ಸಿದ್ಧಗಂಗಾ ಮಕ್ಕಳಿಂದ ಯೋಗ ಅಭಿಯಾನ
ದಾವಣಗೆರೆ, ಜೂ 19.
ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಯೋಗ ಅಭಿಯಾನಕ್ಕೆ ಸಿದ್ಧಗಂಗಾ ಶಾಲೆಯ – ಕಾಲೇಜಿನ ಮಕ್ಕಳು ವಿಶಿಷ್ಠ ರೀತಿಯಲ್ಲಿ ತಮ್ಮ ಕೊಡುಗೆ ನೀಡುತ್ತಿದ್ದಾರೆ. ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಸಹಯೋಗದಲ್ಲಿ ಜೂನ್ 16 ರಿಂದ 20ರವರೆಗೆ ಐದು ದಿನಗಳ ಯೋಗ ಶಿಬಿರ ನಡೆಯುತ್ತಲಿದ್ದು ಸಿದ್ಧಗಂಗಾ ಶಾಲಾ – ಕಾಲೇಜಿನ ನೂರಾರು ವಿದ್ಯಾರ್ಥಿ – ವಿದ್ಯಾರ್ಥಿನಿಯರು ಬೆಳಿಗ್ಗೆ 6 ರಿಂದ 6.45ರವರೆಗೆ ವಿವಿಧ ಆಸನಗಳನ್ನು ಪ್ರದರ್ಶಿಸುತ್ತಿದ್ದಾರೆ.
ಪ್ರಕೃತಿಯ ಪ್ರಶಾಂತ ವಾತಾವರಣದಲ್ಲಿ ಮಕ್ಕಳ ಈ ಸಾಮೂಹಿಕ ಯೋಗಾಭ್ಯಾಸ ಕಣ್ಮನ ಸೆಳೆಯುವಂತಿದೆ. ಶಿಬಿರದ ಉದ್ಘಾಟನೆಗೆ ಆಗಮಿಸಿದ್ದ ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುದೇವ ರಾಯ್ಕರ್‍ರವರು 35ಸಾವಿರ ಮಕ್ಕಳ ಸಹಕಾರದೊಂದಿಗೆ ಬೃಹತ್ ಯೋಗ ಕಾರ್ಯಕ್ರಮ ಏರ್ಪಡಿಸುತ್ತಿರುವ ವಿಚಾರವನ್ನು ಹಂಚಿಕೊಂಡರು. ಸಿದ್ಧಗಂಗಾ ಸಂಸ್ಥೆಯ ಸಹಕಾರವನ್ನು ಶ್ಲಾಘಿಸಿದರು. ಭಾರತೀಯ ಪ್ರಾಚೀನ ಪರಂಪರೆಯ ಯೋಗ ಇಂದು ವಿಶ್ವ ಮಾನ್ಯತೆ ಪಡೆದಿದೆ. ಜಗತ್ತು ಭಾರತದ ಸಂಸ್ಕೃತಿ ಮತ್ತು ವಿಚಾರ ಧಾರೆಗಳಿಂದ ಪ್ರಭಾವಿತವಾಗುತ್ತಿದೆ. ಯೋಗ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಂಡು ದಿನಾಚರಣೆಯನ್ನು ಅರ್ಥಪೂರ್ಣಗೊಳಿಸುವಂತೆ ಕರೆ ನೀಡಿದರು.
ಯೋಗ ಒಕ್ಕೂಟ ಹಮ್ಮಿಕೊಂಡಿರುವ ಸೈಕಲ್ ಜಾಥಾ, ಚಿತ್ರಕಲೆ ಸ್ಪರ್ಧೆಗಳಲ್ಲಿ ಅತ್ಯುತ್ಸಾಹದಿಂದ ಮಕ್ಕಳು ಪಾಲ್ಗೊಂಡರು.
