Wednesday, May 2, 2018

JEE (Main) Result - 2018

JEE (Main) ನಲ್ಲಿ ಟಾಪರ್
ಸಿದ್ಧಗಂಗಾ ಪಿ.ಯು ಕಾಲೇಜಿನ ಸುನಿಧಿ ಘಟಿಕರ್

ದಾವಣಗೆರೆ, ಮೇ 1
ಕಳೆದ ಏಪ್ರಿಲ್‍ನಲ್ಲಿ ನಡೆದ JEE (Main) ನಲ್ಲಿ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಟಾಪರ್ ಸುನಿಧಿ ಎಂ ಘಟಿಕರ್ 167 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಸುನಂದ ಮತ್ತು ಮುರಳಿ ದಂಪತಿಗಳ ಪುತ್ರಿ ಸುನಿಧಿ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ 583 ಅಂಕಗಳಿಸಿ ಸಿದ್ಧಗಂಗಾ ಕಾಲೇಜಿನ ಟಾಪರ್ ಆಗಿ ಹೊರ ಹೊಮ್ಮಿದ್ದಾಳೆ. ಸಂಗೀತ, ನೃತ್ಯದ
ಜೊತೆಗೆ ಶೈಕ್ಷಣಿಕ ಸಾಧನೆಯನ್ನೂ ಮಾಡಿರುವ ಸುನಿಧಿ, ತನ್ನ ಸಾಧನೆಗೆ ಸಿದ್ಧಗಂಗಾ ಕಾಲೇಜಿನ ಉಪನ್ಯಾಸಕರ ಗುಣಮಟ್ಟ, ಅವರು ನೀಡುತ್ತಿರುವ ಅತ್ಯುತ್ತಮ ತರಬೇತಿ ಹಾಗೂ ಕಾಲೇಜಿನ ಆಡಳಿತ ಮಂಡಳಿ ಸಹಕಾರ ಕಾರಣ ಎನ್ನುತ್ತಾಳೆ. ಸಿದ್ಧಗಂಗಾ ಕಾಲೇಜಿನ ಈ ಪ್ರತಿಭಾವಂತ ವಿದ್ಯಾರ್ಥಿನಿಯನ್ನು ಕಾಲೇಜಿನ ಪ್ರಾಚಾರ್ಯರಾದ ಪ್ರಸಾದ್ ಬಂಗೇರ, ವ್ಯವಸ್ಥಾಪಕ ನಿರ್ದೇಶಕರಾದ ಡಾ|| ಜಯಂತ್ ಅವರು ಅಭಿನಂದಿಸಿದ್ದಾರೆ.


JEE(Main) RESULT......
Congrats!!! SUNIDHI M GHATIKAR "Davanagere District Topper" from SIDDAGANGA Scored 167 Marks in JEE(Main) & Congrats!!!  SIDDAGANGA Team Produced Highest number 96 Students Eligible for appear JEE(advance) exam.

