ಸೆ ೫
ಹಿನ್ನೆಲೆಯಲ್ಲಿ ಸುಮಧುರ ಭಕ್ತಿ ಗೀತೆಗಳು, ಸಾಂಪ್ರದಾಯಿಕ ಲಂಗ - ದಾವಣಿ , ಸೀರೆ ತೊಟ್ಟ ಬಾಲಕಿಯರು; ಕಚ್ಚೆ ಪಂಚೆ , ಜುಬ್ಬಾ ಪಂಚೆ ಶಲ್ಯಗಳಿಂದ ವರ್ಣರಂಜಿತವಾಗಿ ಕಾಣುತ್ತಿದ್ದ ಬಾಲಕರು, ರಥದ ಮೇಲೆ ವಿರಾಜಮಾನನಾದ ೧೦ ಅಡಿ ಎತ್ತರದ ಮಕ್ಕಳೇ ತಯಾರಿಸಿದ ಪೇಪರ ಗಣಪತಿ - ಭವ್ಯವಾದ ಕಪ್ಪು ಶಿಲಾಮೂರ್ತಿಯಂತೆ ಸೌಮ್ಯ, ಸುಂದರವಾಗಿ ಕಾಣುತ್ತಿದ್ದ ಗಣಪನ ತೇರನ್ನು ಭಕ್ತಿ ಭಾವದಿಂದ ಎಳೆಯುತ್ತಿದ್ದ ಶಾಲಾ ಮಕ್ಕಳು - ಇಂದು ಬೆಳೆಗ್ಗೆ ೧೧ ಗಂಟೆ ಸುಮಾರಿಗೆ ಇಂತಹ ಅಪರೂಪದ ದೃಶ್ಯವನ್ನು ನಗರದ ನಿಟುವಳ್ಳಿ ಮುಖ್ಯ ರಸ್ತೆ, ಜಯದೇವ ವೃತ್ತ ಮತ್ತು ಹದಡಿ ರಸ್ತೆಯ ನಾಗರೀಕರು ಆಶ್ಚರ್ಯಚಕಿತರಾಗಿ ನೋಡಿದರು. ಲಯಬದ್ಧ ತಾಳ ಹಾಕುತ್ತಾ ಗಜಮುಖನೆ ಗಣಪತಿಯೇ ಹಾಡುತ್ತಲಿದ್ದ ಮಕ್ಕಳ ಹಾಡು ಕೇಳುತ್ತಾ ಬೀದಿಯ ಇಕ್ಕೆಲಗಳಲ್ಲಿ ನಿಂತಿದ್ದ ಹೆಂಗಳೆಯರು ಕೈ ಮುಗಿದು ಗಣಪನಿಗೆ ವಂದಿಸಿದರು . ಅತ್ಯಂತ ಶಿಸ್ತಿನಿಂದ ಸಭ್ಯತೆಯಿಂದ ಸುಸಂಸ್ಕೃತಿಯಿಂದ ಶಾಲಾ ದ್ವಜದೊಂದಿಗೆ ಸಾಗಿದ ಸಿದ್ದಗಂಗಾ ಶಾಲೆಯ ಮಕ್ಕಳ ಈ ಅಪರೂಪದ ಅಪೂರ್ವ ಗಣೇಶ ಮೆರವಣಿಗೆ ಶಾಲಾ ಆವರಣ ಪ್ರವೇಶಿಸಿ ಸಭಾಮಂಟಪ ತಲುಪಿತು. ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಲಾಯಿತು. ಸಾರ್ವಜನಿಕರ ಗಮನ ಸೆಳೆದ ಈ ಪೇಪರ ಗಣಪನನ್ನು ನೋಡಲು ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ
No comments:
Post a Comment