ಯೋಗದಿಂದ ದೇಹ-ಮನಸ್ಸುಗಳಿಗೆ ಸುಯೋಗ
ಜಾಗತಿಕವಾಗಿ ಅಭಿವೃದ್ಧಿಯ ಪಥದಲ್ಲಿರುವ ಹಲವು ರಾಷ್ಟ್ರಗಳು ನಾಗರೀಕತೆಯ ಹೊಸ್ತಿಲು ಮುಟ್ಟುವ ಮೊದಲೇ, ಭಾರತವು ವಿಜ್ಞಾನ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಅನುಪಮ ಸಾಧನೆ ಮಾಡಿತ್ತು ಎಂದರೆ ಅತಿಶಯೋಕ್ತಿಯಲ್ಲ. ಭಾರತೀಯರ ‘ಶಾಸ್ತ್ರೀಯ ಚರ್ಯೆ’ ಎಂದೇ ಪರಿಗಣಿತವಾದ ಯೋಗವು ಆಧ್ಯಾತ್ಮಿಕ ಆಚರಣೆಗೆ ಸಂಬಂಧಿಸಿದ್ದು ಎನ್ನುವ ಸೀಮಿತ ಪರಿಧಿಯಿಂದ ಹೊರಬಂದು ಮನುಕುಲದ ಸೊತ್ತಾಗಿ ವಿಶ್ವಾತ್ಮಕ ಮನ್ನಣೆ ಪಡೆದಿದೆ ಆರಂಭದಲ್ಲಿ ಸಾಂಪ್ರದಾಯಿಕ, ದೈಹಿಕ - ಮಾನಸಿಕ ಆಚರಣೆಗಳ ಬೋಧನಾ ಶಾಖೆಯಾಗಿದ್ದ ಯೋಗ ಧರ್ಮ ಪ್ರಾರಂಭದಲ್ಲಿ ಹಿಂದೂ ಧರ್ಮ, ಬೌದ್ಧ ಮತ್ತು ಜೈನಧರ್ಮಗಳಲ್ಲಿ ಧ್ಯಾನದ ಆಚರÀಣೆಯಾಗಿ ಬಳಕೆಯಲ್ಲಿತ್ತು. ಉಪನಿಷತ್‍ನಲ್ಲಿ ಉಲ್ಲೇಖಿತವಾಗಿರುವಂತೆ - “ಧ್ಯಾನದ ಮೂಲಕ ಪ್ರಜ್ಞೆಯ ಉನ್ನತ ಹಂತಗಳನ್ನು ಅನುಭವಿಸುವುದರ ತಂತ್ರಗಳನ್ನು ಶುೃತಿಗಳಲ್ಲಿ ಅಭಿವೃದ್ಧಿಪಡಿಸಲಾಗಿತ್ತು.
”ಯೋಗ ಎನ್ನುವ ಸಂಸ್ಕøತದ ಪದವು ‘ಯುಜ್’ನಿಂದ ನಿಷ್ಪನ್ನಗೊಂಡಿದೆ. ಜೊತೆಗೂಡು, ಸಂಯೋಗ, ಸೇರುವಿಕೆ ಎನ್ನುವ ವಿವಿಧ ಅರ್ಥಗಳಿವೆ. ಹಿಂದೂ ಗ್ರಂಥಗಳಲ್ಲಿ ‘ಯೋಗ’ ಎನ್ನುವ ಪದ ‘ಕಠೋಪನಿಷತ್’ನಲ್ಲಿ ಮೊದಲು ಕಂಡು ಬರುತ್ತದೆ. ಅಲ್ಲಿ “ಇಂದ್ರಿಯಗಳ ನಿಯಂತ್ರಣ ಮತ್ತು ಮಾನಸಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಉತ್ತುಂಗ ಸ್ಥಿತಿಗೆ ತಲುಪುವುದನ್ನು ಉಲ್ಲೇಖಿಸಲಾಗಿದೆ”.
ಯೋಗದ ವಿಕಾಸದ ಕುರಿತು–ಉಪನಿಷತ್ತುಗಳು, ಭಗವದ್ಗೀತೆ ಮತ್ತು ಮಹಾಭಾರತ ಹಾಗೂ ಪತಾಂಜಲಿಯ ಯೋಗ ಸೂತ್ರಗಳಲ್ಲಿ ಪ್ರಸ್ತಾಪ ಮಾಡಲಾಗಿದೆ. ಭಾರತೀಯ ತತ್ವಜ್ಞಾನದ ಪ್ರಕಾರ ಪತಾಂಜಲಿಯವರನ್ನು–ಯೋಗದ ಪಿತಾಮಹ ಎಂದು ಪರಿಗಣಿಸಲಾಗಿದೆ, ಯೋಗಾಭ್ಯಾಸ ಮಾಡುವಾಗ ಭಕ್ತಿಯಿಂದ ಈ ಶ್ಲೋಕ ಸ್ತುತಿಸುವ ಸಂಪ್ರದಾಯವಿದೆ.
“ಯೋಗೇನ ಚಿತ್ತಸ್ಯ ಪದೇನವಾಚಾಮ್
ಮಲಂ ಶರೀರಸ್ಯಚ ವೈದ್ಯಕೇನ
ಯೋಪಾಕರೋತ್ತಮ್ ಪ್ರವರಮ್ ಮುನೀನಾಮ್
ಪತಾಂಜಲಿಮ್ ಪ್ರಾಂಜಲಿರಾನತೋಸ್ಮಿ”
ಅಂದರೆ ಯೋಗ ಮಾಡುವುದರಿಂದ ಮನಸ್ಸಿನಲ್ಲಾಗುವ ಚಿತ್ತವೃತ್ತಿಗಳನ್ನು ನಿರೋಧಿಸುತ್ತಾರೆ ಹಾಗೇಯೇ ಅವರು ಮಾಡುವ ಕೆಲಸ ಕೌಶಲದಿಂದ ಕೂಡಿರುತ್ತದೆ.
“ಭವತಾಸೇನ ತುಪ್ತಾನಾಮ್ ಯೋಗೋ ಹಿ ಪರವತೌಷಧಮ್’ – ಈ ಭೂಮಿಯ ಮೇಲೆ ಜನ್ಮತಾಳಿದವರಿಗೆ ಎದುರಾಗುವ ಎಲ್ಲಾ ಕಷ್ಟ-ನಷ್ಟಗಳು, ನೋವು, ದುಗುಡು-ದುಮ್ಮಾನಗಳಿಗೆ ಸೃಷ್ಠಿಯಲ್ಲಿ ಸಿಗುವ ಏಕೈಕ ಔಷಧ ಯೋಗ ಮಾತ್ರ ಎಂದಿದ್ದಾರೆ.
ಪತಾಂಜಲಿಯವರು 2ನೇ ಸೂತ್ರದಲ್ಲಿ ರಾಜಯೋಗ ಎಂದು ಪರಿಗಣಿಸಿ, ‘ಅಷ್ಟಾಂಗ ಯೋಗ’ ಎನ್ನುವ ಮೌಲಿಕ ಗ್ರಂಥವನ್ನು ಯೋಗಕ್ಕೆ ಕಾಣಿಕೆಯಾಗಿ ನೀಡಿದ್ದಾರೆ, ಈ ಗ್ರಂಥದಲ್ಲಿ ಎಂಟು ಅಂಗಗಳನ್ನು ಕುರಿತು ವಿವರಿಸುತ್ತಾ,
ನಿಯಮ – 5 ವರ್ಜನೆಗಳು: ಅ) ಅಹಿಂಸಾ, ಸತ್ಯಪಾಲನೆ, ಅತಿ ಆಸೆ, ಇಂದ್ರಿಯ ನಿಗ್ರಹ, ಸ್ವಾಧೀನತೆಯ ನಿಗ್ರಹ,
ನಿಯಮ 5 ಅನುಷ್ಠಾನಗಳು : ಅ) ಶುದ್ಧತೆ, ಸಂತುಷ್ಟಿ, ಸಂಯಮ, ಅಧ್ಯಯನ, ದೇವರಲ್ಲಿ ಶರಣಾಗತಿ,
ಯೋಗಾಸನ : ಅ) ಪೀಠ ಅಥವಾ ಧ್ಯಾನದ ಭಂಗಿಯಲ್ಲಿ ಕುಳಿತುಕೊಳ್ಳುವಿಕೆ
ಪ್ರಾಣಾಯಾಮ : ಉಸಿರನ್ನು ನಿಯಂತ್ರಿಸುವುದು, ಇನ್ನೊಂದೆಡೆ ಜೀವಶಕ್ತಿಯ ನಿಯಂತ್ರಣವೂ ಹೌದು
ಪ್ರತ್ಯಾಹಾರ : ಬಾಹ್ಯ ವಸ್ತುಗಳಿಂದ, ಇಂದ್ರಿಯಗಳಿಂದ ದೂರವಿರುವಿಕೆ
ಧಾರಣ : ಗಮನವನ್ನು ಒಂದು ವಸ್ತುವಿನ ಕಡೆಗೆ ಕೇಂದ್ರಿಕರಿಸುವುದು.
