ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಎನ್. ರವಿಕಿರಣ್ ಮರುಮೌಲ್ಯಮಾಪನದ ನಂತರ 600ಕ್ಕೆ 597 ಅಂಕಗಳನ್ನು ಗಳಿಸಿ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ತೃತೀಯ ರಾåಂಕ್ ಗಳಿಸಿದ್ದಾನೆ. ಆಂಗ್ಲ ಭಾಷೆಯಲ್ಲಿ 100ಕ್ಕೆ 97 ಅಂಕ ಗಳಿಸಿದ್ದ ರವಿಕಿರಣ್ ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಿದ್ದನು. ಮರುಮೌಲ್ಯಮಾಪನದಲ್ಲಿ ಎರಡು ಅಂಕಗಳು ಹೆಚ್ಚಾಗಿ 100ಕ್ಕೆ 99 ಅಂಕ ಪಡೆದಿದ್ದಾನೆ. ಕನ್ನಡ 100, ಭೌತಶಾಸ್ತ್ರ 100, ಜೀವಶಾಸ್ತ್ರ 100 ಮತ್ತು ಗಣಿತ, ರಸಾಯನ ಶಾಸ್ತ್ರ ಹಾಗೂ ಆಂಗ್ಲ ಭಾಷೆಯಲ್ಲಿ ತಲಾ 99, ಒಟ್ಟು 597 ಅಂಕಗಳನ್ನು ಗಳಿಸಿ ಕಾಲೇಜಿಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಉಪ್ಪನಾಯಕನಹಳ್ಳಿಯ ನಾಗರಾಜ್ ಮತ್ತು ಸಿದ್ದಮ್ಮ ರೈತ ದಂಪತಿಗಳ ಪುತ್ರ ರವಿಕಿರಣ್ ಅಂಕಗಳ ಏರಿಕೆಯಿಂದ ಸಂತಸ ಪಟ್ಟಿದ್ದಾನೆ. ಬಾಲಕನ ನಿರೀಕ್ಷಿತ ಸಾಧನೆಗೆ ಸಿದ್ಧಗಂಗಾ ಆಡಳಿತ ಮಂಡಳಿ ಮತ್ತು ಬೋಧಕ ವರ್ಗದವರು ಅಭಿನಂದಿಸಿದ್ದಾರೆ.
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ದಾವಣಗೆರೆ ನಗರದ ಸಿದ್ಧಗಂಗಾ ಪಿಯು ಕಾಲೇಜು ರಾಜ್ಯ ಕ್ಕೆ ಐದನೇ ಸ್ಥಾನ ಪಡೆದು ಮತ್ತೊಮ್ಮೆ ತನ್ನ ಶೈಕ್ಷಣಿಕ ಸಾಧನೆಯ ಇತಿಹಾಸ ರಚಿಸಿದೆ. 600 ಕ್ಕೆ 595 ಅಂಕಗಳಿಸಿದ ರವಿಕಿರಣ ಎನ್, ಕನ್ನಡ 100, ಇಂಗ್ಲೀಷ್, 97, ಭೌತಶಾಸ್ತ್ರ 100, ರಸಾಯನ ಶಾಸ್ತ್ರ 99, ಜೀವಶಾಸ್ತ್ರ 100, ಗಣಿತ 99 ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ, ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾನೆ, ಇವನು ನಾಗರಾಜ್ ಎಸ್ ಮತ್ತು ಸಿದ್ದಮ್ಮ ದಂಪತಿಗಳ ಪುತ್ರ ಚಿತ್ರದುರ್ಗ ಜಿಲ್ಲೆ ಉಪ್ಪನಾಯಕನಹಳ್ಳಿ ಊರಿನವನು. ಈ ಬಾಲಕ ಎಂ.