ರಾಷ್ಟ್ರೀಯ ಅಸಾಧಾರಣ ಪ್ರತಿಭೆ-ರಾಜ್ಯದ ಏಕಲವ್ಯ ಪ್ರಶಸ್ತಿ ಪಡೆದ
ಅಂತರಾಷ್ಟ್ರೀಯ ಈಜುಬಾಲೆ ರೇವತಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ದಾವಣಗೆರೆ. November 1,
ಈಜಿನಲ್ಲಿ ಅಪ್ರತಿಮ ಸಾಧನೆ ಮಾಡಿದ ರೇವತಿಯ ಪ್ರಶಸ್ತಿಗಳ ಸಾಲಿಗೆ ಇದೀಗ ದಾವಣಗೆರೆ ಜಿಲ್ಲಾ ಆಡಳಿತ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ನವೆಂಬರ್ 1ರ ಕರ್ನಾಟಕ ರಾಜ್ಯೋತ್ಸವದಂದು ಬೆಳಿಗ್ಗೆ 10 ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿನಿ “ದಾವಣಗೆರೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ” ಪಡೆಯಲಿದ್ದಾಳೆ.
ಅಮೇರಿಕಾ, ಜರ್ಮನಿ, ಜೆಕ್ ರಾಷ್ಟ್ರ, ದುಬೈ ಮತ್ತು ಇಂಡೋನೇಷಿಯಾಗಳಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ರೇವತಿ ಎಂ. ನಾಯಕ ರಾಷ್ಟ್ರಮಟ್ಟದ ಅಸಾಧಾರಣ ಪ್ರತಿಭೆಯಾಗಿ 2017ರಲ್ಲಿ ಚಿನ್ನದ ಪದಕ ಪಡೆದಳು. ಈ ಪ್ರತಿಭೆಗೆ ಕರ್ನಾಟಕ ಸರ್ಕಾರ ಕ್ರೀಡಾಪಟುಗಳಿಗೆ ಮೀಸಲಾದ ಏಕಲವ್ಯ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ಜಾಗತಿಕ ಮಟ್ಟದ ದ್ವಿತೀಯ ಸ್ಥಾನದಲ್ಲಿರುವ ಏಷಿಯನ್ ಗೇಮ್ಸ್‍ನಲ್ಲಿ ಇಂಡೋನೇಷಿಯಾದಲ್ಲಿ ನಡೆದ ಈಜು ಸ್ಪರ್ಧೆಯಲ್ಲಿ ಕಳೆದ ತಿಂಗಳು ಭಾಗವಹಿಸಿರುವ ರೇವತಿ ನಾಯಕಳ ಪ್ರತಿಭೆ ಗುರುತಿಸಿ ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ. ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿದ ರೇವತಿಗೆ ಸಹಪಾಠಿಗಳು ಸಿದ್ಧಗಂಗಾ ವಿದ್ಯಾಸಂಸ್ಥೆಯ ಸ್ಥಾಪಕರಾದ ಎಂ. ಎಸ್. ಶಿವಣ್ಣ ಕಾರ್ಯದರ್ಶಿ ಹೇಮಂತ್, ನಿರ್ದೇಶಕರಾದ ಡಾ|| ಜಯಂತ್ ಮತ್ತು ಪ್ರಾಚಾರ್ಯರಾದ ಪ್ರಸಾದ್ ಬಂಗೇರರವರು ಅಭಿನಂದಿಸಿದ್ದಾರೆ.

No comments:
Post a Comment