ರಾಷ್ಟ್ರೀಯ ದಾಖಲೆ ಮಾಡಿದ ಸಿದ್ಧಗಂಗಾ ‘ಬನ್ನೀಸ್’ ಗ್ರೂಪ್
- ಮುರುಘರಾಜೇಂದ್ರ ಚಿಗಟೇರಿ ಶ್ಲಾಘನೆ
ದಾವಣಗೆರೆ - ನ. 3
ರಾಷ್ಟ್ರದಲ್ಲಿ ಯಾವ ಶಾಲೆಯ ಮಕ್ಕಳೂ ಮಾಡದ ದಾಖಲೆಯನ್ನು ಸಿದ್ಧಗಂಗಾ ಬನ್ನೀಸ್ ಗ್ರೂಪ್‍ನವರು ಮಾಡಿದ್ದಾರೆ. 3 ರಿಂದ 5 ವರ್ಷದೊಳಗಿನ ನರ್ಸರಿಯ ಪುಟಾಣಿಗಳು ಬನ್ನೀಸ್ ಎಂದು ಸ್ಕೌಟ್ ಮತ್ತು ಗೈಡ್ಸ್‍ನಲ್ಲಿ ಗುರುತಿಸಿಕೊಳ್ಳುತ್ತಾರೆ. ಸಿದ್ಧಗಂಗಾ ನರ್ಸರಿಯ 541 ಮಕ್ಕಳು ಬನ್ನೀಸ್ ಸಮವಸ್ತ್ರ ಧರಿಸಿ ಮೊಲಗಳಂತೆ ಜಿಗಿಯುತ್ತಾ ನರ್ತಿಸುವುದನ್ನು ನೋಡಿದ ದಾವಣಗೆರೆ ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್‍ನ ಮುಖ್ಯ ಆಯುಕ್ತರಾದ ಮುರುಘರಾಜೇಂದ್ರ ಚಿಗಟೇರಿಯವರು, ಸ್ಕೌಟ್ ಆಯುಕ್ತರಾದ ಎ. ಪಿ. ಷಡಾಕ್ಷರಪ್ಪನವರು ಮತ್ತು ಗೈಡ್ಸ್ ಆಯುಕ್ತರಾದ ಪುಟ್ಟಮ್ಮ ಮಹಾರುದ್ರಯ್ಯನವರು ಮಕ್ಕಳೊಂದಿಗೆ ಮಕ್ಕಳಾಗಿ ಹರ್ಷಿಸಿದರು. ಐನೂರಕ್ಕೂ ಹೆಚ್ಚು ಸಂಖ್ಯೆಯ ಬನ್ನೀಸ್ ಒಂದೇ ಶಾಲೆಯಲ್ಲಿರುವುದು ಒಂದು ರಾಷ್ಟ್ರೀಯ ದಾಖಲೆ ಎಂದು ಶ್ಲಾಘಿಸಿ ಈ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ, ಶಿಸ್ತು, ಸೇವಾ ಭಾವನೆಯನ್ನು ರೂಢಿಸಿದರೆ ದೇಶಕ್ಕೆ ಮಾದರಿ ಪ್ರಜೆಗಳಾಗುತ್ತಾರೆ. ಆ ನಿಟ್ಟಿನಲ್ಲಿ ಸಿದ್ಧಗಂಗಾ ಸಂಸ್ಥೆಯಲ್ಲಿರುವ ತರಬೇತಿ ಪಡೆದ ಹದಿಮೂರು ಬನ್ನೀಸ್ ಆಂಟಿಗಳು ಮಾರ್ಗದರ್ಶನ ಮಾಡಬೇಕೆಂದು ತಮ್ಮ ಉದ್ಘಾಟನಾ ಭಾಷಣದಲ್ಲಿ ಮುರುಘರಾಜೇಂದ್ರ ಚಿಗಟೇರಿಯವರು ಕರೆ ನೀಡಿದರು. ಸ್ಕೌಟ್, ಗೈಡ್ಸ್ ಮತ್ತು ಬನ್ನೀಸ್ ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದು ಮೀಸಲಾತಿ ಕೋಟಾದಡಿ ಹೆಚ್ಚಿನ ಸರ್ಕಾರಿ ಸೀಟುಗಳನ್ನು ಇಲ್ಲಿನ ಮಕ್ಕಳು ಉನ್ನತ ಶಿಕ್ಷಣದಲ್ಲಿ ಪಡೆಯುತ್ತಿದ್ದಾರೆ ಎಂದು ಮುಖ್ಯ ಅತಿಥಿಗಳ ಸ್ಥಾನದಿಂದ ಸ್ಕೌಟ್‍ನ ಆಯುಕ್ತರಾದ ಎ.ಪಿ. ಷಡಾಕ್ಷರಪ್ಪನವರು ಮೆಚ್ಚುಗೆ ವ್ಯಕ್ತಪಡಿಸಿದರು.
ಗೈಡ್ಸ್‍ನ ಆಯುಕ್ತರಾದ ಪುಟ್ಟಮ್ಮ ಮಹಾರುದ್ರಯ್ಯನವರು ಹಲವಾರು ಸೂಕ್ತಿಗಳನ್ನು, ವಚನಗಳನ್ನು ತಿಳಿಸುತ್ತಾ ಮಾಡಿದ ಸಹಾಯ ಒಂದಿಲ್ಲ ಒಂದು ದಿನ ಪ್ರತಿಫಲ ನೀಡುತ್ತದೆ ಎಂದು ಕತೆಯ ಮೂಲಕ ಉದಾಹರಿಸಿದರು. ಜೀವನದ ಪ್ರತಿ ಸವಾಲನ್ನು ಧೈರ್ಯದಿಂದ ಎದುರಿಸಬೇಕು, ಸೇವೆಗೆ ಸದಾ ಸಿದ್ಧರಾಗಿರಬೇಕೆಂದು ಮಕ್ಕಳಿಗೆ ಕರೆ ನೀಡಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯ ಶಿಕ್ಷಕಿ ಜಸ್ಟಿನ್ ಡಿ’ಸೌಜ ವಹಿಸಿದ್ದರು. ಗೈಡ್ಸ್ ಶಿಕ್ಷಕಿ ಶಶಿಕಲಾ ಮತ್ತು ಬನ್ನೀಸ್ ಆಂಟಿಗಳು ಪ್ರಾರ್ಥನೆ ಮಾಡಿದರು. ಯುಕೆಜಿ ಮಕ್ಕಳು ಬನ್ನೀಸ್ ಸಮವಸ್ತ್ರದಲ್ಲಿ ದೇಶಭಕ್ತಿಗೀತೆಗೆ ನೃತ್ಯ ಮಾಡಿದರು. ಸ್ಕೌಟ್ ಮತ್ತು ಗೈಡ್ಸ್‍ನ ಮಕ್ಕಳು ದೇಶಭಕ್ತಿ ಗೀತೆಗಳನ್ನು ಹಾಡಿದರು. ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಮಕ್ಕಳ ಈ ವಿನೂತನ ಕಾರ್ಯಕ್ರಮ ವೀಕ್ಷಿಸಿ ಸಂಭ್ರಮಿಸಿದರು.