ಧ್ಯಾನ : ಗುರಿಯ ಸ್ವಭಾವದತ್ತ ಅತೀವ ಚಿಂತನೆ
ಸಮಾದಿ : ಧ್ಯಾನದ ಗುರಿಯಲ್ಲಿಯೇ ತನ್ನನ್ನು ಮಗ್ನನಾಗಿಸಿಕೊಳ್ಳುವುದು. ಈ ಮಾರ್ಗಗಳು ದೇಹ-ಮನಸ್ಸುಗಳ ಲಹರಿ ಮೀರಿದ ಧೀ ಚೈತನ್ಯದಿಂದ ಪ್ರಾಂಜಲತೆಯನ್ನು ಸಿದ್ಧಿಸಿಕೊಳ್ಳುವ ಸಂಯಮದ ವಿಧಾನವೆಂದಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಯೋಗವು ಧರ್ಮ, ಜಾತಿ ಹಾಗೂ ವರ್ಗಗಳ ಬೇಧವಿಲ್ಲದೆ ಭಾರತೀಯರಲ್ಲಿ ಐದು ಅರ್ಥಗಳಲ್ಲಿ ಬಳಕೆಯಲ್ಲಿದೆ.
1. ಗುರಿ ಸಾಧಿಸಲು ಬೇಕಾದ ಆಚರಣೆಯ ಮಾರ್ಗವಾಗಿದೆ.
2. ದೇಹ ಮತ್ತು ಮನಸ್ಸನ್ನು ನಿಯಂತ್ರಿಸುವ ತಂತ್ರವಾಗಿದೆ.
3. ಭಾರತೀಯ ತತ್ವಜ್ಞಾನದ ಒಂದು ಪಂಥವಾಗಿ ಬಳಕೆಯಲ್ಲಿದೆ.
4. ಹಠಯೋಗ : ಮಂತ್ರ - ಲಯಗಳೊಂದಿಗೆ ಬಳಸಲಾಗುತ್ತದೆ.
5. ನಿರ್ದಿಷ್ಟ ಸಂಪ್ರದಾಯ ಅಥವಾ ಆಚರಣೆಯ ಅರ್ಥದಲ್ಲಿ ಬಳಸಲ್ಪಡುತ್ತಿದೆ.
ಪಾಶ್ಚಿಮಾತ್ಯ ದೇಶಗಳಲ್ಲಿ ಝೆನ್ ಮತ್ತು ಯೋಗಗಳನ್ನು ಅವಳಿಗಳೆಂದು ಪರಿಗಣಿಸಲಾಗುತ್ತಿದೆ. ಅದರಲ್ಲೂ ಯೋಗವೆಂದರೆ –ಆಸನ ಮತ್ತು ಹಠಯೋಗ ಎಂದೇ ಪರಿಭಾವಿಸಲಾಗಿದೆ.
ನಾಗಲೋಟದಲ್ಲಿ ಸಾಗುತ್ತಿರುವ ಆಧುನಿಕ ಯುಗದಲ್ಲಿ ಮನುಕುಲವು ಯಂತ್ರದ ಓಟಕೆ ಮಂತ್ರವನಾಡುತ ಮುಂದಕ್ಕೆ ಅಡಿಯಿಡುತ್ತಿರುವುದನ್ನು ಗಮನಿಸಿದರೆ, ಬಾಹ್ಯ ಅಭಿವೃದ್ಧಿಯತ್ತ ಗಹನವಾಗಿ ಚಿಂತಿಸುತ್ತಾ, ತಾಳ್ಮೆ ಆನಂದ, ಆರೋಗ್ಯದತ್ತ ಗಮನಹರಿಸದೆ ಮಾನಸಿಕ ಮತ್ತು ದೈಹಿಕ ಅವಸ್ಥೆಗಳ ಕಡೆಗೆ ಗಮನವಿಲ್ಲದೆ, ಧಾವಂತವಾಗಿ ಮನೋ ದೌರ್ಬಲ್ಯ, ಬುದ್ಧಿಭ್ರಮಣೆ ಮತ್ತು ಅನಾರೋಗ್ಯದ ಅಧಿಪತಿಗಳಾಗುತ್ತಿರುವುದು ಖೇದಕರ ಸಂಗತಿಯಾಗಿದೆ. ಆರೋಗ್ಯ ಸುಧಾರಣೆಯ ನೆಪದಲ್ಲಿ ನಾವು ಬಳಸುತ್ತಿರುವ ಔಷಧಿ ಮತ್ತು ಸೇವಿಸುತ್ತಿರುವ ರಾಸಾಯಾನಿಕಯುಕ್ತ ಆಹಾರಗಳಿಂದ ವಿಪರೀತ ದುಷ್ಪರಿಣಾಮಗಳನ್ನೆದುರಿಸುತ್ತಾ ಹಲವು ಕಾಯಿಲೆಗಳ ಅವಾಸರಾಗುತ್ತಿದ್ದೇವೆ.
ಮಾನವ ದೇಹದ ಪ್ರತಿಯೊಂದು ಅವಯವದ ಸಕ್ರಿಯ ಚಟುವಟಿಕೆಗೆ ಸಂಜೀವಿನಿಯಂತಿರುವ ಯೋಗವು ಚಿಕ್ಕಮಕ್ಕಳಿಂದ ವೃದ್ಧಾಪ್ಯದವರೆಗೂ ಎಲ್ಲರೂ ಬೇಧವಿಲ್ಲದೆ ಕಲಿಯಲು ಬೇಕಾದ ಬೋಧನಾ ಶಾಖೆಯಾಗಿದೆ. ವೃದ್ಧಾಪ್ಯದಲ್ಲಿ ಸಂಭವಿಸಬಹುದಾದ ಅನೇಕ ದೈಹಿಕ-ಮಾನಸಿಕ ಕಾಯಿಲೆಗಳಿಗೆ ಸವಾಲಾಗಿ ನಿಲ್ಲುವ ಸಾಮಥ್ರ್ಯ ಯೋಗಕ್ಕಿದೆ. ಚಿಕ್ಕಮಕ್ಕಳು ಸೂಕ್ತ ಮಾರ್ಗದರ್ಶನದ ಮುಖೇನ ಅಭ್ಯಾಸ ಮಾಡುವುದರಿಂದ ಅವರ ಮೆದಳು, ಕಣ್ಣುಗಳು ಮುಂತಾದ ಸೂಕ್ಷ್ಮ ಅಂಗಾಂಗಗಳು ಚುರುಕಾಗುತ್ತವೆ ದಿನನಿತ್ಯ ಒಂದರಿಂದ –ಒಂದೂವರೆ ತಾಸು ಯೋಗಾಭ್ಯಾಸ ಮಾಡುವುದರಿಂದ ದಿನದ ಪೂರ್ಣ ಅವಧಿಯಲ್ಲಿ ಚೈತನ್ಯದ ಚಿಲುಮೆಗಳಾಗುತ್ತಾರೆ, ಜವಬ್ದಾರಿಯ ನಿಭಾವಣೆಯಲ್ಲಿರುವವರು ಮುಂಜಾನೆಯಿಂದ 12 ಗಂಟೆಯ ಒಳಗೆ, ಸಂಜೆ 4 ರಿಂದ 8 ಗಂಟೆಯ ಅವಧಿಯಲ್ಲಿ ಎರಡು ಭಾಗ ಮಾಡಿಕೊಂಡು ಅಭ್ಯಾಸ ಮಾಡುವುದು ಯೋಗ್ಯವಾದದ್ದು.
