ಸಾಗರದಂತೆ  ಹರಿದು ಬಂದ ಸಿದ್ದಗಂಗಾ ಶಾಲಾ ಕಾಲೇಜಿನ ಮಕ್ಕಳು 

ಎತ್ತ ನೋಡಿದರೂ ತ್ರಿವರ್ಣ ಧ್ವಜಗಳು , ಸಾಗರದಂತೆ  ಹರಿದು ಬಂದ ವಿದ್ಯಾರ್ಥಿ ಸಮೂಹ . ಸೂರ್ಯ ರಶ್ಮಿಗೆ ಮಿರಮಿರನೆ ಮಿಂಚುತ್ತಿದ್ದ ಬಾವುಟಗಳು . ಮುಗಿಲು ಮುಟ್ಟಿದ ಉತ್ಸಾಹ. " ಜೈ ಭಾರತ್ ಮಾತಾಕೀ " , " ವಂದೇ ಮಾತರಂ " ಘೋಷಣೆಗಳು  ರಸ್ತೆಗಳಲ್ಲಿ ಅನುರಣಿಸಿತು . ನಾಗರೀಕರು ಬೆಕ್ಕಸ ಬೆರಗಾಗಿ ನೋಡುತ್ತಿದ್ದರು . ಶಿಸ್ತಿನಿಂದ ಹೆಜ್ಜೆ ಹಾಕಿದ ಸಾವಿರಾರು ಮಕ್ಕಳು ರಾಷ್ಟ್ರಭಕ್ತಿಯನ್ನು ಆವಾಹಿಸಿಕೊಂಡಿದ್ದರು . ಬಿಸಿಲು - ಮಳೆ  ಲೆಕ್ಕಿಸದೆ  ಡಾಂಗೆ ಪಾರ್ಕ್ ರಸ್ತೆಯಿಂದ - ಶಿವಪ್ಪಯ್ಯ ಸರ್ಕಲ್ - ಜಯದೇವ ಸರ್ಕಲ್ - ಅಂಬೇಡ್ಕರ್ ಸರ್ಕಲ್ - ವಿದ್ಯಾರ್ಥಿ ಭವನ  ಸರ್ಕಲ್ ದಾಟಿ ಸಂಸ್ಥೆಯತ್ತ ಹೆಜ್ಜೆ ಹಾಕಿದ ಮಕ್ಕಳು ರಸ್ತೆಯುದ್ದಕ್ಕೂ ಸಂಚಲನ ಮೂಡಿಸಿದರು . 


ಈ ಬೃಹತ್ ಮೆರವಣಿಗೆಗೆ ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರಾದ ವಿಶ್ವನಾಥ್ P. ಮುದ್ದಜ್ಜಿಯವರು ಚಾಲನೆ ನೀಡಿದರು . ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ  ಜಿ .ಆರ್.ತಿಪ್ಪೇಶಪ್ಪ, ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ  ನಿರಂಜನಮೂರ್ತಿ , ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾದ ಗಡಿಗುಡಾಳ್ ಮಂಜುನಾಥ್ , ಯುವ ಕಾಂಗ್ರೆಸ್ ನಾಯಕ  K . G . ಶಿವಕುಮಾರ್ , ಶಾಲಾ ಕಾಲೇಜಿನ ಸಿಬ್ಬಂದಿ ವರ್ಗದವರು ಹಾಜರಿದ್ದರು .  ಬ್ಯಾoಡ್  ಸೆಟ್ಟಿನ ಸುಮಧುರ ನಾದಕ್ಕೆ ಮಕ್ಕಳು ಶಿಸ್ತಿನಿಂದ  ಹೆಜ್ಜೆ  ಹಾಕಿದರು . ರಾಷ್ಟ್ರಗೀತೆ  ಹಾಡುವುದರ ಮೂಲಕ ಪ್ರಾರಂಭವಾದ ಮೆರವಣಿಗೆ ರಾಷ್ಟ್ರ  ಗೀತೆಯೊಂದಿಗೆ ಮುಕ್ತಾಯಗೊಂಡಿತು . " ಆಜಾದಿ ಕೀ ಅಮೃತ್ ಮಹೋತ್ಸವ " ವನ್ನು  ಸಿದ್ದಗಂಗಾ  ವಿದ್ಯಾ  ಸಂಸ್ಥೆ  ಅರ್ಥಪೂರ್ಣವಾಗಿ  ಆಚರಿಸಿತು . ಸಂಸ್ಥೆಯ ಕಾರ್ಯದರ್ಶಿ D.S. ಹೇಮಂತ್  ಮತ್ತು  ನಿರ್ದೇಶಕ ಡಾll ಜಯಂತ್ ರವರ  ಮಾರ್ಗದರ್ಶನದಲ್ಲಿ  ನಡೆದ ಈ ಅಭೂತ ಪೂರ್ವ  ಕಾರ್ಯಕ್ರಮದಲ್ಲಿ  ಸಹಕರಿಸಿದ ಪ್ರತಿಯೊಬ್ಬರನ್ನೂ  ಸಂಸ್ಥೆಯ ಮುಖ್ಯಸ್ಥೆ  ಜಸ್ಟಿನ್  ಡಿ'ಸೌಜ  ವಂದಿಸಿದರು.