ಡಾ. ಶಾಮನೂರು ಶಿವಶಂಕರಪ್ಪಾಜಿ ಯವರ ನುಡಿ ನಮನದ ಅಂಗವಾಗಿ BIET ಕಾಲೇಜಿನ ಆವರಣದಲ್ಲಿ ಇಂದು ಸಂಜೆ 130 ಅಡಿ ಅಳತೆಯ ಬೃಹತ್ತಾದ ಚಿತ್ರವನ್ನು ರಂಗೋಲಿಯಲ್ಲಿ ಅರಳಿಸಲಾಯಿತು . ಮಾನ್ಯ ಸಂಸದರಾದ ಡಾ।। ಪ್ರಭಾಮಲ್ಲಿಕಾರ್ಜುನ್ ರವರು ತಮ್ಮ ಕುಟುಂಬ ವರ್ಗದವರೊಡನೆ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಡಾ ಜಸ್ಟಿನ್ ಡಿಸೌಜ ರವರು ರಚಿಸಿದ " ದಾವಣಗೆರೆ ಧಣಿ ಬಡವರ ಕಣ್ಮಣಿ " ಶೀರ್ಷಿಕೆಯ ಹಾಡನ್ನು ಸಮರ್ಪಿಸಲಾಯಿತು. ಬಾಪೂಜಿ ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆ ಅಲ್ಲಿ ಆಗಮಿಸಿ ಭಾವ ನಮನ ಸಲ್ಲಿಸಿದರು . ಚಿತ್ರ ರಚಿಸಿದ ಸಿದ್ಧಗಂಗಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಗೂ ಹಾಗೂ ಚಿತ್ರಕಲಾ ಶಿಕ್ಷಕರಿಗೆ ಹಾಗೂ ದೈಹಿಕ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಲಾಯಿತು. ಡಾ ।। ಜಯಂತ್ ರವರ ಪರಿಕಲ್ಪನೆಯಲ್ಲಿ ಹಾಗೂ ಡಿ ಎಸ್ ಹೇಮಂತ್ ರವರ ನಿರ್ದೇಶನದಲ್ಲಿ ಮೂಡಿ ಬಂದ ಈ ಕಾರ್ಯಕ್ರಮ ಹೃದಯ ಸ್ಫರ್ಶಿಯಾಗಿತ್ತು.


No comments:
Post a Comment