ಎಸ್.ಎಸ್. ಸ್ಕಾಲರ್‌ಶಿಪ್‌ನಲ್ಲಿ ಎರಡು ವರ್ಷ ಉಚಿತ ವಿದ್ಯಾಭ್ಯಾಸ ಪಡೆದಿದ್ದಾನೆಂಬುದು ಉಲ್ಲೇಖನೀಯ ಉಳಿದಂತೆ ಹೆಚ್ಚು ಅಂಕಗಳಿಸಿರುವ, ಮನೋಜ್ ಎಲ್, ವಿನಯ್ ಕುಮಾರ್ ಆರ್, ಕೃತಿಕ ಕದಂ, ಚೇತನ ಆರ್, ಜೀವಿತ ಜೆ ಇಟಗಿ, ಸ್ನೇಹಲ್ ಕೆ ಕುಡ್ತೇಕರ್ , ಸುಹಾಸ್ ಹೆಚ್ , ಅಜಯ್ ಕುಮಾರ್ ಆರ್, ವಿವೇಕ ಅಂಗಡಿ ಎನ್ ಎಂ, ಲಕ್ಷ್ಮಿ ಎಂ, ಸಂಜನಾ ಎಂ ಎಂ, ಚಂದನಾ ಜಿ ವಿ, ಕರಿಬಸಮ್ಮ ಪಾನಿಯಪ್ಲ, ಶಿವಯೋಗಿ ಹೆಚ್ ಆರ್, ಈ ಎಲ್ಲಾ ವಿದ್ಯಾರ್ಥಿಗಳು ಕೂಡ ಎಂ.ಎಸ್.ಎಸ್. ಸ್ಕಾಲರ್‌ಶಿಪ್‌ನಲ್ಲಿ ಓದಿರುತ್ತಾರೆ.
ಮನೋಜ್ ಎಲ್ 593, ವಿನಯ್ ಕುಮಾರ್ ಆರ್ 590, ಕೃತಿಕ ಕದಂ 589, ಚೇತನ ಆರ್ 585, ಜೀವಿತ ಜೆ ಇಟಗಿ 585, ಸ್ನೇಹಲ್ ಕೆ ಕುಡ್ತೇಕರ್ 585, ಸುಹಾಸ್ ಹೆಚ್ 585, ಅಜಯ್ ಕುಮಾರ್ ಆರ್582, ವಿವೇಕ ಅಂಗಡಿ ಎನ್ ಎಂ 582, ಅಭಿನವ್ ಎಂ.ಎಸ್ 580, ಲಕ್ಷ್ಮಿ ಎಂ 580, ಸುಮಂತ ಪಿ 579, ರಕ್ಷಿತ ಕೆ 579, ಸಂಜನಾ ಎಂ ಎಂ 579, ಚಂದನಾ ಜಿ ವಿ 578, ಕರಿಬಸಮ್ಮ ಪಾನಿಯಪ್ಲ 578, ಶಿವಯೋಗಿ ಹೆಚ್ ಆರ್ 577, ಅಂಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಡಿಸ್ಟಿಂಕ್ಷನ್‌ನಲ್ಲಿ 236 ವಿದ್ಯಾರ್ಥಿಗಳು, ಪ್ರಥಮ ದರ್ಜೆಯಲ್ಲಿ 320, ದ್ವಿತೀಯ ದರ್ಜೆಯಲ್ಲಿ 11 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಕಾಲೇಜಿಗೆ 95.13% ಫಲಿತಾಂಶ ನೀಡಿದ್ದಾರೆ. ಕನ್ನಡ 13, ಸಂಸ್ಕೃತ 1, ಭೌತಶಾಸ್ತ್ರ 3, ರಸಾಯನ ಶಾಸ್ತ್ರ 2, ಗಣಿತ 8, ಜೀವಶಾಸ್ತ್ರ 18, ಕಂಪ್ಯೂಟರ್ ವಿಜ್ಞಾನದಲ್ಲಿ ಒಬ್ಬರು, 100 ಕ್ಕೆ 100 ಅಂಕಗಳಿಸಿದ್ದಾರೆ. ಅತ್ಯುತ್ತಮ ಫಲಿತಾಂಶ ನೀಡಿದ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು, ಉಪನ್ಯಾಸಕರು ಅಭಿನಂದಿಸಿದ್ದಾರೆ.