-Prasad Bangera S,
Principal
Siddaganga PU College

JEE (Main) ನಲ್ಲಿ ಜಿಲ್ಲೆಯ ಟಾಪರ್ ಸುನಿಧಿ ತಂದೆಯ ಮನದ ಮಾತು
ಬಾಲ್ಯದಿಂದಲೂ ನನ್ನ ಮಗಳನ್ನು ಉತ್ತಮ ಸಂಸ್ಕಾರದಲ್ಲಿ ಬೆಳೆಸಿದ್ದೇನೆ. SSLC ನಂತರ ಮಗಳನ್ನು ಯಾವ ಕಾಲೇಜಿಗೆ ಸೇರಿಸಬೇಕೆಂಬ ಗೊಂದಲವೇ ಇರಲಿಲ್ಲ. ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕೃತಿ ಆದರ್ಶಗಳನ್ನು ಬೆಳೆಸುತ್ತಿರುವ ದಾವಣಗೆರೆಯ ಸಿದ್ಧಗಂಗಾ ಕಾಲೇಜು ನನ್ನ ಆಯ್ಕೆಯಾಗಿತ್ತು. ಪ್ರಥಮ ದಿನದಿಂದಲೇ ಕಾಲೇಜಿನ ಕಾರ್ಯವೈಖರಿ ನನ್ನ ಮೆಚ್ಚುಗೆಗೆ ಪಾತ್ರವಾಗಿತ್ತು. ಸುಸಂಸ್ಕೃತ ಪ್ರಾಚಾರ್ಯರು, ತಮ್ಮ ತಮ್ಮ ವಿಷಯಗಳಲ್ಲಿ ಪರಿಪೂರ್ಣ ಪಾಂಡಿತ್ಯ ಹೊಂದಿರುವ ಬೋಧಕ ವರ್ಗ, ಸಹೃದಯ ಆಡಳಿತ ಮಂಡಳಿ, ಸೌಜನ್ಯಭರಿತ ಬೋಧಕೇತರ ಸಿಬ್ಬಂದಿ ನನ್ನ ಗಮನ ಸೆಳೆದತ್ತು. ಪ್ರತಿಯೊಂದು ಕಾರ್ಯವೂ ವ್ಯವಸ್ಥಿತವಾಗಿ, ಮಕ್ಕಳ ಬೌದ್ಧಿಕ ವಿಕಸನಕ್ಕೆ ಪೂರಕವಾಗಿರುತ್ತಿತ್ತು. ಪಿ.ಯು.ಸಿ. ಪಠ್ಯದ ಜೊತೆಗೆ NEET, JEE, KCET, JIPMER ಇವುಗಳಿಗೆ ನಿರಂತರ ತರಬೇತಿ ದೊರೆಯುತ್ತಿದ್ದುದರಿಂದ ನಾನು ನಿಶ್ಚಿಂತನಾಗಿದ್ದೆ. OMR ಶೀಟ್‍ಗಳಲ್ಲಿ ಎಕ್ಸಾಂ ನಡೆಸಿದ ತಕ್ಷಣ ಫಲಿತಾಂಶ ನೀಡಿ ಪಾಲಕರಿಗೆ SMS ಮೂಲಕ ಮಾಹಿತಿ ಕಳುಹಿಸುತ್ತಿದ್ದರು. ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಗೆಂದು ಆಡಳಿತ ಮಂಡಳಿ ಪ್ರತಿ ವಿದ್ಯಾರ್ಥಿಗೆ Tab ಸೌಕರ್ಯ ಕಲ್ಪಿಸಿದೆ. ಇಲ್ಲಿ ದೊರೆಯುತ್ತಿರುವ ಗುಣಾತ್ಮಕ ಶಿಕ್ಷಣಕ್ಕೆ ನಾನು ಕೊಡುತ್ತಿರುವ ಫೀ ಅತ್ಯಂತ ಕಡಿಮೆ ಎಂದೆನಿಸುತ್ತಿತ್ತು. ಜೊತೆಗೆ ನನ್ನ ಮಗಳ ಸಂಗೀತ, ನೃತ್ಯ ಸಾಧನೆಗೂ ಕಾಲೇಜಿನಿಂದ ಪ್ರೋತ್ಸಾಹ ದೊರಕಿದ್ದು ನನ್ನ ಸಂಭ್ರಮ ಹೆಚ್ಚಿಸಿತು. ಕಾಲೇಜಿನ ಸಾಹಿತ್ಯ, ಸಂಗೀತ, ನೃತ್ಯದ ಪಠ್ಯೇತರ ಚಟುವಟಿಕೆಗಳು ನನ್ನ ಮಗಳ ಏಕಾಗ್ರತೆ ಮತ್ತು ಬೌದ್ಧಿಕ ವಿಕಸನಕ್ಕೆ ಪೂರಕವಾಯಿತು. ಸಿದ್ಧಗಂಗಾ ಕಾಲೇಜಿನ ಪ್ರೌಢಿಮೆಯಿಂದ ದೊರೆತ ಅತ್ಯುತ್ತಮ ಶಿಕ್ಷಣದಿಂದ ನನ್ನ ಮಗಳು JEE (Main) ನಲ್ಲಿ ಟಾಪರ್ ಆಗಲು ಸಾಧ್ಯವಾಯಿತು ಎಂಬುದನ್ನು ಹೆಮ್ಮೆಯಿಂದ ತಿಳಿಸುತ್ತಿದ್ದೇನೆ. ಹೆಣ್ಣು ಮಕ್ಕಳಿಗೆ ಅತ್ಯಂತ ಸುರಕ್ಷಿತ ಕಾಲೇಜು ಸಿದ್ಧಗಂಗಾ ಎಂಬುದು ನನಗೆ ಮನವರಿಕೆಯಾಗಿದೆ. ಎರಡು ವರ್ಷಗಳ ಕಾಲ ನನ್ನ ಮಗಳು ಸುನಿಧಿಯನ್ನು ಉನ್ನತ ಮಟ್ಟಕ್ಕೆ ಬೆಳೆಸಿದ ಸಿದ್ಧಗಂಗಾ ಕಾಲೇಜಿನ ಪ್ರತಿಯೊಬ್ಬರಿಗೂ ನನ್ನ ವಂದನೆಗಳು.
-ಮುರಳಿ ಎಂ. ಘಟಿಕರ್


2 comments: