Saturday, June 18, 2022

2 PUC RESULT 2021-22


 


ಸಿದ್ಧಗಂಗಾ  P U  ಕಾಲೇಜಿಗೆ  ಅಮೋಘ ಫಲಿತಾಂಶ

ವಿನಾಯಕನಿಗೆ  600 ಕ್ಕೆ 593

ಏಪ್ರಿಲ್ - ಮೇ ನಲ್ಲಿ ನಡೆದ ದ್ವಿತೀಯ P U ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ದಾವಣಗೆರೆಯ ಪ್ರತಿಷ್ಠಿತ ಕಾಲೇಜು ಎಂದೇ ಪ್ರಸಿದ್ದವಾಗಿರುವ  ಶ್ರೀ  ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ  ವಿನಾಯಕ L  600 ಕ್ಕೆ 593 ಅಂಕಗಳಿಸಿ ಪ್ರಥಮ ಸ್ಥಾನದಲ್ಲಿದ್ದಾನೆ . ಚಿನ್ಮಯ್ M D  591,ರಕ್ಷಿತ S R  589,ದಿವ್ಯಶ್ರೀ   589,ಸೋನು ನಿಂಗರೆಡ್ಡಿ  588, ರಾಘವೇಂದ್ರ 587,ಕಿರಣ್ V  586,ಮಂಜುನಾಥ ಸ್ವಾಮಿ  586, ಪೂಜಾ N U ,ಶಾಹಿದ್  ಹುಸೇನ್ T A  ಮತ್ತು  ಸಿದ್ದನಗೌಡ ಹಿತ್ತಲಮನಿ 585 ಅಂಕಗಳನ್ನು ಪಡೆದು ಅದ್ವಿತೀಯ ಸಾಧನೆ ತೋರಿದ್ದಾರೆ . 

ಹಿಂದಿ - 1 ,ಸಂಸ್ಕೃತ -2, ಭೌತಶಾಸ್ತ್ರ - 14, ರಾಸಾಯನಶಾಸ್ತ್ರ - 22 ,,ಗಣಿತ - 141, ಜೀವಶಾಸ್ತ್ರ - 16 ಮತ್ತು ಕಂಪ್ಯೂಟರ್ ಸೈನ್ಸ್ - 9 ಒಟ್ಟು 205 ಮಕ್ಕಳು ಮೇಲ್ಕಂಡ  ವಿಷಯಗಳಲ್ಲಿ 100 ಕ್ಕೆ 100 ಅಂಕಗಳನ್ನು   ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ . 307 ಮಕ್ಕಳು ಅತ್ಯುನ್ನತ ಶ್ರೇಣಿಯಲ್ಲಿ, 251 ಮಕ್ಕಳು  ಪ್ರಥಮ ದರ್ಜೆಯಲ್ಲಿ ಮತ್ತು 20 ಮಕ್ಕಳು ದ್ವಿತೀಯ ದರ್ಜೆಯಲ್ಲಿ  ಉತ್ತೀರ್ಣರಾಗಿ ದಾಖಲೆಯ  ಫಲಿತಾಂಶ ನೀಡಿದ ಪ್ರತಿಯೊಬ್ಬರಿಗೂ  ಕಾಲೇಜಿನ ಪ್ರಾಚಾರ್ಯರಾದ  G. C. ನಿರಂಜನ್ , ಮ್ಯಾನೇಜಿಂಗ್ ಡೈರೆಕ್ಟರ್  ಡಾll ಜಯಂತ್ D. S, ಸಂಸ್ಥೆಯ  ಕಾರ್ಯದರ್ಶಿ D. S. ಹೇಮಂತ್ , ಮುಖ್ಯಸ್ಥರಾದ ಜಸ್ಟಿನ್ ಡಿ'ಸೌಜ  ಮತ್ತು  ಎಲ್ಲಾ  ಬೋಧಕ - ಬೋಧಕೇತರ  ಸಿಬ್ಬಂದಿ  ವರ್ಗದವರು ಅಭಿನಂದಿಸಿದ್ದಾರೆ. 

Wednesday, June 8, 2022

World Environment Day 2022





















ಸಿದ್ಧಗಂಗಾ  ಸಂಸ್ಥೆಯಲ್ಲಿ   ಪರಿಸರ  ದಿನಾಚರಣೆ  
50  ಸಾವಿರ  ಬೀಜದುಂಡೆ  ತಯಾರಿಸಿದ  ಮಕ್ಕಳು 

ಸಿದ್ಧಗಂಗಾ ಶಾಲೆಯಲ್ಲಿ ಮಕ್ಕಳ ಕಲರವ . ಭಾರತ್ ಸ್ಕೌಟ್ ಮತ್ತು ಗೈಡ್ಸ್ ನ ಸ್ಥಳೀಯ ಸಂಸ್ಥೆವತಿಯಿಂದ ಪರಿಸರ  ದಿನಾಚರಣೆ ವಿಶೇಷವಾಗಿ  ಹಮ್ಮಿಕೊಳ್ಳಲಾಗಿತ್ತು . 

ಮೂಟೆ ಮೂಟೆ ಕೆಂಪು  ಮಣ್ಣನ್ನು  ಬಯಲಲ್ಲಿ  ಸುರಿದರು . ವಿವಿಧ  ಜಾತಿಯ  ಕಾಡು ಮರಗಳ  ಬೀಜಗಳನ್ನು ರಾಶಿ  ಹಾಕಿದರು .  ಕ್ಷಣಾರ್ಧದಲ್ಲಿ  ಮಕ್ಕಳು  ತಮ್ಮ ತಮ್ಮ  ಗುಂಪು  ಮಾಡಿಕೊಂಡು ಮಣ್ಣನ್ನು ಹಂಚಿಕೊಂಡರು .  ಬೀಜಗಳನ್ನು  ಬೊಗಸೆಗಳಲ್ಲಿ  ತುಂಬಿಕೊಂಡರು .  ವಾಟರ್ ಬಾಟಲಿಗಳಿಂದ  ನೀರನ್ನು  ಸುರುವಿಕೊಂಡು  ಮಣ್ಣನ್ನು  ಉಂಡೆ ಕಟ್ಟುವ  ಹದಕ್ಕೆ  ಮೃದು  ಮಾಡಿಕೊಂಡರು .  ಪುಟ್ಟ  ಪುಟ್ಟ  ಕೈಗಳಲ್ಲಿ  ಉಂಡೆಗಳು  ರೂಪುಗೊಂಡಂತೆ  ಅದರ ಮಧ್ಯದೊಳಗೆ  ಬೀಜ  ಇಟ್ಟು  ದುಂಡಾದ ಆಕಾರ ಮಾಡಿ ಸಾಲಾಗಿ ಜೋಡಿಸಿದರು .  ವಿವಿಧ  ಗಾತ್ರದ ಬೀಜದುಂಡೆಗಳು  ತಯಾರಾದವು . ಒಣಗಲು  ಹರಡಿದರು .  ಸಾವಿರಾರು ಬೀಜದುಂಡೆಗಳನ್ನು  ಅರಣ್ಯ  ಇಲಾಖೆಯವರು ನಿಗದಿತ ಕಾಡು ಪ್ರದೇಶದಲ್ಲಿ ಬಿಸಾಡುವರು . ಮಳೆಗಾಲದಲ್ಲಿ  ಬೀಜಗಳು ಮೊಳಕೆಯೊಡೆದು ಸಸಿಯಾಗಿ ವೃಕ್ಷಗಳಾಗುತ್ತವೆ  ಎಂದು ತಿಳಿಸಿದಾಗ ಮಕ್ಕಳಲ್ಲಿ ಉತ್ಸಾಹ ತುಂಬಿತು . ಪರಿಸರ ದಿನಾಚರಣೆಯನ್ನು ಸಾರ್ಥಕವಾಗಿ  ಆಚರಿಸಿದ  ಭಾವನೆ  ಉಂಟಾಯಿತು .  ಜಿಲ್ಲಾ ಸ್ಕೌಟ್  ಗೈಡ್  ಸಂಸ್ಥೆಯಿಂದ ಆಗಮಿಸಿದ  ಕಾರ್ಯದರ್ಶಿ ರತ್ನ , ಎ ಡಿ ಸಿ ಹಾಲಪ್ಪ  ಮತ್ತು  ಎಸ್ ಜಿವಿ  ಅಶ್ವಿನಿಯವರು ಹಾಗೂ ಬೇರೆ ಬೇರೆ ಕಾಲೇಜುಗಳಿಂದ  ಬಂದಿದ್ದ  ರೋವರ್, ರೇಂಜರ್ ಗಳು ಮಕ್ಕಳ ಈ ಚಟುವಟಿಕೆಯನ್ನು ಶ್ಲಾಘಿಸಿದರು. ಸಂಸ್ಥೆಯ ಸ್ಕೌಟ್ ಮಾಸ್ಟರ್ ಮತ್ತು ಗೈಡ್ಸ್ ಕ್ಯಾಪ್ಟನ್ ,ಕಬ್ಸ್   ಬುಲ್ ಬುಲ್ ಫ್ಲಾಕ್ ಲೀಡರ್ಸ್ , ಬನ್ನೀಸ್  ಶಿಕ್ಷಕ - ಶಿಕ್ಷಕಿಯರು ಮತ್ತು ಹಲವಾರು ಪಾಲಕರು  ಮಕ್ಕಳ  ಉತ್ಸಾಹವನ್ನು  ಕುತೂಹಲದಿಂದ ವೀಕ್ಷಿಸಿದರು . ಬೀಜದುಂಡೆಗಳನ್ನು  ಕಟ್ಟುವಾಗ  ಹಿನ್ನಲೆಯಲ್ಲಿ  ಸುಶ್ರಾವ್ಯವಾಗಿ  ಮಕ್ಕಳು  ಪರಿಸರ  ಗೀತೆಗಳನ್ನು  ಹಾಡಿದರು . ಸಿದ್ಧಗಂಗಾ  ಸ್ಥಳೀಯ  ಸಂಸ್ಥೆಯ  ಕಾರ್ಯದರ್ಶಿ ಶಶಿಕಲಾರವರು  ಮಾರ್ಗದರ್ಶನ  ನೀಡಿದರು .