ನಿರಂತರ ಯೋಗ ಅಭ್ಯಾಸದಿಂದ ಇಂದ್ರಿಯಗಳ ನಿಗ್ರಹದ ಜೊತೆಗೆ ಮನೋಲ್ಲಾಸ ಮತ್ತು ದೇಶದ ನೈತಿಕ ನಿಯಮಗಳನ್ನು ಪಾಲಿಸುವ ಪ್ರಬುದ್ಧ ಪ್ರಜೆಗಳಾಗುವುದರಲ್ಲಿ ಅನುಮಾನವಿಲ್ಲ, ವಿದ್ಯಾರ್ಥಿಗಳಿಗಂತೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಯಶಸ್ವಿಯಾಗಲು ಯೋಗವು ಅತ್ಯುತ್ತಮ ಅಸ್ತ್ರವಾಗಿದೆ, ಆದ ಕಾರಣ ಭಾರತದ ಹಲವು ಪ್ರಾಥಮಿಕ ಮತ್ತು ಪೌಢಶಿಕ್ಷಣದ ಶಾಲೆಗಳು ಯೋಗ ಶಿಕ್ಷಣವನ್ನು ಕಡ್ಡಾಯಗೊಳಿಸಿದೆ.
ಆಧುನಿಕ ಜಗತ್ತಿನ ಒಳಗೆ ಜಂಜಾಟದಲ್ಲಿ ಜರ್ಜಿರಿತರಾಗುತ್ತಿರುವ ನಾವುಗಳು ‘ಯೋಗವಿದ್ದಲ್ಲಿ ರೋಗವಿನ್ನೆಲ್ಲಿ’ ಎನ್ನುವ ಸಂಕಲ್ಪದೊಂದಿಗೆ ಆರೋಗ್ಯ ಪೂರ್ಣ ಭಾರತಕ್ಕಾಗಿ ಯೋಗವನ್ನು ಕಲಿಯುವ ಸುಯೋಗ ನಮ್ಮದಾಗಿಸಿಕೊಳ್ಳೋಣ.
ಸಂತೋಷ ಎಸ್.
ಕನ್ನಡ ಉಪನ್ಯಾಸಕರು
ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜು,
ದಾವಣಗೆರೆ 577002.
This comment has been removed by the author.
ReplyDeletehttp://siddagangaschool.blogspot.com/2018/05/jee-main-result-2018.html
ReplyDeleteIDM Crack Serial Number
ReplyDeleteBandicam Crack License key
Great Information sharing.I am very happy to read this article .. thanks for giving us go through info.Fantastic nice. I appreciate this post Take a look at Old Time Pottery Black Friday 2020
ReplyDelete
ReplyDeletefileviewpro-crackcan be an application made by Solvusoft Corporation, which lets most files open with one certificate. The applications save you the requirement to get apps like others, a Picture viewer, business office document scanning,
new crack
4k video downloader crack
ReplyDeleteimazing crack
4k stogram crack
wbs schedule pro crack
auslogics boostspeed-crack
I really enjoy reading your post about this Posting. This sort of clever work and coverage! Keep up the wonderful works guys, thanks for sharing Eset Internet Security Crack
ReplyDeleteIts a Very Great and Amazing Blog Dear This is Very Great and Helpful..
ReplyDeleteTalha PC
Crackedithere
avocode crack
axure rp pro crack
With your presentation, you make it appear so simple, but I find this subject to be one that I believe I will never understand.
ReplyDeleteIt appears to be far too sophisticated and vast for me.
I'm looking forward to reading your future post,
I'll make an effort to grasp it!
x264 video codec crack
ventrilo crack
ccleaner pro crack
cubase pro crack